ಜ್ಯೋತಿಷ್ಯದ ಪ್ರಕಾರ ಜುಲೈ 20, 2025 ರಿಂದ ಜುಲೈ 26, 2025 ರವರೆಗಿನ ನಿಮ್ಮ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾರಿಗೆ ಸವಾಲು? ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮ್ಮ ವಾರವನ್ನು ಉತ್ತಮವಾಗಿ ಯೋಜಿಸಿಕೊಳ್ಳಿ!

ಈ ವಾರ ಗ್ರಹಗಳ ಸ್ಥಾನಪಲ್ಲಟಗಳು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಲಿವೆ? ಆರೋಗ್ಯ, ಹಣಕಾಸು, ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಶಿಯವರಿಗೆ ನಿರ್ದಿಷ್ಟ ಸಲಹೆಗಳು ಇಲ್ಲಿವೆ. ನಿಮ್ಮ ಅದೃಷ್ಟದ ಬಾಗಿಲು ತೆರೆಯಲು ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಾಗಿ!

♈ ಮೇಷ ರಾಶಿ (Aries):

ದೇಹದಲ್ಲಿ ಶಕ್ತಿ ಕುಂದಿದಂತೆ ಭಾಸವಾದರೂ, ಆದಾಯ ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಖರ್ಚಿನ ಪಟ್ಟಿಯೂ ಬೆಳೆಯಲಿದೆ. ಹಿರಿಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿಲ್ಲ. ಮಕ್ಕಳ ನಡವಳಿಕೆಯ ಬಗ್ಗೆ ಗಮನವಿರಲಿ. ಆರೋಗ್ಯದಲ್ಲಿ ಸುಧಾರಣೆ ಇದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳವಾಗಬಹುದು. ಕೃಷಿ ವ್ಯವಹಾರಗಳಿಂದ ಲಾಭ ಕಡಿಮೆ. ವೃತ್ತಿಯಲ್ಲಿ ಅಭಿವೃದ್ಧಿ ಇದೆ.

  • ಪರಿಹಾರ: ಹನುಮಾನ್ ಚಾಲೀಸಾ ಪಠಿಸಿ.
  • ಶುಭಸಂಖ್ಯೆ: 9

♉ ವೃಷಭ ರಾಶಿ (Taurus):

ಅಲಂಕಾರದ ಬಗ್ಗೆ ಹೆಚ್ಚಿನ ಗಮನ ಕೊಡುವಿರಿ. ಆದಾಯ ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಮಕ್ಕಳಿಂದ ಉತ್ತಮ ಸಹಕಾರ ಸಿಗುತ್ತದೆ, ಅವರಿಗಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ಸಂಗೀತಗಾರರಿಗೆ ಬೇಡಿಕೆ ಕಡಿಮೆಯಾಗಬಹುದು. ಸಂಗಾತಿಯಿಂದ ಕುಟುಂಬದಲ್ಲಿ ಸಂತೋಷ. ಅನಿರೀಕ್ಷಿತ ಆದಾಯ ಲಭಿಸಬಹುದು. ತಂದೆಯಿಂದ ಕೃಷಿ ಭೂಮಿ ದೊರೆಯುವ ಸಾಧ್ಯತೆ. ಕೆಲವರಿಗೆ ವಿದೇಶಿಯಾನದ ಯೋಗವಿದೆ.

  • ಪರಿಹಾರ: ಶುಕ್ರವಾರ ಲಕ್ಷ್ಮಿ ದೇವಿಗೆ ಬಿಳಿ ಹೂವು ಅರ್ಪಿಸಿ.
  • ಶುಭಸಂಖ್ಯೆ: 6

♊ ಮಿಥುನ ರಾಶಿ (Gemini):

ನಿಮ್ಮ ನಿರೀಕ್ಷೆಗೂ ಮೀರಿದ ಗೌರವ ದೊರೆಯುತ್ತದೆ. ಆದಾಯ ಉತ್ತಮವಾಗಿರುತ್ತದೆ. ಬಂಧುಗಳ ಅಸಹಕಾರ ಕಾಡಬಹುದು. ಹಣದಿಂದ ಸಂಸಾರದಲ್ಲಿ ಸಂತೋಷ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಕೃಷಿ ಸಲಕರಣೆ ಬಳಸುವಾಗ ಎಚ್ಚರ. ಸಂಗಾತಿಯು ಎಲ್ಲ ಸಂದರ್ಭಗಳಲ್ಲೂ ನಿಮಗೆ ಪೂರಕವಾಗಿರುವರು. ರಾಜಕಾರಣಿಗಳ ಸಹಾಯದಿಂದ ವೃತ್ತಿಯಲ್ಲಿ ಮೇಲೆ ಬರಬಹುದು. ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.

  • ಪರಿಹಾರ: ಬುಧವಾರ ಗಣೇಶನಿಗೆ ದೂರ್ವೆಯನ್ನು ಅರ್ಪಿಸಿ.
  • ಶುಭಸಂಖ್ಯೆ: 5

♋ ಕರ್ಕಾಟಕ ರಾಶಿ (Cancer):

ಬುದ್ಧಿವಂತಿಕೆಯಿಂದ ಸಾಕಷ್ಟು ಗೌರವವನ್ನು ಪಡೆದುಕೊಳ್ಳುವಿರಿ. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಆದಾಯ ಕಡಿಮೆ ಇರುತ್ತದೆ. ಕೃಷಿಯಿಂದ ಆದಾಯ ನಿರೀಕ್ಷಿಸಬಹುದು. ಒರಟು ಮಾತುಗಳು ಖಂಡಿತ ಬೇಡ. ಕಟ್ಟಡಗಳಿಗೆ ಅಲಂಕಾರ ಮಾಡುವ ನುರಿತ ಕೆಲಸಗಾರರಿಗೆ ಬೇಡಿಕೆ ಹೆಚ್ಚಾಗಿ, ಆದಾಯ ಹೆಚ್ಚುತ್ತದೆ. ಮಕ್ಕಳಿಂದ ಕಠಿಣ ನುಡಿಗಳನ್ನು ಕೇಳಬೇಕಾಗಬಹುದು. ಪಿತ್ತ ಸಂಬಂಧಿ ದೋಷಗಳು ಕಾಡಬಹುದು.

  • ಪರಿಹಾರ: ಸೋಮವಾರ ಶಿವನಿಗೆ ಜಲಾಭಿಷೇಕ ಮಾಡಿ.
  • ಶುಭಸಂಖ್ಯೆ: 2

♌ ಸಿಂಹ ರಾಶಿ (Leo):

ನಿಮ್ಮ ಮಾತುಗಳಿಂದ ಜನರನ್ನು ಆಕರ್ಷಿಸುವಿರಿ. ವೃತ್ತಿಯಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆದಾಯ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಹೊಸ ಯೋಜನೆಗಳಿಗೆ ಕೈ ಹಾಕಲು ಇದು ಉತ್ತಮ ಸಮಯ.

  • ಪರಿಹಾರ: ಭಾನುವಾರ ಸೂರ್ಯ ದೇವರಿಗೆ ಅರ್ಘ್ಯ ನೀಡಿ.
  • ಶುಭಸಂಖ್ಯೆ: 1

♍ ಕನ್ಯಾ ರಾಶಿ (Virgo):

ಆದಾಯ ಕಡಿಮೆ ಇರುತ್ತದೆ, ಹಿರಿಯರ ಸಹಕಾರದಿಂದ ಆರ್ಥಿಕ ಸ್ಥಿರತೆ ಕಾಣುವಿರಿ. ಕೃಷಿಯಿಂದ ನಿರೀಕ್ಷಿತ ಆದಾಯವಿರುವುದಿಲ್ಲ. ಮನೆಪಾಠ ಹೇಳಿಕೊಡುವವರ ಆದಾಯ ಹೆಚ್ಚುತ್ತದೆ. ಮಕ್ಕಳ ಏಳಿಗೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ವಿದೇಶಿ ಸಂಸ್ಥೆಗಳಲ್ಲಿ ಹೂಡಿದ ಹಣ ಈಗ ಮುಳುಗಡೆಯಾಗಬಹುದು. ಸಂಗಾತಿಯ ಉದಾಸೀನ ಮನೋಭಾವ ಚಿಂತೆಗೀಡುಮಾಡುತ್ತದೆ. ಎಲೆಕ್ಟ್ರಾನಿಕ್ ಉದ್ದಿಮೆದಾರರಿಗೆ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಲಾಭ ಹೆಚ್ಚುತ್ತದೆ.

  • ಪರಿಹಾರ: ಹಸಿರು ಬಟ್ಟೆಗಳನ್ನು ದಾನ ಮಾಡಿ.
  • ಶುಭಸಂಖ್ಯೆ: 5

♎ ತುಲಾ ರಾಶಿ (Libra):

ಆದಾಯ ಕಡಿಮೆ ಇರುತ್ತದೆ. ನಿಮ್ಮ ನಡವಳಿಕೆಗಳಲ್ಲಿ ಈಗ ಯಾವುದೋ ಗುರಿಸಾಧನೆ ಮಾಡುವ ಆಲೋಚನೆ ಇರುತ್ತದೆ. ಕೃಷಿ ಭೂಮಿಗೆ ಹಣ ಹಾಕುವ ಮುಂಚೆ ಎಚ್ಚರವಹಿಸಿ. ಮಕ್ಕಳು ಸ್ವಲ್ಪ ಕಠಿಣವಾಗಿ ಮಾತನಾಡುವ ಸಾಧ್ಯತೆಗಳಿವೆ. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ಹಳೆಯ ಮೂಳೆನೋವುಗಳು ಕೆಲವರನ್ನು ಕಾಡಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರಿಂದ ಸಾಲ ಸಿಗುವ ಸಾಧ್ಯತೆಗಳಿವೆ.

  • ಪರಿಹಾರ: ಶುಕ್ರವಾರ ದುರ್ಗಾ ದೇವಿಗೆ ಕೆಂಪು ಹೂವು ಅರ್ಪಿಸಿ.
  • ಶುಭಸಂಖ್ಯೆ: 6

ಇದನ್ನು ಓದಿ :

♏ ವೃಶ್ಚಿಕ ರಾಶಿ (Scorpio):

ನಿಮ್ಮ ಸಂಗಾತಿಯ ಒಲವು ಜಾಸ್ತಿ ಆಗುತ್ತದೆ. ಆದಾಯ ಕಡಿಮೆ ಇರುತ್ತದೆ. ನಿಮ್ಮ ಶತ್ರುಗಳೇ ಈಗ ನಿಮ್ಮ ಮಿತ್ರರಾಗುವರು. ವಿದೇಶಿ ಕಂಪನಿಗಾಗಿ ಭೂಮಿಯನ್ನು ಒದಗಿಸಿ ಕೊಡುವವರಿಗೆ ಆದಾಯ ಹೆಚ್ಚುತ್ತದೆ. ಉಷ್ಣ ಸ್ಥಾವರಗಳಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರವಹಿಸಿ. ಸಂಗಾತಿಯಿಂದ ಧನಸಹಾಯ ಹರಿದುಬರುತ್ತದೆ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಕಾನೂನಿನ ತೊಡಕುಗಳು ಎದುರಾಗಬಹುದು. ನಿಮ್ಮ ಹಿರಿಯರ ವ್ಯವಹಾರಗಳಲ್ಲಿ ನಿಮಗೂ ಪಾಲು ದೊರೆತು ಆದಾಯ ಬರುತ್ತದೆ.

  • ಪರಿಹಾರ: ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ.
  • ಶುಭಸಂಖ್ಯೆ: 9

♐ ಧನುಸ್ಸು ರಾಶಿ (Sagittarius):

ಆಲಸಿತನದಿಂದ ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಆದಾಯ ತಕ್ಕ ಮಟ್ಟಿಗೆ ಇರುತ್ತದೆ. ವಿದೇಶದಲ್ಲಿರುವ ಸ್ನೇಹಿತರ ಸಹಾಯದಿಂದ ನೀವು ವಿದೇಶಕ್ಕೆ ಹೋಗಲು ಪ್ರಯತ್ನಪಡಬಹುದು. ಸಾಂಪ್ರದಾಯಿಕ ಕೃಷಿ ಮಾಡಲು ತಯಾರಿ ನಡೆಸುವಿರಿ. ಹಿರಿಯರ ಧಾರ್ಮಿಕ ಕಾರ್ಯಗಳಲ್ಲಿ ನೆರವಾಗುವಿರಿ. ಸಂಗಾತಿಯಿಂದ ಆರ್ಥಿಕ ಸಹಾಯ ಸಿಗುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ವೃತ್ತಿಯಲ್ಲಿ ಹಿತಶತ್ರುಗಳು ಜಾಸ್ತಿಯಾಗಬಹುದು.

  • ಪರಿಹಾರ: ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡಿ.
  • ಶುಭಸಂಖ್ಯೆ: 3

ಇದನ್ನು ಓದಿ : ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವಿಶೇಷ ವರದಿ!  

♑ ಮಕರ ರಾಶಿ (Capricorn):

ವಿದೇಶಿ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದೇಶಿ ಭಾಷಾ ಬೋಧಕರಿಗೆ ಬೇಡಿಕೆ ಬರುತ್ತದೆ. ಶತ್ರುಗಳನ್ನು ಹುಡುಕಿ ಮಣಿಸುವಿರಿ. ಕೃಷಿ ತಂತ್ರಜ್ಞರಿಗೆ ನಿರೀಕ್ಷಿತ ಫಲಿತಾಂಶಗಳು ದೊರೆಯುವುದಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯುವ ಯೋಗವಿದೆ. ಯಾವುದೇ ರೀತಿಯ ಸಾಲದ ವ್ಯವಹಾರಗಳು ಖಂಡಿತ ಬೇಡ. ಸಂಗಾತಿ ಮಾಡುತ್ತಿರುವ ಸರ್ಕಾರಿ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ. ಬಂಧುಗಳು ನಿರೀಕ್ಷಿತ ಸಮಯದಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ.

  • ಪರಿಹಾರ: ಶನಿವಾರ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ.
  • ಶುಭಸಂಖ್ಯೆ: 8

♒ ಕುಂಭ ರಾಶಿ (Aquarius):

ಯುವಕರಲ್ಲಿ ಕೋಪ ಹೆಚ್ಚಾಗಿರುತ್ತದೆ. ಆದಾಯ ಕಡಿಮೆ ಇರುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಉತ್ತಮ ಅನುಕೂಲವಿರುತ್ತದೆ. ಉಷ್ಣ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿ ಕಡೆಯವರಿಂದ ಒಳ್ಳೆಯ ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ಸರ್ಕಾರಿ ಗುತ್ತಿಗೆ ಹಣ ಬರುವುದು ನಿಧಾನವಾಗಬಹುದು. ನಿಮ್ಮ ಹಿರಿಯರ ಜತೆ ಪುಣ್ಯ ಕ್ಷೇತ್ರದ ದರ್ಶನಗಳನ್ನು ಮಾಡುವ ಯೋಗವಿದೆ. ಉದ್ಯೋಗ ಸ್ಥಳದಲ್ಲಿ ಅಧಿಕಾರಿಗಳು ನಿಮ್ಮ ಮೇಲೆ ಕಣ್ಣಿಡುವರು.

  • ಪರಿಹಾರ: ನಿರ್ಗತಿಕರಿಗೆ ಸಹಾಯ ಮಾಡಿ.
  • ಶುಭಸಂಖ್ಯೆ: 4

♓ ಮೀನ ರಾಶಿ (Pisces):

ಶ್ರಮಪಟ್ಟು ಕೆಲಸ ಮಾಡಲು ಪ್ರಯತ್ನ ಪಡುವಿರಿ. ಆದಾಯ ಮಂದಗತಿಯಲ್ಲಿರುತ್ತದೆ. ಆಸ್ತಿ ಕೊಳ್ಳಲು ಬೇಕಾದ ಹಣ ಹೊಂದಿಕೆಯಾಗಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಹರಿತವಾದ ಆಯುಧಗಳಿಂದ ಗಾಯವಾಗುವ ಸಂದರ್ಭವಿದೆ. ಸಂಗಾತಿಯಿಂದ ಧಾರ್ಮಿಕ ಸ್ಥಳಗಳಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ತಾಯಿಯೊಡನೆ ಕಾವೇರಿದ ಮಾತುಗಳಾಗಬಹುದು. ತಂದೆಯಿಂದ ಬರಬೇಕಾದ ಆಸ್ತಿ ಬರುವುದು ನಿಧಾನವಾಗುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಅನುಕೂಲಗಳಾಗುತ್ತವೆ.

  • ಪರಿಹಾರ: ಗುರುವಾರ ವಿಷ್ಣು ಸಹಸ್ರನಾಮ ಪಠಿಸಿ.
  • ಶುಭಸಂಖ್ಯೆ: 3

WhatsApp Number : 7795829207


Leave a Reply

Your email address will not be published.