ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಬಲಪಡಿಸಲು ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6000 ಖಾಯಂ ಹಾಗೂ ಗುತ್ತಿಗೆ ಆಧಾರಿತ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ಇತ್ತೀಚೆಗೆ 341 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 540 ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಾಹಿರಾತು: ಇದನ್ನು ಓದಿ : ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ: ಡಾ. ಸಿ. ಎನ್ ಮಂಜುನಾಥ್ ಅವರಿಂದ ಮಹತ್ವದ ಸಲಹೆಗಳು!!ಪೂರ್ತಿ ಓದಲು...
Category: Jobs
ಆರ್ಯ ವೈಶ್ಯ ಯುವ ಸಮುದಾಯಕ್ಕೆ ಬಂಪರ್ ಆಫರ್: ಸರ್ಕಾರದಿಂದ ₹5 ಲಕ್ಷದವರೆಗೆ ಸಾಲ-ಸಹಾಯಧನ – ಸೌಲಭ್ಯಕ್ಕೆ ಅರ್ಜಿ ಆಹ್ವಾನ!
ಶಿವಮೊಗ್ಗ: ಸ್ವಂತ ಉದ್ಯಮ ಆರಂಭಿಸಬೇಕೆಂಬ ಕನಸು ಕಾಣುತ್ತಿರುವ ಯುವಕ/ಯುವತಿಯರೇ, ಉತ್ತಮ ಶಿಕ್ಷಣ ಪಡೆಯಲು ನೆರವು ಬೇಕಿದೆಯೇ? ಹಾಗಿದ್ದರೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಆಹ್ವಾನಿಸಲಾಗಿರುವ ಸಾಲ-ಸೌಲಭ್ಯ ಯೋಜನೆಗಳು ನಿಮಗಾಗಿವೆ! ನಿಮ್ಮ ಕನಸುಗಳಿಗೆ ಬಲ ತುಂಬಲು ಸರ್ಕಾರದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಲಭ್ಯವಿರುವ ಪ್ರಮುಖ ಯೋಜನೆಗಳು: ಸ್ವಯಂ ಉದ್ಯೋಗ ನೇರ ಸಾಲ ಯೋಜನೆ: ನಿಮ್ಮದೇ ಆದ ವ್ಯಾಪಾರ ಅಥವಾ ಉದ್ಯಮ ಪ್ರಾರಂಭಿಸಲು ನೇರ ಆರ್ಥಿಕ ನೆರವು. ಆರ್ಯ ವೈಶ್ಯ ಆಹಾರ ವಾಹಿನಿ/ವಾಹಿನಿ ಯೋಜನೆ:...
ಮುಸ್ಲಿಮರಿಗೆ ಮನೆ ಮೀಸಲಾತಿ ಸರಿಯಲ್ಲ’: ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ತೀವ್ರ ಆಕ್ರೋಶ!
ಶಿವಮೊಗ್ಗ: ಬಡವರಿಗೆ ಮನೆ ನೀಡುವ ಸರ್ಕಾರದ ಯೋಜನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.15ರಷ್ಟು ಮನೆಗಳನ್ನು ಮೀಸಲಿಟ್ಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ‘ಮುಸ್ಲಿಂ ತುಷ್ಟೀಕರಣ’ ನೀತಿಯ ಮುಂದುವರಿಕೆ ಎಂದು ಅವರು ಖಂಡಿಸಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದ್ದಿಷ್ಟು: “ಯಾವುದೇ ಜಾತಿ, ಧರ್ಮವನ್ನು ಪರಿಗಣಿಸದೆ, ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಸಮುದಾಯಗಳಿಗೂ ಮನೆಗಳನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ಬಡವರ ಹೆಸರಿನಲ್ಲಿ ಒಂದು ಸಮುದಾಯಕ್ಕೆ ಮಾತ್ರ ಮೀಸಲಾತಿ ನೀಡುವುದು...
ಶಿವಮೊಗ್ಗ ನಗರದಲ್ಲಿ ನಾಳೆ (ಜೂ. 24) ವಿದ್ಯುತ್ ಕಡಿತ: ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ!
ಶಿವಮೊಗ್ಗ: ನಗರದ ಎಂಆರ್‌ಎಸ್ (MRS) ನ 110/11 ಕೆವಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ನಾಳೆ, ಜೂನ್ 24, 2025 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ನಗರದ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯಕ್ಕೊಳಗಾಗುವ ಪ್ರಮುಖ ಪ್ರದೇಶಗಳು ಹೀಗಿವೆ: ಚಿಕ್ಕಲ್ಲು ಗುರುಪುರ ಪುರಲೆ ಸಿದ್ದೇಶ್ವರ ನಗರ ಶಾಂತಮ್ಮ ಲೇಔಟ್ ವೆಂಕಟೇಶ ನಗರ ವಿದ್ಯಾನಗರ ಗಣಪತಿ ಲೇಔಟ್ ಕಂಟ್ರಿಕ್ಲಬ್ ರಸ್ತೆ ಎಂಆರ್‌ಎಸ್...
ರೈಲ್ವೆ ನೇಮಕಾತಿ 2025: SSLC, ITI, ಪದವೀಧರರಿಗೆ 6180 ಟೆಕ್ನೀಷಿಯನ್ ಹುದ್ದೆಗಳ ಬೃಹತ್ ಅವಕಾಶ! ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
ಶಿವಮೊಗ್ಗ: ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025-26ನೇ ಸಾಲಿಗೆ ಬೃಹತ್ ನೇಮಕಾತಿ ನಡೆಸಲು ಸಿದ್ಧವಾಗಿದ್ದು, ಒಟ್ಟು 6,180 ಟೆಕ್ನೀಷಿಯನ್ ಹುದ್ದೆಗಳಿಗೆ ಅಧಿಸೂಚನೆ ಹೊರಬೀಳಲಿದೆ. ಈ ನೇಮಕಾತಿಯಲ್ಲಿ SSLC, ITI ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಹಿಡಿದು ಪದವೀಧರರಿಗೂ ಅವಕಾಶಗಳಿದ್ದು, ಕರ್ನಾಟಕದ ಅರ್ಹ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು. ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಪ್ರಾರಂಭ: 2025ರ ಜೂನ್ 28 ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ: 2025ರ ಜುಲೈ 28 ಹುದ್ದೆಗಳು ಮತ್ತು ಶೈಕ್ಷಣಿಕ ಅರ್ಹತೆಗಳು: RRB ಟೆಕ್ನೀಷಿಯನ್...
ಕಾರ್ಮಿಕರಿಗೆ ಇನ್ಮುಂದೆ ವಾರಕ್ಕೆ ಐದೇ ದಿನ ಕೆಲಸ? ಕರ್ನಾಟಕದಲ್ಲಿ ಮಹತ್ವದ ಬದಲಾವಣೆಗೆ ಚಿಂತನೆ!
ರಾಜ್ಯ ಸರ್ಕಾರವು ಕಾರ್ಮಿಕರ ಕೆಲಸದ ದಿನಗಳು ಮತ್ತು ಅವಧಿಯಲ್ಲಿ ದೊಡ್ಡ ಬದಲಾವಣೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ಕಾರ್ಖಾನೆಗಳು, ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ವಾರದಲ್ಲಿ ಕೇವಲ 5 ದಿನ ಮಾತ್ರ ಕೆಲಸ ಇರಲಿದೆ. ಏನು ಬದಲಾವಣೆ? ‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ-1961’ ಹಾಗೂ ‘ಕರ್ನಾಟಕ ಕಾರ್ಖಾನೆಗಳ ಕಾಯ್ದೆ’ಗಳಿಗೆ ತಿದ್ದುಪಡಿ ತರುವ ಮೂಲಕ ಈ ನಿಯಮ ಜಾರಿಗೆ ಬರಲಿದೆ. ಪ್ರಸ್ತುತ ದಿನಕ್ಕೆ 9 ಗಂಟೆಯ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಸಲಾಗುತ್ತಿದ್ದು,...
ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣವಕಾಶ ! ಸ್ಪರ್ಧಾ ಲೈನ್ಸ್ ವತಿಯಿಂದ ರಾಜ್ಯಾದ್ಯಂತ ಉಚಿತ ಪರೀಕ್ಷಾ ಸರಣಿ !
ಶಿವಮೊಗ್ಗ : ಬೆಂಗಳೂರು : ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಬಯಸುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ, ಕರ್ನಾಟಕದ ಯುವ ಸ್ಪರ್ಧಾ ಆಕಾಂಕ್ಷಿಗಳಿಗಾಗಿ ಸ್ಪರ್ಧಾಲೈನ್ಸ್ ಟಾರ್ಗೆಟ್ ಕೆಎಎಸ್ ಪ್ರಿಲಿಮ್ಸ್ -2024 ಎಂಬ ಶೀರ್ಷಿಕೆ ಅಡಿ ಕರ್ನಾಟಕದಾದ್ಯಂತ ಏರ್ಪಡಿಸುತ್ತಿದೆ ಉಚಿತ ಕೆಎಎಸ್ ಪರೀಕ್ಷಾ ಸರಣಿ ! ಪ್ರಿಲಿಮ್ಸ್ ಪರೀಕ್ಷಾ ಸರಣಿಯು ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು ಕೆಎಎಸ್ ಹುದ್ದೆಯ ಆಕಾಂಕ್ಷಿಗಳ ತಯಾರಿಗೆ ನೆರವಾಗಲು ಸ್ಪರ್ಧಾ ಲೈನ್ಸ್ KAS ಪ್ರಿಲಿಮ್ಸ್ 2024 ಟೆಸ್ಟ್ ಸರಣಿಯ (GS-I ಮತ್ತು GS-II) ಸಂಪೂರ್ಣ ಸೆಟ್ ಅನ್ನು ಪ್ರಾರಂಭಿಸಿದೆ. ಪರೀಕ್ಷೆಯಂತಹ...
ಶಿವಮೊಗ್ಗ : ಸೇನೆಗೆ ಸೇರ ಬಯಸುವವರಿಗೆ ಅಗ್ನಿವೀರ್ ಪರೀಕ್ಷೆಗೆ ಅರ್ಜಿ ಆಹ್ವಾನ
ಶಿವಮೊಗ್ಗ : ಭಾರತೀಯ ವಾಯುಪಡೆಯಿಂದ ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಸೇವೆಗೆ ಆಯ್ಕೆ ಪರೀಕ್ಷೆಗಾಗಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ/ತತ್ಸಮಾನ, ಡಿಪ್ಲೋಮಾ, ವೃತ್ತಿಪರ ಕೋರ್ಸ್ ವಿದ್ಯಾರ್ಹತೆ ಹೊಂದಿರುವ, 03, ಜುಲೈ-2004 ರಿಂದ 03, ಜನವರಿ 2008ರ ನಡುವೆ ಜನಿಸಿರುವ ಅವಿವಾಹಿತ ಪುರುಷ ಮತ್ತು ಮಹಿಳೆಯರಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಆನ್‍ಲೈನ್ https://agnipathvayu.cdac.in ರಲ್ಲಿ ನೊಂದಾಯಿಸಿಕೊಂಡು, ಜಿಲ್ಲಾ ಉದ್ಯೋಗ ವಿನಿಯಮ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ...
ಸೇನೆ ಸೇರ ಬಯಸುವ ಯುವಕರಿಗೆ ಇಲ್ಲಿದೆ ಸುವರ್ಣ ಅವಕಾಶ ! ಉಚಿತ ತರಬೇತಿಗೆ ಅರ್ಜಿ ಆಹ್ವಾನ !
ಉದ್ಯೋಗ : ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದ ಯುವಕರಿಗಾಗಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ತರಬೇತಿಗಾಗಿ ಅರ್ಹಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ (ಬಾಲಕರಿಗೆ ಮಾತ್ರ). ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಗೊಳಿಸಿರುವ ಸಾಮಾನ್ಯ ಅರ್ಹತೆಗಳು: ಅಭ್ಯರ್ಥಿ ಮತ್ತು...
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಉದ್ಯೋಗವಕಾಶ ! ಅರ್ಜಿ ಆಹ್ವಾನ !
ಉದ್ಯೋಗ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು (Karnataka State Fire and Emergency Services – KSFES) ಇಲಾಖೆಯು 975 ಫೈರ್‌ಮ್ಯಾನ್, ಅಗ್ನಿಶಾಮಕ ಠಾಣಾಧಿಕಾರಿ ಮತ್ತು ಅಗ್ನಿಶಾಮಕ ಇಂಜಿನ್ ಡ್ರೈವರ್ ಹುದ್ದೆಗಳಿಗೆ KSFES ನೇಮಕಾತಿ 2024 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಕಿರು ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್ ksfes.karnataka.gov.in ನಲ್ಲಿ ಬಿಡುಗಡೆ ಮಾಡಲಾಗಿದೆ. ಇತ್ತೀಚಿನ KSFES ನೇಮಕಾತಿ 2024 ಗಾಗಿ ಬಯಸುವ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಪರಿಶೀಲಿಸಬಹುದು: ಖಾಲಿ ಹುದ್ದೆ,...