ಆಯನೂರು, ಕುಂಸಿ, ಚೋರಡಿ, ಸುತ್ತ ಮುತ್ತಾ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ ಶಿವಮೊಗ್ಗ : ಕುಂಸಿ ಮೆಸ್ಕಾಂ ಉಪ ವಿಭಾಗ ಕುಂಸಿ ಮತ್ತು ಹಾರನಹಳ್ಳಿ ಲಿಂಕ್ ಲೈನ್ ಕಾಮಗಾರಿ ಇರುವು ಹಿನ್ನಲೆ ನಾಳೆ ದಿನಾಂಕ ಡಿ.1 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಕುಂಸಿ, ಜೋರಡಿ, ಬಾಳೆಕೊಪ್ಪ, ತುಪ್ಪರು, ಕೋಣೆಹೊಸೂರು, ಹೊರಬೈಲು, ಹಾರ್ನಳ್ಳಿ, ರಾಮ ನಗರ, ಮುದುವಾಲ, ಯಡವಾಲಾ ಕೊನಗವಳ್ಳಿ ಹಿಟ್ಟೂರು, ನಾರಾಯಣಪುರ, ರಟ್ಟೆಹಳ್ಳಿ, ಸುತ್ತು ಕೋಟೆ, ಆಯನೂರು, ಮಂಡಘಟ್ಟ, ಸೂಡೂರು, ಕೂಡಿ, ಮಲೆಶಂಕರ,...
Category: District News
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವೀರಯೋಧ ಪ್ರಾಂಜಲ್‌ಗೆ ನುಡಿನಮನ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವೀರಯೋಧ ಪ್ರಾಂಜಲ್‌ಗೆ ನುಡಿನಮನ ಶಿವಮೊಗ್ಗ: ಕ್ಯಾಪ್ಟನ್ ಪ್ರಾಂಜಲ್ ಸ್ಕೌಟ್ ಆಗಿ, ರೋವರ್ ಆಗಿ ವಿವಿಧ ಹಂತಗಳಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಾಂಜಲ್ ಇಂಜಿನಿಯರ್ ಪದವಿ ಹುದ್ದೆ ಬಿಟ್ಟು ದೇಶಸೇವೆಗಾಗಿ ಜೀವನ ಮುಡಿಪಿಟ್ಟರು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರೀ ಹೇಳಿದರು. ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ...
ಅತಿಥಿ ಉಪನ್ಯಾಸಕರ ಮುಷ್ಕರ : ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ, ತರಗತಿಗಳು ನಡೆಯುತ್ತಿಲ್ಲ – ವಿದ್ಯಾರ್ಥಿನಿಯರಿಂದ ಉಪವಿಭಾಗಧಿಕಾರಿಗಳಿಗೆ ಮನವಿ
ಅತಿಥಿ ಉಪನ್ಯಾಸಕರ ಮುಷ್ಕರ : ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ, ತರಗತಿಗಳು ನಡೆಯುತ್ತಿಲ್ಲ – ವಿದ್ಯಾರ್ಥಿನಿಯರಿಂದ ಉಪವಿಭಾಗಧಿಕಾರಿಗಳಿಗೆ ಮನವಿ ಸಾಗರ : ಅತಿಥಿ ಉಪನ್ಯಾಸಕರ ಮುಷ್ಕರದಿಂದ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ, ನಮ್ಮ ಕಲಿಕೆಗೆ ಪೆಟ್ಟು ಬೀಳುತ್ತಿದೆ, ತರಗತಿಗಳು ನಡೆಯುತ್ತಿಲ್ಲ ಎಂದು ಸಾಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಸರ್ಕಾರ ತಕ್ಷಣ ಅವರ ಬೇಡಿಕೆ ಈಡೇರಿಸಿ ಎಂದಿನಂತೆ ತರಗತಿಗಳು ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ಬುಧವಾರ ವಿದ್ಯಾರ್ಥಿನಿಯರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು....
ಶಿವಮೊಗ್ಗದಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್!
ಶಿವಮೊಗ್ಗದಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್! ಶಿವಮೊಗ್ಗ : 2019 ಮಾರ್ಚ್ 5 ರಂದು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ಬೆದರಿಸಿ ದರೋಡೆ ಮಾಡಿದ್ದ ಆರು ಜನ ಆರೋಪಿಗಳಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಶಿವಮೊಗ್ಗ, ಪೀಠಾಸೀನ ಭದ್ರಾವತಿಯಲ್ಲಿ 2 ಪ್ರಕರಣಗಳ ವಿಚಾರಣೆ ನಡೆದು ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧಿಶರಾದ ಶ್ರೀ ಆರ್ ವೈ ಶಶಿಧರ ರವರು ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ. ದಿನಾಂಕ...
ಸಹ್ಯಾದ್ರಿ ಕಾಲೇಜಿನ ಪರಿಸ್ಥಿತಿ ನೋಡಿದರೆ ತಲ್ಲಣವಾಗುತ್ತದೆ, ಕುವೆಂಪು ವಿವಿ ಮೈಮರೆತು ಕುಳಿತಿದೆ – ಆಯನೂರ್ ಮಂಜುನಾಥ್
ಸಹ್ಯಾದ್ರಿ ಕಾಲೇಜಿನ ಪರಿಸ್ಥಿತಿ ನೋಡಿದರೆ ತಲ್ಲಣವಾಗುತ್ತದೆ, ಕುವೆಂಪು ವಿವಿ ಮೈಮರೆತು ಕುಳಿತಿದೆ – ಆಯನೂರ್ ಮಂಜುನಾಥ್ ಶಿವಮೊಗ್ಗ : ಸಹ್ಯಾದ್ರಿ ಕಾಲೇಜಿನ ಪರಿಸ್ಥಿತಿ ನೋಡಿದರೆ ತಲ್ಲಣವಾಗುತ್ತದೆ, ಅತಿಥಿ ಉಪನ್ಯಾಸಕರನ್ನು ನೇಮಿಸದೆ ಕುವೆಂಪು ವಿಶ್ವವಿದ್ಯಾಲಯ ಮೈಮರೆತು ಕುಳಿತಿದೆ ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಪಾಠ ನಡೆಯುತ್ತಿಲ್ಲ ಕುವೆಂಪು ವಿವಿ ವಿರುದ್ದ ಹರಿಹಾಯ್ದ ಕೆಪಿಸಿಸಿ ವಕ್ತಾರಾ ಆಯನೂರ್ ಮಂಜುನಾಥ್ ಬುಧವಾರ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರಾ ಆಯನೂರ್ ಮಂಜುನಾಥ್ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ,...
ತೆರೆದ ವಾಹನದಲ್ಲಿ ನೂತನ ರಾಜ್ಯಾಧ್ಯಕ್ಷರ ಮೆರವಣಿಗೆ | ಬಿಎಸ್ ವೈ, ಕೆ ಎಸ್ ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಸಾಥ್,
ತೆರೆದ ವಾಹನದಲ್ಲಿ ನೂತನ ರಾಜ್ಯಾಧ್ಯಕ್ಷರ ಮೆರವಣಿಗೆ | ಬಿಎಸ್ ವೈ, ಕೆ ಎಸ್ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಸಾಥ್, ಶಿವಮೊಗ್ಗ : ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಬಿ ವೈ ವಿಜಯೇಂದ್ರ ಶಿವಮೊಗ್ಗಕ್ಕೆ ಆಗಮಿಸಿದ್ದು, ಅದ್ದೂರಿ ಸ್ವಾಗತವನ್ನು ಕೋರಲಾಗಿದೆ. ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತೂರಿನ ಆರ್ ಎಸ್ ಎಸ್ ಪ್ರಮುಖರಾದ ಪಟ್ಟಾಭಿರಾಮ್ ಮತ್ತು ಬಿಜೆಪಿ ಮುಖಂಡರಾದ ಭಾನುಪ್ರಕಾಶ್, ಕೆ ಎಸ್ ಈಶ್ವರಪ್ಪ ಮನೆಗೆ ಭೇಟಿ ನೀಡಿ ಈಶ್ವರಪ್ಪನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ...
ಕನ್ನಡಪರ ಹೋರಾಟಗಾರರ ಸಾಂಸ್ಕತಿಕ ನೆಲದಲ್ಲಿ ಅಸಭ್ಯ ನೃತ್ಯ… ಮಲೆನಾಡಿನ ಅನಂದಪುರದಲ್ಲಿ ನಂಗನಾಚ್ ನೃತ್ಯ!
ಕನ್ನಡಪರ ಹೋರಾಟಗಾರರ ಸಾಂಸ್ಕತಿಕ ನೆಲದಲ್ಲಿ ಅಸಭ್ಯ ನೃತ್ಯ… ಮಲೆನಾಡಿನ ಅನಂದಪುರದಲ್ಲಿ ನಂಗನಾಚ್ ನೃತ್ಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಮಾಡಿ ಅಪ್ರಾಪ್ತ ಬಾಲಕನನ್ನು ಬಳಸಿಕೊಂಡು ಅಶ್ಲೀಲ ಭಂಗಿಗಳಲ್ಲಿ ಯುವತಿ ಕುಣಿದಿದ್ದಾಳೆ. ಆನಂದಪುರದ ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆ ಹೇಸರಿನ ಸಂಘಟನೆಯೊಂದರ ಕಾರ್ಯಕ್ರಮ ಇದಾಗಿದ್ದು. ಈ ಬಗ್ಗೆ ಪೊಲೀಸ್ ಇಲಾಖೆಗೆ ಯಾವ ಕ್ರಮ ತೆಗೆದುಕೊಳ್ಳುತ್ತದೇಯೋ ಕಾದು ನೋಡಬೇಕಾಗಿದೆ ಸೋಮಶೇಖರ್ ಲ್ಯಾವಗಿರಿ ಮಕ್ಕಳನ್ನು ಅಶ್ಲೀಲತೆಗೆ ಸಂಬಂಧಿಸಿದ ಯಾವುದೆ ವಿಚಾರದಲ್ಲಿಯು...
ಸಿಡಿಲು ಬಡಿದು ಸಹೋದರರಿಬ್ಬರೂ ಸಾವು !
ಸಿಡಿಲು ಬಡಿದು ಸಹೋದರರಿಬ್ಬರೂ ಸಾವು ! ಭದ್ರಾವತಿ : ಜಮೀನಿನಲ್ಲಿ ಕಟಾವು ಆಗಿದ್ದ ಭತ್ತದ ರಾಶಿಯನ್ನು ರಕ್ಷಿಸಲು ಹೋದ ಸಹೋದರರಿಬ್ಬರೂ ಸಿಡಿಲು ಬಡಿದು ಸಾವನ್ನಪ್ಪಿರುವ ಧಾರುಣ ಘಟನೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ. ನಿನ್ನೆ ಮಂಗಳವಾರ ರಾತ್ರಿ ಭಾರಿ ಮಳೆ ಆಗುತ್ತಿದ್ದ ಕಾರಣ ಜಮೀನಿನಲ್ಲಿ ಕಟಾವು ಮಾಡಲಾಗಿದ್ದ ಭತ್ತದ ರಾಶಿಯನ್ನು ಮಳೆಯಿಂದ ರಕ್ಷಿಸಲು ಹೋಗಿದ್ದ ಗೌಳಿಗರ ಕ್ಯಾಂಪ್ ನ ನಿವಾಸಿಗಳಾದ ಸುರೇಶ್ (35) ಮತ್ತು ಬೀರು (32) ಮೃತ ದುರ್ದೈವಿಗಳಾಗಿದ್ದಾರೆ....
ರಂಗೇರುತ್ತಿದೆ ಶಿವಮೊಗ್ಗ ರಾಜಕಾರಣ ! ಬಿಜೆಪಿ ರಾಜ್ಯಾಧ್ಯಕ್ಷರ ಬೇಟಿಗೂ ಮುನ್ನ ಶಿಕಾರಿಪುರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ! ಕುತೂಹಲ ಮೂಡಿಸಿದ ಸಚಿವರ ಭೇಟಿ !
ರಂಗೇರುತ್ತಿದೆ ಶಿವಮೊಗ್ಗ ರಾಜಕಾರಣ ! ಬಿಜೆಪಿ ರಾಜ್ಯಾಧ್ಯಕ್ಷರ ಬೇಟಿಗೂ ಮುನ್ನ ಶಿಕಾರಿಪುರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ! ಕುತೂಹಲ ಮೂಡಿಸಿದ ಸಚಿವರ ಭೇಟಿ ! ಶಿವಮೊಗ್ಗ : ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಶಿವಮೊಗ್ಗ ರಾಜಕಾರಣ ರಂಗೇರುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳು ಬಾಕಿ ಇದೆ ಅಷ್ಟೇ, ಚುನಾವಣೆ ಸಮೀಪಿಸುತ್ತಿದ್ದಂತೆ ಶಿವಮೊಗ್ಗಕ್ಕೆ ರಾಜ್ಯ ನಾಯಕರ ದಂಡು ಹರಿದು ಬರುತ್ತಿದೆ. ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಇಂದು ಶಿವಮೊಗ್ಗಕ್ಕೆ...
ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ತಂಪೆರದ ಮಳೆರಾಯ ! ಶಿವಮೊಗ್ಗ ,ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಮಳೆ !
ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ತಂಪೆರದ ಮಳೆರಾಯ ! ಶಿವಮೊಗ್ಗ ,ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಮಳೆ ! ಶಿವಮೊಗ್ಗ : ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರದಿದ್ದಾನೆ, ಶಿವಮೊಗ್ಗ ನಗರದಲ್ಲಿ ಸಂಜೆ 7ರಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದಿದ್ದು, ರಾತ್ರಿ 9ರ ಸುಮಾರಿಗೆ ಜೋರು ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಜೋರು ಮಳೆ ಸುರಿದಿದೆ. ಶಿವಮೊಗ್ಗದ ಆಯನೂರ್, ಕುಂಸಿ, ಮಲವಗೊಪ್ಪ, ಹಾರೋಬೆನ್ನವಳ್ಳಿ , ಭದ್ರಾವತಿಯ...