ನವದೆಹಲಿ: ಪವಿತ್ರ ಅಮರನಾಥ ಯಾತ್ರೆ 2025ಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯಾತ್ರೆ ಆರಂಭವಾಗಿ ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ 70,000ಕ್ಕೂ ಹೆಚ್ಚು ಭಕ್ತರು ಶಿವನ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರವೂ 8,605 ಯಾತ್ರಾರ್ಥಿಗಳ ಮತ್ತೊಂದು ತಂಡ ಕಾಶ್ಮೀರ ಕಣಿವೆಗೆ ಪ್ರಯಾಣ ಬೆಳೆಸಿದೆ. ಜುಲೈ 3 ರಂದು ಪ್ರಾರಂಭವಾದ ಅಮರನಾಥ ಯಾತ್ರೆಯಲ್ಲಿ ಭಾನುವಾರ ಒಂದೇ ದಿನ 21,512 ಯಾತ್ರಿಕರು ಪವಿತ್ರ ಗುಹೆ ದೇವಾಲಯದಲ್ಲಿ ದರ್ಶನ ಪಡೆದಿದ್ದಾರೆ. ಯಾತ್ರಿಗಳ ದಂಡು: ಸೋಮವಾರ ಜಮ್ಮುವಿನ ಭಗವತಿ ನಗರ ಯಾತ್ರಿ...