ಅಮರನಾಥ ಯಾತ್ರೆ 2025: 4 ದಿನಗಳಲ್ಲಿ 70,000 ಭಕ್ತರ ಆಗಮನ, ಯಾತ್ರೆಗೆ ಅಭೂತಪೂರ್ವ ಸ್ಪಂದನೆ!

ನವದೆಹಲಿ: ಪವಿತ್ರ ಅಮರನಾಥ ಯಾತ್ರೆ 2025ಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯಾತ್ರೆ ಆರಂಭವಾಗಿ ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ 70,000ಕ್ಕೂ ಹೆಚ್ಚು ಭಕ್ತರು ಶಿವನ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರವೂ 8,605 ಯಾತ್ರಾರ್ಥಿಗಳ ಮತ್ತೊಂದು ತಂಡ ಕಾಶ್ಮೀರ ಕಣಿವೆಗೆ ಪ್ರಯಾಣ ಬೆಳೆಸಿದೆ.

ಜುಲೈ 3 ರಂದು ಪ್ರಾರಂಭವಾದ ಅಮರನಾಥ ಯಾತ್ರೆಯಲ್ಲಿ ಭಾನುವಾರ ಒಂದೇ ದಿನ 21,512 ಯಾತ್ರಿಕರು ಪವಿತ್ರ ಗುಹೆ ದೇವಾಲಯದಲ್ಲಿ ದರ್ಶನ ಪಡೆದಿದ್ದಾರೆ.

ಯಾತ್ರಿಗಳ ದಂಡು:

ಸೋಮವಾರ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಪ್ರತ್ಯೇಕ ಬೆಂಗಾವಲು ಪಡೆಗಳಲ್ಲಿ ಯಾತ್ರಾರ್ಥಿಗಳು ಕಾಶ್ಮೀರ ಕಣಿವೆಗೆ ತೆರಳಿದ್ದಾರೆ. ಮೊದಲ ಬೆಂಗಾವಲು ತಂಡದಲ್ಲಿ 3,486 ಯಾತ್ರಾರ್ಥಿಗಳು ಉತ್ತರ ಕಾಶ್ಮೀರದ ಬಾಲ್ಟಾಲ್ ಬೇಸ್ ಕ್ಯಾಂಪ್‌ಗೆ ತೆರಳಿದರೆ, ಎರಡನೇ ತಂಡದಲ್ಲಿ 5,119 ಯಾತ್ರಿಗಳು ದಕ್ಷಿಣ ಕಾಶ್ಮೀರದ ನುನ್ವಾನ್ (ಪಹಲ್ಗಾಮ್) ಬೇಸ್ ಕ್ಯಾಂಪ್‌ಗೆ ಪ್ರಯಾಣಿಸಿದ್ದಾರೆ.

ಜಾಹಿರಾತು:

ಜಮ್ಮುವಿನಲ್ಲಿ ನೋಂದಾಯಿಸಿಕೊಳ್ಳುವ ಯಾತ್ರಿಗಳಲ್ಲದೆ, ಅನೇಕ ಭಕ್ತರು ನೇರವಾಗಿ ಬಾಲ್ಟಾಲ್ ಮತ್ತು ನುನ್ವಾನ್ (ಪಹಲ್ಗಾಮ್) ನಲ್ಲಿ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ಯಾತ್ರೆಗೆ ಸೇರುತ್ತಿದ್ದಾರೆ ಎಂದು ಶ್ರೀ ಅಮರನಾಥಜಿ ದೇವಾಲಯ ಮಂಡಳಿ (SASB) ಅಧಿಕಾರಿಗಳು ತಿಳಿಸಿದ್ದಾರೆ.

ದುರದೃಷ್ಟವಶಾತ್, ಈ ವರ್ಷದ ಯಾತ್ರೆ ಆರಂಭವಾದಾಗಿನಿಂದ ಇಬ್ಬರು ಯಾತ್ರಿಕರು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಯಾತ್ರಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಇದನ್ನು ಓದಿ : ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವಿಶೇಷ ವರದಿ!   ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ

ಜಾಹಿರಾತು:

 

WhatsApp Number : 7795829207


Leave a Reply

Your email address will not be published.