ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿ ಇರುವಂತಹ ಮಾಂಸಹಾರ ತಿನಿಸು ಅಂಗಳ ( ನಾನ್ ವೆಜ್ ಫುಡ್ ಕೋರ್ಟ್ ) ನಲ್ಲಿ ಆಹಾರ ಸುರಕ್ಷತ ಮತ್ತು ಗುಣಮಟ್ಟ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆಹಾರ ಸುರಕ್ಷತ ಮತ್ತು ಗುಣಮಟ್ಟ ಅಧಿಕಾರಿಗಳು ದಾಳಿ ನಡೆಸಿ ಸ್ವಚ್ಛತೆ ಕಾಣದೆ ಇರುವುದು, ವೈದ್ಯಕೀಯ ತಪಾಸಣೆ ಇಲ್ಲದಿರುವುದು.ಆರ್ ಒ ವಾಟರ್ ಅಳವಡಿಸದೆ ಇರುವುದು, ಆಹಾರಕ್ಕೆ ಕಲರ್ ಬೆರೆಸುತ್ತಿರುವುದು ಸಂಬಂಧಿಸಿದಂತೆ ಸುಮಾರು 15 ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ
ಐಎಸ್ಐ ಮಾರ್ಕಿನ ಕಲರ್ ಗಳನ್ನ ಬಳಸಲು ಅವಕಾಶವಿದ್ದರೂ, ಐಎಸ್ಐ ಮಾರ್ಕ್ ಇಲ್ಲದ ಬಣ್ಣಗಳನ್ನ ಅಂಗಡಿ ಮಾಲೀಕರು ಮಾರು ಹೋಗುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಅಧಿಕಾರಿಗಳ ದಾಳಿಯ ವೇಳೆ ಆಹಾರಕ್ಕೆ ಬೆರೆಸುವ ಕಲರ್ ಪ್ಯಾಕೆಟ್ ದೊರೆತಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply