ಭದ್ರಾವತಿ : ಮಾನವರಿಗೆ ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲ ಎಂಬಂತಾಗಿದೆ, ಅಷ್ಟೊಂದು ನಾವು ಪ್ಲಾಸ್ಟಿಕ್ ಗೆ ಅವಲಂಬಿತವಾಗಿದ್ದೇವೆ, ಪ್ಲಾಸ್ಟಿಕ್ ನಿಂದಾಗಿ ಅಪಾಯಕಾರಿ ಇದೆ ಎಂಬುದು ನಮಗೆ ಗೊತ್ತಿದ್ದರೂ ಕೂಡ, ಪ್ಲಾಸ್ಟಿಕ್ ಬಳಕೆ ಮಾಡಿ ಎಲ್ಲೆಂದರಲ್ಲಿ ಬಿಸಾಡುತ್ತೇವೆ. ಇದರಿಂದ ಮಾನವರಿಗಷ್ಟೇ ಅಲ್ಲದೇ ಮೂಕ ಜೀವಿಗಳಿಗೂ ತೊಂದರೆ ತಪ್ಪಿದ್ದಲ್ಲ ಹಾವೊಂದು ಕಪ್ಪೆ ಜೊತೆಗೆ 3 ಅಡಿ ಉದ್ದದ ಪ್ಲಾಸ್ಟಿಕ್ ನುಂಗಿದ ಘಟನೆ ಒಂದು ಭದ್ರಾವತಿಯ ಬಸವೇಶ್ವರ ವೃತ್ತದಲ್ಲಿ ನಡೆದಿದೆ
ಭದ್ರಾವತಿಯ ಬಸವೇಶ್ವರ ವೃತ್ತದಲ್ಲಿ ಲಾರಿಯೊಂದರ ಕೆಳಗಡೆ ಕೆರೆಗೊಡ್ಡು ಹಾವೊಂದು ನಿತ್ರಾಣಗೊಂಡು ಉರುಳಾಡುತ್ತಾ ನರಳುತ್ತಿತ್ತು ಸಾರ್ವಜನಿಕರು ಹಾವು ನರಳುತ್ತಿರುವುದನ್ನು ನೋಡಿ ಊರಗ ರಕ್ಷಕ ಪ್ರಹ್ಲಾದ್ ರಾವ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಉರಗ ರಕ್ಷಕ ಪ್ರಹ್ಲಾದರಾವ್ ಹಾವನ್ನ ಹಿಡಿದು ಹಾವಿನ ಬಾಯಿಂದ ಮೂರು ಅಡಿ ಉದ್ದದ ಪ್ಲಾಸ್ಟಿಕ್ ಅನ್ನು ಹೊರ ತೆಗೆದಿದ್ದಾರೆ.
ಹಾವು ಪ್ಲಾಸ್ಟಿಕ್ ನುಂಗಿದ್ದು ಹೇಗೆ ?
ನಿನ್ನೆಯಿಂದ ಮಲೆನಾಡಿನ ಭಾಗಗಳಲ್ಲಿ ತುಸು ಮಳೆಯಾಗುತ್ತಿದೆ. ಈ ಸಂದರ್ಭದಲ್ಲಿ ಕಪ್ಪೆಗಳು ಹೊರಬರುವುದು ಸಹಜ, ಆ ಕಪ್ಪೆಗಳನ್ನ ಬೇಟೆಯಾಡಲು ಹಾವುಗಳು ಕೂಡ ತಮ್ಮ ಬೇಟೆಯನ್ನು ಹುಡುಕಿ ಬರುವುದು ಕೂಡ ಸಹಜ ಕೆರೆಗೊಡ್ಡು ಹಾವೊಂದು ಕಪ್ಪೆಯನ್ನು ತಿನ್ನಲು ಮುಂದಾಗಿದೆ , ಬೇಟೆಯಾಡಿದ ಕಪ್ಪೆಯನ್ನು ಹಾವು ತಿಂದಿದೆ ಆದರೆ ಕಪ್ಪೆಯ ಜೊತೆಗೆ ಸುತ್ತಿಕೊಂಡಿದ ಪ್ಲಾಸ್ಟಿಕ್ ಅನ್ನು ಕೂಡ ಹಾವು ನುಂಗಿದೆ ಪ್ಲಾಸ್ಟಿಕ್ ಎಂತಹ ಡೇಂಜರ್ ಎಂಬುದು ನಮಗೆಲ್ಲರಿಗೂ ಗೊತ್ತು, ಹಾವು ತನ್ನ ಆಹಾರವನ್ನು ಹೊರ ಹಾಕುವ ಸಾಮರ್ಥ್ಯ ಹೊಂದಿದೆ ಆದರೆ ಪ್ಲಾಸ್ಟಿಕ್ ಅನ್ನು ಹೊರಹಾಕಲಾಗುವುದಿಲ್ಲ ಉರಗ ರಕ್ಷಕ ಪ್ರಹಲ್ಲಾದ್ ರಾವ್ ಹಾವಿನ ಬಾಯಿಂದ ಪ್ಲಾಸ್ಟಿಕ್ ತೆಗೆಯದೆ ಹೋಗಿದ್ದರೆ ಹಾವು ಸಾವನ್ನಪ್ಪುತ್ತಿತ್ತು. ಕೆರೆಗೊಡ್ಡು ಹಾವೊಂದು ಪ್ಲಾಸ್ಟಿಕ್ ನುಂಗಿ ಪ್ಲಾಸ್ಟಿಕ್ ಎಂತಹ ಡೇಂಜರ್ ಎಂಬುದನ್ನು ಡೇಂಜರ್ ಡೆಮೋ ತೋರಿಸಿದಂತಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply