ಮೊಹರಂ: ಹಿಂದೂ–ಮುಸ್ಲಿಮರ ಭಾವೈಕ್ಯತೆ ಸಂಕೇತ – ಆನಂದಪುರ ಭೋವಿ ಕಾಲೋನಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಭಾಗಿ

ಆನಂದಪುರ: ಮೊಹರಂ ಹಬ್ಬವು ಇಂದಿಗೂ ಜನಸಮುದಾಯದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ, ಆಚರಣೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ತಾಲ್ಲೂಕಿನ ಆನಂದಪುರದ ಭೋವಿ ಕಾಲೋನಿ ಹಾಗೂ ಇಸ್ಲಾಂಪುರದಲ್ಲಿ ಶನಿವಾರ ನಡೆದ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೊಹರಂ ಆಚರಣೆಯು ಹಿಂದೂ-ಮುಸ್ಲಿಮರ ಬಾಂಧವ್ಯ ಮತ್ತು ಸಹೋದರತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ಪರಧರ್ಮ ಸಹಿಷ್ಣುತೆಯ ಭಾವನೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಮೊಹರಂ ಪ್ರಮುಖ ಕಾರಣವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಚೋರರಿಗೊಂದು ಕಾಲ ಹಾಡಿಗೆ ಶಾಸಕರ ಹೆಜ್ಜೆ:

ಆನಂದಪುರ ಭೋವಿ ಕಾಲೋನಿಯಲ್ಲಿ ನಡೆದ ಮೊಹರಂ ಉತ್ಸವದಲ್ಲಿ “ಚೋರರಿಗೊಂದು ಕಾಲ, ಶೂರಾರಿಗೊಂದು ಕಾಲ” ಎಂಬ ಹಾಡಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಎಲ್ಲರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಇದನ್ನು ಓದಿ : ವಿಗ್ರಹ ವಿರೂಪ : ಶಾಸಕರ ವಿರಾಟ ರೂಪ:ವಿಘ್ನ ನಿವಾರಕನಿಗೆ ರಾಗಿಗುಡ್ಡದಲ್ಲಿ ವಿಘ್ನ ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ, ಕಠಿಣ ಕ್ರಮಕ್ಕೆ ಸೂಚನೆ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ಪೂರ್ತಿ ಓದಲು ಲಿಂಕ್ ಕ್ಲಿಕ್  ಮಾಡಿ

ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಸೋಮಶೇಖರ್ ಲಾವಿಗೆರೆ, ಮುಖಂಡರಾದ ಉಮೇಶ್, ರೆಹಮತ್ತುಲ್ಲಾ, ಕಲೀಮುಲ್ಲಾ, ಗ್ರಾ.ಪಂ ಸದಸ್ಯ ಗಜೇಂದ್ರ, ಸಿರಿಜಾನ್, ಎಂಪಿಎಸ್ ಮುನ್ನಾ, ಮಂಜುನಾಥ್ ದಾಸಕೊಪ್ಪ ಹಾಗೂ ಇನ್ನಿತರ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನು ಓದಿ : ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವಿಶೇಷ ವರದಿ!   ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ

WhatsApp Number : 7795829207


Leave a Reply

Your email address will not be published.