ಕಿಡಿಗೇಡಿಗಳು ಪೊಲೀಸರ ಹೆಸರಲ್ಲಿ ರಾಜ್ಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಪೊಲೀಸ್ ಹೆಲ್ಪ್ಲೈನ್ ಹೆಸರಿನಲ್ಲಿ ಸುಳ್ಳು ನಂಬರ್ ಉಲ್ಲೇಖಿಸಿ ಎಸ್ಎಂಎಸ್ನ್ನು ಕಿಡಿಗೇಡಿಗಳು ಎಲ್ಲೆಡೆ ವೈರಲ್ ಮಾಡುತ್ತಿದ್ದು, ಎಚ್ಚರದಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ.
ಏನಿದು ವೈರಲ್ ಮೆಸೇಜ್?
ಪೊಲೀಸರು ಹೊಸದೊಂದು ಟ್ರಾವೆಲ್ ಸ್ಕೀಂ ಪ್ರಾರಂಭಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಾರೆ ಅಂತಾ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು.
ಜೊತೆಗೆ ಒಂಟಿ ಮಹಿಳೆಯರಿಗೆ ವಾಹನ ಸಿಗದಿದ್ದರೆ ಸಹಾಯವಾಣಿ ಸಂಖ್ಯೆ 1091 ಅಥವಾ 7837018555 ಗೆ ಕರೆ ಮಾಡಿ. ಪೊಲೀಸರು ಮನೆಗೆ ಬಿಟ್ಟು ಬರ್ತಾರೆ ಎಂಬ ಮೆಸೇಜ್ ಸಖತ್ ವೈರಲ್ ಆಗಿತ್ತು. ಜೊತೆಗೆ ಈ ಮೆಸೇಜ್ನ್ನು ಎಲ್ಲಾ ಮಹಿಳೆಯರಿಗೆ ಫಾರ್ವರ್ಡ್ ಮಾಡಿ ಎಂದೂ ಸಹ ಆ ಸಂದೇಶದಲ್ಲಿ ಇತ್ತು.
ರಾತ್ರಿ ವೇಳೆ ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನೇ ದುರ್ಬಳಕ್ಕೆ ಮಾಡಿಕೊಂಡ ಕಿಡಿಗೇಡಿಗಳು ಪೊಲೀಸ್ ಹೆಲ್ಪ್ಲೈನ್ ಹೆಸರಿನಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸಲು ಮತ್ತು ವಂಚನೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.
ಇಂತಹ ಯಾವುದೇ ಯೋಜನೆಯನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿಲ್ಲ. ಈ ಹೆಲ್ಪ್ಲೈನ್ ನಂಬರ್ ಸಹ ಇಲಾಖೆಗೆ ಸೇರಿದ್ದಲ್ಲ. ವಂಚನೆ ಮಾಡುವ ಉದ್ದೇಶಕ್ಕೆ ಕಿಡಿಗೇಡಿಗಳು ಈ ಸುಳ್ಳು ಸಂದೇಶವನ್ನು ಎಲ್ಲೆಡೆ ವೈರಲ್ ಮಾಡುತ್ತಿದ್ದಾರೆ ಎಚ್ಚರದಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ತುರ್ತು ಸೇವೆ ನಮ್ಮ 112ಗೆ ಕರೆ ಮಾಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply