ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಶಿವಮೊಗ್ಗ ಲೋಕಸಭ ಚುನಾವಣಾ ಕಣವನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರು. ಘಟಾನುಘಟಿ ನಾಯಕರ ನಡುವೆ ಜೋಮೊಟೋ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ತುಮಕೂರಿನ ಬಂಡಿ ರಂಗನಾಥ್ ಎಂಬ ಯುವಕ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಬಂಡಿ ರಂಗನಾಥ್ ಅಚ್ಚರಿಯ ಮತಗಳನ್ನು ಪಡೆದಿದ್ದಾರೆ
ಚುನಾವಣೆ ವೇಳೆ ಅವರ ಬಳಿ ಸುಮಾರು ಐವತ್ತು ಸಾವಿರ ರೂಪಾಯಿಗಳು ನಗದಿದ್ದು, ಆಸ್ತಿ ಕಾಲಂನಲ್ಲಿ ಇವರು ಏನೂ ಇಲ್ಲ ಎಂದು ಬರೆದುಕೊಂಡಿದ್ದರು.
ಮತ ಎಣಿಕೆಯಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದು, 7176 (-757245) ಮತಗಳನ್ನು ಪಡೆದಿದ್ದಾರೆ. ರಾಘವೇಂದ್ರ , ಗೀತಾ ಶಿವರಾಜ್ ಕುಮಾರ್ ಹಾಗೂ ಈಶ್ವರಪ್ಪನವರು ಬಿಟ್ಟರೆ ಇದುವರೆಗಿನ ಮತ ಎಣಿಕೆಯಲ್ಲಿ ಬಂಡಿ ರಂಗನಾಥ್ ಉಳಿದವರಿಗಿಂತಲೂ ಮುನ್ನಡೆ ಸಾಧಿಸಿದ್ದಾರೆ.ಈ ಮೂಲಕ ಅವರು ಗಮನ ಸೆಳೆದಿದ್ದಾರೆ.
ಇನ್ನೊಂದಡೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ ಎಸ್ ಈಶ್ವರಪ್ಪ ಎನ್ನುವ ವ್ಯಕ್ತಿ ಸಾವಿರಾ ಮತಗಳನ್ನು ಕೂಡ ಪಡೆಯಲು ಸಾಧ್ಯವಾಗಿಲ್ಲ, ಇದೀಗ ಜೋಮೊಟೋ ಡೆಲಿವರಿ ಬಾಯ್ ಆಗಿ ಲೋಕಸಭಾ ಚುನಾವಣಾ ಕಣಕ್ಕೆ ಸ್ಪರ್ಧೆಗೆ ಇಳಿದಿದ್ದ ಬಂಡಿ ರಂಗನಾಥ್ ಶಿವಮೊಗ್ಗ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನ ಪಡೆದು ಅಚ್ಚರಿಗೆ ಕಾರಣವಾಗಿದ್ದಾರೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply