ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ. ಶಿವಮೊಗ್ಗ : 2023-2024ನೇ ಸಾಲಿನ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸ್ವಯಂ ಉದ್ಯೋಗ ನೇರಸಾಲ ಯೋಜನೆ,ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದೊಂದಿಗೆ),ಭೂ ಒಡೆತನ ಯೋಜನೆ,ಗಂಗಾ ಕಲ್ಯಾಣ ಯೋಜನೆ, ಸೇರಿದಂತೆ ವಿವಿಧ...
Category: District News
ಮಕ್ಕಳಿಗೆ ಯುಕ್ತ ಶಿಕ್ಷಣ ನೀಡಿ ಬೆಳೆಸಿದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ – ಶ್ರೀ ಸಿ.ಆರ್. ಪರಮೇಶ್ವರಪ್ಪ
ಮಕ್ಕಳಿಗೆ ಯುಕ್ತ ಶಿಕ್ಷಣ ನೀಡಿ ಬೆಳೆಸಿದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ – ಶ್ರೀ ಸಿ.ಆರ್. ಪರಮೇಶ್ವರಪ್ಪ, ಮಕ್ಕಳು ಈ ರಾಷ್ಟ್ರದ ಅಮೂಲ್ಯ ಸಂಪತ್ತಾಗಿದ್ದು, ಅವರ ಮೇಲೆ ದೌರ್ಜನ್ಯವೆಸಗುವುದು, ಬಾಲಕಾರ್ಮಿಕರಾಗಿ ದುಡಿಸುವುದು ಹಾಗೂ ಶಿಕ್ಷಣದಿಂದ ವಂಚಿತರನ್ನಾಗಿಸುವುದು ಮುಂತಾದ ಸಾಮಾಜಿಕ ಪಿಡುಗುಗಳಿಂದ ಮುಕ್ತಗೊಳಿಸಿ, ಮಕ್ಕಳ ಹಕ್ಕುಗಳ ಕುರಿತು ಸಮಾಜದಲ್ಲಿ ಅರಿವನ್ನು ಮೂಡಿಸಿ, ಈ ದೇಶದ ಎಲ್ಲಾ ಮಕ್ಕಳಿಗೆ ಸಮಾನ ಹಾಗೂ ಗುಣಮಟ್ಟದ ಶೈಕ್ಷಣಿಕ ಅವಕಾಶ ನೀಡುವುದರ ಮೂಲಕ ದೇಶದ ಉತ್ತಮ ಮಾನವ ಸಂಪನ್ಮೂಲವನ್ನಾಗಿ ಬೆಳೆಸಿದಾಗ ಮಾತ್ರ ಈ ರಾಷ್ಟçದ...
ಶಿವಮೊಗ್ಗದಲ್ಲಿ ಲಾಡ್ಜ್ ಮೇಲೆ ಪೊಲೀಸರ ದಾಳಿ !
ಶಿವಮೊಗ್ಗದಲ್ಲಿ ಲಾಡ್ಜ್ ಮೇಲೆ ಪೊಲೀಸರ ದಾಳಿ ! ಶಿವಮೊಗ್ಗ : ನಗರದ ಕೆ ಆರ್ ಪುರಂ ರಸ್ತೆಯಲ್ಲಿರುವ ಬ್ಲೂ ಕ್ರಿಸ್ಟಲ್ ಲಾಡ್ಜ್ ಮೇಲೆ ದಾಳಿ ನಡೆದಿದೆ. ಈ ಕಟ್ಟಡವು ನಿವೃತ್ತ ಪೊಲೀಸ್ ಅಧಿಕಾರಿ ರಹಮತ್ ಅಲಿ ಅವರಿಗೆ ಸೇರಿದ್ದಾಗಿದ್ದು, ಮಂಗಳೂರು ಮೂಲದ ಹರೀಶ್ ಶೆಟ್ಟಿ ಎಂಬುವವರು ಲಾಡ್ಜ್ ನಡೆಸುತ್ತಿದ್ದರು. ಡಿವೈಎಸ್ಪಿ ಬಾಲರಾಜ್,ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ರವಿ ಸಂಗನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅನೈತಿಕ ಚಟುವಟಿಕೆ ಹಿನ್ನೆಲೆ ಈ ದಾಳಿ ನಡೆದಿದ್ದು, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ....
ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿ – ಡಾ. ಕೆ.ಬಿ.ಧನಂಜಯ
ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿ – ಡಾ. ಕೆ.ಬಿ.ಧನಂಜಯ ಶಿವಮೊಗ್ಗ: ಮಕ್ಕಳು ವಿದ್ಯಾಭ್ಯಾಸದ ಜತೆಯಲ್ಲಿ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸುವಂತೆ ಪೋಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ಮಕ್ಕಳ ಸರ್ವತೋಮುಖ ಏಳಿಗೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪಾಲ್ಗೊಳ್ಳುವಿಕೆ ಸಹಕಾರಿಯಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಕೆ.ಬಿ.ಧನಂಜಯ ಹೇಳಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಲಿಟಲ್ ಎಲಿ ಶಾಲೆಯ ಮೂರನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕಡೆಗೆ ಮಾತ್ರ ಒತ್ತಡ ಹಾಕದೇ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ...
ಪಕ್ಷದಿಂದ ದೂರ ಉಳಿಯುತ್ತಿದ್ದಾರಾ ಕುಮಾರ್ ಬಂಗಾರಪ್ಪ ? ಸಾಲು ಸಾಲು ಬಿಜೆಪಿ ಕಾರ್ಯಕ್ರಮಗಳಲ್ಲಿ ಗೈರು ! ಅನುಮಾನ ಹುಟ್ಟಿಸುತ್ತಿದೆ ಕುಮಾರ್ ಬಂಗಾರಪ್ಪರವರ ನಡೆ !
ಪಕ್ಷದಿಂದ ದೂರ ಉಳಿಯುತ್ತಿದ್ದಾರಾ ಕುಮಾರ್ ಬಂಗಾರಪ್ಪ ? ಸಾಲು ಸಾಲು ಬಿಜೆಪಿ ಕಾರ್ಯಕ್ರಮಗಳಲ್ಲಿ ಗೈರು ! ಅನುಮಾನ ಹುಟ್ಟಿಸುತ್ತಿದೆ ಕುಮಾರ್ ಬಂಗಾರಪ್ಪರವರ ನಡೆ ! ಶಿವಮೊಗ್ಗ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೊರಬದಲ್ಲಿ ಸೋಲನ್ನು ಅನುಭವಿಸಿದ್ದರು, ಅದಾದಮೇಲೆ ಹಲವು ಸುದ್ದಿ,ದೃಶ್ಯ ಮಾಧ್ಯಮಗಳಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರುತ್ತಾರೆ, ಶಿವಮೊಗ್ಗದಿಂದ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಅದಾದ ಬಳಿಕ ಸಂಸದ ಬಿ ವೈ ರಾಘವೇಂದ್ರ...
ರೋಟರಿ ಶಾಲಾ ವಿದ್ಯಾರ್ಥಿ ಕು. ನಿಖಿಲ್ .ಪಿ, ರಾಷ್ಟ್ರಮಟ್ಟದ ಜೂ. ಕರಾಟೆ ಚಾಂಪಿಯನ್
ರೋಟರಿ ಶಾಲಾ ವಿದ್ಯಾರ್ಥಿ ಕು. ನಿಖಿಲ್ .ಪಿ, ರಾಷ್ಟ್ರಮಟ್ಟದ ಜೂ. ಕರಾಟೆ ಚಾಂಪಿಯನ್ ಶಿವಮೊಗ್ಗ: ಶಿವಮೊಗ್ಗ ರಾಜೇಂದ್ರನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ೬ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕು. ನಿಖಿಲ್ .ಪಿ, ಇವರು ಶಿವಮೊಗ್ಗ ವೆಂಕಟೇಶನಗರದ ಪೇಂಟರ್ ಶ್ರೀಯುತ ಪ್ರಸನ್ನಕುಮಾರ್ ಮತ್ತು ಶ್ರೀಮತಿ ಪಲ್ಲವಿ ದಂಪತಿಗಳ ಪುತ್ರ, ರಾಷ್ಟçಮಟ್ಟದ ಜೂನಿಯರ್ ಕರಾಟೆ ಸ್ಪರ್ಧೆಗಳಾದ ೨೦೨೩ರ ಮಹಾತ್ಮಗಾಂಧಿ ಮೆಮೋರಿಯಲ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್, ೫ನೇ ಆಲ್ ಇಂಡಿಯಾ ಇನ್‌ವಿಟೇಷನಲ್ ಕರಾಟೆ ಚಾಂಪಿಯನ್ ಶಿಪ್, ಬೆಂಗಳೂರು...
ಚಾಲಕನ ನಿಯಂತ್ರಣ ತಪ್ಪಿ ಪಿಳ್ಳಂಗಿರಿಯ ದೇವಸ್ಥಾನದ ಕಟ್ಟೆಗೆ ಡಿಕ್ಕಿ ಹೊಡೆದ ಕಾರು ! ತಪ್ಪಿದ ಭಾರಿ ಅನಾಹುತ !
ಚಾಲಕನ ನಿಯಂತ್ರಣ ತಪ್ಪಿ ಪಿಳ್ಳಂಗಿರಿಯ ದೇವಸ್ಥಾನದ ಕಟ್ಟೆಗೆ ಡಿಕ್ಕಿ ಹೊಡೆದ ಕಾರು ! ತಪ್ಪಿದ ಭಾರಿ ಅನಾಹುತ ! ಶಿವಮೊಗ್ಗ : ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಿಳ್ಳಂಗಿರಿಯ ಗಣಪತಿ ದೇವಸ್ಥಾನದ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಶಿವಮೊಗ್ಗದ ಕಡೆಯಿಂದ ಬರುತ್ತಿದ್ದ ಕಾರು ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಗ್ರಾಮದ ಗಣಪತಿ ದೇವಸ್ಥಾನದ ಕಟ್ಟೆಗೆ ಡಿಕ್ಕಿ ಹೊಡೆದಿದ್ದು. ಘಟನೆಯಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ, ಕಾರಿನಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಜನ ಇದ್ದರು ಎಂಬ ಮಾಹಿತಿ...
ಡಿಸೆಂಬರ್ 6 ರಿಂದ 10 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಸ್ವದೇಶಿ ಮೇಳ ! ಐದು ದಿನಗಳ ಕಾಲ ಪ್ರತಿ ದಿನ ಲಕ್ಕಿಡಿಪ್ ಮುಖಾಂತರ ಮಹಿಳೆಯರಿಗೆ ಸೀರೆ ಉಡುಗೊರೆ ! ಮೇಳಕ್ಕೆ ಮೈಸೂರು ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮನ
ಡಿಸೆಂಬರ್ 6 ರಿಂದ 10 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ ಬೃಹತ್ ಸ್ವದೇಶಿ ಮೇಳ ! ಐದು ದಿನಗಳ ಕಾಲ ಪ್ರತಿ ದಿನ ಲಕ್ಕಿಡಿಪ್ ಮುಖಾಂತರ ಮಹಿಳೆಯರಿಗೆ ಸೀರೆ ಉಡುಗೊರೆ ! ಮೇಳಕ್ಕೆ ಮೈಸೂರು ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮನ ಶಿವಮೊಗ್ಗ : ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದರ ಜೊತೆಗೆ ದೇಶಿಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಡಿಸೆಂಬರ್ 6 ರಿಂದ 10 2023ರ ವರೆಗೆ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಸ್ವದೇಶಿ...
ವಿಶ್ವ ಏಡ್ಸ್ ದಿನಾಚರಣೆ : ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು- ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್.
ವಿಶ್ವ ಏಡ್ಸ್ ದಿನಾಚರಣೆ : ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು- ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಶಿವಮೊಗ್ಗ :ಸಾರ್ವಜನಿಕರಲ್ಲಿ ಮತ್ತು ಯುವಕರಲ್ಲಿ ಏಡ್ಸ್ ಕುರಿತಂತೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ತಿಳಿಸಿದರು ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಮಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ...
ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಸಕಾಲದಲ್ಲಿ ನೇತ್ರ ತಪಾಸಣೆಯು ಅಗತ್ಯ
ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಸಕಾಲದಲ್ಲಿ ನೇತ್ರ ತಪಾಸಣೆಯು ಅಗತ್ಯ ಶಿವಮೊಗ್ಗ: ಕಣ್ಣುಗಳು ಮನುಷ್ಯದ ದೇಹದ ಪ್ರಮುಖ ಅಂಗ ಆಗಿದ್ದು, ಸಕಾಲದಲ್ಲಿ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ. ವರ್ಷಾ ಅಭಿಪ್ರಾಯಪಟ್ಟರು. ಕಸ್ತೂರ ಬಾ ಬಾಲಿಕಾ ಪದವಿಪೂರ್ವ ಕಾಲೇಜು ಹಾಗೂ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ...