ಶಿವಮೊಗ್ಗ: ರಾಜ್ಯದಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಬೆಚ್ಚಿಬೀಳಿಸುತ್ತಿರುವಾಗಲೇ, ಶಿವಮೊಗ್ಗದಲ್ಲಿ ಮತ್ತೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿಯಾದ ಮಗಳನ್ನೇ ಹಗ್ಗದಿಂದ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ ತಂದೆಯ ಕ್ರೂರ ಕೃತ್ಯ ವೈಫಲ್ಯಗೊಂಡಿದ್ದು, ಜೀವನ್ಮರಣ ಹೋರಾಟದಿಂದ ಬದುಕುಳಿದ ಮಗಳು ಈಗ ಚೇತರಿಸಿಕೊಳ್ಳುತ್ತಿದ್ದಾಳೆ.
ಈ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಮಳವಳ್ಳಿ ತಾಂಡಾದಲ್ಲಿ ನಡೆದಿದೆ. ಪುತ್ರಿ ಗರ್ಭಿಣಿಯಾಗಿರುವ ವಿಷಯ ತಿಳಿದ ತಂದೆ ಧರ್ಮಪ್ಪ ನಾಯಕ್, ತಮ್ಮ ಕುಟುಂಬದ ‘ಮರ್ಯಾದೆಗೆ’ ಕಳಂಕ ಬಂದಿದೆ ಎಂದು ಭಾವಿಸಿ ಕಠೋರ ನಿರ್ಧಾರ ಕೈಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ, ತಾಯಿ ಸಹಿತ, ಮಗಳನ್ನು ಸೊರಬದ ಉಳವಿ ಬಳಿಯ ಕಾನಹಳ್ಳಿ ಕಾಡು ಗಳತ್ತ ಕರೆದೊಯ್ದಿದ್ದಾರೆ.
ಅಲ್ಲಿ, ಮಾನವೀಯತೆ ಮರೆತ ತಂದೆ ಧರ್ಮಪ್ಪ, ತನ್ನ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೆ ಯತ್ನಿಸಿದ್ದಾನೆ. ತಾಯಿ ಕಾಲು ಹಿಡಿದು ಬೇಡಿಕೊಂಡರೂ, ಆತನ ಮನಸ್ಸು ಕರಗಿರಲಿಲ್ಲ ಎನ್ನಲಾಗಿದೆ. ಹತ್ಯೆಯ ಯತ್ನದಿಂದ ಯುವತಿ ಪ್ರಜ್ಞೆ ತಪ್ಪಿಬಿದ್ದಿದ್ದಾಳೆ. ಸಾವನ್ನಪ್ಪಿದ್ದಾಳೆಂದು ಭಾವಿಸಿದ ಧರ್ಮಪ್ಪ ಮತ್ತು ಆತನ ಪತ್ನಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಆದರೆ, ಅದೃಷ್ಟವಶಾತ್ ಪ್ರಜ್ಞೆ ಮರಳಿದ ಯುವತಿ, ಜೀವನ್ಮರಣದ ನಡುವೆ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ದಾರಿಹೋಕರೊಬ್ಬರು ಆಕೆಯನ್ನು ರಕ್ಷಿಸಿ, ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ನಂತರ ಸೊರಬ ಸಾರ್ವಜನಿಕ ಆಸ್ಪತ್ರೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಇದನ್ನು ಓದಿ : ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದ 3000+ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪೂರ್ತಿ ಓದಲು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ
ಯುವತಿ ನೀಡಿದ ಹೇಳಿಕೆಯ ಆಧಾರದ ಮೇಲೆ, ಸೊರಬ ಪೊಲೀಸ್ ಠಾಣೆ ಯಲ್ಲಿ ಧರ್ಮಪ್ಪ ನಾಯಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಮರ್ಯಾದಾ ಹತ್ಯೆಗೆ ಯತ್ನಿಸಿದ ಆರೋಪಿ ಧರ್ಮಪ್ಪ ನಾಯಕ್ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ಈ ಘಟನೆ ಕುರಿತು ನಿಮ್ಮ ಅಭಿಪ್ರಾಯಗಳೇನು? ಇಂತಹ ಕೃತ್ಯಗಳಿಗೆ ಸಮಾಜದಲ್ಲಿ ಅಂತ್ಯ ಯಾವಾಗ? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಇಂತಹ ಹೆಚ್ಚಿನ ಸುದ್ದಿಗಳಿಗಾಗಿ ಶಿವಮೊಗ್ಗ ಎಕ್ಸ್ಪ್ರೆಸ್ನ್ಯೂಸ್ ಚಾನೆಲ್ ಅನ್ನು ವೀಕ್ಷಿಸುತ್ತಿರಿ.
WhatsApp Number : 7795829207
Leave a Reply