ದಾವಣಗೆರೆಯಲ್ಲಿ ನಕಲಿ ನೋಟು ದಂಧೆಕೋರರ ಬಂಧನ: ಶಿವಮೊಗ್ಗಕ್ಕೂ ತಟ್ಟಿದ ಆತಂಕ, ಜೈಲಿನಿಂದ ಬಂದರೂ ಬದಲಾಗದ ಆರೋಪಿ!

ದಾವಣಗೆರೆ/ಶಿವಮೊಗ್ಗ: ರಾಜ್ಯದಲ್ಲಿ ಖೋಟಾ ನೋಟು ಜಾಲವೊಂದು ಸಕ್ರಿಯವಾಗಿರುವುದನ್ನು ದಾವಣಗೆರೆ ಪೊಲೀಸರು ಬಯಲಿಗೆಳೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಸಮೀಪದಲ್ಲೇ ಈ ದೊಡ್ಡ ಜಾಲ ಪತ್ತೆಯಾಗಿರುವುದು ನಮ್ಮ ಜಿಲ್ಲೆಯ ಜನರಿಗೂ ಆತಂಕವನ್ನುಂಟು ಮಾಡಿದೆ.

ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?

ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಕುಬೇರಪ್ಪ, ಸಂತೋಷ್ ಕುಮಾರ್, ವಿರೇಶ್ ಮತ್ತು ಹನುಮಂತಪ್ಪ ಎಂಬುವವರನ್ನು ದಾವಣಗೆರೆಯ ಚಿರಡೋಣಿ ಗ್ರಾಮದಲ್ಲಿನ ಬಾರ್ ಒಂದರಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ₹3,75,400 ಮೌಲ್ಯದ ನಕಲಿ ನೋಟುಗಳು ಮತ್ತು ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನು ಓದಿ : ಶಿವಮೊಗ್ಗ: ಬೇಡರ ಹೊಸಹಳ್ಳಿ ಕ್ರಾಸ್‌ನಲ್ಲಿ ಹಿಟ್ ಅಂಡ್ ರನ್; ಮೆಡಿಕಲ್ ರೆಪ್ ಸಾವು!

ಜಾಹಿರಾತು:

ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ಜೈಲಿನಿಂದ ಬಂದರೂ ಬಿಡದ ಚಾಳಿ:

ಈ ಜಾಲದ ಪ್ರಮುಖ ಆರೋಪಿ ಕುಬೇರಪ್ಪ ಕಳೆದ ವರ್ಷವೂ ಇದೇ ಖೋಟಾ ನೋಟು ಪ್ರಕರಣದಲ್ಲಿ ಜೈಲು ಸೇರಿದ್ದ. ಆದರೆ, ಕಳೆದ ಫೆಬ್ರವರಿಯಲ್ಲಿ ಜಾಮೀನು ಪಡೆದು ಹೊರಬಂದ ಈತ, ಮತ್ತೆ ತನ್ನ ಹಳೆಯ ದಂಧೆಯನ್ನೇ ಮುಂದುವರೆಸಿದ್ದಾನೆ! 35 ಸಾವಿರ ಅಸಲಿ ನೋಟಿಗೆ 1.35 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ನೀಡುತ್ತಿದ್ದ ಎನ್ನಲಾಗಿದೆ. ಬಾರ್‌ಗಳು, ಪೆಟ್ರೋಲ್ ಬಂಕ್‌ಗಳು ಸೇರಿದಂತೆ ವಿವಿಧೆಡೆ ಈ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಾವಣಗೆರೆ ಮಾತ್ರವಲ್ಲದೆ, ಹರಿಹರ, ಹೊಸಪೇಟೆ, ಮೈಸೂರಿನಂತಹ ನಗರಗಳಲ್ಲೂ ಇವರ ದಂಧೆ ವಿಸ್ತರಿಸಿತ್ತು.

ಶಿವಮೊಗ್ಗ ಜಿಲ್ಲೆಗೆ ಹತ್ತಿರದ ಪ್ರದೇಶದಲ್ಲಿ ಈ ಜಾಲ ಪತ್ತೆಯಾಗಿರುವುದರಿಂದ, ಸಾರ್ವಜನಿಕರು ನಗದು ವಹಿವಾಟು ನಡೆಸುವಾಗ ಅತ್ಯಂತ ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅನುಮಾನಾಸ್ಪದ ನೋಟುಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!

ಹೆಚ್ಚಿನ ಮಾಹಿತಿ ಹಾಗೂ ಜಿಲ್ಲೆಯ ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ಪುಟವನ್ನು ಲೈಕ್ ಮಾಡಿ ಮತ್ತು ಫಾಲೋ ಮಾಡಿ.

ಇದನ್ನು ಓದಿ: ಸಾಗರ ಜನತೆಗೆ ಗುಡ್ ನ್ಯೂಸ್ : 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭ! ಸಂಪೂರ್ಣ ವಿವರ ಇಲ್ಲಿದೆ…

ಇದನ್ನು ಓದಿ:  ಎಕ್ಸ್‌ಪ್ರೆಸ್” ರೈಲಿನಲ್ಲಿ ಬೆಂಕಿ: ನಿಖರ ಕಾರಣವೇನು? ದೊಡ್ಡ ಅನಾಹುತ ತಪ್ಪಿದ್ದೇಗೆ?

ಜಾಹಿರಾತು:

ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207


Leave a Reply

Your email address will not be published.