BREAKING NEWS : ಆಯನೂರಿನಲ್ಲಿ  ದಗ ದಗನೆ ಹೊತ್ತಿ ಉರಿದ ಬೇಕರಿ ! ಸಿಲೆಂಡರ್ ಗಳು ಬ್ಲಾಸ್ಟ್ !

ಶಿವಮೊಗ್ಗ : ತಾಲೂಕಿನ ಆಯನೂರಿನ ಬಳಿ ಇರುವ ಬೇಕರಿ ಒಂದರಲ್ಲಿ ಬೆಂಕಿ ಹತ್ತಿಕೊಂಡು ದಗ ದಗನೆ ಹೊತ್ತಿ ಉರಿದ ಘಟನೆ ನಡೆದಿದೆ.

 ಆಯನೂರಿನ ಹಣಗೆರೆ ರಸ್ತೆಯ ಎಸ್ ಎಲ್ ವಿ ಅಯ್ಯಂಗಾರ್ ಬೇಕರಿಯಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡು. ಅಂಗಡಿ ಹೊತ್ತಿ ಉರಿದಿದೆ ಬೆಂಕಿಯ ಜ್ವಾಲೆ ಜಾಸ್ತಿ ಆಗುತ್ತಿದ್ದ ಸಂದರ್ಭದಲ್ಲಿ ಬೇಕರಿ ಒಳಗೆ ಮೂರು ಬಾರಿ ಸ್ಫೋಟಗೊಂಡಿದೆ. ಬೇಕರಿಯಲ್ಲಿರುವ ಸಿಲೆಂಡರ್ ಸ್ಫೋಟಗೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಬೆಂಕಿಯ ಜ್ವಾಲೆ ಅಕ್ಕಪಕ್ಕದ ಅಂಗಡಿಗಳಿಗೂ ಆವರಿಸಿದ್ದು. ಅಕ್ಕ ಪಕ್ಕದ ಅಂಗಡಿಯವರು ಬೆಂಕಿ ಕಾಣಿಸಿಕೊಂಡ ಕೂಡಲೇ ಹೊರಗೆ ಓಡಿ ಬಂದಿದ್ದಾರೆ ಇನ್ನು ಬೇಕರಿಯ ಮುಂಭಾಗದಲ್ಲಿ ಪೆಟ್ರೋಲ್ ಬಂಕ್ ಇರುವ ಕಾರಣ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇನ್ನೂ ಬೇಕರಿಗೆ ಬೆಂಕಿ ತೆಗಿಲಿದ್ದು ಹೇಗೆ ? ಎಂದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

ಇದನ್ನೂ ಓದಿ  : ಶಿವಮೊಗ್ಗದಲ್ಲಿ ಓಪನ್ ರೌಡಿಸಂ ! ನಗರದಲ್ಲಿ ಹೆಚ್ಚಾಯ್ತಾ ಪುಡಿರೌಡಿಗಳ ಅಟ್ಟಹಾಸ ? ಲಾಂಗ್ ಬೀಸಿದ ವಿಡಿಯೋ ವೈರಲ್ ! ಎಫ್ಐಆರ್ ದಾಖಲು 

 


Leave a Reply

Your email address will not be published.