ಹಾಡು- ಪಾಡು!

ಶುಕ್ರವಾರವಾದ್ದರಿಂದ ದಿನಪತ್ರಿಕೆಗಳಲ್ಲಿ ಸಿನಿಮಾರಂಗದ ಸುದ್ದಿಗಳೂ ಜಾಗ ಪಡೆದಿರುತ್ತವೆ. ಪತ್ರಿಕೆ ಓದುವಿಕೆಯಲ್ಲಿ ಸಿನೆಮಾರಂಗದ ವಿಷಯಗಳಲ್ಲಿ ಆಸಕ್ತಿ ಇಲ್ಲದಿದ್ದರೂ ಒಮ್ಮೊಮ್ಮೆ ಕುತೂಹಲದಿಂದ ಓದುವುದೂ ಉಂಟು. 

ಹೊಸ ಸಿನೆಮಾವೊಂದಕ್ಕೆ ರಂಗದ ಖ್ಯಾತರಾದ ಯೋಗರಾಜ್ ಭಟ್ಟರು ಅದ್ಭುತವಾದ ಗೀತೆ ಬರೆದಿದ್ದಾರೆ. ಆ ಹಾಡನ್ನು ನಟ ಶರಣ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಧುರವಾಗಿ ಹಾಡಿದ್ದಾರೆ ಎನ್ನುವ ವರದಿ ಇತ್ತು.

ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?

ಯೋಗರಾಜರಂತವರು ಅದ್ಭುತವಾಗಿ ಗೀತೆ ಬರೆದಿದ್ದಾರೆ….ವಿ. ಹರಿಕೃಷ್ಣ ರಂತವರು ಮಧುರವಾಗಿ ಹಾಡಿದ್ದಾರೆ ಅಂದ ಮೇಲೆ ಆ ಹಾಡು ವರ್ಷದ ಸೂಪರ್ ಹಿಟ್ ಹಾಡಾಗಬೇಕಲ್ಲವೆ!

ಹಾಗಾದರೆ ಅದು ಯಾವುದು ಎನ್ನುವ ಕುತೂಹಲವೆ?…..

ಆ ಹಾಡು “ಕಮಂಗಿ ನನ್ ಮಗನೇ….”

ಈ ಬಾರಿ ಗಣೇಶೋತ್ಸವ, ರಾಜ್ಯೋತ್ಸವ, ಶಾಲಾ ವಾರ್ಷಿಕೋತ್ಸವ , ಮದುವೆ ರಿಸೆಪ್ಷನ್ ಇತ್ಯಾದಿ ಕಾರ್ಯಕ್ರಮಗಳಲ್ಲಿ ಈ ಅದ್ಭುತ ಗೀತೆ, ಮಧುರ ದ್ವನಿಯ ಹಾಡೇ ಜನಪ್ರಿಯವಾಗಬಹುದು!! ಮದುವೆ ಗೆಟ್ ಟುಗೆದರ್ ಸಮಾರಂಭದಲ್ಲಿ ಮದುಮಗಳು ಮದುಮಗನ ನೋಡಿ ಹಾಡಿದರೆ ಮುರಿದು ಬಿದ್ದ ಮದುವೆ ಎನ್ನುವ ಸುದ್ದಿಯೂ ಬರಬಹುದು!!

ಒಟ್ಟಾರೆ ಒಂದೆರಡು ದಶಕಗಳಲ್ಲಿ ಹಿಂದೆ ಸೃಷ್ಟಿಯಾಗುತ್ತಿದ್ದ ಗೀತೆಗಳ ಸಾಹಿತ್ಯ ಭಾಷಾ ಸಮೃದ್ಧಿಯೊಂದಿಗೆ ಅರ್ಥಪೂರ್ಣವಾಗಿರುತ್ತಿದ್ದವು, ಮಾಧುರ್ಯಕ್ಕೆ ಸವಕಳಿ ಎನ್ನುವುದೇ ಇರುತ್ತಿರಲಿಲ್ಲ. ಕಾಲ ಬದಲಾಗಿಲ್ಲ. ಯುವ ಜನಜನತೆಯ ಅಭಿರುಚಿ ಬದಲಾಗಿದೆ. ರಂಗದವರು ಅದನ್ನು ನೀಡಿ ಸೈ ಅನ್ನಿಸಿಕೊಳ್ಳುವ ಕಾಲ. 

ಹಳಬರು ಇದಕ್ಕೆ ಜೈ ಅನ್ನಬೇಕು ಅಥವಾ ಹಾಡು ಹಳೆಯದಾದರೇನು ಭಾವ ನವನವೀನ ಎಂದು ಗುನುಗನುಸುತ್ತಿರಬೇಕು ಅಷ್ಟೆ!

ಏನಂತೀರಿ?….

-ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ.

ಜಾಹಿರಾತು:

ಜಾಹಿರಾತು:

ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207


Leave a Reply

Your email address will not be published.