ಶಿವಮೊಗ್ಗದಲ್ಲಿ ಆಟೋ ಪ್ರಯಾಣ ಇನ್ಮುಂದೆ ಸುಗಮ: ರೈಲ್ವೆ ನಿಲ್ದಾಣದಿಂದಲೇ ‘ಪ್ರೀಪೇಯ್ಡ್ ಆಟೋ ಕೌಂಟರ್’ ಶುರು!
ಶಿವಮೊಗ್ಗ: ನಗರದಲ್ಲಿ ಆಟೋ ಪ್ರಯಾಣಿಕರಿಗೆ ಆಗುತ್ತಿದ್ದ ಕಿರಿಕಿರಿಗೆ ಮುಕ್ತಿ ನೀಡಲು ಮತ್ತು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 1ರಿಂದಲೇ ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್‌ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…?
ಪ್ರೀಪೇಯ್ಡ್ ಆಟೋ ಕೌಂಟರ್‌ಗಳನ್ನು ಆರಂಭಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಪೊಲೀಸ್, ಸಾರಿಗೆ, ಮತ್ತು ಮಹಾನಗರಪಾಲಿಕೆ ಸಹಯೋಗದೊಂದಿಗೆ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು. ಅದಕ್ಕೂ ಮುನ್ನ, ಆಟೋ ಚಾಲಕರು ಮತ್ತು ಮಾಲೀಕರ ಅಭಿಪ್ರಾಯ ಪಡೆದು, ಸಾರ್ವಜನಿಕರು ಹಾಗೂ ಆಟೋ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ : ಶಿವಮೊಗ್ಗ: ಬೇಡರ ಹೊಸಹಳ್ಳಿ ಕ್ರಾಸ್‌ನಲ್ಲಿ ಹಿಟ್ ಅಂಡ್ ರನ್; ಮೆಡಿಕಲ್ ರೆಪ್ ಸಾವು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಯಾವೆಲ್ಲಾ ಸ್ಥಳಗಳಲ್ಲಿ ಆರಂಭ?
ಆರಂಭಿಕ ಹಂತದಲ್ಲಿ ರೈಲ್ವೆ ನಿಲ್ದಾಣದ ಆಯ್ದ ಮೂರು ಸ್ಥಳಗಳಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಚೈತನ್ಯ ರೂರಲ್ ಡೆವಲಪ್ಟೆಂಟ್ ಸೊಸೈಟಿ ಎಂಬ ಸ್ಥಳೀಯ ಸ್ವಯಂಸೇವಾ ಸಂಸ್ಥೆಯು ಇದರಲ್ಲಿ ಆಸಕ್ತಿ ವಹಿಸಿದ್ದು, ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಮತ್ತು ಸಹಕಾರ ಪಡೆದು ಈ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ನುಡಿದರು.
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಲಾಭ ಯಾರಿಗೆ?
ಈ ಪ್ರೀಪೇಯ್ಡ್ ಆಟೋ ಕೌಂಟರ್‌ಗಳ ಆರಂಭದಿಂದಾಗಿ ನಗರದ ಸಾರ್ವಜನಿಕರಿಗೆ ಹಾಗೂ ನೆರೆಯ ಜಿಲ್ಲೆ, ತಾಲ್ಲೂಕುಗಳಿಂದ ವಿವಿಧ ಉದ್ದೇಶಗಳಿಗಾಗಿ ಶಿವಮೊಗ್ಗಕ್ಕೆ ಆಗಮಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸುಗಮ ಸಂಚಾರ ವ್ಯವಸ್ಥೆಯಿಂದಾಗಿ ನಗರದಲ್ಲಿ ಶಿಸ್ತು ಮೂಡಲಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ನಗರದಾದ್ಯಂತ ವಿಸ್ತರಣೆ ಯೋಜನೆ:
ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿರುವ ಈ ವ್ಯವಸ್ಥೆ ಯಶಸ್ವಿಯಾದಲ್ಲಿ, ನಗರದ ಎಲ್ಲಾ ಪ್ರಮುಖ ವರ್ತುಲಗಳು ಮತ್ತು ಜನನಿಬಿಡ ಸ್ಥಳಗಳಿಗೂ ಇದನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಗುರುದತ್ತ ಹೆಗಡೆ ಅವರು ತಿಳಿಸಿದರು.
ಇದನ್ನು ಓದಿ: ಸಾಗರ ಜನತೆಗೆ ಗುಡ್ ನ್ಯೂಸ್ : 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭ! ಸಂಪೂರ್ಣ ವಿವರ ಇಲ್ಲಿದೆ…
ಇದನ್ನು ಓದಿ: ಎಕ್ಸ್‌ಪ್ರೆಸ್” ರೈಲಿನಲ್ಲಿ ಬೆಂಕಿ: ನಿಖರ ಕಾರಣವೇನು? ದೊಡ್ಡ ಅನಾಹುತ ತಪ್ಪಿದ್ದೇಗೆ?
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply