ಚನ್ನಗಿರಿ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಅತ್ತೆ-ಅಳಿಯ ಪರಾರಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ನಾಪತ್ತೆಯಾಗಿದ್ದ ಅತ್ತೆ ಶಾಂತಾ ಗ್ರಾಮಕ್ಕೆ ಮರಳಿದ್ದು, ತಾನು ಸಾಲ ಮಾಡಿಕೊಂಡಿದ್ದರಿಂದ ತಲೆಮರೆಸಿಕೊಂಡಿದ್ದೆ ಹೊರತು, ಅಳಿಯ ಗಣೇಶನೊಂದಿಗೆ ಹೋಗಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಶಾಂತಾ ವಾಪಸ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಅವರ ಮಲಮಗಳು ಹೇಮಾವತಿ ಮತ್ತು ಸಂಬಂಧಿಕರು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಡೆದ ವಾಗ್ವಾದ ಜಗಳ ಮತ್ತು ಹೊಡೆದಾಟಕ್ಕೆ ತಿರುಗಿದೆ. ಈ ಘಟನೆಯಲ್ಲಿ ಹೇಮಾವತಿ ಮತ್ತು ಶಾಂತಾ ಇಬ್ಬರಿಗೂ ಗಾಯಗಳಾಗಿದ್ದು, ಇಬ್ಬರೂ ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಜಾಹಿರಾತು:
ಆದರೆ, ಶಾಂತಾ ಮಾತ್ರ ಗಣೇಶ ಎಲ್ಲಿದ್ದಾನೆ ಎಂಬುದು ತನಗೆ ತಿಳಿದಿಲ್ಲ, ಅವನಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಗ್ರಾಮಸ್ಥರಿಂದ ಆಕ್ರೋಶ
ಈ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿ ತಮ್ಮೂರಿನ ಹೆಸರನ್ನು ಕೆಡಿಸಿದೆ ಎಂದು ಗ್ರಾಮಸ್ಥರು ಈ ಕುಟುಂಬದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚರ್ಚಿಸಲು ಗ್ರಾಮದ ಹಿರಿಯರೆಲ್ಲರೂ ಸೇರಿ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಇದನ್ನು ಓದಿ : ಹೊಸನಗರ: ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು!! ಏನಿದು ಪ್ರಕರಣ? ಪೂರ್ತಿ ಓದಲು ಕೆಳಗಿರುವ ಕ್ಲಿಕ್ ಮಾಡಿ
WhatsApp Number : 7795829207
Leave a Reply