ಶಿವಮೊಗ್ಗ : ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆರಂಭವಾಗಿದ್ದು ಚುನಾವಣಾ ಅಧಿಕಾರಿಗಳು ಸಿಬ್ಬಂದಿಗಳು ಮೊದಲಿಗೆ ಅಂಚೆ ಮತದ ಎಣಿಕೆಯನ್ನು ನಡೆಸಿದ್ದಾರೆ ಅಂಚೆ ಮತದ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಮುನ್ನಡೆಯನ್ನು ಸಾಧಿಸಿದ್ದಾರೆ.
ನಂತರ ಇವಿಎಂ ವೋಟಿಂಗ್ ನ ಮೊದಲ ಸುತ್ತಿನ ಎಣಿಕೆಯಲ್ಲಿ ಬಿವೈ ರಾಘವೇಂದ್ರ ಭಾರಿ ಆರಂಭಿಕ ಮುನ್ನಡೆಯನ್ನ ಸಾಧಿಸಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆ ಎಸ್ ಈಶ್ವರಪ್ಪನವರಿಗೆ ಮೊದಲ ಸುತ್ತಿನಲ್ಲಿ ಭಾರಿ ಹಿನ್ನಡೆಯಾಗಿದೆ
ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು
ಬಿ ವೈ ರಾಘವೇಂದ್ರ : 65753
ಗೀತಾ ಶಿವರಾಜಕುಮಾರ್ : 42985
ಕೆಎಸ್ ಈಶ್ವರಪ್ಪ : 3211
ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಬರೋಬ್ಬರಿ 22768 ಮತಗಳ ಅಂತರವನ್ನ ಕಾಯ್ದುಕೊಂಡು ಮುನ್ನಡೆ ಸಾಧಿಸಿದ್ದಾರೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply