ಸಾಗರ ರಸ್ತೆಯಲ್ಲಿ ಮತ್ತೊಂದು ಬಸ್ ಅಪಘಾತ ! ಕಾರು ಬಸ್ ಮುಖಾಮುಖಿ ಡಿಕ್ಕಿ !

ಸಾಗರ : ಆನಂದಪುರದ ಸಮೀಪದ ಉಳ್ಳೂರಿನ ಹಕ್ರೆ ಕೊಪ್ಪ ರಸ್ತೆಯ ತಿರುವಿನ ಬಳಿ ಗುರುರಾಜ ಎಂಬ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ

ಗುರುರಾಜ ಎಂಬ ಖಾಸಗಿ ಬಸ್ ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಹಾಗೂ ಶಿವಮೊಗ್ಗದಿಂದ ಸಾಗರಕ್ಕೆ ಹೋಗುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ

ಇದರಿಂದ ಕಾರಿನಲ್ಲಿದ್ದ ಚಾಲಕನಿಗೆ ತೀವ್ರವಾದ ಪೆಟ್ಟಾಗಿದ್ದು. ತಕ್ಷಣ ಇವರನ್ನು ಸಾಗರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಸ್ಸಿ ನಲ್ಲಿದ್ದ 20ಕ್ಕೆ ಹೆಚ್ಚು ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ.

ಸ್ಥಳಕ್ಕೆ ಸಾಗರದ ಪೊಲೀಸ್ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.

ವರದಿ : ಅಮಿತ್ ಆನಂದಪುರ 

ಇದನ್ನೂ  ಓದಿ  : ಹೊಸಮನೆ ವಾಹನಗಳ ದ್ವಂಸ ಪ್ರಕರಣ : ಕಪಾಲಿ, ಬಿಕ್ಲಾ ಅಂಡ್ ಗ್ಯಾಂಗ್ ಅರೆಸ್ಟ್ !


Leave a Reply

Your email address will not be published.