ತೀರ್ಥಹಳ್ಳಿ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಭಾರತಿಪುರ ಫ್ಲೈ ಓವರ್ನ ಒಂದು ಭಾಗವನ್ನು ಸಂಚಾರಕ್ಕೆ ಮುಚ್ಚಲಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬರುವಾಗ ಎಡ ಭಾಗದಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಲಾಗಿದ್ದು, ಧರೆ ಕುಸಿಯುವ ಭೀತಿ ಇದಕ್ಕೆ ಕಾರಣವಾಗಿದೆ.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ಮಳೆಗಾಲದಲ್ಲಿ ಭೂಕುಸಿತ ಸಾಮಾನ್ಯವಾದರೂ, ಭಾರತಿಪುರದಲ್ಲಿನ ಈ ಧರೆ ಕುಸಿತದ ಭೀತಿಗೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ಗಳು ಹಾಗೂ ಗುತ್ತಿಗೆದಾರರೇ ನೇರ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. “ಮಳೆಗಾಲದಲ್ಲಿ ಕುಸಿಯುತ್ತದೆ ಎಂಬ ಪರಿಜ್ಞಾನವೂ ಇಲ್ಲದೆ ಗುಡ್ಡ ಕುಸಿಯುವುದನ್ನು ತಡೆಯಲು ಯಾವುದೇ ಪ್ರಯತ್ನ ಮಾಡಿಲ್ಲ. ಈಗ ಕುಸಿದು ಬಿದ್ದರೆ ತಕ್ಷಣ ಅದರಿಂದ ತುರ್ತು ಕಾಮಗಾರಿ ಎಂದು ಮತ್ತೆ ಬಿಲ್ ಮಾಡುತ್ತಾರೆ” ಎಂದು ಜನರು ಆರೋಪಿಸುತ್ತಿದ್ದಾರೆ.
ಇದನ್ನು ಓದಿ: ಭಯಾನಕ ಅಂತ್ಯ: ಶಿವಮೊಗ್ಗ ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನಿಂದಲೇ ಸ್ನೇಹಿತನ ಕೊಲೆ! ಬೊಮ್ಮನಕಟ್ಟೆಯಲ್ಲಿ ಮತ್ತೊಂದು ಮರ್ಡರ್ !!
ಇದೇ ವೇಳೆ, ಕುಡುಮಲ್ಲಿಗೆಯಿಂದ ಕೂಗಳತೆ ದೂರದಲ್ಲಿ ಮತ್ತೊಂದು ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು, ಅದು ಚಿಟ್ಟೆಬೈಲು ಸಂಪರ್ಕಿಸುತ್ತದೆ ಎನ್ನಲಾಗಿದೆ. ಈಗಾಗಲೇ ಅದಕ್ಕೆ ಜಲ್ಲಿಕಲ್ಲು ಹಾಕಲಾಗಿದ್ದು, ಒಂದು ವೇಳೆ ಗುಡ್ಡ ಕುಸಿತ ದೊಡ್ಡ ಮಟ್ಟದಲ್ಲಿ ಆದರೆ ಇದು ಪರ್ಯಾಯ ಮಾರ್ಗವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನು ನೋಡಿದ ಸಾರ್ವಜನಿಕರು, “ಅಧಿಕಾರಿಗಳು ಗುಡ್ಡ ಕುಸಿಯುವುದನ್ನೇ ಕಾಯುತ್ತಿದ್ದಾರಾ?” ಎಂದು ಪ್ರಶ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ, ಇದೇ ರೀತಿ ಮಳೆ ಜಾಸ್ತಿಯಾದರೆ ಭಾರತಿಪುರ ಫ್ಲೈ ಓವರ್ ಸಂಪೂರ್ಣವಾಗಿ ಮುಚ್ಚುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ಗಳಲ್ಲಿ ತಿಳಿಸಿ.
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಇದನ್ನು ಓದಿ: ಶಾಕಿಂಗ್: ₹2 ಲಕ್ಷ ಸಾಲಕ್ಕೆ, ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ! 😱
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply