ಶಿವಮೊಗ್ಗದ ರೌಡಿಶೀಟರ್ ಅವಿನಾಶ್ ಹತ್ಯೆ: ಬೊಮ್ಮನಕಟ್ಟೆಯಲ್ಲಿ ಐವರ ಬಂಧನ, ಪತ್ನಿ ಕಿರುಕುಳಕ್ಕೆ ಕೊಲೆ!

ಶಿವಮೊಗ್ಗ: ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ನಡೆದ ರೌಡಿಶೀಟರ್ ಅವಿನಾಶ್ (32) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋಬನಗರ ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೊಮ್ಮನಕಟ್ಟೆ ಬಡಾವಣೆಯ ನಿವಾಸಿಗಳಾದ ಪ್ರವೀಣ್ (35), ಆನಂದ್ (35), ಸುನೀಲ್ (30), ಜಿತೇಂದ್ರ (28) ಹಾಗೂ ಕಿರಣ್ (34) ಎಂದು ಗುರುತಿಸಲಾಗಿದೆ. ಆರೋಪಿಗಳೆಲ್ಲರೂ ಕೃಷಿ ಕೆಲಸ ಮಾಡಿಕೊಂಡಿದ್ದು, ಕೊಲೆಯಾದ ಅವಿನಾಶ್ ಅವರ ಸಂಬಂಧಿಗಳು ಮತ್ತು ಮತ್ತು ಪರಿಚಯಸ್ಥರಾಗಿದ್ದಾರೆ.

 

ಅವಿನಾಶ್, ಹಳೆ ಬೊಮ್ಮನಕಟ್ಟೆಯ ಶೇಖರಪ್ಪ ಅವರ ಪುತ್ರ. ಸುಮಾರು 10 ವರ್ಷಗಳ ಹಿಂದೆ ನಡೆದ ರೌಡಿ ಶೀಟರ್ ತಮಿಳುಗಿರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ, ಜೀವಾವಧಿ ಶಿಕ್ಷೆಗೂ ಗುರಿಯಾಗಿದ್ದ. ಇತ್ತೀಚೆಗೆ ಪೆರೋಲ್ ಮೇಲೆ ಮನೆಗೆ ಬಂದಿದ್ದ ಎನ್ನಲಾಗಿದೆ.

ಇದನ್ನು ಓದಿ : ರೈಲ್ವೆ ನೇಮಕಾತಿ 2025: SSLC, ITI, ಪದವೀಧರರಿಗೆ 6180 ಟೆಕ್ನೀಷಿಯನ್ ಹುದ್ದೆಗಳ ಬೃಹತ್ ಅವಕಾಶ! ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಜೂನ್ 21 ರ ರಾತ್ರಿ ಅವಿನಾಶ್ ಮನೆಯಿಂದ ತೆರಳಿದ್ದು, ಜೂನ್ 22 ರ ಮುಂಜಾನೆ ಬೊಮ್ಮನಕಟ್ಟೆ ಕೆರೆ ಏರಿ ಸಮೀಪ ಅವರ ಮೃತದೇಹ ಪತ್ತೆಯಾಗಿತ್ತು. ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ ವಿಚಾರಣೆ ವೇಳೆ, ಕೊಲೆಯಾದ ಅವಿನಾಶ್ ಆರೋಪಿಯೊಬ್ಬನ ಪತ್ನಿಗೆ ಕಿರುಕುಳ ನೀಡುತ್ತಿದ್ದರಿಂದ ಈ ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಮೆಸ್ಕಾಂ ನಗರ ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ.

WhatsApp Number : 7795829207


Leave a Reply

Your email address will not be published.