ಶಿವಮೊಗ್ಗ : ನಗರದ ಗಾಂಧಿಪಾರ್ಕ್ ಸಮೀಪ ಹಾಡು ಹಗಲೇ ಸಾರ್ವಜನಿಕರು ಓಡಾಡುತ್ತಿದ್ದ ಸಮಯದಲ್ಲೇ ಕಾರಿನ ಗ್ಲಾಸ್ ಒಡೆದು ಐಪ್ಯಾಡ್ ಕಳ್ಳತನ ಆಗಿರುವ ಘಟನೆ ನಡೆದಿದೆ.
ಗಾಂಧಿ ಪಾರ್ಕ್ ನ ಬಳಿ ಇರುವ ಶೌಚಾಲಯ ಸಮೀಪ ಇಎಸ್‌ಐ ಮೆಡಿಕಲ್ ಆಫೀಸರ್ ರಾಕೇಶ್ ಅನ್ನುವವರು ಕಾರು ನಿಲ್ಲಿಸಿದ್ದರು. ಕಾರು ನಿಲ್ಲಿಸಿ ಶೋ ಹೋಲಿಸಿಕೊಂಡು ಬರಲು ತೆರಳಿದ್ದರು. ನಂತರ ವಾಪಸ್ ಆಗುವಾಗ ಕಾರಿನ ಹಿಂಬದಿಯ ಎಡಗಡೆ ಗ್ಲಾಸ್ ಹೊಡೆದಿತ್ತು.
ಈ ವೇಳೆ ಪರಿಶೀಲಿಸಿದಾಗ ಯಾರೋ ಕಿಡಿಗೇಡಿಗಳು ಕಾರಿನ ಸೀಟಿನ ಮೇಲೆ ಇಟ್ಟಿದ್ದ 60 ಸಾವಿರ ಮೌಲ್ಯದ ಐಪ್ಯಾಡ್ ಕಳ್ಳತನ ಮಾಡಿದ್ದಾರೆ. ತಮ್ಮ ಕೆಲಸಕ್ಕೆ ಸಂಬಂಧಿಸಿದ ಮಾಹಿತಿಗಳು ಇದರಲ್ಲಿ ಇದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply