ಕೆಳದಿ ಸಂಸ್ಥಾನ ವಿಶಿಷ್ಟವಾದ ಸಂಸ್ಥಾನವಾಗಿದೆ – ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು

ಆನಂದಪುರ : ಶ್ರೀ ಮ.ನಿ. ಜ. ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮುರುಘಾಮಠ ಇವರು ಮಾತನಾಡುತ್ತಾ ಕೆಳದಿ ಸಂಸ್ಥಾನ ಒಂದು ವಿಶಿಷ್ಟವಾದ ಸಂಸ್ಥಾನವಾಗಿತ್ತು . ಇವರ ಕಾಲದಲ್ಲಿ ಹಲವಾರು ಮಠಗಳನ್ನು ಸಹ ನಿರ್ಮಿಸಿದ್ದಾರೆ ಅದರಲ್ಲಿ ಈ ಮಹಂತಿನ ಮಠವು ಒಂದು ವಿಶಿಷ್ಟವಾದ ಮಠವಾಗಿದೆ . ಇದಕ್ಕೂ ಮುರಘಾ ಮಠಕ್ಕೂ ಪುರಾತನ ಕಾಲದಿಂದಲೂ ಸಂಬಂಧ ಹೊಂದಿದೆ. ಎಂದು ಹೇಳುತ್ತಾ ಶಾಸಕರಲ್ಲಿ ಇದರ ಅಭಿವೃದ್ಧಿಗಾಗಿ ಹಲವಾರು ಬೇಡಿಕೆಯನ್ನು ಸಹ ಇಟ್ಟರು.

ಅಭಿವೃದ್ಧಿಯೇ ನನ್ನ ಗುರಿ…

ನನ್ನ ಕ್ಷೇತ್ರದ ಸಮಸ್ತ ಅಭಿವೃದ್ಧಿಗೆ ನಾನು ಸದಾ ಸಿದ್ಧನಾಗಿರುತ್ತೇನೆ. ಹಾಗೆ ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇನೆ. ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ *ಶ್ರೀ ಗೋಪಾಲಕೃಷ್ಣ ಬೇಳೂರು*ಹೇಳಿದರು.

ಆನಂದಪುರದ ಶ್ರೀ ಮಹಾಂತಿನ ಮಠದ ಚಂಪಕ ಸರಸುವಿನ ವಾರ್ಷಿಕೋತ್ಸವ ಹಾಗೂ ನೂತನ ಆಡಳಿತ ಕಚೇರಿ ಉದ್ಘಾಟನೆಯನ್ನು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಬೇಳೂರು ಮಾಡಿದರು.

ಈ ಚಂಪಕಸರಸು ಕೆಳದಿ ಅರಸರ ಕಾಲದಲ್ಲಿ ನಿರ್ಮಿತವಾದ ವಿಶಿಷ್ಟವಾದ ಕ್ಷೇತ್ರವಾಗಿದೆ. ಈ ಸ್ಥಳದಲ್ಲಿ ಒಂದು ವಿಶಿಷ್ಟವಾದ ಶಕ್ತಿ ಇದೆ 

.ಇದು ಮುಂದಿನ ದಿನಗಳಲ್ಲಿ ಒಂದು ಉತ್ತಮ ರೀತಿಯ ಪ್ರವಾಸಿ ತಾಣವಾಗಿ ಹೊರಹೊಮ್ಮಲು ಇದಕ್ಕೆ ಬೇಕಾದಂತ ಸಹಕಾರವನ್ನು ನಾನು ನೀಡುತ್ತೇನೆ.. ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಮಹಾಂತಿನ ಮಠದ ಚಂಪಕ ಸರಸು ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಆನಂದಪುರ ಮತ್ತು ಆಚಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು

ವರದಿ : ಅಮಿತ್ ಆನಂದಪುರ 


Leave a Reply

Your email address will not be published.