ಶಿವಮೊಗ್ಗ : ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಟ್ರಾಫಿಕ್ ಉಲ್ಲಂಘನೆ ಮಾಡಿದ ಆಟೋ ಚಾಲಕರಿಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ.
ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯ ವಿವಿಧೆಡೆ ಸಂಚಾರ ನಿಯಮ ಉಲ್ಲಂಘಿಸಿದ 25 ಆಟೋಗಳನ್ನು ವಶಕ್ಕೆ ಪಡೆಯಲಾಯಿತು.ಆಟೋಗಳ ದಾಖಲೆ ಪರಿಶೀಲಿಸಿದ ಸಂಚಾರ ಪೊಲೀಸರು, ದಂಡ ವಿಧಿಸಿದರು. ಬಳಿಕ ಆಟೋ ಚಾಲಕರಿಂದ ಪ್ರಮಾಣ ಮಾಡಿಸಿದರು.
“ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡುವುದಿಲ್ಲ.ಆಟೋಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುತ್ತೇನೆ ಎಂದು ದೇವರ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದು ಆಟೋ ಚಾಲಕರು ಪ್ರತಿಜ್ಞೆ ಸ್ವೀಕರಿಸುವಂತೆ ಮಾಡಲಾಯಿತು. ದೇವರ ಮೇಲೆ ಪ್ರಮಾಣ ಮಾಡಿದರೆ ಭಯ, ಭಕ್ತಿಯಿಂದ ನಡೆದುಕೊಳ್ಳಬಹುದು ಎಂಬ ನಂಬಿಕೆಯೊಂದಿಗೆ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ಅವರು ವಿಭಿನ್ನವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಕಾರ್ಯಾಚರಣೆಯಲ್ಲಿ ಪಶ್ಚಿಮ ಸಂಚಾರ ಠಾಣೆಯ ಎಎಸ್‌ಐ ಕೃಷ್ಣಪ್ಪ, ಪ್ರಶಾಂತ್, ಪ್ರಕಾಶ್, ಸುರೇಶ್, ಕಿರಣ್, ಹರೀಶ್, ಪ್ರವೀಣ್, ಚಂದ್ರು ಭಾಗವಹಿಸಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply