Home » District News » Page 9

Category: District News

Post
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ: ನಾಳೆ (ಜುಲೈ 9) ಪದಗ್ರಹಣ ಸಮಾರಂಭ

ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ: ನಾಳೆ (ಜುಲೈ 9) ಪದಗ್ರಹಣ ಸಮಾರಂಭ

ಶಿವಮೊಗ್ಗ: “ಸೇವೆ ಎಂದರೆ ಸ್ವಾರ್ಥವಿಲ್ಲದ ಮಾನವೀಯತೆಯ ಅಭಿವ್ಯಕ್ತಿ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ (ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182, ವಲಯ-10) ತನ್ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಿದೆ. ಈ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲರಾದ ಶ್ರೀ ಕೆ.ಎಸ್.ವಿಶ್ವನಾಥ ನಾಯಕ ಮತ್ತು ಕಾರ್ಯದರ್ಶಿಯಾಗಿ ಶ್ರೀ ನಿತಿನ್ ಯಾದವ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ. ಶುಭ ಕೋರುವವರು: ಸಮಾರಂಭದ ವಿವರಗಳು: ದಿನಾಂಕ: ಜುಲೈ 09, 2025 ರ ಬುಧವಾರ ಸಮಯ:...

Post
ತುರ್ತು ಪರಿಸ್ಥಿತಿ ವಿರೋಧಿಗಳಿಗೆ ಮಾತ್ರ ಸಂವಿಧಾನದ ಮೌಲ್ಯ ಪ್ರತಿಪಾದಿಸುವ ಹಕ್ಕು: ದು.ಗು.ಲಕ್ಷ್ಮಣ್

ತುರ್ತು ಪರಿಸ್ಥಿತಿ ವಿರೋಧಿಗಳಿಗೆ ಮಾತ್ರ ಸಂವಿಧಾನದ ಮೌಲ್ಯ ಪ್ರತಿಪಾದಿಸುವ ಹಕ್ಕು: ದು.ಗು.ಲಕ್ಷ್ಮಣ್

ಸಾಗರ: ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಭಾರತದಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಮನಸ್ಥಿತಿ ಇಲ್ಲದವರಿಗೆ ಸಂವಿಧಾನದ ಮೌಲ್ಯಗಳನ್ನು ಪ್ರತಿಪಾದಿಸುವ ಹಕ್ಕು ಕೂಡ ಇಲ್ಲ ಎಂದು ಹಿರಿಯ ಬರಹಗಾರ ದು.ಗು.ಲಕ್ಷ್ಮಣ್ ಸ್ಪಷ್ಟವಾಗಿ ಹೇಳಿದರು. ಇಲ್ಲಿನ ಅಜಿತ ಸಭಾಭವನದಲ್ಲಿ ಸೇವಾ ಸಾಗರ ಬಳಗ ಭಾನುವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಸೇರಿದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಬ್ಬಗೆಯ ನೀತಿಗೆ ಟೀಕೆ: “ಮಾತೆತ್ತಿದರೆ ಕೆಲವರು ಸಂವಿಧಾನದ ಆಶಯಗಳನ್ನೇ ಎತ್ತಿ ತಮ್ಮ ವಾದವನ್ನು ಮಂಡಿಸುತ್ತಾರೆ. ಆದರೆ, ತುರ್ತು ಪರಿಸ್ಥಿತಿಯ ವಿಷಯ...

Post
ಶಿವಮೊಗ್ಗ: ದೆವ್ವ ಬಿಡಿಸುವ ನೆಪದಲ್ಲಿ ಭೀಕರ ಕೊಲೆ – ಪ್ರಕರಣ ಮುಚ್ಚಿಹಾಕಲು ಯತ್ನ ವಿಫಲ, ಇಬ್ಬರ ಬಂಧನ

ಶಿವಮೊಗ್ಗ: ದೆವ್ವ ಬಿಡಿಸುವ ನೆಪದಲ್ಲಿ ಭೀಕರ ಕೊಲೆ – ಪ್ರಕರಣ ಮುಚ್ಚಿಹಾಕಲು ಯತ್ನ ವಿಫಲ, ಇಬ್ಬರ ಬಂಧನ

ಶಿವಮೊಗ್ಗ: ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳು ಎಷ್ಟರಮಟ್ಟಿಗೆ ಮಾನವ ಜೀವಕ್ಕೆ ಕುತ್ತು ತರಬಹುದು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆಯಲ್ಲಿ ನಡೆದ ಘಟನೆಯೇ ಸಾಕ್ಷಿ. “ದೆವ್ವ ಬಿಡಿಸುವ” ನೆಪದಲ್ಲಿ ನಡೆದ ಭೀಕರ ಹಲ್ಲೆಯಿಂದ 45 ವರ್ಷದ ಗೀತಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣವನ್ನು ಮುಚ್ಚಿಹಾಕಲು ನಡೆದ ಯತ್ನವೂ ವಿಫಲವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಟಗಾತಿ ಆಶಾ ಅಲಿಯಾಸ್ ಶಾಂತಮ್ಮ ಮತ್ತು ಆಕೆಯ ಪತಿ ಸಂತೋಷ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಹೊಸ ಜಂಬರಗಟ್ಟೆ ಗ್ರಾಮದ ಗೀತಮ್ಮ...

Post
ಶಿವಮೊಗ್ಗ: ನಾಳೆಯಿಂದ ಮಹಾನಗರ ಪಾಲಿಕೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ – ನಗರದ ಸೇವೆಗಳಿಗೆ ಅಡ್ಡಿ!

ಶಿವಮೊಗ್ಗ: ನಾಳೆಯಿಂದ ಮಹಾನಗರ ಪಾಲಿಕೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ – ನಗರದ ಸೇವೆಗಳಿಗೆ ಅಡ್ಡಿ!

ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯ ನೌಕರರು ನಾಳೆಯಿಂದ (ಜುಲೈ 8, 2025, ಮಂಗಳವಾರ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಹಾನಗರ ಪಾಲಿಕೆಗಳ ನೌಕರರ ಸಂಘದ ರಾಜ್ಯ ಸಮಿತಿ ಕರೆ ಮೇರೆಗೆ ಶಿವಮೊಗ್ಗ ಘಟಕವೂ ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ. ಇದರಿಂದಾಗಿ ನಗರದ ಸಾರ್ವಜನಿಕ ಸೇವೆಗಳಾದ ಸ್ವಚ್ಛತೆ, ಕಂದಾಯ ಸಂಗ್ರಹ ಸೇರಿದಂತೆ ಪಾಲಿಕೆಯ ಎಲ್ಲಾ ವಿಭಾಗಗಳ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಬೇಡಿಕೆಗಳೇನು? ಮಹಾನಗರ ಪಾಲಿಕೆ ನೌಕರರ ಸಂಘದ ಪ್ರಮುಖ ಬೇಡಿಕೆಗಳು ಇಂತಿವೆ: ಸರ್ಕಾರಿ ನೌಕರರಿಗೆ...

Post
ಶಿವಮೊಗ್ಗ: ರಾಗಿಗುಡ್ಡದಲ್ಲಿ ಗಣೇಶ ಮೂರ್ತಿ ಭಗ್ನ, ಅಕ್ರಮ ಕಟ್ಟಡ ತೆರವಿಗೆ ಬಿಜೆಪಿ ಆಗ್ರಹ – ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಕೆ!

ಶಿವಮೊಗ್ಗ: ರಾಗಿಗುಡ್ಡದಲ್ಲಿ ಗಣೇಶ ಮೂರ್ತಿ ಭಗ್ನ, ಅಕ್ರಮ ಕಟ್ಟಡ ತೆರವಿಗೆ ಬಿಜೆಪಿ ಆಗ್ರಹ – ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಕೆ!

ಶಿವಮೊಗ್ಗ: ನಗರದ ರಾಗಿಗುಡ್ಡ ಬಂಗಾರಪ್ಪ ಬಡಾವಣೆಯಲ್ಲಿ ಗಣೇಶ ಮೂರ್ತಿ ಭಗ್ನಗೊಳಿಸಿದ ಮತ್ತು ನಾಗರ ವಿಗ್ರಹವನ್ನು ಚರಂಡಿಗೆ ಎಸೆದಿದ್ದಲ್ಲದೆ, ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಈ ಗಂಭೀರ ಬೆಳವಣಿಗೆಗಳ ಕುರಿತು ತನಿಖೆ ನಡೆಸಿ, ಅಕ್ರಮ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಶಿವಮೊಗ್ಗ ಬಿಜೆಪಿ ನಿಯೋಗ ಇಂದು ಆಯುಕ್ತರಿಗೆ ಮನವಿ ಸಲ್ಲಿಸಿದೆ. ಘಟನೆ ಮತ್ತು ಆರೋಪಗಳು: ಜುಲೈ 5, 2025 ರಂದು ಬಂಗಾರಪ್ಪ ಬಡಾವಣೆಯಲ್ಲಿ ಕೆಲ ದುಷ್ಕರ್ಮಿಗಳು ಶಾಂತಿ...

Post
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಎ ಎ ವೃತ್ತದಲ್ಲಿ ಮಿನಿ ಬಸ್ ಪಲ್ಟಿ! ಭಾರಿ ಅನಾಹುತ ತಪ್ಪಿದ ಸನ್ನಿವೇಶ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಎ ಎ ವೃತ್ತದಲ್ಲಿ ಮಿನಿ ಬಸ್ ಪಲ್ಟಿ! ಭಾರಿ ಅನಾಹುತ ತಪ್ಪಿದ ಸನ್ನಿವೇಶ

ಶಿವಮೊಗ್ಗ: ಶಿವಮೊಗ್ಗದ ಹೃದಯಭಾಗವಾದ ಅಮೀ‌ರ್ ಅಹಮದ್ ಸರ್ಕಲ್‌ನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಬಹುದಾದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ರಸ್ತೆ ಮಧ್ಯೆ ಪಲ್ಟಿಯಾಗಿದೆ. ಘಟನೆ ನಡೆದಾಗ ಬಸ್‌ನಲ್ಲಿ ಚಾಲಕನೊಬ್ಬರೇ ಇದ್ದು, ಯಾವುದೇ ಪ್ರಯಾಣಿಕರು ಇರಲಿಲ್ಲ. ಎ.ಎ. ಸರ್ಕಲ್ ಬಳಿ ಬಸ್ ಬರುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಆಟೋ ಅಡ್ಡ ಬಂದಿದೆ. ಈ ಆಟೋವನ್ನು ತಪ್ಪಿಸಲು ಹೋದ ಚಾಲಕನ ನಿಯಂತ್ರಣ ತಪ್ಪಿ, ಬಸ್ ಪಲ್ಟಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರು ಇಲ್ಲದ...

Post
ಭದ್ರಾ ಡ್ಯಾಂ ಜುಲೈ ಆರಂಭದಲ್ಲೇ ಭರ್ತಿಗೆ ಸಜ್ಜು: ಇತಿಹಾಸದಲ್ಲೇ ದಾಖಲೆ ಮಟ್ಟಕ್ಕೆ ಏರಿಕೆ!

ಭದ್ರಾ ಡ್ಯಾಂ ಜುಲೈ ಆರಂಭದಲ್ಲೇ ಭರ್ತಿಗೆ ಸಜ್ಜು: ಇತಿಹಾಸದಲ್ಲೇ ದಾಖಲೆ ಮಟ್ಟಕ್ಕೆ ಏರಿಕೆ!

ಶಿವಮೊಗ್ಗ: ಭದ್ರಾ ಜಲಾಶಯವು ಜುಲೈ ತಿಂಗಳ ಆರಂಭದಲ್ಲೇ ಇತಿಹಾಸದಲ್ಲಿಯೇ ಅತಿ ಹೆಚ್ಚು ನೀರಿನ ಮಟ್ಟವನ್ನು ತಲುಪಿದೆ. ಜಲಾಶಯ ಭರ್ತಿಗೆ ಕೇವಲ 15 ಅಡಿ ಮಾತ್ರ ಬಾಕಿ ಇದೆ. ಇಂದು (ಜುಲೈ 7, 2025) ಜಲಾಶಯದ ನೀರಿನ ಮಟ್ಟ 168.5 ಅಡಿ ತಲುಪಿದ್ದು, ಭಾರಿ ಒಳಹರಿವು ಮುಂದುವರಿದಿದೆ.. ಪ್ರಮುಖಾಂಶಗಳು: ಇಂದಿನ ನೀರಿನ ಮಟ್ಟ (ಜುಲೈ 7, 2025): 168.5 ಅಡಿ ಒಳ ಹರಿವು: 20,626 ಕ್ಯೂಸೆಕ್ ಹೊರ ಹರಿವು: 5,196 ಕ್ಯೂಸೆಕ್ ಗರಿಷ್ಠ ಮಟ್ಟ: 186 ಅಡಿ ಕಳೆದ...

Post
ರಾಗಿಗುಡ್ಡ ಘಟನೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಂಎಲ್‌ಸಿ ಡಾ. ಸರ್ಜಿ ಅವರಿಂದ ಪಾದಯಾತ್ರೆ ಎಚ್ಚರಿಕೆ!

ರಾಗಿಗುಡ್ಡ ಘಟನೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಂಎಲ್‌ಸಿ ಡಾ. ಸರ್ಜಿ ಅವರಿಂದ ಪಾದಯಾತ್ರೆ ಎಚ್ಚರಿಕೆ!

ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿರುವ ಬಂಗಾರಪ್ಪನವರ ಬಡಾವಣೆಯಲ್ಲಿ ಗಣಪತಿ ಮತ್ತು ನಾಗ ದೇವತೆಗಳ ವಿಗ್ರಹಗಳನ್ನ ಹಾನಿ ಮಾಡಿದ ಘಟನೆಯು ಅತ್ಯಂತ ಶೋಚನೀಯ ಸಂಗತಿ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಹಲವು ಆಗ್ರಹಗಳನ್ನು ಮುಂದಿಟ್ಟರು. “ದೇವರ ಮೂರ್ತಿಯನ್ನು ಕಾಲಿನಿಂದ ಒದಿಯುತ್ತಾನೆ ಎಂದರೆ ಹೇಗೆ? ಇಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು...

Post
ಮೊಹರಂ: ಹಿಂದೂ–ಮುಸ್ಲಿಮರ ಭಾವೈಕ್ಯತೆ ಸಂಕೇತ – ಆನಂದಪುರ ಭೋವಿ ಕಾಲೋನಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಭಾಗಿ

ಮೊಹರಂ: ಹಿಂದೂ–ಮುಸ್ಲಿಮರ ಭಾವೈಕ್ಯತೆ ಸಂಕೇತ – ಆನಂದಪುರ ಭೋವಿ ಕಾಲೋನಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಭಾಗಿ

ಆನಂದಪುರ: ಮೊಹರಂ ಹಬ್ಬವು ಇಂದಿಗೂ ಜನಸಮುದಾಯದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ, ಆಚರಣೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ತಾಲ್ಲೂಕಿನ ಆನಂದಪುರದ ಭೋವಿ ಕಾಲೋನಿ ಹಾಗೂ ಇಸ್ಲಾಂಪುರದಲ್ಲಿ ಶನಿವಾರ ನಡೆದ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೊಹರಂ ಆಚರಣೆಯು ಹಿಂದೂ-ಮುಸ್ಲಿಮರ ಬಾಂಧವ್ಯ ಮತ್ತು ಸಹೋದರತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ಪರಧರ್ಮ ಸಹಿಷ್ಣುತೆಯ ಭಾವನೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಮೊಹರಂ ಪ್ರಮುಖ ಕಾರಣವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು. ಚೋರರಿಗೊಂದು ಕಾಲ ಹಾಡಿಗೆ ಶಾಸಕರ...

Post
ರಾಗಿಗುಡ್ಡದ ಅಕ್ರಮ ಕಟ್ಟಡ ತೆರವಿಗೆ ಮಾಜಿ ಡಿಸಿಎಂ ಈಶ್ವರಪ್ಪ ಖಡಕ್ ಸೂಚನೆ: ಆರೋಪಿಗಳ ಗಡಿಪಾರಿಗೆ ಆಗ್ರಹ!

ರಾಗಿಗುಡ್ಡದ ಅಕ್ರಮ ಕಟ್ಟಡ ತೆರವಿಗೆ ಮಾಜಿ ಡಿಸಿಎಂ ಈಶ್ವರಪ್ಪ ಖಡಕ್ ಸೂಚನೆ: ಆರೋಪಿಗಳ ಗಡಿಪಾರಿಗೆ ಆಗ್ರಹ!

ಶಿವಮೊಗ್ಗ: ರಾಗಿಗುಡ್ಡದ ಬಂಗಾರಪ್ಪನವರ ಕಾಲೋನಿಯಲ್ಲಿ ವಿಗ್ರಹಗಳ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲೇ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ: ದೇವಸ್ಥಾನದ ವಿಗ್ರಹಗಳನ್ನು ಒದ್ದು ಹಾನಿ ಮಾಡಿರುವ ಘಟನೆಯಿಂದ ರೊಚ್ಚಿಗೆದ್ದ ಈಶ್ವರಪ್ಪ, ಕೂಡಲೇ ವಿವಾದಿತ ಸ್ಥಳದ ಎದುರಿಗಿರುವ ಒತ್ತುವರಿ ಕಟ್ಟಡವನ್ನು ಮಹಾನಗರ ಪಾಲಿಕೆಯವರು ಶೀಘ್ರದಲ್ಲಿ ತೆರವುಗೊಳಿಸಬೇಕು ಎಂದು ಸ್ಥಳದಲ್ಲಿಯೇ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದರು. ಸೋಮವಾರ ಸಂಜೆಯೊಳಗೆ...