ದೊಡ್ಮನೆ ಸೊಸೆ ಗೀತಾ ಶಿವರಾಜಕುಮಾರ್ ಗೆ ಸತತ ಹಿನ್ನಡೆ !

  1. ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ 2024ರ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿಯವರೆಗು 13 ಸುತ್ತುಗಳ ಮತಗಳ ಎಣಿಕೆ ನಡೆದಿದ್ದು 

13 ಸುತ್ತುಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಸತತ ಹಿನ್ನಡೆಯನ್ನು ಕಂಡಿದ್ದಾರೆ, ಬಿ.ವೈ. ರಾಘವೇಂದ್ರ ಒಂದು ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ನಿಂದ ಕಣಕ್ಕಿಳಿದ್ದಿದ್ದ ಗೀತಾ ಶಿವರಾಜ್ ಕುಮಾರ್ ಸತತ ಹಿನ್ನೆಡೆ ಕಂಡಿದ್ದಾರೆ.

ಬಿ.ವೈಆರ್, 3,54,207 ಮತಗಳನ್ನ‌ಪಡೆದರೆ, ಗೀತ ಶಿವರಾಜ್ ಕುಮಾರ್, 2,48,280 ಮತಗಳನ್ನ ಪಡೆದಿದ್ದಾರೆ. ಈಶ್ವರಪ್ಪನವರಿಗೆ 14,144 ಮತಗಳನ್ನ ಪಡೆದಿದ್ದಾರೆ. ಇದರಿಂದ ಈಶ್ವರಪ್ಪನವರು ಮೂರನೇ ಸ್ಥಾನದಲ್ಲಿದ್ದಾರೆ. 18 ಸುತ್ತಿನ ಮತ ಎಣಿಕೆಯೊಂದಿಗೆ ಲೋಕಸಭಾ ಚುನಾವಣೆ ಎಣಿಕೆ ಮುಕ್ತಾಯಗೊಳ್ಳಲಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

BREAKING NEWS : ಮತ ಎಣಿಕೆ ಆರಂಭ ! ಅಂಚೆ ಮತ ಎಣಿಕೆ ! ಬಿ ವೈ ರಾಘವೇಂದ್ರ ಮುನ್ನಡೆ !

 


Leave a Reply

Your email address will not be published.