ಹಾವೇರಿ : ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 13 ಜನರ ಕುಟುಂಬಗಳಿಗೆ ಸಿಎಂ ಸಿದ್ದರಾಮಯ್ಯ ಅವರು ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಕ್ಕಳು ಸೇರಿ 13 ಜನರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ನೀಡುತ್ತೇವೆ ಎಂದು ಹೇಳಿದರು. ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ...
ಹಾವೇರಿ ಘಟನೆ : ಎಮ್ಮೆಹಟ್ಟಿ ಗ್ರಾಮದಲ್ಲಿ 9 ಜನರ ಸಾಮೂಹಿಕ ಅಂತ್ಯಸಂಸ್ಕಾರ !
ಭದ್ರಾವತಿ : ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತದಲ್ಲಿ ಮೃತಪಟ್ಟ 9 ಜನರ ಸಾಮೂಹಿಕ ಅಂತ್ಯಸಂಸ್ಕಾರವನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ನೆರವೇರಿಸಲಾಯಿತು. ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, ಅದರಲ್ಲಿ 9 ಮಂದಿಯನ್ನು ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಯಿತು. ಆದರ್ಶ್, ವಿಶಾಲಾಕ್ಷಿ, ನಾಗೇಶ್ ರಾವ್, ಸುಭದ್ರಾ ಬಾಯಿ, ಮಾನಸಾ, ರೂಪಾ ಬಾಯಿ, ಭಾಗ್ಯಬಾಯಿ, ಅರುಣ್ ಕುಮಾರ್, ಮಂಜುಳಾ ಒಟ್ಟು 9 ಮಂದಿಗೆ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 4 ಅಂಬುಲೆನ್ಸ್...
ಸಾಗರದ ಪದವಿ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಸಾಗರ: ದಾನದಲ್ಲಿ ಶ್ರೇಷ್ಠ ದಾನ ರಕ್ತದಾನವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ರಕ್ತದಾನ ಮಾಡುವ ಮೂಲಕ ಬದುಕಿನ ಸಾರ್ಥಕತೆ ಮೆರೆಯಿರಿ ಎಂದು ಸಾಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಣ್ಣ ಹನುಮಂತಪ್ಪ .ಜಿ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಗರದಲ್ಲಿ I Q A C, ಅಡಿಯಲ್ಲಿ ಯುವ ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಘಟಕದ ವತಿಯಿಂದ ಎನ್.ಎಸ್.ಎಸ್.ಮತ್ತು ಎನ್.ಸಿ. ಸಿ. ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ರೋಟರಿ ರಕ್ತ ನಿಧಿ ಘಟಕ , ಸಾಗರ...
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ! ಗೆದ್ದು ಬೀಗಿದ ಕೈ ಪಾಳಯ !
ಶಿವಮೊಗ್ಗ : ಡಿಸಿಸಿ ಬ್ಯಾಂಕ್ 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಬಹುತೇಕ ನಾಯಕರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳಿಗೆ ಸೋಲುಂಟಾಗಿದ್ದು, ಉಳಿದ 12 ಸ್ಥಾನಕ್ಕೆ ಚುನಾವಣೆ ನಡೆದಿದ್ದು,ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಆರ್.ಎಂ ಮಂಜುನಾಥ್ ಗೌಡ, ಬೇಳೂರು ಗೋಪಾಲ ಕೃಷ್ಣ, ದುಗ್ಗಪ್ಪ ಗೌಡ , ಹೆಚ್.ಎಲ್. ಷಡಕ್ಷರಿ, ಬಸವಾನಿ ವಿಜಯದೇವ್, ಎಸ್.ಪಿ ಚಂದ್ರಶೇಖರಗೌಡ, ಕೆ.ಪಿ ರುದ್ರೇಗೌಡ, ಮರಿಯಪ್ಪ, ಮಹಲಿಂಗ ಶಾಸಿ, ಸಿ ಹನುಮಂತ, ಜಿ.ಎಸ್ ಸುಧೀರ್ ಸೇರಿ...
ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ ! ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ! ಶಿವಮೊಗ್ಗ ಮೂಲದ 13 ಮಂದಿ ಧಾರುಣ ಸಾವು !
ಹಾವೇರಿ : ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದ ಪರಿಣಾಮ 13 ಜನರು ಮೃತಪಟ್ಟ ಘಟನೆ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಶುಕ್ರವಾರ) ಬೆಳಗ್ಗೆ ನಡೆದಿದೆ. ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಟಿಟಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರ ತೆಗೆಯುತ್ತಿದ್ದಾರೆ. ಮೃತರ ಹಿನ್ನಲೆ ಪತ್ತೆ ಹಚ್ಚುತ್ತಿರುವ ಪೋಲೀಸರು. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ...
ಶಿವಮೊಗ್ಗದಲ್ಲಿ ಅಪ್ಪನನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಮಗ !
ಭದ್ರಾವತಿ : ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದ ಅಮ್ಮನ ಜೊತೆ ಜಗಳ ಮಾಡುತ್ತಿದ್ದ ಅಪ್ಪನನ್ನು ಸ್ವಂತ ಮಗನೇ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ ಶುಕ್ರರಾಜ್ ಯಾನೆ ಅಲಿಯಾಸ್ ಶುಕ್ರ(50) ಎನ್ನಲಾಗಿದೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದಲ್ಲಿ ನಡೆದಿದೆ. ತಾಯಿ ಶಿಲ್ಪಾ ಗ್ರಾಮ ಪಂಚಾಯಿತಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಅಮ್ಮನ ದುಡಿಮೆಯಿಂದ ಮನೆ ನಡೆಯುತ್ತಿತ್ತು. ಆದರೆ, ಅಪ್ಪ ಶುಕ್ರರಾಜ್ ಯಾನೆ ಅಮ್ಮ ಶಿಲ್ಪ ಮೇಲೆ ಪದೇ ಪದೇ...
ಸಹ್ಯಾದ್ರಿ ಕಾಲೇಜಿನ ಮುಂದೆ ರೌಡಿಶೀಟರ್ ಕಾರ್ತಿಕ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ !
ಶಿವಮೊಗ್ಗ : ನಗರದ ಸಹ್ಯಾದ್ರಿ ಕಾಲೇಜಿನ ಮುಂದೆ ಎಂ ಆರ್ ಎಸ್ ಸರ್ಕಲ್ ಸಮೀಪ ಕಾರ್ತಿಕ್ ಅಲಿಯಾಸ್ ಕತ್ತೆ ಕಾರ್ತಿಕ್ ಎಂಬ ರೌಡಿಶೀಟರ್ ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿದ ಪರಿಣಾಮ ರೌಡಿಶೀಟರ್ ಕಾರ್ತಿಕ್ ನ ತಲೆ ಕೈ ಕೆನ್ನೆಗೆ ಗಾಯಗಳಾಗಿದೆ, ಕಾರ್ತಿಕ್ ಮನೆಯಲ್ಲಿದ್ದ ಸಮಯದಲ್ಲಿ ಕರೆ ಬಂದಿದೆ , ಕರೆ ಬಂದ ಬೆನ್ನಲ್ಲೇ ಸಿದ್ದನಾದ ಕಾರ್ತಿಗೆ ಮನೆಗೆ ಬಂದು ಐವರು ಕಾರ್ತಿಕ್ ನನ್ನ ಕರೆದುಕೊಂಡು ಹೋಗಿದ್ದಾರೆ,...
ಮತ್ತೆ ತವರಿಗೆ ವಾಪಸ್ ಆಗ್ತಾರಾ ಮಾಜಿ ಸಚಿವ ಕೆಎಸ್ಇ ? ಘರ್ ವಾಪಸಿ ಆಗ್ತಾರ ಈಶ್ವರಪ್ಪ ?
ಶಿವಮೊಗ್ಗ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ಪುತ್ರ ಕೆ ಇ ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ಕಾರಣಕ್ಕಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಿ ವೈ ರಾಘವೇಂದ್ರರ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು , ಈ ವೇಳೆಯೂ ಸಾಕಷ್ಟು ಬಿಜೆಪಿಯ ಮುಖಂಡರು ನಾಯಕರು ಕಾರ್ಯಕರ್ತರು ಕೆ ಎಸ್ ಈಶ್ವರಪ್ಪರ ಮನವೊಲಿಸಲು ಪ್ರಯತ್ನ ನಡೆಸಿದ್ದರು ಕೂಡ...
ದರ್ಶನ್ ಪರ ವಕೀಲರು ಲಾಯರ್ ಆಗಲು ಅನ್‌ಫಿಟ್ – ಎಂ ಎಲ್ ಸಿ ಭೋಜೇಗೌಡ ಆಕ್ರೋಶ !
ಚಿಕ್ಕಮಗಳೂರು : ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನ ಪರವಾಗಿ ವಾದ ಮಾಡುತ್ತಿರುವ ವಕೀಲರು ತಮ್ಮ ಕಕ್ಷಿದಾರ ಅಪರಾಧ ಮಾಡಿಲ್ಲವೆಂದು 100 ಸಲ ಹೇಳ್ತಾನೆ. ಆದರೆ, ಇವರು ಕಕ್ಷಿದಾರ ನಿರಪರಾಧಿ ಎಂದು ಕೋರ್ಟ್‌ನಲ್ಲಿ ಹೇಳಬೇಕು ಹೊರತು ಸಾರ್ವಜನಿಕವಾಗಿ ಹೇಳಬಾರದು. ದರ್ಶನ್ ಪರ ವಕೀಲರು ಲಾಯರ್ ಆಗಲು ಅನ್‌ಫಿಟ್ ಆಗಿದ್ದಾರೆ ಎಂದು ಬಾರ್ ಕೌನ್ಸಿಲ್ ಮಾಜಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್...
ನಾನ್ ವೆಜ್ ಫುಡ್ ಕೋರ್ಟ್ ನಲ್ಲಿ ಅಧಿಕಾರಿಗಳ ಧೀಡಿರ್ ದಾಳಿ ! ಪರಿಶೀಲನೆ ! ಕಾರಣವೇನು ?
ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿ ಇರುವಂತಹ ಮಾಂಸಹಾರ ತಿನಿಸು ಅಂಗಳ ( ನಾನ್ ವೆಜ್ ಫುಡ್ ಕೋರ್ಟ್ ) ನಲ್ಲಿ ಆಹಾರ ಸುರಕ್ಷತ ಮತ್ತು ಗುಣಮಟ್ಟ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತ ಮತ್ತು ಗುಣಮಟ್ಟ ಅಧಿಕಾರಿಗಳು ದಾಳಿ ನಡೆಸಿ ಸ್ವಚ್ಛತೆ ಕಾಣದೆ ಇರುವುದು, ವೈದ್ಯಕೀಯ ತಪಾಸಣೆ ಇಲ್ಲದಿರುವುದು.ಆರ್ ಒ ವಾಟರ್ ಅಳವಡಿಸದೆ ಇರುವುದು, ಆಹಾರಕ್ಕೆ ಕಲರ್ ಬೆರೆಸುತ್ತಿರುವುದು ಸಂಬಂಧಿಸಿದಂತೆ ಸುಮಾರು 15 ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ ಐಎಸ್ಐ ಮಾರ್ಕಿನ ಕಲರ್ ಗಳನ್ನ ಬಳಸಲು ಅವಕಾಶವಿದ್ದರೂ,...









