Home » Ankana

Category: Ankana

Post
ಕಾರ್ಗಿಲ್ ವಿಜಯ ದಿವಸ್: ಶೌರ್ಯ,ಸಮರ, ಬದ್ಧತೆ ಮತ್ತು ರಾಷ್ಟ್ರೀಯತೆಯ ಪ್ರತೀಕ

ಕಾರ್ಗಿಲ್ ವಿಜಯ ದಿವಸ್: ಶೌರ್ಯ,ಸಮರ, ಬದ್ಧತೆ ಮತ್ತು ರಾಷ್ಟ್ರೀಯತೆಯ ಪ್ರತೀಕ

ಪ್ರತಿ ವರ್ಷ ಜುಲೈ 26 ರಂದು ಆಚರಿಸಲ್ಪಡುವ ಕಾರ್ಗಿಲ್ ವಿಜಯ್ ದಿವಸ್, 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಗಳಿಸಿದ ಭವ್ಯ ವಿಜಯವನ್ನು ಸ್ಮರಿಸುತ್ತದೆ. ಇದು ಕೇವಲ ಸೈನಿಕರ ವಿಜಯವಲ್ಲ, ಭಾರತದ ಸೈನಿಕರ ಅಚಲ ಇಚ್ಛಾಶಕ್ತಿ, ಶೌರ್ಯ ಮತ್ತು ಬಲಿದಾನದ ಸಂಕೇತವೂ ಹೌದು. ಸಾರ್ವಜನಿಕ ಸೇವಾ ಆಕಾಂಕ್ಷಿಗಳಿಗೆ ಇದು ರಾಷ್ಟ್ರೀಯ ಏಕತೆ, ಭೌಗೋಳಿಕ ಅಖಂಡತೆ ಹಾಗೂ ಸ್ಮಾರ್ತಿಕ ಸಿದ್ಧತೆಯ ಮಹತ್ವವನ್ನು ನೆನಪಿಸುವ ದಿನ. ಐತಿಹಾಸಿಕ ಹಿನ್ನೆಲೆ: 1999 ರ ಆರಂಭದಲ್ಲಿ, ಪಾಕಿಸ್ತಾನದ ಸೈನಿಕರು ಹಾಗೂ...

Post
ಮನೋಚರಿತ್ರ – ಭಯದಿಂದ ಬುದ್ದಿ: ಯೋಗೇಶ್ ಮಾಸ್ಟರ್

ಮನೋಚರಿತ್ರ – ಭಯದಿಂದ ಬುದ್ದಿ: ಯೋಗೇಶ್ ಮಾಸ್ಟರ್

ಭಯ ಇಲ್ಲಾಂದ್ರೆ ಮಕ್ಕಳು ಬುದ್ದಿ ಕಲಿಯುವುದು ಹೇಗೆ? ಅಂತ ಭಯ ಹಿಡಿಸುವುದರ ಮೂಲಕ ಅನೇಕ ಜನ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ನಾನಾ ರೀತಿಗಳಲ್ಲಿ ಹೆದರಿಸುತ್ತಾರೆ, ಬೆದರಿಸುತ್ತಾರೆ. ಮಕ್ಕಳಿಗೆ ಯಾವುದೇ ರೀತಿಯಲ್ಲಿ ಭಯದಿಂದ ಅವರಿಗೆ ಬುದ್ದಿ ಕಲಿಸಲು ಅಥವಾ ತಮ್ಮ ಅಧೀನಕ್ಕೆ ತಂದುಕೊಳ್ಳಲು ಯತ್ನಿಸಿದರೆ ಖಂಡಿತವಾಗಿ ಅದು ಅಲ್ಪ ಕಾಲದ ವಿಧೇಯತೆಯಷ್ಟೇ. ಆ ಹೊತ್ತಿಗೆy ಅವರು ಅಧೀನರಾಗುತ್ತಾರೆ, ಹೇಳಿದ ಮಾತು ಕೇಳುತ್ತಾರೆ. ಆದರೆ ಮಕ್ಕಳ ದೀರ್ಘಕಾಲದ ಬೆಳವಣಿಗೆಗೆ, ಮಾನಸಿಕ ಆರೋಗ್ಯಕ್ಕೆ ಸಮಸ್ಯೆಯಾಗುವುದು ಮಾತ್ರವಲ್ಲದೇ ಈ ವಯಸ್ಕರ ಪ್ರಪಂಚವನ್ನು...

Post
ಸದ್ದಿಲ್ಲದೆ ಹೆಚ್ಚುತ್ತಿದೆ ಶಬ್ದ ಮಾಲಿನ್ಯ!

ಸದ್ದಿಲ್ಲದೆ ಹೆಚ್ಚುತ್ತಿದೆ ಶಬ್ದ ಮಾಲಿನ್ಯ!

ಇಂದು ಮಹಾನಗರಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಶಬ್ದಮಾಲಿನ್ಯವೂ ಒಂದು. ವಾಹನಗಳ ಕರ್ಕಶ ಶಬ್ದ, ವಾಹನಗಳ ಅನಗತ್ಯ ಹಾರ್ನ್ ಶಬ್ದ, ಕೈಗಾರಿಕೆಗಳ ಶಬ್ದ, ಧ್ವನಿವರ್ಧಕ ಗಳ ಶಬ್ದ, ವಿವಿಧ ಸಂದರ್ಭಗಳಲ್ಲಿ ಸುಡುವ ಪಟಾಕಿ ಶಬ್ದ, ಮೆರವಣಿಗೆ ಮತ್ತು ಉತ್ಸವಗಳಲ್ಲಿ ಮೈಕ್, ಡಿ.ಜೆ.ಗಳ ಶಬ್ದ ಇವುಗಳ ಜೊತೆಗೆ ಇತ್ತೀಚೆಗೆ ಬೀದಿ ಬದಿ, ಕೇರಿ ಕೇರಿ ಸಂಚರಿಸುವ ತಳ್ಳು ಗಾಡಿಯವರ ಸ್ವರ ಮುದ್ರಿತ ಮೈಕಿನ ಶಬ್ದ ಹೀಗೆ ಹತ್ತು ಹಲವಾರು ಶಬ್ದಗಳ ನಡುವೆ ನಾಗರೀಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಇದನ್ನು ಓದಿ: ಶಿವಮೊಗ್ಗ ರೈಲು...

Post
ಏಡಿ ರುಚಿಯನ್ನು ಬಲ್ಲವರೆ ಬಲ್ಲವರು…!

ಏಡಿ ರುಚಿಯನ್ನು ಬಲ್ಲವರೆ ಬಲ್ಲವರು…!

ಏಡಿ, ಕಾರೇಡಿ @ ಕಲ್ಲೇಡಿ (BLACK CRAB) ತಿನ್ನಲು ಬಲುರುಚಿ. ಅದರಲ್ಲೂ ಆ ಕೊಂಬುಗಳ ಮಧ್ಯೆ ಇರುವ ಬಿಳಿ ಹಳದಿ ಮಿಶ್ರಿತ ಬಣ್ಣದ ಮಾಂಸ, ಆ ಕೊಂಬು ತುದಿಯಿಂದ ಚೀಪಿದಾಗ ಆಹಾ ಎಂತಹ ರುಚಿ! ಬಣ್ಣಿಸಲು ಪದಗಳೇ ಸಾಲದು. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಬಹಳ ವರ್ಷಗಳ ನಂತರ ಒಳ್ಳೆಯ ಕಾರೇಡಿಯನ್ನು ತಿಂದೆ. ಹಕ್ಕಿ ಪಿಕ್ಕಿ ಕ್ಯಾಂಪಿನ ಪರಿಚಿತ ಪುನ್ನಿಗ ಎಂಬುವವರು ತಂದುಕೊಟ್ಟಿದ್ದರು. ಈ ಏಡಿ...

Post
ಕೆಂಪು ಬಸ್ಸಿನಲ್ಲಿ ಟಿಕೇಟು ಖರೀದಿಸಿ ಪ್ರಯಾಣಿಸಲು ನಾಯಿಗಳಿಗೂ ಅವಕಾಶ!

ಕೆಂಪು ಬಸ್ಸಿನಲ್ಲಿ ಟಿಕೇಟು ಖರೀದಿಸಿ ಪ್ರಯಾಣಿಸಲು ನಾಯಿಗಳಿಗೂ ಅವಕಾಶ!

ಸಾರಿಗೆ ನಿಗಮದ ಈ ನಿರ್ಧಾರ ಎಷ್ಟರಮಟ್ಟಿಗೆ ಸಮಂಜಸ? ಮಾಹಿತಿ ಹಕ್ಕು ಅರ್ಜಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ನೀಡಿರುವ ಮಾಹಿತಿಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಸಾಕು ಪ್ರಾಣಿಗಳನ್ನು ಪ್ರಯಾಣ ಟಿಕೇಟು ಖರೀದಿಸಿ ತೆಗೆದು ಕೊಂಡು ಹೋಗಲು ಅವಕಾಶ ಇದೆ ಎಂದು ಹೇಳಿರುತ್ತಾರೆ. ನಾಯಿಯನ್ನು ಒಬ್ಬ ವಯಸ್ಕರ ಪ್ರಯಾಣಿಕರಂತೆ ಪರಿಗಣಿಸಿ ದರ ವಿಧಿಸಿದ್ದರೆ ಮೊಲ, ನಾಯಿಮರಿ, ಬೆಕ್ಕು ಪಂಜರದಲ್ಲಿರುವ ಪಕ್ಷಿಗೆ ಮಕ್ಕಳ ದರ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಫ್ರಿಜ್, ಬೈಸಿಕಲ್, ವಾಷಿಂಗ್...

Post
“ಪಿತಾಮಹ ಬೆಂಜಮಿನ್ ಲೂಯಿ ರೈಸ್: ಬಿಳಿ ಕನ್ನಡಿಗನ ನೆನಪಿನಲಿ”

“ಪಿತಾಮಹ ಬೆಂಜಮಿನ್ ಲೂಯಿ ರೈಸ್: ಬಿಳಿ ಕನ್ನಡಿಗನ ನೆನಪಿನಲಿ”

‘ಕನ್ನಡ-ಇಂಗ್ಲೀಷ್ ನಿಘಂಟ’ನ್ನು ಕಿಟೆಲ್ ಬರೆಯುವಾಗ ಅದರ ಮಹತ್ವವನ್ನು ಅರಿತ ಮಹನೀಯರೊಬ್ಬರು ಮೈಸೂರು ಸರ್ಕಾರದ ವತಿಯಿಂದ ಮುಂಗಡವಾಗಿ ಐದು ಸಾವಿರ ರೂಪಾಯಿ ನೀಡಿ. ೩೦೦ ಪ್ರತಿ ಕೊಳ್ಳುವಂತೆ ಪ್ರತಿಪಾದಿಸಿದ್ದಲ್ಲದೆ. ಅಂದಿನ ಚೀಫ್ ಕಮಿಷನರ್ ಗೆ ಪತ್ರವೊಂದನ್ನು ಬರೆದಿದ್ದರಂತೆ ಆ ಪತ್ರದಲ್ಲಿ ಹೀಗಿತ್ತು. ” ಸರ್ಕಾರವು ಕೇವಲ ಈ ನಿಘಂಟು ಮಾತ್ರವಲ್ಲದೆ ಕನ್ನಡದ ಪ್ರಾಚೀನ ಕೃತಿಗಳನ್ನು ಮುದ್ರಿಸಲು ಒಂದು ಶಾಶ್ವತವಾದ ನಿಧಿಯನ್ನು ಸ್ಥಾಪಿಸಬೇಕು. ಈ ರೀತಿಯ ಅನೇಕ ಕೃತಿಗಳು ಈಗ ವಿನಾಶದ ಅಂಚಿನಲ್ಲಿದ್ದು ದೇಶೀಯ ಸರ್ಕಾರವು ಸ್ಥಾಪನೆಯಾಗುವ ವೇಳೆಗೆ ಬಹುಶಃ...

Post
ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ವಿಶೇಷ ವರದಿ: ಇಸ್ರೇಲ್-ಇರಾನ್ ಸಂಘರ್ಷದ ಜ್ವಾಲೆ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ, ಶಿವಮೊಗ್ಗದ ಮೇಲೆ ಏನು ಪರಿಣಾಮ?

ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ವಿಶೇಷ ವರದಿ: ಇಸ್ರೇಲ್-ಇರಾನ್ ಸಂಘರ್ಷದ ಜ್ವಾಲೆ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ, ಶಿವಮೊಗ್ಗದ ಮೇಲೆ ಏನು ಪರಿಣಾಮ?

ನಮಸ್ಕಾರ ಶಿವಮೊಗ್ಗ ಎಕ್ಸ್‌ಪ್ರೆಸ್ ನ್ಯೂಸ್ ವೀಕ್ಷಕರಿಗೆ. ಕಳೆದ ಕೆಲವು ವಾರಗಳಿಂದ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಇಡೀ ಜಗತ್ತಿನ ಚಿತ್ತವನ್ನು ಸೆಳೆದಿದೆ. ದಶಕಗಳ ಕಾಲದ ವೈರತ್ವವನ್ನು ಹೊಂದಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಭೀಕರ ಯುದ್ಧದ ರೂಪ ಪಡೆದುಕೊಂಡಿದೆ. ಈ ಸಂಘರ್ಷ ಕೇವಲ ಎರಡು ದೇಶಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಜಾಗತಿಕ ರಾಜಕೀಯ, ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಆತಂಕ ಸೃಷ್ಟಿಸಿದೆ. ಈ ಯುದ್ಧದ ಮೂಲ ಕಾರಣಗಳೇನು, ಇತ್ತೀಚಿನ ಬೆಳವಣಿಗೆಗಳು ಯಾವುವು ಮತ್ತು...

Post
ವಿಶೇಷ ಲೇಖನ: ಮಧ್ಯ ಪ್ರದೇಶದ ಸೆಕ್ಯೂರಿಟಿ ಗಾರ್ಡ್, ಈಗ ಗಣಿತದ ಮಾಸ್ಟರ್ ! 25 ವರ್ಷಗಳ ಕಠಿಣ ಪ್ರಯತ್ನ, 23 ಬಾರಿ ವಿಫಲ , ಇದು ಮಧ್ಯ ಪ್ರದೇಶದ  ಸೆಕ್ಯೂರಿಟಿ ಗಾರ್ಡ್ ಒಬ್ಬರ ಯಶಸ್ವಿಗಾಥೆ.

ವಿಶೇಷ ಲೇಖನ: ಮಧ್ಯ ಪ್ರದೇಶದ ಸೆಕ್ಯೂರಿಟಿ ಗಾರ್ಡ್, ಈಗ ಗಣಿತದ ಮಾಸ್ಟರ್ ! 25 ವರ್ಷಗಳ ಕಠಿಣ ಪ್ರಯತ್ನ, 23 ಬಾರಿ ವಿಫಲ , ಇದು ಮಧ್ಯ ಪ್ರದೇಶದ  ಸೆಕ್ಯೂರಿಟಿ ಗಾರ್ಡ್ ಒಬ್ಬರ ಯಶಸ್ವಿಗಾಥೆ.

ವಿಶೇಷ ಲೇಖನ: ಮಧ್ಯ ಪ್ರದೇಶದ ಸೆಕ್ಯೂರಿಟಿ ಗಾರ್ಡ್, ಈಗ ಗಣಿತದ ಮಾಸ್ಟರ್ ! 25 ವರ್ಷಗಳ ಕಠಿಣ ಪ್ರಯತ್ನ, 23 ಬಾರಿ ವಿಫಲ , ಇದು ಮಧ್ಯ ಪ್ರದೇಶದ ಸೆಕ್ಯೂರಿಟಿ ಗಾರ್ಡ್ ಒಬ್ಬರ ಯಶಸ್ವಿಗಾಥೆ. ಮಧ್ಯಪ್ರದೇಶದ ಜಬಲ್‌ಪುರದ 56 ವರ್ಷದ ಸೆಕ್ಯೂರಿಟಿ ಗಾರ್ಡ್ ರಾಜ್‌ಕರನ್ 25 ವರ್ಷಗಳ ಕಠಿಣ ಪರಿಶ್ರಮದ ನಂತರ ಗಣಿತದಲ್ಲಿ ಎಂಎಸ್‌ಸಿ ಓದುವ ಕನಸನ್ನು ಕೊನೆಗೂ ಮಾಡಿಕೊಂಡಿದ್ದಾರೆ . 23 ಬಾರಿ ವಿಫಲವಾಗಿದ್ದರೂ ಕೂಡ ರಾಜ್‌ಕರನ್ ಎಂದಿಗೂ ತಮ್ಮ ಛಲ ಬಿಡಲಿಲ್ಲ ಮತ್ತು ಎರಡು...