“ಪಿತಾಮಹ ಬೆಂಜಮಿನ್ ಲೂಯಿ ರೈಸ್: ಬಿಳಿ ಕನ್ನಡಿಗನ ನೆನಪಿನಲಿ”

‘ಕನ್ನಡ-ಇಂಗ್ಲೀಷ್ ನಿಘಂಟ’ನ್ನು ಕಿಟೆಲ್ ಬರೆಯುವಾಗ ಅದರ ಮಹತ್ವವನ್ನು ಅರಿತ ಮಹನೀಯರೊಬ್ಬರು ಮೈಸೂರು ಸರ್ಕಾರದ ವತಿಯಿಂದ ಮುಂಗಡವಾಗಿ ಐದು ಸಾವಿರ ರೂಪಾಯಿ ನೀಡಿ. ೩೦೦ ಪ್ರತಿ ಕೊಳ್ಳುವಂತೆ ಪ್ರತಿಪಾದಿಸಿದ್ದಲ್ಲದೆ. ಅಂದಿನ ಚೀಫ್ ಕಮಿಷನರ್ ಗೆ ಪತ್ರವೊಂದನ್ನು ಬರೆದಿದ್ದರಂತೆ ಆ ಪತ್ರದಲ್ಲಿ ಹೀಗಿತ್ತು.

” ಸರ್ಕಾರವು ಕೇವಲ ಈ ನಿಘಂಟು ಮಾತ್ರವಲ್ಲದೆ ಕನ್ನಡದ ಪ್ರಾಚೀನ ಕೃತಿಗಳನ್ನು ಮುದ್ರಿಸಲು ಒಂದು ಶಾಶ್ವತವಾದ ನಿಧಿಯನ್ನು ಸ್ಥಾಪಿಸಬೇಕು. ಈ ರೀತಿಯ ಅನೇಕ ಕೃತಿಗಳು ಈಗ ವಿನಾಶದ ಅಂಚಿನಲ್ಲಿದ್ದು ದೇಶೀಯ ಸರ್ಕಾರವು ಸ್ಥಾಪನೆಯಾಗುವ ವೇಳೆಗೆ ಬಹುಶಃ ಅವು ಶಾಶ್ವತವಾಗಿ ಬೆಳಕು ಕಾಣದೆಯೇ ಹೋಗಿಬಿಡುವ ಸಾಧ್ಯತೆಗಳಿವೆ.” 

ಕನ್ನಡದ ಸಂಪತ್ಭರಿತ ಪ್ರಾಚೀನ ಕೃತಿಗಳ ಉಳಿವಿಗಾಗಿ ಈ ರೀತಿ ಧ್ವನಿ ಎತ್ತಿದ ಗಣ್ಯಮಾನ್ಯನ ನಾಮಧೇಯ ಬೆಂಜಮಿನ್ ಲೂಯಿ ರೈಸ್. ಹೆಸರು ಕೇಳಿದ ತಕ್ಷಣ ಯಾರೋ ವಿಜ್ಞಾನಿ ಎನ್ನಿಸಿಬಿಡುವುದುಂಟು. ಹೌದು ರೈಸ್ ವಿಜ್ಞಾನಿಯೇ… ಕನ್ನಡ ಭಾಷೆಯಲ್ಲಿ ಅಡಗಿದ್ದ ಮಹತ್ತರವಾದ ಗ್ರಂಥ, ಶಾಸನಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಬಿ ಎಲ್ ರೈಸ್ ಅಪ್ಪಟ ಬಿಳಿ ಕನ್ನಡಿಗ. ಕನ್ನಡ ನೆಲದ ಶಾಲೆಗಳಲ್ಲಿ ಕನ್ನಡ ಪಠ್ಯವನ್ನ ಓದಿಗೆ ತೆರೆದಿಟ್ಟು ಮಾತೃಭಾಷೆ ಕಲಿಕೆಗೆ ರಾಜಮಾರ್ಗವನ್ನ ತೆರೆದ ಲೂಯಿ ರೈಸ್ ಜನಿಸಿದ್ದು ೧೮೩೭ ಜುಲೈ ೧೭ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ. ಬೆಂಜಮಿನ್ ಹೋಲ್ಟ್ ರೈಸ್, ಲೂಯಿ ರೈಸ್ ರ ತಂದೆ. ಲಂಡನ್ನಿನಲ್ಲಿದ್ದಾಗ ಜಾನ್ ಹ್ಯಾಂಡ್ಸ್ ಮಿಷನರಿಯ ಭಾಷಣದಿಂದ ಪ್ರಭಾವಿತರಾಗಿ ಭಾರತದ ದಕ್ಷಿಣ ಭಾಗಗಳಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವ ಉದ್ದೇಶದೊಂದಿಗೆ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬಂದು ನೆಲೆಸಿದವರು. ಕನ್ನಡಿಗರೊಂದಿಗೆ ಬೆರೆಯಲು ಒಂದೇ ವರ್ಷದಲ್ಲಿಯೇ ಕನ್ನಡ ಕಲಿತು, ತಮ್ಮ ಧರ್ಮಪ್ರಚಾರಕ ಗ್ರಂಥವನ್ನು ಸುಲಲಿತ ಕನ್ನಡಕ್ಕೆ ಭಾಷಾಂತರಿಸಿದರು. ಕುಟುಂಬದಲ್ಲಿನ ಸಾಂಸ್ಕೃತಿಕ ಪರಿಸರದ ಪ್ರೇರಣೆಯಿಂದ ಬೆಳೆದ ಲೂಯಿ ರೈಸ್ ಹಾಗೂ ಸಹೋದರ ಎಡ್ವರ್ಡ್ ಪೀಟರ್ ರೈಸ್ ಅವರ ಕನ್ನಡ ಸೇವೆ ಅದ್ವಿತೀಯವಾದುದು.

ಇದನ್ನು ಓದಿ: ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ‘ರಾಜಕೀಯ ಕೆಸರೆರೆಚಾಟ’: ಸಂಸದ ಬಿ.ವೈ. ರಾಘವೇಂದ್ರ ತೀವ್ರ ಬೇಸರ!

ಇದನ್ನು ಓದಿ : ಸಿಗಂದೂರು ಲಾಂಚ್‌ಗಳು ಇನ್ನು ಬೋಟ್ ಹೋಟೆಲ್‌ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!

ಜಾಹಿರಾತು:

ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ಪ್ರಾಥಮಿಕ ಹಂತದ ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಪೂರೈಸಿ, ಇಂಗ್ಲ್ಯಾಂಡಿಗೆ ತೆರಳಿದ ರೈಸ್ ಮರಳಿ ಭಾರತಕ್ಕೆ ಬಂದಾಗ ಹಲವು ಕಡೆಗಳಲ್ಲಿ ವೃತ್ತಿಜೀವನವನ್ನು ಸಾಕಾರಗೊಳಿಸಲು ಅವಕಾಶಗಳು ಸಿಕ್ಕವು. ಅವುಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದುದ್ದಲ್ಲದೆ, ಬಿ ಎಲ್ ರೈಸ್ ರ ಮನಸ್ಸು ಹಾತೊರೆಯುತ್ತಿದ್ದದ್ದು ಕರುನಾಡಿನಲ್ಲಿ ಮಂಪರು ಹಿಡಿದು ಮಲಗಿದ್ದ ಸಾಹಿತ್ಯ, ಕಲೆ, ಶಾಸನಗಳ ಕಡೆಗೆ. 

ನೆಚ್ಚಿನ ವಿಷಯಗಳು ಹೀಗೆಯೇ ಎಲ್ಲೆಂದರಲ್ಲಿ ನಮ್ಮನ್ನು ಕಾಡಿಸಿ, ಪೀಡಿಸಿ, ಕುತೂಹಲಕ್ಕೆ, ಶೋಧನೆಗೆ ಹಚ್ಚಿಬಿಡುತ್ತವೆ. ರೈಸರ ಸಂಶೋಧನೆಯ ಚಾಳಿ ಶುರುವಾದದ್ದು ಹೀಗೆಯೇ… ಅವರು ತಮಗೆ ವಿಶೇಷವೆಸಿದ ವಿಚಾರಗಳನ್ನು, ವಸ್ತುಗಳನ್ನು ಜತನವಾಗಿ ದಾಖಲಿಸುವುದರ ಮೂಲಕ.

ಪ್ರಾಚೀನ ಕನ್ನಡ ಹಸ್ತಪ್ರತಿಗಳು:

ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಸಂಸ್ಥಾನದ ವಾಸ್ತುಶಿಲ್ಪಗಳ ಸಂಗ್ರಹಕಕ್ಕಾಗಿ ಛಾಯಾಚಿತ್ರಗಳನ್ನು ತೆಗೆಸಿ ಸರ್ಕಾರಕ್ಕೆ ಒಪ್ಪಿಸಿದರು ಆದರೆ ಈಗಾಗಲೇ ಗುರುತಿಸಿದ್ದ ಹರಿಹರ, ಚಿತ್ರದುರ್ಗ, ಬಳ್ಳಿಗಾವಿ, ಇತರೆ ಸ್ಥಳಗಳಲ್ಲಿ ನೆಲೆಸಿದ ಶಿಲಾಶಾಸನಗಳಲ್ಲಿ ಇದ್ದ ಲಿಪಿಗಳನ್ನು ಓದಿ ಅರ್ಥೈಸುವವರು ಸಿಗದೇ ಹೋದಾಗ. ಆಗಿನ ಚೀಫ್ ಕಮಿಷನರ್ ಎಲ್ ಬೌರಿಂಗ್ ಅವರ ನೆನಪಿಗೆ ಬಂದದ್ದು ಬೆಂಜಮಿನ್ ಲೂಯಿ ರೈಸ್.

ಇದನ್ನು ಓದಿ: ದೇಶಕ್ಕೆ ಮತ್ತೆ ತುರ್ತು ಪರಿಸ್ಥಿತಿ ಬರುವುದಿಲ್ಲ: ಬಿ.ಎಲ್.ಸಂತೋಷ್ ಭರವಸೆ

ಇಲ್ಲೇ ಹುಟ್ಟಿ, ಇಲ್ಲಿನ ನೆಲ ಸಂಸ್ಕೃತಿಯನ್ನು ಒಂದು ಕ್ರಮಬದ್ಧ ರೀತಿಯಲ್ಲಿ ಅರ್ಥೈಸಿಕೊಳ್ಳುವಲ್ಲಿ ಹಿಂದೆ ಬಿದ್ದ ನಮ್ಮವರ ನಡುವೆ ರೈಸರಿಗೆ ಶಾಸನಗಳನ್ನು ಓದಲು ಅವರ ಶಕ್ತಿಯಾಗಿ ನಿಂತದ್ದು ಅವರು ಈವರೆಗೆ ಕಲಿತ ಕನ್ನಡ ಮತ್ತು ಕನ್ನಡ ಲಿಪಿ ಮಾತ್ರ. ಛಲಬಿಡದ ಭಗೀರಥನಂತೆ ತಮ್ಮಲ್ಲಿ ಇರುವ ಸಾಮರ್ಥ್ಯವನ್ನು ದುಡಿಸಿಕೊಂಡು ೧೮೭೯ ರ ಹೊತ್ತಿಗೆ ‘ ಮೈಸೂರ್ ಇನ್ಸ್ ಕ್ರಿಪ್ಷನ್ಸ್’ ಅನ್ನು ಹೊರತಂದರು. ಇದರಲ್ಲಿ ರೈಸ್ ಅವರು ಈವರೆಗೆ ಓದಿದ ಶಾಸನಗಳ ಓದಿತ್ತು.

ಇದರ ನಂತರ ರೈಸ್ ಎಲ್ಲೂ ತಂಗಲೇ ಇಲ್ಲ, ಅವರಿಗೆ ವಿಶ್ರಾಂತಿಯ ಅವಶ್ಯಕತೆ ಬೀಳಲೇ ಇಲ್ಲ. ಗ್ರಾಮೀಣ ಭಾಗದ ಮಕ್ಕಳ ಓದಿನ ಮಟ್ಟವನ್ನು ಹೆಚ್ಚಿಸಲು ಸರ್ಕಾರ ತೆಗೆದುಕೊಂಡ ತಿರ್ಮಾನ ವಿಫಲವಾದಾಗ ಇವರು ನೀಡಿದ ಸಲಹೆ ಹೋಬಳಿ ಶಾಲೆಗಳ ಹೆಚ್ಚಳಕ್ಕೆ ಕಾರಣವಾಯಿತು. ಮಾತೃಭಾಷಾ ಶಿಕ್ಷಣಕ್ಕೆ ಪ್ರಾಶಸ್ತ್ಯ ದೊರೆಕಿತು, ಬಾಲಕಿಯರ ಓದಿಗೂ ಸಮಾನ ಅವಕಾಶ ಸಿಕ್ಕಂತಾಯಿತು.

ಬಿ ಎಲ್ ರೈಸ್ ರನ್ನು ಇನ್ನೂ ಜೀವಂತವಾಗಿಸಿದ ವರ್ಷ ೧೮೮೪ ಈ ವರ್ಷದಲ್ಲಿಯೇ ಅವರು ಹಲವರ ಮೆಚ್ಚುಗೆಯನ್ನು ಸಂಪಾದಿಸಿದ್ದು. ಬ್ರಿಟಿಷ್ ಸರ್ಕಾರ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ದಿ ಇಂಡಿಯನ್ ಎಂಪೈರ್’ ಪದವಿ ನೀಡಿ ಪ್ರೋತ್ಸಾಹಿಸಿತು.

 

ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!

ಹಳೆಯ ಕನ್ನಡ ಶಾಸನಗಳು:

ಶಾಸನಗಳ ಶೋಧದ ನಂತರ ಅವರು ಕಣ್ಣು ಹೊರಡಿಸಿದ್ದು ಹಸ್ತಪ್ರತಿ ಸಂಗ್ರಹ ಮತ್ತು ಮುದ್ರಣದ ಕಡೆಗೆ, ಹೀಗೆ ಹಲವು ಹಸ್ತಪ್ರತಿಗಳ ಹುಡುಕಾಟದಲ್ಲಿ ಇದ್ದಾಗ ‘ಬಿಬ್ಲಿಯಾಥಿಕಾ ಕರ್ನಾಟಕ’ ಗ್ರಂಥ ಮಾಲೆಯ ಮೊದಲ ಹಸ್ತಪ್ರತಿಯಾಗಿ ‘ನಾಗವರ್ಮನ ‘ಕರ್ನಾಟಕ ಭಾಷಾಭೂಷಣ’. ಹೊರಹೊಮ್ಮಿತು. ನಂತರ ಈ ಪ್ರಯತ್ನ ನಿಲ್ಲದ ನದಿಯಂತೆ ‘ಭಟ್ಟಾಕಳಂಕನ- ಶಬ್ಧಾನುಶಾಸನಂ’. ‘ಪಂಪನ- ವಿಕ್ರಮಾರ್ಜುನ ವಿಜಯ’. ‘ ‘ನಾಗಚಂದ್ರನ ಪಂಪರಾಮಾಯಣ’ . ‘ ಶ್ರೀವಿಜಯ (ನೃಪತುಂಗ)ನ ಕವಿರಾಜಮಾರ್ಗ’ ಸೇರಿದಂತೆ ಹತ್ತು ಹಲವು ಹರಿವುಗಳು ಅವರ ಬದುಕಿನುದ್ದಕ್ಕು ಹರಿದವು. 

ಆರ್ ನರಸಿಂಹಾಚಾರ್ ಅವರು ಕವಿಚರಿತೆ ಸಂಪುಟಗಳನ್ನು ಹೊರತಂದಾಗ ರೈಸ್ ತಮ್ಮ ವೃದ್ಧಾಪ್ಯದಲ್ಲೂ ಭಾಷಾಂತರಕ್ಕೆ ಆಸಕ್ತಿ ತೋರಿದ್ದರಂತೆ. ಈ ಮಹಾನ್ ಗುರುವಿಗೆ ಶಿಷ್ಯರ ಬಳಗವೇನು ಕಡಿಮೆಯೇ? ಕೆ. ಬಿ ಪಾಠಕ್. ಆರ್ ನರಸಿಂಹಾಚಾರ್. ಎಂ ಎ ರಾಮಾನುಜಯ್ಯಂಗಾರ್….. ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 

ಇದನ್ನು ಓದಿ: ಸೊರಬದ ‘ಪ್ರಕೃತಿ ಮೆಡಿಕಲ್ಸ್’ ಮಾಲೀಕ ಹರೀಶ್ ಭಟ್‌ ವಿರುದ್ಧ ಜಾತಿ ನಿಂದನೆ ಕೇಸ್: ಅರೆಸ್ಟ್, ಜೈಲುಪಾಲು!

‘ಎಪಿಗ್ರಾಫಿಯಾ ಕರ್ನಾಟಕ’ ಗ್ರಂಥ ಮಾಲಿಕೆಯ ಮೊದಲ ಪುಸ್ತಕ ‘ ‘ಕೂರ್ಗ್ ಇನ್ಸ್ ಕ್ರಿಪ್ಷನ್ಸ್’ ರಚಿತವಾದಾಗ ೧೮೮೬ನೇ ಇಸವಿ. ರೈಸ್ ಆಗ ಪ್ರಾಚ್ಯವಸ್ತು ಸಂಶೋಧನಾ ಶಾಖೆಯಲ್ಲಿ ಪ್ರತ್ಯೇಕ ಗೊಳಿಸಿದ್ದ ಇಲಾಖೆಯ ನಿರ್ದೇಶಕರಾಗಿದ್ದರು. 

ಶಾಸನಗಳ ಸಂಗ್ರಹಣೆಯ ಕುರಿತು, ಬ್ರಿಟೀಷ್ ಸರ್ಕಾರವಾಗಲಿ, ದೇಶೀ ಸಂಸ್ಥಾನಗಳಾಗಲಿ ತಲೆ ಕೆಡಿಸಿಕೊಳ್ಳದಿದ್ದ ಕಾಲದಲ್ಲಿ ರೈಸ್ ಆ ಬಗೆಗೆ ಆಸಕ್ತಿ ತೋರಿದರು. ಕೊಡಗು ಹಾಗು ಶ್ರವಣಬೆಳಗೊಳವನ್ನು ಹೊರತು ಪಡಿಸಿ ಉಳಿದ ಕಡೆ ದೊರೆತ ಶಾಸನಗಳ ವಿವರಗಳನ್ನು ಸಂಪುಟವಾಗಿ ಬಿತ್ತರಿಸಿದರು. ಮೈಸೂರು, ಶಿವಮೊಗ್ಗದಲ್ಲಿ ದೊರೆತ ಶಾಸನಗಳ ಸಂಖ್ಯೆಯನ್ನು ಗಮನಿಸಿ ತಲ ಎರಡೆರೆಡು ಸಂಪುಟಗಳನ್ನು ರಚಿಸಿದರು. ನಂತರ ಶ್ರವಣಬೆಳಗೊಳದ ಶಾಸನಗಳು, ಅಶೋಕ ಶಾಸನಗಳು, ಸೇರಿದಂತೆ ಹಲವು ರಾಜಮನೆತನಗಳ ಕುರಿತಾದ ಒಟ್ಟು ೮೮೬೯ ಶಾಸನಗಳನ್ನು ದೃಢೀಕರಿಸುವ ಸಾಹಸವನ್ನು ರೈಸ್ ಶ್ರದ್ಧೆಯಿಂದ ಕೈಗೊಂಡರು.

ಇದನ್ನು ಓದಿ: ಶರಾವತಿ ಮುಕುಟಕ್ಕೆ ಹೊಸ ಸೇತುವೆ ಸೊಬಗು: ಸಿಗಂಧೂರು ಸಿಂಧೂರ ರಾಷ್ಟ್ರಕ್ಕೆ ಅರ್ಪಣೆ – ಆರು ದಶಕಗಳ ಹೋರಾಟಕ್ಕೆ ಮುಕ್ತಿ!

೧೮೮೭ ರಲ್ಲಿ ಮೈಸೂರು ಓರಿಯೆಂಟಲ್ ಲೈಬ್ರರಿಯ ಜನನಕ್ಕೂ ಕಾರಣರಾದರು.

 ೧೯೦೬ ಆಗ ರೈಸರ ವಯಸ್ಸು ೬೯ ಇಂಗ್ಲೆಂಡ್ ಗೆ ಮರಳಿದ ಮೇಲೆಯೂ ಕನ್ನಡ ನಾಡು, ನುಡಿಯ ಮೇಲಿನ ಉತ್ಸಾಹ ಕಳೆದುಕೊಳ್ಳದೆ ‘ ಮೈಸೂರು ಅಂಡ್ ಕೂರ್ಗ್ ಫ್ರಂ ಇನ್ಸ್ ಕ್ರಿಪ್ಷನ್ಸ್’ ಕೃತಿಯನ್ನು ಪ್ರಕಟಿಸಿದರು. ‘ ಇಂಡಿಯನ್ ಆಂಟಿಕ್ವೆರಿ ‘ ಸೇರಿದಂತೆ ಮುಂತಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಕಳುಹಿಸಿದರು. 

ಕನ್ನಡ ಗೊತ್ತಿದ್ದರು ಅದರಲ್ಲಿ ಏನಿದೆ ಎಂದು ಹೇಳುವ ಎಷ್ಟೋ ಜನರಿಗೆ ಲೂಯಿ ರೈಸ್ ಏನೆಲ್ಲಾ ಇದೆ ಎಂಬುದನ್ನು ತೋರಿಸಿಕೊಡಲು ಇದ್ದ ಒಂದು ನಿಜಪ್ರತಿಮೆ. ಕನ್ನಡದಲ್ಲಿ ಅನುವಾದ, ಭಾಷಾಂತರ, ಸಕ್ರಿಯ ಸಂಶೋಧನೆ ನೆಡೆಯದೇ ನೆಲಕಚ್ಚಿದಾಗ…. ಸಾಹಿತ್ಯ ಕೃಷಿಗೆ ಸರಿಯಾದ ಇಳುವರಿ ದೊರಕದೇ ಹೋದಾಗ ಬಿ ಎಲ್ ರೈಸ್ ಅವರ ಶ್ರದ್ಧೆ ನೆನಪಾಗಬೇಕು. ಅವರ ಈ ಪ್ರಯತ್ನವನ್ನು ವೆಬರ್, ಬ್ಯೂಲರ್, ಬರ್ಗೆಸ್, ಕಿಟೆಲ್, ಬಾರ್ನೆಟ್, ಪ್ಲೀಟ್ ಹೃದಯ ತುಂಬಿ ಆ ಕಾಲದಲ್ಲಿ ಕೊಂಡಾಡಿದ್ದರಂತೆ.

೧೯೨೪ ರ ಇಸವಿ ಲಂಡನ್ನಿನ ವಸ್ತುಪ್ರದರ್ಶನವೊಂದರಲ್ಲಿ ಕನ್ನಡಿಗ ಸೋಸಲೆ ಗರಳಪುರಿ ಶಾಸ್ತ್ರಿಗಳು ರೈಸ್ ಅವರನ್ನು ಭೇಟಿಯಾದಾಗ, ಅವರನ್ನು ಕಂಡ ಸಂತೋಷದಲ್ಲಿ ಶಾಸ್ತ್ರಗಳು ಇಂಗ್ಲೀಷ್ ನಲ್ಲಿ ಬಡಬಡಿಸುತ್ತಿದ್ದಾಗ

“ಅಯ್ಯಾ ಕನ್ನಡದಲ್ಲೇ ಮಾತನಾಡೋಣವೇ? ಮುದ್ದಾದ ಕನ್ನಡ ಕಿವಿಯ ಮೇಲೆ ಬೀಳದೆ ತುಂಬಾ ದಿನಗಳಾದವು!” 

ಎಂದರಂತೆ.

ಇದು ವಿದೇಶಿಗರೊಬ್ಬರು ೨೫೦೦ ವರ್ಷಗಳ ಇತಿಹಾಸವಿರುವ ಕನ್ನಡದ ಕಂಪನ್ನು ಮೆಲುಕು ಹಾಕಿದ ರೀತಿ. ಇಷ್ಟೆಲ್ಲಾ ಕನ್ನಡಕ್ಕಾಗಿ ಜೀವ ಸವೆಸಿದ ರೈಸ್ ಮರಣಿಸಿದ್ದು ೧೯೨೭ ಜುಲೈ ೧೦ ಅವರ ತಾಯ್ತಾಡಿನಲ್ಲಿ ನಿಧನರಾದರು.

ಇರುವ ಅಲ್ಪಸ್ವಲ್ಪ ಕನ್ನಡ ಮಾಧ್ಯಮ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವನ್ನಾಗಿಸಿ ತಮ್ಮ ಮಕ್ಕಳನ್ನು ಮಾತೃಭಾಷಾ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿರುವ ಪಾಲಕರು ರೈಸರು ಮಾತೃಭಾಷೆಗೆ ನೀಡಿದ ಆದ್ಯತೆಯನ್ನು ಕುರಿತು ತಿಳುವಳಿಕೆ ಹೊಂದಬೇಕು. ಸಾಧನೆ ಕನ್ನಡದ ಮೂಲಕವೂ ಮಾಡಬಹುದು ಎಂದು ಯುವಪೀಳಿಗೆ ನಂಬಿಕೆ ತಳೆಯಬೇಕು.

ರೈಸ್ ಅವರ ಸಾಧನೆ ಕೇವಲ ಪಠ್ಯಕ್ಕಷ್ಟೇ ಸೀಮಿತಗೊಳ್ಳದೆ ಸಂಶೋಧನೆಗಳಿಗೆ ತೊಡಗುವ ಕನ್ನಡಿಗರಿಗೆ ಮಾದರಿಯಾಗಬೇಕು….. 

ಹೆಚ್ಚಿನ ಮಾಹಿತಿ ಹಾಗೂ ಕ್ಷಣ ಕ್ಷಣದ ಶಿವಮೊಗ್ಗ ಸುದ್ದಿಗಳಿಗಾಗಿ ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ವೀಕ್ಷಿಸುತ್ತಿರಿ.

ಜಾಹಿರಾತು:

ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207


Leave a Reply

Your email address will not be published.