ಶಿವಮೊಗ್ಗ: ಆರ್ಯ ವೈಶ್ಯ ಸಮುದಾಯದ ಆರ್ಥಿಕ ಸಬಲೀಕರಣ ಮತ್ತು ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ನಿಗಮವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಶಿವಮೊಗ್ಗದ ಹೆಮ್ಮೆಯ ನಾಯಕರಾದ ಶ್ರೀ ಡಿ.ಎಸ್. ಅರುಣ್ ಅವರ ನಿರಂತರ ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ, ನಿಗಮವು 2025-26ನೇ ಸಾಲಿಗೆ ಹಲವು ನೂತನ ಮತ್ತು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ನಿರ್ದೇಶಕರು ಹಾಗೂ ಬಿಜೆಪಿ ಶಿವಮೊಗ್ಗ ನಗರದ ಮಾಧ್ಯಮ ಸಂಚಾಲಕರಾದ ಶ್ರೀ ಎಸ್.ಎನ್. ಶ್ರೀನಾಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಶ್ರೀ ಎಸ್.ಎನ್. ಶ್ರೀನಾಗ ಅವರು, “ಆರ್ಯ ವೈಶ್ಯ ಸಮುದಾಯವನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ಒದಗಿಸುವುದು ನಿಗಮದ ಪ್ರಮುಖ ಉದ್ದೇಶವಾಗಿದೆ. ಶ್ರೀ ಡಿ.ಎಸ್. ಅರುಣ್ ರವರ ಪರಿಶ್ರಮದಿಂದ ಈಗ ನಿಗಮವು ಸಮಾಜದ ಅಭಿವೃದ್ಧಿಗೆ ಸದಾವಕಾಶವನ್ನು ಒದಗಿಸಿದೆ,” ಎಂದು ಹೇಳಿದರು.
ಜಾಹಿರಾತು:
ನಿಗಮದಿಂದ ಅನುಷ್ಠಾನಗೊಂಡ ಪ್ರಮುಖ ಯೋಜನೆಗಳು ಹೀಗಿವೆ:
1. ಅರಿವು ಶಿಕ್ಷಣ ಸಾಲ: ಆರ್ಯ ವೈಶ್ಯ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸುವುದು.
2. ಸ್ವಯಂ ಉದ್ಯೋಗ ನೇರ ಸಾಲ: ಸಮುದಾಯದ ಸದಸ್ಯರಿಗೆ ಸ್ವಯಂ ಉದ್ಯೋಗ ಆರಂಭಿಸಲು ಅಥವಾ ವಿಸ್ತರಿಸಲು ಆರ್ಥಿಕ ನೆರವು ನೀಡುವುದು.
3. ಆರ್ಯ ವೈಶ್ಯ ಆಹಾರ ವಾಹಿನಿ: ಸಮುದಾಯದ ಸದಸ್ಯರಿಗೆ ಶುಚಿ ಮತ್ತು ಗುಣಮಟ್ಟದ ಆಹಾರವನ್ನು ಒದಗಿಸುವ ಉದ್ದೇಶ.
4. ವಾಸವಿ ಜಲಶಕ್ತಿ ಯೋಜನೆ: ಜಲಸಂರಕ್ಷಣೆ ಮತ್ತು ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸಿ ಸಮುದಾಯದ ನೀರಿನ ಅಗತ್ಯಗಳನ್ನು ಪೂರೈಸುವುದು.
5. ಶಿಕ್ಷಣ ಸಾಲ ನವೀಕರಣ ಯೋಜನೆ: ಈಗಾಗಲೇ ಶಿಕ್ಷಣ ಸಾಲ ಪಡೆದಿರುವವರಿಗೆ ನವೀಕರಣದ ಮೂಲಕ ಹೆಚ್ಚಿನ ಬೆಂಬಲ ನೀಡುವುದು.
ಈ ಯೋಜನೆಗಳ ಅನುಷ್ಠಾನವು ಸಮುದಾಯದ ಶ್ರೇಯೋಭಿವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ ಎಂದು ಶ್ರೀ ಶ್ರೀನಾಗ ಅಭಿಪ್ರಾಯಪಟ್ಟರು. ಸಮುದಾಯದ ಬಾಂಧವರು ಈ ಸದಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ವಿನಂತಿಸಿಕೊಂಡಿದ್ದಾರೆ.
ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಸರ್ವರಿಗೂ, ವಿಶೇಷವಾಗಿ ಶ್ರೀ ಡಿ.ಎಸ್. ಅರುಣ್ ಅವರಿಗೂ ಶ್ರೀ ಎಸ್.ಎನ್. ಶ್ರೀನಾಗ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಇದನ್ನು ಓದಿ : ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದ 3000+ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪೂರ್ತಿ ಓದಲು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ
ಇಂತಹ ಹೆಚ್ಚಿನ ಸುದ್ದಿಗಳಿಗಾಗಿ ಶಿವಮೊಗ್ಗ ಎಕ್ಸ್ಪ್ರೆಸ್ನ್ಯೂಸ್ ಚಾನೆಲ್ ಅನ್ನು ವೀಕ್ಷಿಸುತ್ತಿರಿ.
WhatsApp Number : 7795829207
Leave a Reply