ಶಿವಮೊಗ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಗಾದ್ರಿ ಡಿ.ತಿಪ್ಪೇಸ್ವಾಮಿ ಅವರ ಮಗ ಮಹಂತೇಶ್ ಕುಮಾರ್ ಜಿ.ಟಿ. ಅವರಿಗೆ ಶಿವಮೊಗ್ಗದ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ನೀಡಿ ಗೌರವಿಸಿದೆ. ಬಯೋಮೆಡಿಕಲ್ ವಿಜ್ಞಾನ ಕ್ಷೇತ್ರಕ್ಕೆ ಅವರ ಗಮನಾರ್ಹ ಕೊಡುಗೆಯನ್ನು ಈ ಗೌರವದ ಮೂಲಕ ಗುರುತಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ರಮೇಶ್ ಅವರ ಮಾರ್ಗದರ್ಶನದಲ್ಲಿ ಮಹಂತೇಶ್ ಕುಮಾರ್ ಅವರು...