ಇದು ವಸಾಹತುಶಾಹಿಯ ಬ್ರಿಟಿಷ್ ಸಾಮ್ರಾಜ್ಯದ ಎದುರು ತೊಡೆ ತಟ್ಟಿ ದೇಶದಲ್ಲೇ ಮೊದಲ ಸ್ವತಂತ್ರ ಗ್ರಾಮ ಎಂದು ಹೆಗ್ಗಳಿಕೆ ಪಡೆದ ಶಿವಮೊಗ್ಗದ ಪುಟ್ಟ ಹಳ್ಳಿಯ ಕನ್ನಡಿಗರ ರೋಚಕ ಕಥನ. ಭಾರತ ದೇಶದಲ್ಲಿ ಬ್ರಿಟಿಷರ ದುರಾಡಳಿತವನ್ನು ಕಿತ್ತೊಗೆದು ಸ್ವಾತಂತ್ರ್ಯ ಪಡೆಯಲು, ಜನಸಾಮಾನ್ಯರುಗಳು ಮಾಡಿರುವ ಹೋರಾಟ, ದೇಶಪ್ರೇಮ, ತ್ಯಾಗ-ಬಲಿದಾನಗಳು ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಕರ್ನಾಟಕದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನಸಾಮಾನ್ಯರುಗಳು ಮಾಡಿದ ಕೆಚ್ಚಿನ ಹೋರಾಟ, ಬಲಿದಾನ, ತ್ಯಾಗಕ್ಕೆ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟ ಒಂದು ಅವಿಸ್ಮರಣೀಯ ಸಾಹಸಗಾಥೆಯಾಗಿದೆ. ಮುಗ್ಧ...
Author: Jagadeesh Shipra (Jagadeesh Shipra)
ಚುಂಚಾದ್ರಿ ಕಪ್ ವಾಲಿಬಾಲ್ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಬಂದಿದ್ದ ಉಸ್ತುವಾರಿ ಸಚಿವರು ಕೆಂಡಮಂಡಲರಾಗಿದ್ದೇಕೆ ?
ಶಿವಮೊಗ್ಗ : ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವಂತಹ ಚುಂಚಾದ್ರಿ ಕಪ್ ವಾಲಿಬಾಲ್ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಆಗಮಿಸಿದಂತಹ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಅಧಿಕಾರಿಗಳ ಮೇಲೆ ಗರಂ ಆಗಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಉಸ್ತುವಾರಿ ಸಚಿವರು ಬರುವ ಮಾಹಿತಿಯನ್ನ ತಿಳಿದು ಸ್ಥಳದಲ್ಲಿ ನಡೆದಿದ್ದ ಸಾರ್ವಜನಿಕರು ಮತ್ತು ಕ್ರೀಡಾಪಟುಗಳು ಮಧು ಬಂಗಾರಪ್ಪನವರಿಗೆ ಕ್ರೀಡಾಂಗಣದ ಅವ್ಯವಸ್ಥೆ ಕುರಿತು ದೂರು ನೀಡಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕೇಳಿದರೆ ಕ್ರೀಡಾ ಇಲಾಖೆ ಅಧಿಕಾರಿಗಳು ಉಡಾಫೆ ಉತ್ತರ ಕೊಡುತ್ತಾರೆ. ನೀವು (ಸಚಿವರು)...
78 ನೇ ಸ್ವಾತಂತ್ರ್ಯೋತ್ಸವ : ಶಿವಮೊಗ್ಗದಲ್ಲಿ ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ : ದೇಶಾದ್ಯಂತ ಇಂದು 78 ನೇ ಸ್ವಾತಂತ್ರ್ಯೋತ್ಸವದ ( 78th independence day ) ಸಂಭ್ರಮ ಮನೆ ಮಾಡಿದ್ದು, ಇಂದು ಶಿವಮೊಗ್ಗ (shivamogga) ಜಿಲ್ಲಾಡಳಿತದ ವತಿಯಿಂದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಧ್ವಜಾರೋಹಣ ನೆರವೇರಿಸಿ. ಜನತೆಗೆ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಕೋರಿದರು. ಧ್ವಜಾರೋಹಣದ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಂತರ ತೆರೆದ ಜೀಪಿನಲ್ಲಿ 26 ತುಕುಡಿಗಳನ್ನು ಪರಿಶೀಲಿಸಿ ವಂದನೆಗೆ ಗೌರವ ವಂದನೆ ಸ್ವೀಕರಿಸಿದರು. ಕೆ.ಎಸ್.ಆರ್.ಪಿ, ಡಿ....
ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣವಕಾಶ ! ಸ್ಪರ್ಧಾ ಲೈನ್ಸ್ ವತಿಯಿಂದ ರಾಜ್ಯಾದ್ಯಂತ ಉಚಿತ ಪರೀಕ್ಷಾ ಸರಣಿ !
ಶಿವಮೊಗ್ಗ : ಬೆಂಗಳೂರು : ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಬಯಸುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ, ಕರ್ನಾಟಕದ ಯುವ ಸ್ಪರ್ಧಾ ಆಕಾಂಕ್ಷಿಗಳಿಗಾಗಿ ಸ್ಪರ್ಧಾಲೈನ್ಸ್ ಟಾರ್ಗೆಟ್ ಕೆಎಎಸ್ ಪ್ರಿಲಿಮ್ಸ್ -2024 ಎಂಬ ಶೀರ್ಷಿಕೆ ಅಡಿ ಕರ್ನಾಟಕದಾದ್ಯಂತ ಏರ್ಪಡಿಸುತ್ತಿದೆ ಉಚಿತ ಕೆಎಎಸ್ ಪರೀಕ್ಷಾ ಸರಣಿ ! ಪ್ರಿಲಿಮ್ಸ್ ಪರೀಕ್ಷಾ ಸರಣಿಯು ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು ಕೆಎಎಸ್ ಹುದ್ದೆಯ ಆಕಾಂಕ್ಷಿಗಳ ತಯಾರಿಗೆ ನೆರವಾಗಲು ಸ್ಪರ್ಧಾ ಲೈನ್ಸ್ KAS ಪ್ರಿಲಿಮ್ಸ್ 2024 ಟೆಸ್ಟ್ ಸರಣಿಯ (GS-I ಮತ್ತು GS-II) ಸಂಪೂರ್ಣ ಸೆಟ್ ಅನ್ನು ಪ್ರಾರಂಭಿಸಿದೆ. ಪರೀಕ್ಷೆಯಂತಹ...
BREAKING NEWS : ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್ ಫೈಯರ್ ! ಆರೋಪಿ ಕಾಲಿಗೆ ಗುಂಡೇಟು !
ಶಿವಮೊಗ್ಗ : ಶಿವಮೊಗ್ಗದಲ್ಲಿ ಮತ್ತೆ ಪೊಲೀಸ್ ಬಂದೋಕು ಸದ್ದು ಮಾಡಿದೆ. ತಾಲೂಕಿನ ಕುಂಸಿ ಠಾಣಾ ವ್ಯಾಪ್ತಿಯ ತ್ಯಾಜ್ಯವಳ್ಳಿ ಅರಣ್ಯದ ಬಳಿ ಬೆಳ್ಳಂಬೆಳಗ್ಗೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹೊಡೆದಿರುವ ಘಟನೆ ನಡೆದಿದೆ. ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ರಜಾಕ್ ಎಂಬಾತನನ್ನ ಚಿಕಿತ್ಸೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 109 ಬಿಎನ್ಎಸ್ (ಕೊಲೆ ಯತ್ನ) ಪ್ರಕರಣದಲ್ಲಿ ಬೇಕಿದ್ದ ಆರೋಪಿ ಹಾಗೂ ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಮತ್ತು ಕೊಲೆಯತ್ನ ಪ್ರಕರಣವೂ ಸೇರಿದಂತೆ ಒಟ್ಟು ಐದು ಕೇಸ್‌ಗಳಲ್ಲಿ ಬೇಕಿದ್ದ...
ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ ! ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು !
ಶಿವಮೊಗ್ಗ : ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಕೆಜಿ (41) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ ಬಿಸಿ ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ ಇಂದು (ಜುಲೈ 08) ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿದ್ದಾರೆ. ಇದನ್ನು ಗಮಿಸಿದ ಸ್ಥಳೀಯರು ಪ್ರತಾಪ್ ಕುಮಾರ್ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ,...
ಎಮ್ಮೆಹಟ್ಟಿ ಗ್ರಾಮಕ್ಕೆ ಗೀತಾ-ಶಿವರಾಜಕುಮಾರ್ ದಂಪತಿ ಭೇಟಿ ! ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ಪರಿಹಾರ !
ಶಿವಮೊಗ್ಗ : ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾಡಗಿಯಲ್ಲಿ ಮುಂಜಾನೆ 13 ಮಂದಿಯನ್ನು ಟಿಟಿ ವಾಹನ ಬಲಿ ತೆಗೆದುಕೊಂಡಿತ್ತು. ಟಿಟಿ ವಾಹನವನ್ನು 15 ದಿನಗಳ ಹಿಂದೆಯಷ್ಟೇ ಖರೀದಿಸಲಾಗಿತ್ತು ಎಂದು ತಿಳಿದುಬಂದಿತ್ತು. ವಾಹನದ ಪೂಜೆಗಾಗಿ ಕುಟುಂಬ ತೆರಳಿದ್ದು, ಪೂಜೆ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿತ್ತು. .ಹಾವೇರಿ ಬಳಿ ಭೀಕರ ಅಪಘಾತದಲ್ಲಿ 13 ಜನ ಸಾವನ್ನಪ್ಪಿದವರ ಗ್ರಾಮವಾದ ಎಮ್ಮೆಹಟ್ಟಿ ಗ್ರಾಮಕ್ಕೆ ಶಿವಣ್ಣ ದಂಪತಿ ಭೇಟಿ ನೀಡಿದರು. ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮಕ್ಕೆ ನಟ ಶಿವರಾಜ್ ಕುಮಾರ್...
ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ ! ಆರೋಪಿ ಬಂಧನ !
ತೀರ್ಥಹಳ್ಳಿ : ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮೃತ ಯುವತಿಯನ್ನು ಪೂಜಾ ಎ.ಕೆ. (24) ಎಂದು ಗುರುತಿಸಲಾಗಿದ್ದು, ಹತ್ಯೆಆರೋಪಿಯಾದ ಮಣಿ ಎಂಬವರನ್ನು ಬಂಧಿಸಲಾಗಿದೆ. ಜೂ.30 ರಂದು ಪೂಜಾ ನಾಪತ್ತೆಯಾಗಿದ್ದು, ಬಳಿಕ ಅವರ ಮೃತದೇಹ ಪತ್ತೆಯಾಗಿದೆ. ನಾಲೂರು ಸಮೀಪದ ಮಣಿ ಎಂಬಾತ ಕತ್ತು ಹಿಸುಕಿ ಕೊಲೆ ಮಾಡಿ, ನಾಲೂರು ಸಮೀಪದ ಹೊಂಡದಲ್ಲಿ ಹಾಕಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ....
ಆಲ್ಕೊಳದ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು !
ಶಿವಮೊಗ್ಗ : ನಗರದ ಅಲ್ಕೊಳದ ಸಮೀಪ ಇರುವ ಭಾರತೀಯ ಆಹಾರ ನಿಗಮದ ಕಚೇರಿಯ ಮುಂಭಾಗದ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಅವಘಡದ ನಂತರ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ, ಕಾರಿನಲ್ಲಿದವರಿಗೂ ಯಾವುದೇ ತೊಂದರೆಯಾಗಿಲ್ಲ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಅನಾಹುತದಿಂದ ಪಾರಾಗಿದ್ದಾರೆ. ಅವಘಡದ ನಂತರ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯ...
ಕಣ್ಮನ ಸೆಳೆಯುತ್ತಿದೆ ವಿಶ್ವ ವಿಖ್ಯಾತ ಜೋಗ ಜಲಪಾತ ! ಜೋಗದ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು !
ಶಿವಮೊಗ್ಗ : ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ….. ಜೋಗ ಜಲಪಾತವನ್ನು ನೋಡುವಾಗಲೆಲ್ಲ ಕನ್ನಡದ ಖ್ಯಾತ ಕವಿ ನಿಸಾರ್ ಅಹ್ಮದ್ ಅವರ ನಿತ್ಯೋತ್ಸವ ಕವನದ ಸಾಲುಗಳು ಕನ್ನಡಿಗರಿಗೆ ನೆನಪಾಗುತ್ತವೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತ ರುದ್ರ ರಮಣೀಯವಾಗಿ ಹರಿಯುತ್ತಿದ್ದು ಜೋಗದ ಸೌಂದರ್ಯಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ಹಾಲ್ನೊರೆಯಂತೆ ಮೇಲಿಂದ ಕೆಳಭಾಗಕ್ಕೆ ಧುಮ್ಮಿಕ್ಕುತ್ತಿರುವ ದೃಶ್ಯ ಮನಸ್ಸಿಗೆ ಮುದ...