ಮತ್ತೆ ತವರಿಗೆ ವಾಪಸ್ ಆಗ್ತಾರಾ ಮಾಜಿ ಸಚಿವ ಕೆಎಸ್ಇ ? ಘರ್ ವಾಪಸಿ ಆಗ್ತಾರ ಈಶ್ವರಪ್ಪ ?

ಶಿವಮೊಗ್ಗ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ಪುತ್ರ ಕೆ ಇ ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ಕಾರಣಕ್ಕಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಿ ವೈ ರಾಘವೇಂದ್ರರ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು , ಈ ವೇಳೆಯೂ ಸಾಕಷ್ಟು ಬಿಜೆಪಿಯ ಮುಖಂಡರು ನಾಯಕರು ಕಾರ್ಯಕರ್ತರು ಕೆ ಎಸ್ ಈಶ್ವರಪ್ಪರ ಮನವೊಲಿಸಲು ಪ್ರಯತ್ನ ನಡೆಸಿದ್ದರು ಕೂಡ ಮಾಜಿ ಸಚಿವ ಕೆ ಸಿ ಈಶ್ವರಪ್ಪ ಮಾತ್ರ ಪಕ್ಷೇತರ ನಿಂತೇ ತೀರುತ್ತೇನೆ ಎಂದು ಪಣತೊಟ್ಟು ಪಕ್ಷೇತರವಾಗಿ ನಿಲ್ಲಲು ನಾಮಪತ್ರ ಸಲ್ಲಿಸಿ ಬಿಟ್ಟಿದ್ದರು, ಆದರೂ ಕೂಡ ತಮ್ಮ ಪ್ರಯತ್ನ ನಿಲ್ಲಿಸದ ಬಿಜೆಪಿ ಶತಾಯ ಗತಾಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರನ್ನ ಮರಳಿ ಬಿಜೆಪಿಗೆ ತರಲು ಪ್ರಯತ್ನ ನಡೆಸಿತ್ತು, ನಂತರ ಈಶ್ವರಪ್ಪನವರಿಗೆ ಡೆಡ್ ಲೈನ್ ಕೂಡ ರಾಜ್ಯ ಬಿಜೆಪಿ ನೀಡಿತ್ತು, ನಾಮಪತ್ರ ಹಿಂಪಡೆಯದ್ದಿದ್ದಾಗ ರಾಜ್ಯ ಬಿಜೆಪಿ ಈಶ್ವರಪ್ಪನವರ ಮೇಲೆ ಕ್ರಮ ಕೈಗೊಂಡು ಆರು ವರ್ಷ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿತ್ತು. ಈಗ ಬಿಜೆಪಿಯ ಅಂಗಳದಲ್ಲಿ ಮಾಜಿ ಸಚಿವರು ಮತ್ತೆ ಬಿಜೆಪಿಗೆ ಸೇರುವ ಸಿದ್ಧತೆ ತೆರೆಮರೆಯಲ್ಲಿ ನಡೆಯುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ.

 ಹೌದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಧಾನಸಭಾ ಚುನಾವಣೆಯ ವೇಳೆ ಟಿಕೆಟ್ ತಪ್ಪಿದ ಕಾರಣದಿಂದಾಗಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ನಂತರ ಮತ್ತೆ ಬಿಜೆಪಿಗೆ ಮರಳಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇದೀಗ ಸಂಸದರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಘರ್ ವಾಪಾಸಿ ಮಾದರಿಯಲ್ಲೇ ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪನವರನ್ನು ಕೂಡ ಮರಳಿ ಬಿಜೆಪಿಗೆ ಕರೆ ತರಲು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ವಿರೋಧಿ ಬಣ ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಎರಡು ದಿನಗಳ ಹಿಂದೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಅವರ ಹಿಂಬಾಲಕರು ಬಿಜೆಪಿಗೆ ಮರು ಸೇರ್ಪಡೆಗೊಳಿಸುವ ಸಿದ್ಧತೆಯ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕೂಡ ಬಿಜೆಪಿ ಸೇರಲು ತೀರ್ಮಾನ ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಲಾಗಿದೆ. ಮಾಜಿಕ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದು ತಾನು ಗೆದ್ದು ನಂತರ ಮೋದಿ ಅವರ ಬಳಿ ಹೋಗುತ್ತೇನೆ ನಂತರ ಬಿಜೆಪಿ ಸೇರುತ್ತೇನೆ ಎಂಬ ಮಾತುಗಳನ್ನು ಹೇಳಿದ್ದರು. ಆದರೆ ಕೆ ಎಸ್ ಈಶ್ವರಪ್ಪ ಚುನಾವಣೆಯಲ್ಲಿ ಕೇವಲ ಠೇವಣಿ ಪಡೆದುಕೊಳ್ಳಲಾಗಿದೆ ಹೀನಾಯವಾಗಿ ಸೋತರು. ಚುನಾವಣೆ ಕೂಡ ಮುಗಿದಿದ್ದು ಮಾಜಿ ಸಚಿವಕ್ಕೆ ಈಶ್ವರಪ್ಪ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ ಎಂಬುದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.