ಶಿವಮೊಗ್ಗದಲ್ಲಿ ಓಪನ್ ರೌಡಿಸಂ ! ನಗರದಲ್ಲಿ ಹೆಚ್ಚಾಯ್ತಾ ಪುಡಿರೌಡಿಗಳ ಅಟ್ಟಹಾಸ ? ಲಾಂಗ್ ಬೀಸಿದ ವಿಡಿಯೋ ವೈರಲ್ ! ಎಫ್ಐಆರ್ ದಾಖಲು !

ಶಿವಮೊಗ್ಗ : ಶಿವಮೊಗ್ಗದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ. ರೌಡಿಗಳ ಓಪನ್ ಅಟ್ಯಾಕ್ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಲಾಂಗು ಹಿಡಿದು ಅಟ್ಯಾಕ್ ಮಾಡಿದ ವೀಡಿಯೋ ವೈರಲ್ ಆಗಿದೆ. ಶಿವಮೊಗ್ಗದಲ್ಲಿ ನಡೆದ ಈ ಓಪನ್ ರೌಡಿಸಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗಿದೆ.

ನಗರದ ಸವಳಂಗ ರಸ್ತೆಯ ಎಲ್‌ಬಿಎಸ್ ನಗರದಲ್ಲಿರುವ ಪೋಲಾರ್ ಬೇರ್. ಮತ್ತು ಮೆಟ್ಲೆಸ್ ಬಳಿ ಆಗಸ್ಟ್ 16 ರ ರಾತ್ರಿ ಸುಮಾರು 12ರಿಂದ ಒಂದು ಗಂಟೆಯ ವೇಳೆಗೆ ತನಕ ಗಲಾಟೆ ನಡೆದಿದೆ ಎನ್ನಲಾಗಿದೆ. 12:30 ಕ್ಕೆ ದ್ವಿಚಕ್ರ ವಾಹನದಲ್ಲಿ ಮೂರು ಜನ ಬಂದಿದ್ದು, ಇದರಲ್ಲಿ ಓರ್ವ ಮಚ್ಚು ಹಿಡಿದುಕೊಂಡು ಬಂದು ಪೊಲಾರ್ ಬೇರ್ ಸಿಬ್ಬಂದಿ ಮೇಲೆ ಏಕಾಏಕಿ ಅಟ್ಯಾಕ್ ಗೆ ಮುಂದಾಗುತ್ತಾನೆ.

ಕ್ಷಣಾರ್ಧದಲ್ಲಿ ಸಿಬ್ಬಂದಿ ಆತನಿಂದ ಎಸ್ಕೇಪ್ ಆಗುತ್ತಾನೆ. ಕೈಯಲ್ಲಿ ಲಾಂಗು ಹಿಡಿದು ಅಟಾಕ್ ಮಾಡಲು ಯತ್ನಿಸಿದ ವಿಡಿಯೋ ಸಿಸಿಟಿವಿನಲ್ಲಿ ರೆಕಾರ್ಡ್ ಆಗಿದೆ.. ಅದೃಷ್ಟವಶಾತ್ ಸಿಬ್ಬಂದಿ ಶೆಟ್ಟರ್ ಎತ್ತು ಒಳಗಡೆ ಓಡಿ ಹೋಗುತ್ತಾನೆ.ನಂತರ ಮಚ್ಚು ಹಿಡಿದ ವ್ಯಕ್ತಿ ಶೆಟ್ಟರ್ ಮತ್ತು ಡೋರ್ ಕೆಳಗೆ ಲಾಂಗು ನಿಂದ ಬೀಸುತ್ತಾನೆ.

ಸದ್ಯ ಪ್ರಕರಣ ವಿನೋಬನಗರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಡಿ ರೌಡಿಗಳ ಅಟ್ಟಹಾಸದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

ಇದನ್ನೂ ಓದಿ  : ಇಂದು ಭಾರತ್ ಬಂದ್ ! ಶಾಲಾ, ಕಾಲೇಜು, ಬ್ಯಾಂಕ್, ಕಚೇರಿ ಬಂದ್ ಆಗುತ್ತಾ.? ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ.


Leave a Reply

Your email address will not be published.