ಶಿವಮೊಗ್ಗ: ಶಿವಮೊಗ್ಗದ ಓ.ಟಿ. ರಸ್ತೆಯಲ್ಲಿರುವ ಎಸ್.ಆರ್. ಕಾಂಪ್ಲೆಕ್ಸ್ನಲ್ಲಿ ಇಂದು (ಜುಲೈ 1) ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರಾಮಣ್ಣ ಅವರಿಗೆ ಸೇರಿದ ಈ ಕಾಂಪ್ಲೆಕ್ಸ್ನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಇಡೀ ಕಟ್ಟಡ ಹೊಗೆಯಿಂದ ಆವೃತವಾಯಿತು. ಕೂಡಲೇ ಸ್ಥಳೀಯರು ಮೆಸ್ಕಾಂ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ತ್ವರಿತವಾಗಿ ಕಾರ್ಯಪ್ರವೃತ್ತರಾದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಕಡಿತಗೊಳಿಸಿದರು. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ. ಈ ಘಟನೆಯಿಂದಾಗಿ ಓ.ಟಿ. ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಅದೃಷ್ಟವಶಾತ್, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಬೆಂಕಿಯಿಂದ ವಸ್ತುಗಳಿಗೆ ಹಾನಿಯಾಗಿದೆಯೇ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಆನಂದಪುರ: ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ! ಏನಿದು ಪ್ರಕರಣ? ಪೂರ್ತಿ ಓದಲು ಕೆಳಗಿರುವ ಕ್ಲಿಕ್ ಮಾಡಿ
ಜಾಹಿರಾತು:
WhatsApp Number : 7795829207
Leave a Reply