ಶಿವಮೊಗ್ಗ : ತಾಲ್ಲೂಕು ಬಂಜಾರ ಸಂಘದ ವತಿಯಿಂದ 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಸಮಾಜದ ವಿದ್ಯಾರ್ಥಿ- ವಿದ್ಯಾರ್ಥಿನಿಯ ರಿಗೆ ಪ್ರತಿ ವರ್ಷದಂತೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ವಿನಾಯಕ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಶೇ.90ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಅಂಕಪಟ್ಟಿ, 2 ಭಾವಚಿತ್ರವನ್ನು ಜು. 15ರೊಳಗಾಗಿ ಸಂಘದ ಕಛೇರಿಗೆ ತಲುಪಿಸಬೇಕು ಎಂದರು.
ಸಂಘವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಮಾಜಕ್ಕೆ ಅನ್ಯಾಯವಾದಲ್ಲಿ ಹೋರಾಟದ ಮೂಲಕ ನ್ಯಾಯ ಒದಗಿಸಲಾಗುತ್ತಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ : 8660624389, 9538577396 ಅಥವಾ 9901029686 ನಲ್ಲಿ ಸಂಪರ್ಕಿಸ ಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ನಾಯ್ಕ, ತೀರ್ಥನಾಯ್ಕ, ರಾಮು ನಾಯ್ಕ, ದೇವದಶರಥ ನಾಯ್ಕ, ಮಂಜುನಾಥ್ ನಾಯ್ ನಾನ್ಯಾನಾಯ್ಕ ಹೇಮೇಶ್ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ




Leave a Reply