ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯನ್ನು ಶೀಘ್ರವೇ ಮಾಡಬೇಕು. ರಾಷ್ಟ್ರ ಭಕ್ತರ ಬಳಗದಿಂದ ಪಾಲಿಕೆಯ 35 ವಾರ್ಡ್‌ಗಳಲ್ಲೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವಕ್ಕೆ ಮೊದಲ ಆದ್ಯತೆ. ವಾರ್ಡ್‌ಗಳ ನಡುವೆ ಜನಸಂಪರ್ಕ ಇರುವ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು ಸುದ್ದಿಗೊಷ್ಟಿಯಲ್ಲಿ ತಿಳಿಸಿದರು. ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿದೆ?. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ, ಶಿಮೂಲ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಎರಡೂ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನ ತಿರಸ್ಕರಿಸಿದ್ದಾರೆ ಎಂದು ಹೇಳಿದರು. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕು. ನನ್ನ ಜೀವನದಲ್ಲಿ ಯಾವುದೇ ಚುನಾವಣೆ ನಿಲ್ಲಲು ನಾನು ಬೆಂಬಲ ನೀಡಿಲ್ಲ. ಚುನಾವಣೆ ಬಿಟ್ಟರೆ ಪ್ರಜಾಪ್ರಭುತ್ವ ಇಲ್ಲದಂತೆ ಆಗುತ್ತದೆ ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟುಬಿಡಿ. ಯಾವ ಮೀಸಲಾತಿಯಿತ್ತೋ ಅದೇ ಮೀಸಲಾತಿಯಲ್ಲಿ ಚುನಾವಣೆ ನಡೆಸಿ ಇಲ್ಲವೇ...
ಗಾಂಧಿಪಾರ್ಕ್ ಸಮೀಪ ನಿಲ್ಲಿಸಿದ್ದ ಕಾರಿನ ಗ್ಲಾಸ್ ಹೊಡೆದು ಕಳ್ಳತನ ! ಏನಿದು ಪ್ರಕರಣ ?
ಶಿವಮೊಗ್ಗ : ನಗರದ ಗಾಂಧಿಪಾರ್ಕ್ ಸಮೀಪ ಹಾಡು ಹಗಲೇ ಸಾರ್ವಜನಿಕರು ಓಡಾಡುತ್ತಿದ್ದ ಸಮಯದಲ್ಲೇ ಕಾರಿನ ಗ್ಲಾಸ್ ಒಡೆದು ಐಪ್ಯಾಡ್ ಕಳ್ಳತನ ಆಗಿರುವ ಘಟನೆ ನಡೆದಿದೆ. ಗಾಂಧಿ ಪಾರ್ಕ್ ನ ಬಳಿ ಇರುವ ಶೌಚಾಲಯ ಸಮೀಪ ಇಎಸ್‌ಐ ಮೆಡಿಕಲ್ ಆಫೀಸರ್ ರಾಕೇಶ್ ಅನ್ನುವವರು ಕಾರು ನಿಲ್ಲಿಸಿದ್ದರು. ಕಾರು ನಿಲ್ಲಿಸಿ ಶೋ ಹೋಲಿಸಿಕೊಂಡು ಬರಲು ತೆರಳಿದ್ದರು. ನಂತರ ವಾಪಸ್ ಆಗುವಾಗ ಕಾರಿನ ಹಿಂಬದಿಯ ಎಡಗಡೆ ಗ್ಲಾಸ್ ಹೊಡೆದಿತ್ತು. ಈ ವೇಳೆ ಪರಿಶೀಲಿಸಿದಾಗ ಯಾರೋ ಕಿಡಿಗೇಡಿಗಳು ಕಾರಿನ ಸೀಟಿನ ಮೇಲೆ ಇಟ್ಟಿದ್ದ 60 ಸಾವಿರ ಮೌಲ್ಯದ ಐಪ್ಯಾಡ್ ಕಳ್ಳತನ ಮಾಡಿದ್ದಾರೆ. ತಮ್ಮ ಕೆಲಸಕ್ಕೆ ಸಂಬಂಧಿಸಿದ ಮಾಹಿತಿಗಳು ಇದರಲ್ಲಿ ಇದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಮಾಜಿ ಕಾರ್ಪೊರೇಟರ್ ಮೊಟ್ಟೆ ಸತೀಶ್ ಮೇಲೆ ಹಲ್ಲೆ ! ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್ ಹೇಳಿದ್ದೇನು?
ಶಿವಮೊಗ್ಗ : ಶಿವಮೊಗ್ಗದ ಕುಸ್ಕೂರಿನಲ್ಲಿ ನೆನ್ನೆ ರಾತ್ರಿ ಮಾಜಿ ಕಾರ್ಪೊರೇಟರ್ ಸತ್ಯನಾರಾಯಣ ( ಮೊಟ್ಟೆ ಸತೀಶ್ ) ಮೇಲೆ ನಡೆದ ಹಲ್ಲೆ ಸಂಬಂಧ ಶಿವಮೊಗ್ಗ ಜಿಲ್ಲಾ ವರಿಷ್ಟಾಧಿಕಾರಿ ಎಸ್. ಪಿ ಮಿಥುನ್ ಕುಮಾರ್ ಜಿ.. ಕೆ ಮಾಹಿತಿ ನೀಡಿದ್ದಾರೆ. ಹಲ್ಲೆ ನಡೆದಿರುವುದು ಜಮೀನು ವ್ಯಾಜ್ಯದ ಸಲುವಾಗಿ ಜಮೀನು ಖರೀದಿಯ ವಿಚಾರಕ್ಕೆ ಸತ್ಯನಾರಾಯಣ ರಾಜು ವ್ಯಾಜ್ಯ ಹೊಂದಿದ್ದರು. ಅದೇ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ರೌಡಿ ಎಲಿಮೆಂಟ್ಸ್ ಕಂಡು ಬಂದಿಲ್ಲ ಎಂದು ಎಸ್. ಪಿ ಸ್ಪಷ್ಟಪಡಿಸಿದ್ದಾರೆ. ಮಾಜಿ ಕಾರ್ಪೊರೇಟರ್ ಸತ್ಯನಾರಾಯಣ ರಾಜು (ಮೊಟ್ಟೆ ಸತೀಶ್) ಕುಸ್ಕೂರು ಬಳಿ ಜಮೀನು ವಿಚಾರವಾಗಿ ಈ ಹಲ್ಲೆ ನಡೆದಿದೆ. ಜಮೀನು ಖರೀದಿ ವಿಚಾರಕ್ಕೆ ಸತೀಶ್ ವ್ಯಾಜ್ಯ ಹೊಂದಿದ್ದರು. ನಿನ್ನೆ ದಿನ ರಾತ್ರಿ ತಮ್ಮ ಜಮೀನಿನ ಬಳಿ ಸತೀಶ್ ತೆರಳಿದ್ದಾಗ. ಅವರ ಕಾರಿನ ಮೇಲೆ ದೊಣ್ಣೆಗಳಿಂದ ಗುಂಪೊಂದು ದಾಳಿ ನಡೆಸಿದೆ . ಬಳಿಕ ಸತೀಶ್ ಮೇಲೆ ಗುಂಪು ಹಲ್ಲೆ ಮಾಡಿದೆ. ಸತೀಶ್ ಅಲ್ಲಿಂದ ತಪ್ಪಿಸಿಕೊಂಡು...
BREAKING NEWS : ಮತ್ತೆ ಆಕ್ಟಿವ್ ಆಯ್ತಾ ಶಿವಮೊಗ್ಗ ಅಂಡರ್ ವರ್ಲ್ಡ್ ? ಮೊಟ್ಟೆ ಸತೀಶನ ಮೇಲೆ ಅಟ್ಯಾಕ್ ! ಮೆಗ್ಗಾನ್ ಗೆ ದಾಖಲು !
ಶಿವಮೊಗ್ಗ : ನೆನ್ನೆ ರಾತ್ರಿ ಮಾಜಿ ಕಾರ್ಪೊರೇಟರ್ ಮೊಟ್ಟೆ ಸತೀಶನ ಮೇಲೆ ಅಟ್ಟ್ಯಾಕ್ ಆಗಿದೆ ಎಂಬ ಮಾಹಿತಿ ತಿಳಿದುಬರುತ್ತಿದೆ. ಶಿವಮೊಗ್ಗ ಅಂಡರ್ ವರ್ಲ್ಡ್ ಮತ್ತೆ ಸದ್ದು ಮಾಡಿತಾ ಎಂಬ ಅನುಮಾನ ಮೂಡಿಸುತ್ತಿದೆ. ನೆನ್ನೆ ರಾತ್ರಿ ಮಾಜಿ ಕಾರ್ಪೊರೇಟರ್ ಮೊಟ್ಟೆ ಸತೀಶ್ ಕಾರಿನಲ್ಲಿ ತೆರುಳುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮೊಟ್ಟೆ ಸತೀಶನ ಮೇಲು ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದ್ದು. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಇನ್ನೂ ಹಲ್ಲೆಗೊಳಗಾದ ಮೊಟ್ಟೆ ಸತೀಶ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು. ಈ ಬಗ್ಗೆ ಪೊಲೀಸ್ ಮೂಲಗಳು ಏನು ಹೇಳುತ್ತವೆ ಎಂದು ಕಾಯಬೇಕಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಕಿಡಿಗೇಡಿಗಳಿಂದ ಮನೆಯೊಂದರ ಮೇಲೆ ಕಲ್ಲು ತುರಾಟ !
ಶಿವಮೊಗ್ಗ : ನಗರದ ಕಾಮಾಕ್ಷಿ ಬೀದಿಯ ಮನೆಯೆೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಏನೋಶಬ್ದವಾಗಿದೆ ಎಂದು ಹೊರಗೆ ಬಂದು ನೋಡಿದ ವೃದ್ಧನ ಮೇಲು ಇಟ್ಟಿಗೆ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ರಾಮಣ್ಣ ಎಂಬುವವರ ಮನೆಯ ಮೇಲೆ ಆಗಸ್ಟ್ 11ರ ರಾತ್ರಿ ಯಾರೋ ಕಿರಿಕಿಡಿಗಳು ಕಲ್ಲು ತೂರಿದ್ದಾರೆ. ರಾಮಣ್ಣ ಎಂಬವವರು ಆಗಸ್ಟ್ 11ರ ರಾತ್ರಿ ಊಟ ಮುಗಿಸಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ಹೊರಗೆ ಶಬ್ದವಾಗಿದೆ. ರಾಮಣ್ಣ ಮತ್ತು ಅವರ ಪತ್ನಿ ಬಾಗಿಲು ತೆಗೆದಾಗ ಕಿಡಿಗೇಡಿಗಳು ತೂರಿದ ಇಟ್ಟಿಗೆ ರಾಮಣ್ಣ ಅವರ ಭುಜದ ಮೇಲೆ ಬಿದ್ದಿದೆ. ಕೂಡಲೆ ಮೊಮ್ಮಗನಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಮೊಮ್ಮಗನೊಂದಿಗೆ ತೆರಳುತ್ತಿದ್ದಾಗ ಕಿಡಿಗೇಡಿಗಳು ಪುನಃ ಕಲ್ಲು ತೂರಿದ್ದಾರೆ. ಅದೃಷ್ಟವಶಾತ್ ಪಾರಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ರಾಮಣ್ಣ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಸಂಭ್ರಮದ ಸ್ವಾತಂತ್ರ್ಯೋತ್ಸವ : ನಗರದ ವಿವಿದೆಡೆ ಹಾರಿತು ತ್ರಿವರ್ಣ ಧ್ವಜ ! ಶಿವಮೊಗ್ಗದಲ್ಲಿ ಹೇಗಿತ್ತು ಸ್ವಾತಂತ್ರ್ಯದ ಸಂಭ್ರಮ !
ಶಿವಮೊಗ್ಗ : ನಗರದ ವಿವಿಧಡೆ ಜನಪ್ರತಿನಿಧಿಗಳು ವಿವಿಧ ಸಂಸ್ಥೆಗಳಲ್ಲಿ ವಿವಿಧ ಕಚೇರಿಗಳಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಿ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ಇದಕ್ಕೆ ಸಂಬಂಧಿಸಿದ ಕೆಲ ಫೋಟೋ ಮತ್ತು ವಿವರಣೆಗಳು ಇಲ್ಲಿದೆ ! ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯಕ್ ಅವರು 78ನೆಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹೊಳೆ ಹೊನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. 78 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಎನ್ ಚನ್ನಬಸಪ್ಪ ಅವರು, ಪಾಲಿಕೆ ಆಯುಕ್ತರಾದ ಶ್ರೀಮತಿ ಕವಿತಾ ಯೋಗಪ್ಪನವರ್ ಅವರು ಧ್ವಜಾರೋಹಣ ಮಾಡಿದ ಸಂದರ್ಭ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರು ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ. ಮಾಜಿ ಸಚಿವರಾದ ಕೆಎಸ್ ಈಶ್ವರಪ್ಪನವರು ಇಂದು 78ನೇ...
ಏಸೂರು ಕೊಟ್ಟರೂ ಈಸೂರು ಕೊಡೆವುಆಂಗ್ಲರ ವಿರುದ್ಧ ರಣಕಹಳೆ ಮೊಳಗಿಸಿದ ಕನ್ನಡಿಗರ ಕಥನ
ಇದು ವಸಾಹತುಶಾಹಿಯ ಬ್ರಿಟಿಷ್ ಸಾಮ್ರಾಜ್ಯದ ಎದುರು ತೊಡೆ ತಟ್ಟಿ ದೇಶದಲ್ಲೇ ಮೊದಲ ಸ್ವತಂತ್ರ ಗ್ರಾಮ ಎಂದು ಹೆಗ್ಗಳಿಕೆ ಪಡೆದ ಶಿವಮೊಗ್ಗದ ಪುಟ್ಟ ಹಳ್ಳಿಯ ಕನ್ನಡಿಗರ ರೋಚಕ ಕಥನ. ಭಾರತ ದೇಶದಲ್ಲಿ ಬ್ರಿಟಿಷರ ದುರಾಡಳಿತವನ್ನು ಕಿತ್ತೊಗೆದು ಸ್ವಾತಂತ್ರ್ಯ ಪಡೆಯಲು, ಜನಸಾಮಾನ್ಯರುಗಳು ಮಾಡಿರುವ ಹೋರಾಟ, ದೇಶಪ್ರೇಮ, ತ್ಯಾಗ-ಬಲಿದಾನಗಳು ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಕರ್ನಾಟಕದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನಸಾಮಾನ್ಯರುಗಳು ಮಾಡಿದ ಕೆಚ್ಚಿನ ಹೋರಾಟ, ಬಲಿದಾನ, ತ್ಯಾಗಕ್ಕೆ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟ ಒಂದು ಅವಿಸ್ಮರಣೀಯ ಸಾಹಸಗಾಥೆಯಾಗಿದೆ. ಮುಗ್ಧ ರೈತಾಪಿ ಜನರು, ಯಾರ ಬಲಿಷ್ಠ ನಾಯಕತ್ವದ ಮಾರ್ಗದರ್ಶನವೂ ಇಲ್ಲದೆ 1942 ರ ಕ್ವಿಟ್ ಇಂಡಿಯಾ ಚಳುವಳಿಯ ಕಾಲದಲ್ಲಿಯೇ ಈಸೂರು ಗ್ರಾಮವನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿ, ಬ್ರಿಟಿಷರ ವಿರುದ್ಧ ಎದೆತಟ್ಟಿ ಹುತಾತ್ಮರಾದ, ರೋಮಾಂಚನಕಾರಿ, ಕರುಣಾಜನಕ ಕಥೆ ದೇಶದ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು. ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ ತಿಂಗಳಲ್ಲಿ ತಕ್ಷಣ ನೆನಪಾಗುವ ಹೆಸರು ಈಸೂರು ಗ್ರಾಮ. ಭಾರತದ ಭೂಪಟದಲ್ಲಿ ಒಂದು ವಿಶೇಷ...
ಚುಂಚಾದ್ರಿ ಕಪ್ ವಾಲಿಬಾಲ್ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಬಂದಿದ್ದ ಉಸ್ತುವಾರಿ ಸಚಿವರು ಕೆಂಡಮಂಡಲರಾಗಿದ್ದೇಕೆ ?
ಶಿವಮೊಗ್ಗ : ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವಂತಹ ಚುಂಚಾದ್ರಿ ಕಪ್ ವಾಲಿಬಾಲ್ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಆಗಮಿಸಿದಂತಹ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಅಧಿಕಾರಿಗಳ ಮೇಲೆ ಗರಂ ಆಗಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಉಸ್ತುವಾರಿ ಸಚಿವರು ಬರುವ ಮಾಹಿತಿಯನ್ನ ತಿಳಿದು ಸ್ಥಳದಲ್ಲಿ ನಡೆದಿದ್ದ ಸಾರ್ವಜನಿಕರು ಮತ್ತು ಕ್ರೀಡಾಪಟುಗಳು ಮಧು ಬಂಗಾರಪ್ಪನವರಿಗೆ ಕ್ರೀಡಾಂಗಣದ ಅವ್ಯವಸ್ಥೆ ಕುರಿತು ದೂರು ನೀಡಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕೇಳಿದರೆ ಕ್ರೀಡಾ ಇಲಾಖೆ ಅಧಿಕಾರಿಗಳು ಉಡಾಫೆ ಉತ್ತರ ಕೊಡುತ್ತಾರೆ. ನೀವು (ಸಚಿವರು) ಇಲ್ಲಿನ ಬರುತ್ತಿರುವ ಕಾರಣ ಈಗ ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದು ಕ್ರೀಡಾಪಟುಗಳು ಸಚಿವರ ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಕ್ರೀಡಾ ಸಹಾಯಕ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ. ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು.ಕ್ರೀಡಾಪಟುಗಳಿಗೆ ಯಾವುದೇ ತೊಂದರೆ ಆಗದಂತೆ ತಕ್ಷಣ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು...
78 ನೇ ಸ್ವಾತಂತ್ರ್ಯೋತ್ಸವ : ಶಿವಮೊಗ್ಗದಲ್ಲಿ ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ : ದೇಶಾದ್ಯಂತ ಇಂದು 78 ನೇ ಸ್ವಾತಂತ್ರ್ಯೋತ್ಸವದ ( 78th independence day ) ಸಂಭ್ರಮ ಮನೆ ಮಾಡಿದ್ದು, ಇಂದು ಶಿವಮೊಗ್ಗ (shivamogga) ಜಿಲ್ಲಾಡಳಿತದ ವತಿಯಿಂದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಧ್ವಜಾರೋಹಣ ನೆರವೇರಿಸಿ. ಜನತೆಗೆ 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಕೋರಿದರು. ಧ್ವಜಾರೋಹಣದ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ಚಾಲನೆ ನೀಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಂತರ ತೆರೆದ ಜೀಪಿನಲ್ಲಿ 26 ತುಕುಡಿಗಳನ್ನು ಪರಿಶೀಲಿಸಿ ವಂದನೆಗೆ ಗೌರವ ವಂದನೆ ಸ್ವೀಕರಿಸಿದರು. ಕೆ.ಎಸ್.ಆರ್.ಪಿ, ಡಿ. ಎ ಆರ್, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಎನ್.ಸಿ.ಸಿ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವರಿಗೆ ಗೌರವ ವಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ ಸಂಗೊಳ್ಳಿ...
ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣವಕಾಶ ! ಸ್ಪರ್ಧಾ ಲೈನ್ಸ್ ವತಿಯಿಂದ ರಾಜ್ಯಾದ್ಯಂತ ಉಚಿತ ಪರೀಕ್ಷಾ ಸರಣಿ !
ಶಿವಮೊಗ್ಗ : ಬೆಂಗಳೂರು : ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಬಯಸುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ, ಕರ್ನಾಟಕದ ಯುವ ಸ್ಪರ್ಧಾ ಆಕಾಂಕ್ಷಿಗಳಿಗಾಗಿ ಸ್ಪರ್ಧಾಲೈನ್ಸ್ ಟಾರ್ಗೆಟ್ ಕೆಎಎಸ್ ಪ್ರಿಲಿಮ್ಸ್ -2024 ಎಂಬ ಶೀರ್ಷಿಕೆ ಅಡಿ ಕರ್ನಾಟಕದಾದ್ಯಂತ ಏರ್ಪಡಿಸುತ್ತಿದೆ ಉಚಿತ ಕೆಎಎಸ್ ಪರೀಕ್ಷಾ ಸರಣಿ ! ಪ್ರಿಲಿಮ್ಸ್ ಪರೀಕ್ಷಾ ಸರಣಿಯು ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು ಕೆಎಎಸ್ ಹುದ್ದೆಯ ಆಕಾಂಕ್ಷಿಗಳ ತಯಾರಿಗೆ ನೆರವಾಗಲು ಸ್ಪರ್ಧಾ ಲೈನ್ಸ್ KAS ಪ್ರಿಲಿಮ್ಸ್ 2024 ಟೆಸ್ಟ್ ಸರಣಿಯ (GS-I ಮತ್ತು GS-II) ಸಂಪೂರ್ಣ ಸೆಟ್ ಅನ್ನು ಪ್ರಾರಂಭಿಸಿದೆ. ಪರೀಕ್ಷೆಯಂತಹ ವಾತಾವರಣದಲ್ಲಿ ಕೆಎಎಸ್ ಪ್ರಿಲಿಮ್ಸ್ ಬರೆಯುವ ಅನುಭವವನ್ನು ಪಡೆಯಿರಿ ಮತ್ತು ಮುಂಬರುವ ಪ್ರಿಲಿಮ್ಸ್‌ಗೆ ಪರಿಪೂರ್ಣತೆಗೆ ಅಭ್ಯಾಸ ಮಾಡಿ. ನೋಂದಣಿ ಕಡ್ಡಾಯ ಈಗ ನೋಂದಾಯಿಸಿ! https://bit.ly/4cJ8Lre 20.07.2024 ರಂದು ನೋಂದಣಿಗೆ ಕೊನೆಯ ದಿನಾಂಕ ಟೀಮ್ ಸ್ಪರ್ಧಾ ಲೈನ್ಸ್ ನಿಮ್ಮ ಯಶಸ್ಸಿನ ಪ್ರಯಾಣಕ್ಕೆ ಸಮರ್ಪಿಸಲಾಗಿದೆ!









