Author: Jagadeesh Shipra (Jagadeesh Shipra)

Post
ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದ ಕಾರು: 6 ಜನರಿಗೆ ಗಂಭೀರ ಗಾಯ

ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದ ಕಾರು: 6 ಜನರಿಗೆ ಗಂಭೀರ ಗಾಯ

ಶಿವಮೊಗ್ಗ : ಚಾಲಕನ ನಿಯಂತ್ರಣತಪ್ಪಿದ ಕಾರೊಂದು ಸೇತುವೆ ಮೇಲಿಂದ ಕೆಳಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಅಗರದಹಳ್ಳಿ ಬಳಿ ನಡೆದಿದೆ. ಕುಟುಂಬವೊಂದು ಕಾರಿನಲ್ಲಿ ಕೊಲ್ಲೂರು, ಸಿಗಂದೂರು, ಜೋಗ ಪ್ರವಾಸ ಮುಗಿಸಿ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣತಪ್ಪಿದ ಕಾರು ಸೇತುವೆಯಿಂದ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಮಕ್ಕಳು ಸೇರಿ 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಗಿನ ಜಾವ 2:30ರ ಸುಮಾರಿಗೆ...

Post
BREAKING NEWS  : ಬೆಳ್ಳಂ ಬೆಳಗ್ಗೆ ಶಿವಮೊಗ್ಗ ಸೆಂಟ್ರಲ್ ಜೈಲ್ ಮೇಲೆ ಪೊಲೀಸರ ರೈಡ್ !

BREAKING NEWS : ಬೆಳ್ಳಂ ಬೆಳಗ್ಗೆ ಶಿವಮೊಗ್ಗ ಸೆಂಟ್ರಲ್ ಜೈಲ್ ಮೇಲೆ ಪೊಲೀಸರ ರೈಡ್ !

ಶಿವಮೊಗ್ಗ : ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲ್ ಮೇಲೆ ಪೊಲೀಸರು ದಾಳಿ ಮಾಡಿ ತಪಾಸಣೆ ನಡೆಸಿರುವ ಘಟನೆ ಇಂದು ಬೆಳ್ಳಂ ಬೆಳಗ್ಗೆ ನಡೆದಿದೆ. ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ನ ರಾಜಾತೀಥ್ಯ ದ ಫೋಟೋ ವೈರಲ್ ಆದ ಬೆನ್ನಲ್ಲೇ, ಒಂಬತ್ತು ಜೈಲು ಅಧಿಕಾರಿಗಳು ಸಸ್ಪೆಂಡ್ ಆಗಿದ್ದರು, ಈ ಸಂಬಂಧ ರೇಣುಕಾ ಸ್ವಾಮಿ ಕೊಲೆ ಆರೋಪಿಗಳಾದ ಡಿ ಗ್ಯಾಂಗ್ ನ ಸಹಚರರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ, ಡಿ ಗ್ಯಾಂಗ್ ನ ಇಬ್ಬರು ಆರೋಪಿಗಳು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸುವ...

Post
ಶಿವಮೊಗ್ಗ ಮಹಾನಗರಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭ ! ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು !

ಶಿವಮೊಗ್ಗ ಮಹಾನಗರಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭ ! ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು !

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ವಾರ್ಡ್ ವಾರು ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಮತದಾರರು, ಪಟ್ಟಿ ಸಿದ್ಧತೆ, ಮತಗಟ್ಟೆಗಳ ಸಂಖ್ಯೆ ಹೆಚ್ಚಳ ಮತ್ತಿತರ ವಿಷಯಗಳ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಶುಕ್ರವಾರ ಮತದಾರರ ಪಟ್ಟಿ ತಯಾರಿಕೆ ಸಂಬಂಧ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸದ್ಯ...

Post
ರಾತ್ರಿ ವೇಳೆ ಮಹಿಳೆಯರಿಗೆ ಮನೆಗೆ ತೆರಳಲು ಉಚಿತ ಪ್ರಯಾಣ ಯೋಜನೆ ! ಪೊಲೀಸರ ಹೆಸರಲ್ಲಿ ಸುಳ್ಳು ಸುದ್ದಿ ! ಪೊಲೀಸ್ ಇಲಾಖೆ ಸ್ಪಷ್ಟನೆ !

ರಾತ್ರಿ ವೇಳೆ ಮಹಿಳೆಯರಿಗೆ ಮನೆಗೆ ತೆರಳಲು ಉಚಿತ ಪ್ರಯಾಣ ಯೋಜನೆ ! ಪೊಲೀಸರ ಹೆಸರಲ್ಲಿ ಸುಳ್ಳು ಸುದ್ದಿ ! ಪೊಲೀಸ್ ಇಲಾಖೆ ಸ್ಪಷ್ಟನೆ !

ಕಿಡಿಗೇಡಿಗಳು ಪೊಲೀಸರ ಹೆಸರಲ್ಲಿ ರಾಜ್ಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದು, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಪೊಲೀಸ್ ಹೆಲ್ಪ್‌ಲೈನ್ ಹೆಸರಿನಲ್ಲಿ ಸುಳ್ಳು ನಂಬರ್ ಉಲ್ಲೇಖಿಸಿ ಎಸ್‌ಎಂಎಸ್‌ನ್ನು ಕಿಡಿಗೇಡಿಗಳು ಎಲ್ಲೆಡೆ ವೈರಲ್ ಮಾಡುತ್ತಿದ್ದು, ಎಚ್ಚರದಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ಏನಿದು ವೈರಲ್‌ ಮೆಸೇಜ್‌? ಪೊಲೀಸರು ಹೊಸದೊಂದು ಟ್ರಾವೆಲ್‌ ಸ್ಕೀಂ ಪ್ರಾರಂಭಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಾರೆ ಅಂತಾ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು. ಜೊತೆಗೆ ಒಂಟಿ...

Post
ವೃದ್ದಾಪ್ಯ ವೇತನ ಕೊಡದೆ ಬಡಪಾಯಿ ಅಜ್ಜಿಯ ಮೇಲೆ ದರ್ಪ ಮೆರೆದ ಕೆನೆರಾ ಬ್ಯಾಂಕ್ ಮ್ಯಾನೇಜರ್ ! ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವ ಹಾಗೆ ಆಯಿತು ಈ ಮ್ಯಾನೇಜರ್ ಕಥೆ ! ಏನಿದು ಪ್ರಕರಣ ?

ವೃದ್ದಾಪ್ಯ ವೇತನ ಕೊಡದೆ ಬಡಪಾಯಿ ಅಜ್ಜಿಯ ಮೇಲೆ ದರ್ಪ ಮೆರೆದ ಕೆನೆರಾ ಬ್ಯಾಂಕ್ ಮ್ಯಾನೇಜರ್ ! ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವ ಹಾಗೆ ಆಯಿತು ಈ ಮ್ಯಾನೇಜರ್ ಕಥೆ ! ಏನಿದು ಪ್ರಕರಣ ?

ರಿಪ್ಪನಪೇಟೆ : ಪಟ್ಟಣದ ಕೆನೆರಾ ಬ್ಯಾಂಕ್ ಮ್ಯಾನೇಜರ್ ಒಬ್ಬರು ಸರ್ಕಾರದಿಂದ ಬಂದಿರುವ ವೃದ್ದಾಪ್ಯ ವೇತನವನ್ನು ವೃದ್ಧೆಯೊಬ್ಬರಿಗೆ ನೀಡದೆ ಕಳೆದ ಆರೇಳು ತಿಂಗಳಿನಿಂದ ಲೋನ್ ನೆಪ ಹೇಳಿ ತಡೆ ಒಡ್ಡಿರುವ ಘಟನೆ ನಡೆದಿದೆ. ಬಡತನ ರೇಖೆಗಿಂತ ಕೆಳಗಿರುವ ನಾಡಿನ ಹಿರಿಯ ನಾಗರಿಕರು ತಮ್ಮ ಇಳಿ ವಯಸ್ಸಿನಲ್ಲಿ ಸಂತೋಷದಿಂದ ಇರಲಿ ಎಂಬ ಸದುದ್ದೇಶದಿಂದ ಸರ್ಕಾರ ಮಾಸಾಶನ ನಿಗದಿ ಮಾಡಿ ಅವರ ಜೀವನಕ್ಕೆ ಆಧಾರವಾಗಿದೆ.ಆದರೆ ದೇವರು ಕೊಟ್ಟರು ಪೂಜಾರಿ ಪೂಜಾರಿ ಕೊಡುವುದಿಲ್ಲ ಎನ್ನುವ ಹಾಗೇ ಕೆನರಾ ಬ್ಯಾಂಕ್ ನ ಮ್ಯಾನೇಜರ್ ವೃದ್ದೆಗೆ...

Post
ವಿದ್ಯಾರ್ಥಿಯನಿಯರ ಜೊತೆ ಅಸಭ್ಯ ವರ್ತನೆ ! ವಸತಿ ಶಾಲೆ ಶಿಕ್ಷಕನ ಬಂಧನ !

ವಿದ್ಯಾರ್ಥಿಯನಿಯರ ಜೊತೆ ಅಸಭ್ಯ ವರ್ತನೆ ! ವಸತಿ ಶಾಲೆ ಶಿಕ್ಷಕನ ಬಂಧನ !

ತೀರ್ಥಹಳ್ಳಿ : ತಾಲೂಕಿನ ವಸತಿ ಶಾಲೆಯೊಂದರಲ್ಲಿ ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತೀರ್ಥಹಳ್ಳಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಶಾಲೆಯ ನೃತ್ಯ ಶಿಕ್ಷಕನನ್ನು ಬಂಧಿಸಿದ್ದಾರೆ. ದೂರು ದಾಖಲಾಗುತ್ತಲೇ ತಲೆ ಮರೆಸಿಕೊಂಡಿದ್ದ ಶಿಕ್ಷಕನನ್ನು ಬೆಂಗಳೂರು ಬಳಿಯ ನೆಲಮಂಗಲದಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. 45 ವರ್ಷದ ಆರೋಪಿ ಅದೇ ಶಾಲೆಯಲ್ಲಿ ಕಳೆದ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ ಶಾಲೆಯ ಪ್ರಾಚಾರ್ಯರು ಪೊಲೀಸರಿಗೆ ದೂರು ನೀಡಿದ್ದರು. ‘ವಸತಿ ಶಾಲೆಯ 21...

Post
ಜೈಲಿನಿಂದಲೇ MLA ಮಗನನ್ನು ಮುಗಿಸಲು ಸ್ಕೆಚ್ ! ದಾಖಲಾಯ್ತು ಕೇಸ್ ! F.I.R ನಲ್ಲಿ ಏನಿದೆ ?

ಜೈಲಿನಿಂದಲೇ MLA ಮಗನನ್ನು ಮುಗಿಸಲು ಸ್ಕೆಚ್ ! ದಾಖಲಾಯ್ತು ಕೇಸ್ ! F.I.R ನಲ್ಲಿ ಏನಿದೆ ?

ಶಿವಮೊಗ್ಗ : ಜೈಲಿನಿಂದ ಆರೋಪಿಯೊಬ್ಬ ಶಾಸಕರ ಪುತ್ರನ ಹತ್ಯೆಗೆ ಸಂಚು ರೂಪಿಸಿದ್ದ ಘಟನೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ (BK Sangameshwar) ಪುತ್ರನ ಹತ್ಯೆಗೆ ಸಂಚು ನಡೆದಿದೆ ಎನ್ನವ ಆರೋಪ ಕೇಳಿ ಬಂದಿದೆ. ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು (Basavaraju) ಸ್ವಲ್ಪದ್ರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೈಲಿನಲ್ಲಿರುವ ಡಿಚ್ಚಿ ಮುಬಾರಕ್ ಎಂಬ ಆರೋಪಿ ಈ ಹತ್ಯೆಗೆ...

Post
BREAKING NEWS : ಆಯನೂರಿನಲ್ಲಿ  ದಗ ದಗನೆ ಹೊತ್ತಿ ಉರಿದ ಬೇಕರಿ ! ಸಿಲೆಂಡರ್ ಗಳು ಬ್ಲಾಸ್ಟ್ !

BREAKING NEWS : ಆಯನೂರಿನಲ್ಲಿ ದಗ ದಗನೆ ಹೊತ್ತಿ ಉರಿದ ಬೇಕರಿ ! ಸಿಲೆಂಡರ್ ಗಳು ಬ್ಲಾಸ್ಟ್ !

ಶಿವಮೊಗ್ಗ : ತಾಲೂಕಿನ ಆಯನೂರಿನ ಬಳಿ ಇರುವ ಬೇಕರಿ ಒಂದರಲ್ಲಿ ಬೆಂಕಿ ಹತ್ತಿಕೊಂಡು ದಗ ದಗನೆ ಹೊತ್ತಿ ಉರಿದ ಘಟನೆ ನಡೆದಿದೆ.  ಆಯನೂರಿನ ಹಣಗೆರೆ ರಸ್ತೆಯ ಎಸ್ ಎಲ್ ವಿ ಅಯ್ಯಂಗಾರ್ ಬೇಕರಿಯಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡು. ಅಂಗಡಿ ಹೊತ್ತಿ ಉರಿದಿದೆ ಬೆಂಕಿಯ ಜ್ವಾಲೆ ಜಾಸ್ತಿ ಆಗುತ್ತಿದ್ದ ಸಂದರ್ಭದಲ್ಲಿ ಬೇಕರಿ ಒಳಗೆ ಮೂರು ಬಾರಿ ಸ್ಫೋಟಗೊಂಡಿದೆ. ಬೇಕರಿಯಲ್ಲಿರುವ ಸಿಲೆಂಡರ್ ಸ್ಫೋಟಗೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಂಕಿಯ ಜ್ವಾಲೆ ಅಕ್ಕಪಕ್ಕದ ಅಂಗಡಿಗಳಿಗೂ ಆವರಿಸಿದ್ದು. ಅಕ್ಕ ಪಕ್ಕದ ಅಂಗಡಿಯವರು ಬೆಂಕಿ...

Post
ಶಿವಮೊಗ್ಗದಲ್ಲಿ ಓಪನ್ ರೌಡಿಸಂ ! ನಗರದಲ್ಲಿ ಹೆಚ್ಚಾಯ್ತಾ ಪುಡಿರೌಡಿಗಳ ಅಟ್ಟಹಾಸ ? ಲಾಂಗ್ ಬೀಸಿದ ವಿಡಿಯೋ ವೈರಲ್ ! ಎಫ್ಐಆರ್ ದಾಖಲು !

ಶಿವಮೊಗ್ಗದಲ್ಲಿ ಓಪನ್ ರೌಡಿಸಂ ! ನಗರದಲ್ಲಿ ಹೆಚ್ಚಾಯ್ತಾ ಪುಡಿರೌಡಿಗಳ ಅಟ್ಟಹಾಸ ? ಲಾಂಗ್ ಬೀಸಿದ ವಿಡಿಯೋ ವೈರಲ್ ! ಎಫ್ಐಆರ್ ದಾಖಲು !

ಶಿವಮೊಗ್ಗ : ಶಿವಮೊಗ್ಗದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ. ರೌಡಿಗಳ ಓಪನ್ ಅಟ್ಯಾಕ್ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಲಾಂಗು ಹಿಡಿದು ಅಟ್ಯಾಕ್ ಮಾಡಿದ ವೀಡಿಯೋ ವೈರಲ್ ಆಗಿದೆ. ಶಿವಮೊಗ್ಗದಲ್ಲಿ ನಡೆದ ಈ ಓಪನ್ ರೌಡಿಸಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗಿದೆ. ನಗರದ ಸವಳಂಗ ರಸ್ತೆಯ ಎಲ್‌ಬಿಎಸ್ ನಗರದಲ್ಲಿರುವ ಪೋಲಾರ್ ಬೇರ್. ಮತ್ತು ಮೆಟ್ಲೆಸ್ ಬಳಿ ಆಗಸ್ಟ್ 16 ರ ರಾತ್ರಿ ಸುಮಾರು 12ರಿಂದ ಒಂದು ಗಂಟೆಯ ವೇಳೆಗೆ ತನಕ ಗಲಾಟೆ...

Post
ಇಂದು ಭಾರತ್ ಬಂದ್ ! ಶಾಲಾ, ಕಾಲೇಜು, ಬ್ಯಾಂಕ್, ಕಚೇರಿ ಬಂದ್ ಆಗುತ್ತಾ.? ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ.

ಇಂದು ಭಾರತ್ ಬಂದ್ ! ಶಾಲಾ, ಕಾಲೇಜು, ಬ್ಯಾಂಕ್, ಕಚೇರಿ ಬಂದ್ ಆಗುತ್ತಾ.? ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ.

ನವದೆಹಲಿ : ಎಸ್‌ಸಿ, ಎಸ್‌ಟಿ ಒಳಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರಕಾರಗಳಿಗಿವೆ ಎಂಬ ಸುಪ್ರೀಂ ಕೋರ್ಟ್‌ನ ಇತ್ತೀಚೆಗಿನ ತೀರ್ಪನ್ನು ಖಂಡಿಸಿ ರಿಸರ್ವೇಶನ್‌ ಬಚಾವೋ ಸಂಘರ್ಷ್‌ ಸಮಿತಿ ಕರೆ ನೀಡಿರುವ ಭಾರತ್‌ ಬಂದ್‌ ಬುಧವಾರ ನಡೆಯಲಿದೆ. ರಾಜಸ್ಥಾನ, ಉತ್ತರಪ್ರದೇಶ ಸೇರಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಂದ್‌ಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿರುವ ಕಾರಣ ಭದ್ರತೆ ಹೆಚ್ಚಿಸಲಾಗಿದೆ.ಉದ್ಯಮ ಸಂಸ್ಥೆಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ನೀಡಬೇಕು ಎಂದು ಆದಿವಾಸಿ, ದಲಿತ ಸಂಘಟನೆಗಳು ಕರೆ...