ಟಿ-20 ವಿಶ್ವ ಕಪ್ ಮುಡಿಗೇರಿಸಿಕೊಂಡ ಭಾರತ ! 17 ವರ್ಷಗಳ ನಂತ್ರ ಟಿ20 ವಿಶ್ವಕಪ್‌ ಗೆದ್ದ ರೋಹಿತ್‌ ಪಡೆ !

ಸ್ಪೋರ್ಟ್ಸ್ : ಚೋಕರ್ಸ್ vs ಚೋಕರ್ಸ್‌ (Chokers) ಅಂತಾಲೇ ಬಿಂಬಿಸಲಾಗಿದ್ದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. 

17 ವರ್ಷಗಳ ಬಳಿಕ ಟೀಂ ಇಂಡಿಯಾ ಐಸಿಸಿ ವಿಶ್ವಕಪ್‌ಗೆ ಮುತ್ತಿಟ್ಟಿದೆ. ಸೌತ್‌ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ಟೀಂ ಇಂಡಿಯಾ ಮತ್ತೆ ಚಾಂಪಿಯನ್‌ ಆಗಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋತಿತ್ತು. ಆದ್ರೀಗ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಮತ್ತೆ ಚಾಂಪಿಯನ್‌ ಆಗಿದೆ. 

ಇಂದಿನ ರಣರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಸಲಿ ಚಾಂಪಿಯನ್‌ ಯಾರು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ಮೊದಲು ಬ್ಯಾಟ್ ಮಾಡಿ ಬಂದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯ್ತು. ನಾಯಕ ರೋಹಿತ್‌‌ ಶರ್ಮಾ 9 ರನ್‌‌ಗಳಿಸಿ ಔಟಾದ್ರು. ಇನ್ನೂ ಪಂತ್‌ ಕೂಡ ಡಕೌಟ್‌ ಆದ್ರು. ಇನ್ನೂ ಮಿಸ್ಟರ್‌ ಟಿ20 ಎಂದೇ ಖ್ಯಾತಿ ಪಡೆದಿರುವ ಸೂರ್ಯ ಕುಮಾರ್‌ ಕೈ ಕೊಟ್ರು. ಆದ್ರೆ ಇಲ್ಲಿಯವರೆಗೂ ಫೇಲ್ಯೂರ್‌ ಆಗಿದ್ದ ವಿರಾಟ್‌ ಕೊಹ್ಲಿ, ಈ ಪಂದ್ಯದಲ್ಲಿ ಕೊಂಚ ಮಟ್ಟಿಗೆ ಫಾರ್ಮ್‌ಗೆ ಮರಳಿದ್ರು. ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ಕೊಹ್ಲಿ ಅರ್ಧ ಶತಕ ಬಾರಿಸುವ ಮೂಲಕ ಆಸರೆಯಾದ್ರು.

ಅಕ್ಷರ್‌ ಪಟೇಲ್‌ ಅಬ್ಬರ ಬ್ಯಾಟಿಂಗ್‌!

ಕೇವಲ ಮೂರು ರನ್‌ಗಳಿಸಿ ಸೂರ್ಯ ಕುಮಾರ್‌ ಯಾದವ್‌ ಔಟಾದ್ರು. ಇನ್ನೂ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಕೊಹ್ಲಿ ನಿಧಾನವಾಗಿ ರನ್‌‌ ಕಲೆ ಹಾಕಿದ್ರೆ. ಇತ್ತ ಅಕ್ಷರ್ ಪಟೇಲ್ ಅಬ್ಬರ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಸ್ಕೋರ್‌ ಹೆಚ್ಚಿಸಿದ್ರು. 31 ಬಾಲ್‌‌ಗಳಲ್ಲಿ ಅಕ್ಷರ್‌ 47 ರನ್‌‌ಗಳಿಸಿ ಔಟಾದ್ರು.

ಇನ್ನೂ ಕಿಂಗ್‌ ಕೊಹ್ಲಿಗೆ ಕೊನೆಯಲ್ಲಿ ಶಿವಂ ದುಬೆ ಜೊತೆಯಾದ್ರು. 59 ಬಾಲ್‌‌ಗಳಲ್ಲಿ 76 ರನ್‌ಗಳಿಸಿ ಕೊಹ್ಲಿ ಔಟಾದ್ರು. ಶಿವಂ ದುಬೆ 15 ಬಾಲ್‌‌ಗಳಲ್ಲಿ 27 ರನ್‌‌ಗಳಿಸಿ ಔಟಾದ್ರು. ರೋಹಿತ್‌ ಶರ್ಮಾ ಅವರನ್ನು ಈ ಹಿಂದೆ ವಿರಾಟ್ ಫಾರ್ಮ್‌ ಬಗ್ಗೆ ಪ್ರಶ್ನೆ ಕೇಳಲಾಯ್ತು. ಇದಕ್ಕೆ ಉತ್ತರಿಸಿದ್ದ ರೋಹಿತ್‌ ಕೊಹ್ಲಿ ಫೈನಲ್‌ನಲ್ಲಿ ಚೆನ್ನಾಗಿ ಆಡ್ತಾರೆ ನೋಡ್ತಾಯಿರಿ ಎಂದಿದ್ರು. ಅದರಂತೆ ಇದೀಗ ಕಿಂಗ್‌ ಕೊಹ್ಲಿ ಅಬ್ಬರಿಸಿ ಬೊಬ್ಬಿರಿದ್ರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.