ಕುಂಸಿ : ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 32 ವರ್ಷದ ವಾಸು ಎಂಬ ಯುವಕನನ್ನು ಇಬ್ಬರು ಪರಿಚಿತರು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ, ಆದರೆ ಪೊಲೀಸರ ತನಿಖೆಯಿಂದ ಇದು ಇನ್ನೂ ಖಚಿತಪಡಬೇಕಿದೆ. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ… ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ, ಕುಂಸಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ವಾಸು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ವಿವರಗಳು ಪೊಲೀಸ್ ತನಿಖೆಯ ನಂತರ ಹೊರಬೀಳುವ ಸಾಧ್ಯತೆಯಿದೆ. ಜಾಹಿರಾತು: ಇದನ್ನು ಓದಿ : ಹೊಸನಗರ: ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು!! ಏನಿದು ಪ್ರಕರಣ? ಪೂರ್ತಿ ಓದಲು ಕೆಳಗಿರುವ...
ಕೆ.ಎಸ್. ಈಶ್ವರಪ್ಪ: “ನನ್ನ ಜೀವ ಬಿಜೆಪಿಗೇ ಮೀಸಲು, ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ” – ಮಾಜಿ ಡಿಸಿಎಂರಿಂದ ರಾಜಕೀಯ ಭವಿಷ್ಯದ ಸ್ಪಷ್ಟನೆ
ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ರಾಜಕಾರಣಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಮ್ಮ ರಾಜಕೀಯ ನಿಲುವು ಮತ್ತು ಬಿಜೆಪಿಯೊಂದಿಗಿನ ತಮ್ಮ ಸಂಬಂಧದ ಕುರಿತು ಬಳ್ಳಾರಿಯಲ್ಲಿಂದು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ತಾವು ಯಾವುದೇ ಕಾರಣಕ್ಕೂ ಬೇರೆ ಪಕ್ಷವನ್ನು ಸೇರುವುದಿಲ್ಲ, ತಮ್ಮ ಜೀವವಿರುವುದು ಬಿಜೆಪಿಯಲ್ಲಿಯೇ ಎಂದು ಅವರು ಪುನರುಚ್ಚರಿಸಿದರು. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ… ಪಕ್ಷ ನಿಷ್ಠೆ ಮತ್ತು ಕುರುಬ ಸಮುದಾಯದ ಒತ್ತಾಯ ರವಿವಾರ (ಜೂನ್ 29) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಇತ್ತೀಚೆಗೆ ಬಿಜೆಪಿ ಕುರುಬ ಮುಖಂಡರ ಸಭೆಯಲ್ಲಿ ತಮ್ಮನ್ನು ಬಿಜೆಪಿಗೆ ಮತ್ತೆ ಕರೆತರಬೇಕು ಎಂಬ ಒತ್ತಾಯ ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದರು. “ನನಗೆ ಅದ್ಯಾವುದೂ ಗೊತ್ತಿಲ್ಲ. ನನ್ನನ್ನು ಬಿಜೆಪಿಗೆ ತೆಗೆದುಕೊಳ್ಳಬೇಕು ಎಂದು ಕೆಲವರು ಒತ್ತಾಯ ಮಾಡಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅದು ಅವರ ಪ್ರೀತಿ-ವಿಶ್ವಾಸದಿಂದ ಮಾತನಾಡಿದ...
ಹೊಸನಗರ: ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತೋಟದಕೊಪ್ಪ ಗ್ರಾಮದ ವಿಜಾಪುರ ಎಂಬಲ್ಲಿ ಅಮಾನವೀಯ ಘಟನೆಯೊಂದು ವರದಿಯಾಗಿದೆ. ಮೇಯಲು ಬಿಟ್ಟಿದ್ದ ಹಸುವೊಂದರ ಕೆಚ್ಚಲನ್ನು ದುಷ್ಕರ್ಮಿಗಳು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ… ಹಸುವಿನ ಮಾಲೀಕ ನವೀನ್ ಅವರು ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಎಂದಿನಂತೆ ತಮ್ಮ ದನಗಳನ್ನು ಮೇಯಲು ಬಿಡಲಾಗಿತ್ತು. ಶನಿವಾರ ಸಂಜೆ 4:30ರ ಸುಮಾರಿಗೆ ಊರಿನ ಜನರು ನವೀನ್ ಅವರಿಗೆ ಕರೆ ಮಾಡಿ, ಅವರ ದನದ ಕೆಚ್ಚಲಿನಲ್ಲಿ ರಕ್ತ ಸೋರುತ್ತಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನು ಓದಿ : ಸೊರಬ ಠಾಣಾ ವ್ಯಾಪ್ತಿಯಲ್ಲಿ ಮರ್ಯಾದಾ ಹತ್ಯೆ ಪ್ರಕರಣ! ತಂದೆಯಿಂದಲೇ ಮಗಳ ಹತ್ಯೆಗೆ ಯತ್ನ; ತಂದೆ ಬಂಧನ! ಏನಿದು ಪ್ರಕರಣ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ಪೂರ್ತಿ ಓದಲು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ...
ಪ್ರಯಾಣದ ವೇಳೆ ವಾಂತಿ ಬರುತ್ತಾ? ಕಾರಣ ಏನು, ತಡೆಯುವುದು ಹೇಗೆ? ಇಲ್ಲಿದೆ ಸುಲಭ ಉಪಾಯಗಳು!
ಪ್ರಯಾಣದ ವೇಳೆ ವಾಂತಿ ಅಥವಾ ತಲೆಸುತ್ತು ಬರುವುದು ಹಲವರ ಸಾಮಾನ್ಯ ಸಮಸ್ಯೆ. ಬಸ್, ಕಾರು, ರೈಲು, ವಿಮಾನ ಅಥವಾ ಹಡಗಿನಲ್ಲಿ ಹೋಗುವಾಗ ವಾಕರಿಕೆ, ತಲೆನೋವು, ಬೆವರುವಿಕೆ ಮತ್ತು ವಾಂತಿ ಬಂದು ಪ್ರಯಾಣದ ಮಜವೇ ಹಾಳಾಗುವ ಅನುಭವ ನಿಮಗೂ ಆಗಿದೆಯೇ? ಇದನ್ನು ‘ಮೋಷನ್ ಸಿಕ್ನೆಸ್’ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುತ್ತಾರೆ. ಆದರೆ, ಈ ಸಮಸ್ಯೆ ಯಾಕೆ ಬರುತ್ತೆ ಮತ್ತು ಇದನ್ನು ತಡೆಯೋಕೆ ಏನ್ ಮಾಡ್ಬೇಕು ಅಂತಾ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ! ಪ್ರಯಾಣದ ವೇಳೆ ವಾಂತಿ ಯಾಕೆ ಬರುತ್ತೆ? ವಾಹನದಲ್ಲಿ ನಾವು ಕುಳಿತಿರುವಾಗ ನಮ್ಮ ಕಣ್ಣುಗಳು ವಾಹನದೊಳಗಿನ ಸ್ಥಿರ ವಸ್ತುಗಳನ್ನು ನೋಡುತ್ತವೆ. ಆದರೆ, ನಮ್ಮ ದೇಹದ ಒಳಗಿರುವ ಸಮತೋಲನವನ್ನು ಕಾಪಾಡುವ ಒಳಗಿವಿಯು ವಾಹನದ ಚಲನೆಯನ್ನು ಗ್ರಹಿಸುತ್ತದೆ. ಹೀಗೆ ಕಣ್ಣು ಮತ್ತು ಕಿವಿಯಿಂದ ಬರುವ ವಿಭಿನ್ನ ಸಂಕೇತಗಳು ಮೆದುಳಿಗೆ ಗೊಂದಲವನ್ನುಂಟು ಮಾಡುತ್ತವೆ. ವಿಶೇಷವಾಗಿ ಪ್ರಯಾಣ ಮಾಡುವಾಗ ಪುಸ್ತಕ ಓದುವುದು ಅಥವಾ ಮೊಬೈಲ್ ನೋಡಿದರೆ ಈ ಗೊಂದಲ ಇನ್ನಷ್ಟು ಹೆಚ್ಚುತ್ತದೆ. ಈ ಸಂಕೇತಗಳ ಗೊಂದಲದಿಂದಲೇ ತಲೆಸುತ್ತು...
ಜ್ಯೋತಿಷ್ಯದ ಪ್ರಕಾರ ಜೂನ್ 30, 2025 ರಿಂದ ಜುಲೈ 06, 2025 ರವರೆಗಿನ ನಿಮ್ಮ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾರಿಗೆ ಸವಾಲು? ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮ್ಮ ವಾರವನ್ನು ಉತ್ತಮವಾಗಿ ಯೋಜಿಸಿಕೊಳ್ಳಿ!
ಈ ವಾರ ಗ್ರಹಗಳ ಸ್ಥಾನಪಲ್ಲಟಗಳು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಲಿವೆ? ಆರೋಗ್ಯ, ಹಣಕಾಸು, ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಶಿಯವರಿಗೆ ನಿರ್ದಿಷ್ಟ ಸಲಹೆಗಳು ಇಲ್ಲಿವೆ. ನಿಮ್ಮ ಅದೃಷ್ಟದ ಬಾಗಿಲು ತೆರೆಯಲು ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಾಗಿ! ♈ ಮೇಷ ರಾಶಿ (Aries): ಸಮಗ್ರ ವಿಶ್ಲೇಷಣೆ: ಈ ವಾರ ನಿಮ್ಮ ಮನಸ್ಸಿನ ಮೇಲೆ ಜಾಗತಿಕ ವಿದ್ಯಮಾನಗಳ ಪ್ರಭಾವ ಹೆಚ್ಚಿರಬಹುದು, ಆದರೆ ಭಾರತೀಯರಾದ ನಾವು ಅವುಗಳಿಗೆ ಅತಿಯಾಗಿ ಭಯಪಡಬೇಕಾಗಿಲ್ಲ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿದರೂ, ಕೆಲಸಗಳು ಸ್ವಲ್ಪ ನಿಧಾನಗತಿಯಲ್ಲಿ ಸಾಗಬಹುದು. ವೃತ್ತಿಜೀವನದಲ್ಲಿನ ಅಪೂರ್ಣಗೊಂಡ ಯೋಜನೆಗಳು ಮತ್ತು ವೈಯಕ್ತಿಕ ಜವಾಬ್ದಾರಿಗಳು ಈ ವಾರ ಪೂರ್ಣಗೊಳ್ಳುವ ಲಕ್ಷಣಗಳಿವೆ, ಇದು ನಿಮಗೆ ದೊಡ್ಡ ಸಮಾಧಾನ ತರಲಿದೆ. ಜುಲೈ 1 ರಂದು ಬರುವ ಸ್ಕಂದ ಷಷ್ಠಿ ಯಂದು ಸುಬ್ರಹ್ಮಣ್ಯ ದೇವರನ್ನು ಪೂಜಿಸುವುದರಿಂದ ಪುಣ್ಯದ ಬಾಗಿಲು ತೆರೆಯಲಿದೆ ಮತ್ತು ದೈವಿಕ ಅನುಗ್ರಹ ಪ್ರಾಪ್ತಿಯಾಗಲಿದೆ. ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಿ; ಸಣ್ಣಪುಟ್ಟ ಸಮಸ್ಯೆಗಳಿದ್ದರೆ ತಕ್ಷಣವೇ...
ಆನಂದಪುರದಲ್ಲಿ ಗಾಂಜಾ ಅಮಲಿನ ಚಾಲಕ ಅಂದರ್! ಪೊಲೀಸ್ ಎಚ್ಚರಿಕೆಗೆ ಮತ್ತೊಂದು ನಿದರ್ಶನ
ಆನಂದಪುರ: ಮದ್ಯಪಾನ ಮಾಡಿ ವಾಹನ ಚಲಾಯಿಸುವುದೇ ಅಪರಾಧ ಎನ್ನುವಾಗ, ಅದಕ್ಕಿಂತಲೂ ಅಪಾಯಕಾರಿ ಮಾದಕ ವಸ್ತು ಗಾಂಜಾ ಸೇವಿಸಿ ರಸ್ತೆಯಲ್ಲಿ ರಾಕ್ಷಸನಂತೆ ಲಾರಿ ಚಲಾಯಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಆನಂದಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಯುವ ಸಮುದಾಯದಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿರುವ ಆತಂಕದ ನಡುವೆಯೇ, ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಈ ಘಟನೆ ಗಂಭೀರ ಎಚ್ಚರಿಕೆಯ ಗಂಟೆಯಾಗಿದೆ. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ… ಏನಿದು ಘಟನೆ? ಶಿವಮೊಗ್ಗ ಜಿಲ್ಲೆಯ ಆನಂದಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಬೆಳ್ತಂಗಡಿ ಮೂಲದ ಮಹಮ್ಮದ್ ಅಹ್ಸನ್ (25) ಎಂಬಾತ ಸಾಗರದಿಂದ ಆನಂದಪುರದ ಕಡೆಗೆ ಲಾರಿಯೊಂದನ್ನು ತೀರಾ ಅಡ್ಡದಿಡ್ಡಿ, ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದ. ವಾಹನದ ಈ ವಿಚಿತ್ರ ಚಲನವಲನವನ್ನು ಗಮನಿಸಿದ ಆನಂದಪುರ ಠಾಣಾ ಸಬ್ ಇನ್‌ಸ್ಪೆಕ್ಟರ್ ಪ್ರವೀಣ್ ಅವರಿಗೆ ತಕ್ಷಣವೇ ಅನುಮಾನ ಮೂಡಿದೆ. ತಡಮಾಡದೆ, ಠಾಣೆ ಎದುರೇ ಲಾರಿಯನ್ನು ತಡೆದು ನಿಲ್ಲಿಸಿ...
ಕನಸು, ಛಲ, ಪರಿಶ್ರಮ: ಕೋಚಿಂಗ್ ಇಲ್ಲದೆ 263ನೇ ರ‍್ಯಾಂಕ್ ಗಳಿಸಿ IAS ಆದ ಮೈಸೂರಿನ ಪ್ರೀತಿಯ ಯಶೋಗಾಥೆ!
ಭಾರತದಲ್ಲಿ ಪ್ರತಿಷ್ಠಿತ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಎಂದರೆ ಲಕ್ಷಾಂತರ ಆಕಾಂಕ್ಷಿಗಳು, ವರ್ಷಗಳ ತಯಾರಿ, ಕೋಚಿಂಗ್ ಸೆಂಟರ್‌ಗಳ ಮೊರೆ, ಪುಸ್ತಕಗಳ ರಾಶಿ… ಇದು ಸಾಮಾನ್ಯ ಚಿತ್ರಣ. ಆದರೆ, ಮೈಸೂರು ಜಿಲ್ಲೆಯ ಪುಟ್ಟ ಹಳ್ಳಿ ಅಂಕೆನಹಳ್ಳಿಯ ಎ.ಸಿ. ಪ್ರೀತಿ ಈ ಎಲ್ಲಾ ಮಾಮೂಲಿ ಲೆಕ್ಕಾಚಾರಗಳನ್ನು ಮೀರಿ ನಿಂತಿದ್ದಾರೆ. ಯಾವುದೇ ದುಬಾರಿ ಕೋಚಿಂಗ್ ಪಡೆಯದೆ, ತಮ್ಮ ಮೂರನೇ ಪ್ರಯತ್ನದಲ್ಲಿ 2024ರ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅದ್ಭುತ 263ನೇ ರ‍್ಯಾಂಕ್ ಗಳಿಸಿ, ದೇಶದ ಅತ್ಯುನ್ನತ ಸೇವೆ, ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿದ್ದಾರೆ. ಇದು ಕೇವಲ ಒಂದು ರ‍್ಯಾಂಕ್ ಅಲ್ಲ, ಲಕ್ಷಾಂತರ ಆಕಾಂಕ್ಷಿಗಳಿಗೆ ಅಸಾಧ್ಯವಾದುದು ಸಾಧ್ಯ ಎಂಬುದನ್ನು ತೋರಿಸಿದ ದಾರಿದೀಪ! ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ… ರೈತ ಕುಟುಂಬದಿಂದ ಆಕಾಶದೆತ್ತರಕ್ಕೆ ಏರಿದ ಹೆಜ್ಜೆಗಳು ಪ್ರೀತಿ, ರೈತರಾದ ಚನ್ನಬಸಪ್ಪ ಮತ್ತು ನೇತ್ರಾವತಿ ದಂಪತಿಗಳ ಮಗಳು. ಮಣ್ಣಿನಲ್ಲಿ ದುಡಿದು...
ಶಿವಮೊಗ್ಗ: ಮರ್ಯಾದಾ ಹತ್ಯೆಗೆ ಮಗಳ ಹತ್ಯೆ ಯತ್ನ; ತಂದೆ ಬಂಧನ! ಏನಿದು ಪ್ರಕರಣ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
ಶಿವಮೊಗ್ಗ: ರಾಜ್ಯದಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಬೆಚ್ಚಿಬೀಳಿಸುತ್ತಿರುವಾಗಲೇ, ಶಿವಮೊಗ್ಗದಲ್ಲಿ ಮತ್ತೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಗರ್ಭಿಣಿಯಾದ ಮಗಳನ್ನೇ ಹಗ್ಗದಿಂದ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ ತಂದೆಯ ಕ್ರೂರ ಕೃತ್ಯ ವೈಫಲ್ಯಗೊಂಡಿದ್ದು, ಜೀವನ್ಮರಣ ಹೋರಾಟದಿಂದ ಬದುಕುಳಿದ ಮಗಳು ಈಗ ಚೇತರಿಸಿಕೊಳ್ಳುತ್ತಿದ್ದಾಳೆ. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ… ಈ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಮಳವಳ್ಳಿ ತಾಂಡಾದಲ್ಲಿ ನಡೆದಿದೆ. ಪುತ್ರಿ ಗರ್ಭಿಣಿಯಾಗಿರುವ ವಿಷಯ ತಿಳಿದ ತಂದೆ ಧರ್ಮಪ್ಪ ನಾಯಕ್, ತಮ್ಮ ಕುಟುಂಬದ ‘ಮರ್ಯಾದೆಗೆ’ ಕಳಂಕ ಬಂದಿದೆ ಎಂದು ಭಾವಿಸಿ ಕಠೋರ ನಿರ್ಧಾರ ಕೈಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ, ತಾಯಿ ಸಹಿತ, ಮಗಳನ್ನು ಸೊರಬದ ಉಳವಿ ಬಳಿಯ ಕಾನಹಳ್ಳಿ ಕಾಡು ಗಳತ್ತ ಕರೆದೊಯ್ದಿದ್ದಾರೆ. ಅಲ್ಲಿ, ಮಾನವೀಯತೆ ಮರೆತ ತಂದೆ ಧರ್ಮಪ್ಪ, ತನ್ನ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೆ ಯತ್ನಿಸಿದ್ದಾನೆ. ತಾಯಿ ಕಾಲು...
ಆರ್ಯ ವೈಶ್ಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಆರ್ಯ ವೈಶ್ಯ ಅಭಿವೃದ್ಧಿ ನಿಗಮದಿಂದ ಮಹತ್ವದ ಯೋಜನೆಗಳು ಜಾರಿ – ಶ್ರೀ ಎಸ್.ಎನ್. ಶ್ರೀನಾಗ ಮಾಹಿತಿ
ಶಿವಮೊಗ್ಗ: ಆರ್ಯ ವೈಶ್ಯ ಸಮುದಾಯದ ಆರ್ಥಿಕ ಸಬಲೀಕರಣ ಮತ್ತು ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ನಿಗಮವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಶಿವಮೊಗ್ಗದ ಹೆಮ್ಮೆಯ ನಾಯಕರಾದ ಶ್ರೀ ಡಿ.ಎಸ್. ಅರುಣ್ ಅವರ ನಿರಂತರ ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ, ನಿಗಮವು 2025-26ನೇ ಸಾಲಿಗೆ ಹಲವು ನೂತನ ಮತ್ತು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ನಿರ್ದೇಶಕರು ಹಾಗೂ ಬಿಜೆಪಿ ಶಿವಮೊಗ್ಗ ನಗರದ ಮಾಧ್ಯಮ ಸಂಚಾಲಕರಾದ ಶ್ರೀ ಎಸ್.ಎನ್. ಶ್ರೀನಾಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ… ಈ ಕುರಿತು ಮಾಹಿತಿ ನೀಡಿದ ಶ್ರೀ ಎಸ್.ಎನ್. ಶ್ರೀನಾಗ ಅವರು, “ಆರ್ಯ ವೈಶ್ಯ ಸಮುದಾಯವನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ಒದಗಿಸುವುದು ನಿಗಮದ...
ಮಹದೇಶ್ವರ ಬೆಟ್ಟದ ಹುಲಿಗಳ ಸಾವಿಗೆ ‘ಸೇಡು’ ಕಾರಣ! ಮೂವರು ಆರೋಪಿಗಳು ಅರೆಸ್ಟ್..! ಇಲ್ಲಿದೆ ಕಂಪ್ಲೀಟ್ ಕಹಾನಿ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ವಲಯದಲ್ಲಿ ನಡೆದಿರುವ ಐದು ಹುಲಿಗಳ ಸರಣಿ ಸಾವಿನ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಲಭಿಸಿದೆ. ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂಬುದು ದೃಢಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತನ್ನ ಹಸುವನ್ನು ಕೊಂದ ಸೇಡಿಗೆ ಹುಲಿಗಳಿಗೆ ವಿಷವಿಕ್ಕಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ… ಘಟನೆ ಹಿನ್ನೆಲೆ: ಕಳೆದ ಗುರುವಾರ, ಅಂದರೆ ಜೂನ್ 26, 2025 ರಂದು, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದ ಗಜನೂರು ಗಸ್ತು ಅರಣ್ಯ ಪ್ರದೇಶದ ಮೀಣ್ಯಂನಲ್ಲಿ ಒಂದು ತಾಯಿ ಹುಲಿ (8 ವರ್ಷ) ಮತ್ತು ಅದರ ನಾಲ್ಕು 10 ತಿಂಗಳ ಮರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದವು. ಹುಲಿಗಳ ಮೃತದೇಹಗಳು ಅಕ್ಕಪಕ್ಕದಲ್ಲೇ ಪತ್ತೆಯಾಗಿದ್ದು, ಸ್ಥಳದಲ್ಲೇ ಒಂದು ಹಸುವಿನ...









