ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಸಿದ್ದಾರೂಢ ನಗರದಲ್ಲಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಲಾಟರಿ ಸೂರಿ ಎಂಬಾತನನ್ನು ಬಂಧಿಸಲಾಗಿದೆ.
ಮೀಟರ್ ಬಡ್ಡಿ ವ್ಯವಹಾರ, ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಸಾರ್ವಜನಿಕರಿಂದ ಲಾಟರಿ ಸೂರಿ ವಿರುದ್ಧ ಸಹಕಾರ ನಿಬಂಧಕರ ಕಚೇರಿಗೆ ದೂರು ಬಂದಿದ್ದವು. ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ಸುರೇಶ್ ಯಾನೆ ಲಾಟರಿ ಸೂರಿ ಮನೆಯ ಮೇಲೆ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.rf
ಇದರ ಆಧಾರದ ಮೇಲೆ ಹೊಸ ಮನೆ ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣಕುಮಾರ್, ಸಹಕಾರ ನಿಬಂಧಕರ ಕಚೇರಿ ಸಹಾಯಕ ನಿಬಂಧಕರ ನೇತೃತ್ವದಲ್ಲಿ ಸಿದ್ದಾರೂಢ ನಗರದಲ್ಲಿರುವ ಲಾಟರಿ ಸೂರಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ಈ ವೇಳೆ ಮನೆಗೆ ಬಂದ ಸೂರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಪೊಲೀಸರ ಸಮ್ಮುಖದಲ್ಲಿ ಸಹಾಯಕ ನಿಬಂಧಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತನ ವಿರುದ್ಧ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply