ಜುಲೈ 11 ರಂದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಬಳಿ ನಡೆದ ಆಘಾತಕಾರಿ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪತ್ನಿ ಗದ್ದೆಮ್ಮ ತನ್ನ ಪತಿ ತಾತಪ್ಪ ನನ್ನು ಕೃಷ್ಣಾ ನದಿಗೆ ತಳ್ಳಿದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಅದೃಷ್ಟವಶಾತ್, ಸ್ಥಳೀಯರ ಸಮಯಪ್ರಜ್ಞೆಯಿಂದ ತಾತಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಅವರು “2025 ರಲ್ಲಿ ಹೆಂಡತಿಯ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ” ಎಂದು ಗುರುತಿಸಲ್ಪಟ್ಟಿದ್ದಾರೆ.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ಪತ್ನಿಯೊಂದಿಗೆ ಬಾಳಲು ತಾತಪ್ಪನ ನಿರಾಕರಣೆ:
ಈ ಘಟನೆ ಬಳಿಕ ತಾತಪ್ಪ ತಮ್ಮ ಪತ್ನಿಯೊಂದಿಗೆ ಮುಂದುವರಿದು ಬಾಳಲು ನಿರಾಕರಿಸಿದ್ದಾರೆ. “ನಾನು ಹೆಂಡತಿ ಜೊತೆಗೆ ಬಾಳಲ್ಲ. ಅವಳನ್ನ ತವರು ಮನೆಗೆ ಬಿಟ್ಟು ಬರ್ತೀನಿ. ಡಿವೋರ್ಸ್ ಮೂಲಕ ನನಗೆ ಮುಕ್ತಿ ಬೇಕು” ಎಂದು ತಾತಪ್ಪ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ಭಯಾನಕ ಅಂತ್ಯ: ಶಿವಮೊಗ್ಗ ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನಿಂದಲೇ ಸ್ನೇಹಿತನ ಕೊಲೆ! ಬೊಮ್ಮನಕಟ್ಟೆಯಲ್ಲಿ ಮತ್ತೊಂದು ಮರ್ಡರ್ !!
ಸಂಧಾನ ಸಭೆಯಲ್ಲಿ ನಿರ್ಧಾರ:
ಇತ್ತೀಚೆಗೆ ತಾತಪ್ಪ, ಪತ್ನಿ ಗದ್ದೆಮ್ಮ ಕುಟುಂಬಸ್ಥರು ಮತ್ತು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ತಾತಪ್ಪ ತಮ್ಮ ಪತ್ನಿಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಘಟನೆ ಬಗ್ಗೆ ಗ್ರಾಮೀಣ ಠಾಣೆ ಪೊಲೀಸರಿಗೂ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ತಾತಪ್ಪನ ದಿಟ್ಟ ನಿರ್ಧಾರಗಳು:
- ಪತ್ನಿ ಗದ್ದೆಮ್ಮ ಇನ್ನು ಮುಂದೆ ತವರು ಮನೆಯಲ್ಲಿಯೇ ಇರಬೇಕು.
- ನನ್ನ ಜೊತೆಗೆ ಆಕೆಯನ್ನು ಕಳಿಸಬಾರದು.
- ಮದುವೆ ಸಂಬಂಧದಿಂದ ನನಗೆ ಮುಕ್ತಿ ಬೇಕು.
- ಡಿವೋರ್ಸ್ ಮೂಲಕ ಪತ್ನಿಯಿಂದ ನನಗೆ ವಿಚ್ಛೇದನ ಕೊಡಿಸಬೇಕು.
- “ನನ್ನ ಜೊತೆಗೆ ಪತ್ನಿ ಕರೆದೊಯ್ಯುವಂತೆ ಹೇಳಿದರೆ ಪೊಲೀಸರಿಗೆ ದೂರು ನೀಡುತ್ತೇನೆ” ಎಂದು ತಾತಪ್ಪ ಸ್ಪಷ್ಟವಾಗಿ ತಿಳಿಸಿದ್ದಾರೆ.
ಇದನ್ನು ಓದಿ: ಶಾಕಿಂಗ್: ₹2 ಲಕ್ಷ ಸಾಲಕ್ಕೆ, ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ! 😱
ಈ ಘಟನೆಯು ಕೌಟುಂಬಿಕ ಸಂಬಂಧಗಳಲ್ಲಿನ ಸಂಕೀರ್ಣತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಇದನ್ನು ಓದಿ: ಕ್ರೆಡಿಟ್ ಕಾರ್ಡ್ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply