ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿ ಇರುವಂತಹ ಮಾಂಸಹಾರ ತಿನಿಸು ಅಂಗಳ ( ನಾನ್ ವೆಜ್ ಫುಡ್ ಕೋರ್ಟ್ ) ನಲ್ಲಿ ಆಹಾರ ಸುರಕ್ಷತ ಮತ್ತು ಗುಣಮಟ್ಟ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತ ಮತ್ತು ಗುಣಮಟ್ಟ ಅಧಿಕಾರಿಗಳು ದಾಳಿ ನಡೆಸಿ ಸ್ವಚ್ಛತೆ ಕಾಣದೆ ಇರುವುದು, ವೈದ್ಯಕೀಯ ತಪಾಸಣೆ ಇಲ್ಲದಿರುವುದು.ಆರ್ ಒ ವಾಟರ್ ಅಳವಡಿಸದೆ ಇರುವುದು, ಆಹಾರಕ್ಕೆ ಕಲರ್ ಬೆರೆಸುತ್ತಿರುವುದು ಸಂಬಂಧಿಸಿದಂತೆ ಸುಮಾರು 15 ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ ಐಎಸ್ಐ ಮಾರ್ಕಿನ ಕಲರ್ ಗಳನ್ನ ಬಳಸಲು ಅವಕಾಶವಿದ್ದರೂ,...
Author: Jagadeesh Shipra (Jagadeesh Shipra)
ಶಿವಮೊಗ್ಗ ಪೊಲೀಸರಿಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಸನ್ಮಾನ !
ಶಿವಮೊಗ್ಗ : ಜಿಲ್ಲೆಯ ಸಾಧಕ ಪೊಲೀಸರಿಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ರೌಂಡ್ ಟೇಬಲ್ 166ಮತ್ತು 266 ಹಾಗೂ ಮಲ್ನಾಡ್ ಮಾಸ್ಟರ್ 212 ಸಂಯುಕ್ತಾಶ್ರಯದೊಂದಿಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜೂನ್ 22 ಶನಿವಾರ ಸಂಜೆ 5 ಗಂಟೆಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆಗಮಿಸಲಿದ್ದು, ರೌಂಡ್ ಟೇಬಲ್ ವಲಯ 13 ರ...
ಶಿವಮೊಗ್ಗ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಕವಿತಾ ಯೋಗಪ್ಪನವರ್ ಅಧಿಕಾರ ಸ್ವೀಕಾರ!
ಶಿವಮೊಗ್ಗ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕವಿತಾ ಯೋಗಪ್ಪನವರ್ ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ವರ್ಗಾವಣೆಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕೆಲಸ ಮಾಡಿದ್ದ ಮಾಯಣ್ಣ ಗೌಡ ನೂತನ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಕವಿತಾ ಯೋಗಣ್ಣನವರಿಗೆ ಹೂವಿನ ಬೊಕ್ಕೆ ಕೊಟ್ಟು ಸ್ವಾಗತಿಸಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಪಾಲಿಕೆಯ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದ ಮಾಯಣ್ಣ ಗೌಡ ಶಿವಮೊಗ್ಗ ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ...
ಸೇನೆ ಸೇರ ಬಯಸುವ ಯುವಕರಿಗೆ ಇಲ್ಲಿದೆ ಸುವರ್ಣ ಅವಕಾಶ ! ಉಚಿತ ತರಬೇತಿಗೆ ಅರ್ಜಿ ಆಹ್ವಾನ !
ಉದ್ಯೋಗ : ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದ ಯುವಕರಿಗಾಗಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ತರಬೇತಿಗಾಗಿ ಅರ್ಹಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ (ಬಾಲಕರಿಗೆ ಮಾತ್ರ). ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಗೊಳಿಸಿರುವ ಸಾಮಾನ್ಯ ಅರ್ಹತೆಗಳು: ಅಭ್ಯರ್ಥಿ ಮತ್ತು...
ಜಿಮ್ ನಲ್ಲಿ ರಶ್ಮಿಕಾ ಮಂದಣ್ಣ ಸಕ್ಕತ್ ವರ್ಕೌಟ್ ! ಜಿಮ್ ನಿಂದ ಹೊರ ಬಂದ ರಶ್ಮಿಕಾ ಸಖತ್ ಸ್ಮೈಲ್ !
ಸಿನಿಮಾ : ಕನ್ನಡ ಸಿನಿಮಾ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತನ್ನ ನಟನೆ ಮೂಲಕ ನ್ಯಾಶನಲ್ ಕ್ರಶ್ ಆಗಿ ಕ್ರೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಜಿಮ್ ಡ್ರೆಸ್ ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ರಶ್ಮಿಕಾ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡಿದಂತೆ ಕಾಣ್ತಿದೆ. ನಟಿ ಜಿಮ್ ಶೂಟ್ ಬೆವರಿನಿಂದ ಒದ್ದೆ ಆಗಿದೆ. ಜಿಮ್ ನಿಂದ ಹೊರ ಬಂದ ರಶ್ಮಿಕಾ ಸಖತ್ ಸ್ಮೈಲ್ ಕೊಟ್ಟಿದ್ದಾರೆ. ನಟಿಯ ಸ್ಮೈಲ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶ್ರೀವಲ್ಲಿ...
ಶಿವಮೊಗ್ಗ : ಫೇಸ್ಬುಕ್ ಲವ್ ! 26 ರ ಯುವಕನ ಜೊತೆ 48ರ ಆಂಟಿಯ ಪ್ರೀತಿ ! ಲವ್ ನಂಬಿದವಳು ಕೊಲೆಯಾಗಿ ಹೋದಳು ! ಮರ್ಡರ್ ಮಿಸ್ಟ್ರಿಯನ್ನು ಪೊಲೀಸರು ಭೇದಿಸಿದ್ದು ಹೇಗೆ ?
ಶಿವಮೊಗ್ಗ : ಒಂದು ಚಂದದ ಮುಖ, ಒಂದಿಷ್ಟು ಲೈಕ್ಸ್‌ಗಳಿಂದ ಶುರುವಾಗಿ ಇನ್‌ಬಾಕ್ಸ್ ನಲ್ಲಿ ಪರಿಚಯವಾಗಿ ಪರಸ್ಪರ ವಾಟ್ಸ್‌ಆ್ಯಪ್ ತನಕ ಹೋಗುವ ವೇಳೆಗೆ ಇಬ್ಬರ ನಡುವೆ ಒಂದು ಖಾಸಗಿ ಬಂಧ ಬೆಳೆಯುತ್ತದೆ. ನಮಗೆ ಅರಿವಿಲ್ಲದೆಯೇ ಫೇಸ್‌ಬುಕ್ನಲ್ಲಿ ತಮ್ಮತನದ ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳಲು ಹೋಗುತ್ತೇವೆ. ಚಂದ ಚಂದದ ಫೋಟೋಗಳನ್ನು ಹರಿಬಿಡುತ್ತೇವೆ. ಅದಕ್ಕೊಂದಿಷ್ಟು ಲೈಕ್, ಕಾಮೆಂಟ್‌ಗಳನ್ನು ನಿರೀಕ್ಷಿಸುತ್ತೇವೆ. ಒಂದಿಷ್ಟು ಜನ ಇದಕ್ಕಂತಲೇ ಕಾದು ಕೂತಿರುತ್ತಾರೆ. ಕಾಮೆಂಟ್‌ಗಳಲ್ಲಿ ಒಂದಿಷ್ಟು ಮೋಡಿ ಮಾಡಿ ಬಿಡುತ್ತಾರೆ. ಚಂದದ ಹುಡುಗ ಅಥವಾ ಹುಡುಗಿಯರ ಹಿಂದೆ ಬಿದ್ದು ಬಿಡುತ್ತಾರೆ. ಮೊದಲ...
MURDER : ಆಯನೂರು ಗೇಟ್ ಬಳಿ ವ್ಯಕ್ತಿಯ ಬರ್ಬರ ಹತ್ಯೆ !
ಶಿವಮೊಗ್ಗ : ನಗರದ ಆಯನೂರು ಗೇಟ್ ಸಮೀಪ ಇರುವ ಸ್ಮಶಾನದಲ್ಲಿ ವ್ಯಕ್ತಿಯೋಬ್ಬನನ್ನ ಮಾರಕಾಸ್ತ್ರಗಳಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೆನ್ನೆ ರಾತ್ರಿ ನಡೆದಿದೆ. ಆಯನೂರು ಗೇಟ್ ಸಮೀಪದ ಸ್ಮಶಾನದಲ್ಲಿ ಇಬ್ಬರು ಸ್ನೇಹಿತರು ಕುಡಿಯಲು ಬಂದಿದ್ದರು, ಕುಡಿಯಲು ಕರೆದು ಕುಡಿದ ನಶೆಯಲ್ಲಿ ಗಲಾಟೆ ತೆಗೆದು ಇಬ್ಬರೂ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವಿಕ್ರಂ ಎನ್ನುವ ವ್ಯಕ್ತಿ ರಾಜುನಾಯ್ಕ್ ಅಲಿಯಾಸ್ ರಾಜು ಎಂಬ ಆತನನ್ನು ಮಾರಕಾಸ್ತ್ರಗಳಿಂದ ಚುಚ್ಚಿ...
ಇತಿಹಾಸ ಪುಟ ಸೇರಿದ ಮಲೆನಾಡ ರಾಜಕಾರಣದ ಸರಳ, ಸಜ್ಜನಿಕೆಯ ‘ಜಂಟಲ್ ಮ್ಯಾನ್`
ಶಿವಮೊಗ್ಗ : ಐತಿಹಾಸಿಕವಾಗಿ ಮಲೆನಾಡು ರಾಜ್ಯ ರಾಜಕೀಯದ ಪವರ್ ಸೆಂಟರ್ ಆಗಿ ಪ್ರಾಬಲ್ಯ ಸಾಧಿಸಿದೆ, ನಾಲ್ಕು ಮುಖ್ಯಮಂತ್ರಿಗಳು ಮತ್ತು ಒಬ್ಬ ಉಪಮುಖ್ಯಮಂತ್ರಿಯನ್ನು ಕೊಟ್ಟಿರುವ ಮಲೆನಾಡು ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಹೆಸರನ್ನ ಮಾಡಿದೆ. ಮಲೆನಾಡಿನ ರಾಜಕೀಯ ಹಾಗೂ ರಾಜಕಾರಣಿಗಳು ಜನರ ಮನಸ್ಥಿತಿ ಪರಿಸ್ಥಿತಿಗಳನ್ನ ಅರ್ಥೈಸಿಕೊಂಡು, ಸಾಮಾನ್ಯ ಜನರ ಸಮಸ್ಯೆಗಳಿಗೆ ಧ್ವನಿ ಯಾಗುತ್ತಾ ಹೋರಾಟದ ಹಿನ್ನೆಲೆ ಮಲೆನಾಡಿನ ರಾಜಕಾರಣ ಬೆಳೆದು ಬಂದಿದೆ ಅದಕ್ಕೆ ಭಾನು ಪ್ರಕಾಶ್ ಅವರು ಕೂಡ ಸಾಕ್ಷಿಯಾಗಿದ್ದಾರೆ, ತಮ್ಮ ಹೋರಾಟದ ಮುಖಾಂತರವೇ ರಾಜಕಾರಣಿಗಳಿಗೆ ತಮ್ಮ ತಪ್ಪನ್ನು...
BIG BREAKING NEWS : ಪ್ರತಿಭಟನೆ ವೇಳೆ ಬಿಜೆಪಿ ಮುಖಂಡ ಭಾನುಪ್ರಕಾಶ್ ಗೆ ಹೃದಯಘಾತದಿಂದ ನಿಧನ !
ಶಿವಮೊಗ್ಗ : ಬೆಲೆ ಏರಿಕೆ ವಿರುದ್ಧ ಶಿವಮೊಗ್ಗದಲ್ಲಿ ಬಿಜೆಪಿ ನಡೆಸ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ನಿಧನರಾಗಿದ್ದಾರೆ. ಶಿವಮೊಗ್ಗದಲ್ಲಿಂದು ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದನ್ನ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸ್ತಿತ್ತು. ವಿಭಿನ್ನ ರೀತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಷಣದ ಮಾಡಿದ ಮನೆಗೆ ಹೊರಟಿದ್ದ ಭಾನುಪ್ರಕಾಶ್‌ರವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುಪ್ರಕಾಶ್ ಸಾವನ್ನಪ್ಪಿದ್ದಾರೆ ಎಂಬ...
ಸರ್ಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ ! ಕುದುರೆ ಏರಿ ಬಂದ ಡಿ ಎಸ್ ಅರುಣ್ !
ಶಿವಮೊಗ್ಗ : ಪೆಟ್ರೋಲ್, ಡೀಸೆಲ್ ಬೆಲೆ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಕೈಗೊಂಡಿದೆ. ಇಂದು ಶಿವಮೊಗ್ಗದ ಗೋಪಿ ವೃತ್ತದಲ್ಲಿ ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ಇಂದು ಶಿವಮೊಗ್ಗ ಬಿಜೆಪಿಯಿಂದ ನಗರದ ಐದು ಕಡೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ವಿರೋಧಿಸಿ ವಿನೂತನ ಪ್ರತಿಭಟನೆ ನಡೆಸಿದರು, ಜೈಲ್ ರಸ್ತೆಯಲ್ಲಿ ಯುವಮೋರ್ಚಾದ ಕಾರ್ಯಕರ್ತರು ಸಿಎಂ ಸುಳ್ಳ ಡಿಸಿಎಂ ಕಳ್ಳ, ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ ಎಂಬ ಘೋಷಣೆ...