ಶಿವಮೊಗ್ಗ : ಅವನು ಬದುಕಿ ಬಾಳಬೇಕಾದ 30 ರ ಚಿರಯುವಕ, ಇನ್ನು ಬಹಳಷ್ಟು ಜೀವನದ ಪಾಠವನ್ನು ಕಲಿಯಬೇಕಿತ್ತು, ಇನ್ನು ಜೀವನವನ್ನು ನೋಡಬೇಕಿತ್ತು, ಬದುಕಿನ ಬಂಡಿಯನ್ನು ಸಾಗಿಸಬೇಕಿತ್ತು ಟೈಲರಿಂಗ್ ಕೆಲಸ ಮಾಡಿಕೊಂಡು ತಾಯಿ ಹಾಗೂ ತಮ್ಮನನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದ, ಮನೆಗೆ ಆಸರೆಯಾಗಿ ಇದ್ದ, ಮನೆಯ ಹಿಂದೆಯ ತಂತಿಯಲ್ಲಿ ಅಡಗಿ ಕುಳಿತಿದ್ದ ಜವರಾಯ ಬದುಕಿ ಬಾಳಬೇಕಾದವನ ಜೀವನವನ್ನೇ ದುರಂತ ಅಂತ್ಯ ಕಾಣುವಂತೆ ಮಾಡಿತ್ತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕೊರಳಿಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದ ಹರೀಶ್ ( 30 ) ಮೃತ ದುರ್ದೈವಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಮನೆಯ ಮುಂದೆ ಗ್ರೌಂಡಿಂಗ್ ಆಗಿ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ
ನಿನ್ನೆ ಅಂದರೆ ಗುರುವಾರ ಹರೀಶ್ ಮತ್ತು ಸ್ನೇಹಿತರು ತಿರುಪತಿಗೆ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದರು, ನೆನ್ನೆ ಮಧ್ಯಾಹ್ನ ಹರೀಶ್ ತಿರುಪತಿಗೆ ಹೋಗಲು ರೆಡಿ ಆಗುತ್ತಿದ್ದ, ಸ್ನಾನ ಮುಗಿಸಿ ಬಂದ ಹರೀಶ್ ಮನೆಯ ಹಿಂದೆ ಇರುವ ತಂತಿಯ ಮೇಲೆ ಬಟ್ಟೆ ಒಣಗಿಸಲು ಹೋಗಿದ್ದಾನೆ, ಈ ಸಂದರ್ಭದಲ್ಲಿ ತಂತಿಯಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿ ಯುವಕ ಹರೀಶ್ ಮೃತಪಟ್ಟಿದ್ದಾನೆ.
ಮನೆಯ ಮುಂದೆ ವಿದ್ಯುತ್ ಗ್ರೌಂಡಿಂಗ್ ಆಗಿರುವುದನ್ನು ಗಮನಿಸದ ಹರೀಶ್ ತಂತಿಯ ಮೇಲೆ ಬಟ್ಟೆ ಒಣಗಿಸಲು ಹೋಗಿ ವಿದ್ಯುತ್ ಪ್ರವಹಿಸಿ ವಿದ್ಯುತ್ ಶಾಕ್ ನಿಂದ ದುರಂತ ಅಂತ್ಯ ಕಂಡಿದ್ದಾನೆ, ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಡು ಬಡತನದಲ್ಲಿ ಜೀವನ ನಡೆಸುತ್ತಾ ಬಂದಿದ್ದ ಹರೀಶ್.ಚಿಕ್ಕ ವಯಸ್ಸಿನಲ್ಲೇಯೇ ತಂದೆಯನ್ನ ಕಳೆದುಕೊಂಡಿದ್ದರು .ಇದರಿಂದ ಹರೀಶ್ ಗೆ ಚಿಕ್ಕ ವಯಸ್ಸಿನಿಂದಲೇ ಬಹಳಷ್ಟು ಜವಾಬ್ದಾರಿ ಕಷ್ಟಗಳನ್ನು ನೋವುಗಳನ್ನು ಅನುಭವಿಸುತ್ತಾ ಬಂದಿದ್ದನು. ಇನ್ನೂ ಹರೀಶ್ ಗೆ ಮದುವೆ ನಿಶ್ಚಯ ಮಾಡಲು ಹುಡುಗಿ ಕೂಡ ನೋಡಿದ್ದರಂತೆ, ಸದ್ಯದಲ್ಲೇ ಮದುವೆ ಕೂಡ ನಿಶ್ಚಯವಾಗುತ್ತಿತ್ತು,ತಿರುಪತಿಗೆ ಹೋಗಿ ತಿರುಪತಿಯಿಂದ ಬಂದ ಮೇಲೆ ಮದುವೆಯ ಮಾತುಕತೆ ಮಾಡಬೇಕು ಎಂದು ಅಂದುಕೊಂಡಿದ್ದರಂತೆ. ಅಷ್ಟರಲ್ಲಿ ಹರೀಶ್ ಜೀವ ಕಳೆದುಕೊಂಡಿದ್ದಾನೆ. ಅಂದು ಇಡೀ ಊರೇ ಹರೀಶನಿಲ್ಲದೆ ಮೌನವಾಗಿತ್ತು. ಊರಿನಲ್ಲಿ ಯಾವುದೇ ಶುಭ ಕಾರ್ಯವಾಗಲಿ ಹಾಗೂ ಯಾವುದೇ ಕಾರ್ಯವಾಗಲಿ ಹರೀಶನ ಮುಂದಾಳತ್ವದಲ್ಲಿ ನಡೆಯುತ್ತಿತ್ತು, ತಾನೇ ಮುಂದೆ ನಿಂತು ಊರಿನ ಹಲವು ಕಾರ್ಯಗಳನ್ನ ಮಾಡಿಸುತ್ತಿದ್ದನಂತೆ. ಮಗನ ಮದುವೆ ನೋಡಬೇಕು ಮೊಮ್ಮಕ್ಕಳನ್ನ ಆಡಿಸಬೇಕು ಅಂದುಕೊಂಡಿದ್ದ ಹರೀಶನ ತಾಯಿ ತಾನು ಬದುಕಿರುವಾಗಲೇ ಮಗನ ಶವ ಕಂಡು ಕಣ್ಣೀರು ಹಾಕುತ್ತಿರುವುದು ಕರುಳು ಹಿಂಡುವಂತೆ ಮಾಡುತ್ತದೆ.
ವರದಿ : ಅಮಿತ್ ಆನಂದಪುರ
Leave a Reply