ಶಿವಮೊಗ್ಗ : ಡಿಸಿಸಿ ಬ್ಯಾಂಕ್ 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಬಹುತೇಕ ನಾಯಕರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳಿಗೆ ಸೋಲುಂಟಾಗಿದ್ದು, ಉಳಿದ 12 ಸ್ಥಾನಕ್ಕೆ ಚುನಾವಣೆ ನಡೆದಿದ್ದು,ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಆರ್.ಎಂ ಮಂಜುನಾಥ್ ಗೌಡ, ಬೇಳೂರು ಗೋಪಾಲ ಕೃಷ್ಣ, ದುಗ್ಗಪ್ಪ ಗೌಡ , ಹೆಚ್.ಎಲ್. ಷಡಕ್ಷರಿ, ಬಸವಾನಿ ವಿಜಯದೇವ್, ಎಸ್.ಪಿ ಚಂದ್ರಶೇಖರಗೌಡ, ಕೆ.ಪಿ ರುದ್ರೇಗೌಡ, ಮರಿಯಪ್ಪ, ಮಹಲಿಂಗ ಶಾಸಿ, ಸಿ ಹನುಮಂತ, ಜಿ.ಎಸ್ ಸುಧೀರ್ ಸೇರಿ 12 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಿಂದ 13 ಕ್ಷೇತ್ರದಲ್ಲಿ 12 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದು, ಮತ್ತೆ ಆರ್ ಎಂ. ಮಂಜುನಾಥ್ ಗೌಡರ ಬಣ ಮೇಲುಗೈ ಸಾಧಿಸಿದೆ. ಈ ಹಿನ್ನಲೆಯಲ್ಲಿ ಮಂಜುನಾಥ್ ಗೌಡ ಮತ್ತೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಸೊರಬ ತಾಲ್ಲೂಕು ಕೆ.ಪಿ.ರುದ್ರಗೌಡ(14) ಶಿವಮೂರ್ತಿ ಗೌಡ(10) ಹೊಸನಗರ ತಾಲ್ಲೂಕು ಎಂ.ಎಂ.ಪರಮೇಶ್ (ಅವಿರೋಧ ಆಯ್ಕೆ) ಕ್ಷೇತ್ರ-2 ಶಿವಮೊಗ್ಗ...
ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ ! ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ! ಶಿವಮೊಗ್ಗ ಮೂಲದ 13 ಮಂದಿ ಧಾರುಣ ಸಾವು !
ಹಾವೇರಿ : ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದ ಪರಿಣಾಮ 13 ಜನರು ಮೃತಪಟ್ಟ ಘಟನೆ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಶುಕ್ರವಾರ) ಬೆಳಗ್ಗೆ ನಡೆದಿದೆ. ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಟಿಟಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರ ತೆಗೆಯುತ್ತಿದ್ದಾರೆ. ಮೃತರ ಹಿನ್ನಲೆ ಪತ್ತೆ ಹಚ್ಚುತ್ತಿರುವ ಪೋಲೀಸರು. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ವಾಪಾಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಟಿಟಿಯಲ್ಲಿ ಒಟ್ಟು 17 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. 4 ಮಂದಿ ಗಾಯಾಳುಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಶಿವಮೊಗ್ಗದಲ್ಲಿ ಅಪ್ಪನನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಮಗ !
ಭದ್ರಾವತಿ : ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದ ಅಮ್ಮನ ಜೊತೆ ಜಗಳ ಮಾಡುತ್ತಿದ್ದ ಅಪ್ಪನನ್ನು ಸ್ವಂತ ಮಗನೇ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ ಶುಕ್ರರಾಜ್ ಯಾನೆ ಅಲಿಯಾಸ್ ಶುಕ್ರ(50) ಎನ್ನಲಾಗಿದೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದಲ್ಲಿ ನಡೆದಿದೆ. ತಾಯಿ ಶಿಲ್ಪಾ ಗ್ರಾಮ ಪಂಚಾಯಿತಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಅಮ್ಮನ ದುಡಿಮೆಯಿಂದ ಮನೆ ನಡೆಯುತ್ತಿತ್ತು. ಆದರೆ, ಅಪ್ಪ ಶುಕ್ರರಾಜ್ ಯಾನೆ ಅಮ್ಮ ಶಿಲ್ಪ ಮೇಲೆ ಪದೇ ಪದೇ ಜಗಳ ಮಾಡುತ್ತಿದ್ದನು. ನೀನು ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗುವುದು ಬೇಡ ಬಿಟ್ಟುಬಿಡು ಎಂದು ಹೇಳುತ್ತಿದ್ದನು. ಆದರೆ, ಮನೆ ನಿರ್ವಹಣೆಗೆ ಕಷ್ಟವಾಗುತ್ತದೆಂದು ಅರಿತು ಶಿಲ್ಪಾ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದಳು. ಇನ್ನು ಕೊಲೆ ಘಟನೆಯ ದಿನವೂ ಶಿಲ್ಪಾ ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗದಂತೆ ಶುಕ್ರರಾಜ್ ಹೇಳಿದ್ದಾರೆ. ಆದರೆ, ಪತಿಯ ಮಾತನ್ನ ನಿರ್ಲಕ್ಷಿಸಿ ಕೆಲಸಕ್ಕೆ ಹೋಗುವುದಾಗಿ ಪತ್ನಿ ಹೇಳಿದ್ದಾಳೆ. ಮಾತು ಕೇಳದ ಹಿನ್ನೆಲೆಯಲ್ಲಿ ನಡುವೆ ಇನ್ನ ಸಂಜೆ...
ಸಹ್ಯಾದ್ರಿ ಕಾಲೇಜಿನ ಮುಂದೆ ರೌಡಿಶೀಟರ್ ಕಾರ್ತಿಕ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ !
ಶಿವಮೊಗ್ಗ : ನಗರದ ಸಹ್ಯಾದ್ರಿ ಕಾಲೇಜಿನ ಮುಂದೆ ಎಂ ಆರ್ ಎಸ್ ಸರ್ಕಲ್ ಸಮೀಪ ಕಾರ್ತಿಕ್ ಅಲಿಯಾಸ್ ಕತ್ತೆ ಕಾರ್ತಿಕ್ ಎಂಬ ರೌಡಿಶೀಟರ್ ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿದ ಪರಿಣಾಮ ರೌಡಿಶೀಟರ್ ಕಾರ್ತಿಕ್ ನ ತಲೆ ಕೈ ಕೆನ್ನೆಗೆ ಗಾಯಗಳಾಗಿದೆ, ಕಾರ್ತಿಕ್ ಮನೆಯಲ್ಲಿದ್ದ ಸಮಯದಲ್ಲಿ ಕರೆ ಬಂದಿದೆ , ಕರೆ ಬಂದ ಬೆನ್ನಲ್ಲೇ ಸಿದ್ದನಾದ ಕಾರ್ತಿಗೆ ಮನೆಗೆ ಬಂದು ಐವರು ಕಾರ್ತಿಕ್ ನನ್ನ ಕರೆದುಕೊಂಡು ಹೋಗಿದ್ದಾರೆ, ನಂತರ ಎಂ ಆರ್ ಎಸ್ ವೃತ್ತ ಸಮೀಪ ಕಾರ್ತಿಕ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಇನ್ನು ಈ ಸಂಬಂಧ ಕಾರ್ತಿಕ್ ಹೇಳಿಕೆ ನೀಡಿದ್ದು, ಐವರು ಪರಿಚಿತರೆಂದರೆ ಹಲ್ಲೆ ನಡೆದಿದೆ ಎಂದು ಹೆಸರು ಬಹಿರಂಗಪಡಿಸಿದ್ದಾನೆ, ಇನ್ನೂ ಗಾಯಾಳು ಕಾರ್ತಿಗೆ ಮೆಗ್ಗನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವರದಿ :...
ಮತ್ತೆ ತವರಿಗೆ ವಾಪಸ್ ಆಗ್ತಾರಾ ಮಾಜಿ ಸಚಿವ ಕೆಎಸ್ಇ ? ಘರ್ ವಾಪಸಿ ಆಗ್ತಾರ ಈಶ್ವರಪ್ಪ ?
ಶಿವಮೊಗ್ಗ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ಪುತ್ರ ಕೆ ಇ ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ಕಾರಣಕ್ಕಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಬಿ ವೈ ರಾಘವೇಂದ್ರರ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು , ಈ ವೇಳೆಯೂ ಸಾಕಷ್ಟು ಬಿಜೆಪಿಯ ಮುಖಂಡರು ನಾಯಕರು ಕಾರ್ಯಕರ್ತರು ಕೆ ಎಸ್ ಈಶ್ವರಪ್ಪರ ಮನವೊಲಿಸಲು ಪ್ರಯತ್ನ ನಡೆಸಿದ್ದರು ಕೂಡ ಮಾಜಿ ಸಚಿವ ಕೆ ಸಿ ಈಶ್ವರಪ್ಪ ಮಾತ್ರ ಪಕ್ಷೇತರ ನಿಂತೇ ತೀರುತ್ತೇನೆ ಎಂದು ಪಣತೊಟ್ಟು ಪಕ್ಷೇತರವಾಗಿ ನಿಲ್ಲಲು ನಾಮಪತ್ರ ಸಲ್ಲಿಸಿ ಬಿಟ್ಟಿದ್ದರು, ಆದರೂ ಕೂಡ ತಮ್ಮ ಪ್ರಯತ್ನ ನಿಲ್ಲಿಸದ ಬಿಜೆಪಿ ಶತಾಯ ಗತಾಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರನ್ನ ಮರಳಿ ಬಿಜೆಪಿಗೆ ತರಲು ಪ್ರಯತ್ನ ನಡೆಸಿತ್ತು, ನಂತರ ಈಶ್ವರಪ್ಪನವರಿಗೆ ಡೆಡ್ ಲೈನ್ ಕೂಡ ರಾಜ್ಯ ಬಿಜೆಪಿ ನೀಡಿತ್ತು, ನಾಮಪತ್ರ ಹಿಂಪಡೆಯದ್ದಿದ್ದಾಗ ರಾಜ್ಯ...
ದರ್ಶನ್ ಪರ ವಕೀಲರು ಲಾಯರ್ ಆಗಲು ಅನ್‌ಫಿಟ್ – ಎಂ ಎಲ್ ಸಿ ಭೋಜೇಗೌಡ ಆಕ್ರೋಶ !
ಚಿಕ್ಕಮಗಳೂರು : ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನ ಪರವಾಗಿ ವಾದ ಮಾಡುತ್ತಿರುವ ವಕೀಲರು ತಮ್ಮ ಕಕ್ಷಿದಾರ ಅಪರಾಧ ಮಾಡಿಲ್ಲವೆಂದು 100 ಸಲ ಹೇಳ್ತಾನೆ. ಆದರೆ, ಇವರು ಕಕ್ಷಿದಾರ ನಿರಪರಾಧಿ ಎಂದು ಕೋರ್ಟ್‌ನಲ್ಲಿ ಹೇಳಬೇಕು ಹೊರತು ಸಾರ್ವಜನಿಕವಾಗಿ ಹೇಳಬಾರದು. ದರ್ಶನ್ ಪರ ವಕೀಲರು ಲಾಯರ್ ಆಗಲು ಅನ್‌ಫಿಟ್ ಆಗಿದ್ದಾರೆ ಎಂದು ಬಾರ್ ಕೌನ್ಸಿಲ್ ಮಾಜಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಪರ ವಕೀಲರಿಗೆ ನಿನ್ನ ಕಕ್ಷಿದಾರರನ್ನ ಕೋರ್ಟಿನಲ್ಲಿ ಡಿಫೆಂಡ್ ಮಾಡ್ಕೋ… ಪಬ್ಲಿಕ್ ನಲ್ಲಿ ಅಲ್ಲ. ದರ್ಶನ್ ಪರ ವಕೀಲರು ಮಾಧ್ಯಮಗಳ ಮುಂದೆ ಮಾತನಾಡುವಾಗ ಅವರು ಅಪರಾಧ ಮಾಡಿಲ್ಲ ಅಂತ 100 ಸಲ ಹೇಳ್ತಾನೆ. ಆತ ಲಾಯರ್ ಆಗಲು ಅನ್ ಫಿಟ್. ಬಾರ್ ಕೌನ್ಸಿಲ್‌ನಿಂದ ಅವನಿಗೆ ನೋಟೀಸ್ ಕೊಡುಸ್ತೀನಿ. ಅವರು ತಪ್ಪು ಮಾಡಿಲ್ಲ, ಪೊಲೀಸರ ತನಿಖೆ ಸರಿ ಇಲ್ಲ ಅಂತ ಬೀದಿಯಲ್ಲಿ ಹೇಳ್ತಾರಾ? ಬೀದಿಯಲ್ಲಿ ಮಾತನಾಡಲು...
ನಾನ್ ವೆಜ್ ಫುಡ್ ಕೋರ್ಟ್ ನಲ್ಲಿ ಅಧಿಕಾರಿಗಳ ಧೀಡಿರ್ ದಾಳಿ ! ಪರಿಶೀಲನೆ ! ಕಾರಣವೇನು ?
ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿ ಇರುವಂತಹ ಮಾಂಸಹಾರ ತಿನಿಸು ಅಂಗಳ ( ನಾನ್ ವೆಜ್ ಫುಡ್ ಕೋರ್ಟ್ ) ನಲ್ಲಿ ಆಹಾರ ಸುರಕ್ಷತ ಮತ್ತು ಗುಣಮಟ್ಟ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತ ಮತ್ತು ಗುಣಮಟ್ಟ ಅಧಿಕಾರಿಗಳು ದಾಳಿ ನಡೆಸಿ ಸ್ವಚ್ಛತೆ ಕಾಣದೆ ಇರುವುದು, ವೈದ್ಯಕೀಯ ತಪಾಸಣೆ ಇಲ್ಲದಿರುವುದು.ಆರ್ ಒ ವಾಟರ್ ಅಳವಡಿಸದೆ ಇರುವುದು, ಆಹಾರಕ್ಕೆ ಕಲರ್ ಬೆರೆಸುತ್ತಿರುವುದು ಸಂಬಂಧಿಸಿದಂತೆ ಸುಮಾರು 15 ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ ಐಎಸ್ಐ ಮಾರ್ಕಿನ ಕಲರ್ ಗಳನ್ನ ಬಳಸಲು ಅವಕಾಶವಿದ್ದರೂ, ಐಎಸ್ಐ ಮಾರ್ಕ್ ಇಲ್ಲದ ಬಣ್ಣಗಳನ್ನ ಅಂಗಡಿ ಮಾಲೀಕರು ಮಾರು ಹೋಗುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಅಧಿಕಾರಿಗಳ ದಾಳಿಯ ವೇಳೆ ಆಹಾರಕ್ಕೆ ಬೆರೆಸುವ ಕಲರ್ ಪ್ಯಾಕೆಟ್ ದೊರೆತಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಶಿವಮೊಗ್ಗ ಪೊಲೀಸರಿಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಸನ್ಮಾನ !
ಶಿವಮೊಗ್ಗ : ಜಿಲ್ಲೆಯ ಸಾಧಕ ಪೊಲೀಸರಿಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ರೌಂಡ್ ಟೇಬಲ್ 166ಮತ್ತು 266 ಹಾಗೂ ಮಲ್ನಾಡ್ ಮಾಸ್ಟರ್ 212 ಸಂಯುಕ್ತಾಶ್ರಯದೊಂದಿಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜೂನ್ 22 ಶನಿವಾರ ಸಂಜೆ 5 ಗಂಟೆಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆಗಮಿಸಲಿದ್ದು, ರೌಂಡ್ ಟೇಬಲ್ ವಲಯ 13 ರ ಛೇರ್ಮನ್ ದೇವಾನಂದ್, ಕಾರ್ಯದರ್ಶಿ ಸುಶ್ರುತ್ ಹಾಜರಿರುವರು. ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಯೋಜಕರು ಕೋರಿದ್ದಾರೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಶಿವಮೊಗ್ಗ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಕವಿತಾ ಯೋಗಪ್ಪನವರ್ ಅಧಿಕಾರ ಸ್ವೀಕಾರ!
ಶಿವಮೊಗ್ಗ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕವಿತಾ ಯೋಗಪ್ಪನವರ್ ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ವರ್ಗಾವಣೆಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕೆಲಸ ಮಾಡಿದ್ದ ಮಾಯಣ್ಣ ಗೌಡ ನೂತನ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಕವಿತಾ ಯೋಗಣ್ಣನವರಿಗೆ ಹೂವಿನ ಬೊಕ್ಕೆ ಕೊಟ್ಟು ಸ್ವಾಗತಿಸಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಪಾಲಿಕೆಯ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದ ಮಾಯಣ್ಣ ಗೌಡ ಶಿವಮೊಗ್ಗ ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು, ಮುಂದಿನ ಸ್ಥಳ ನಿಯುಕ್ತಿಗಾಗಿ ಅವರನ್ನ ತಮ್ಮ ಮಾತು ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಇದೀಗ ಇವರ ಸ್ಥಾನಕ್ಕೆ ಕವಿತಾ ಯೋಗಪ್ಪನವರ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಸೇನೆ ಸೇರ ಬಯಸುವ ಯುವಕರಿಗೆ ಇಲ್ಲಿದೆ ಸುವರ್ಣ ಅವಕಾಶ ! ಉಚಿತ ತರಬೇತಿಗೆ ಅರ್ಜಿ ಆಹ್ವಾನ !
ಉದ್ಯೋಗ : ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗದ ಯುವಕರಿಗಾಗಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ತರಬೇತಿಗಾಗಿ ಅರ್ಹಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ (ಬಾಲಕರಿಗೆ ಮಾತ್ರ). ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗದಿಗೊಳಿಸಿರುವ ಸಾಮಾನ್ಯ ಅರ್ಹತೆಗಳು: ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಠ ವಾರ್ಷಿಕ ಆದಾಯ ಮಿತಿ- (ಪ್ರವರ್ಗ-1 ಕ್ಕೆ ರೂ.2.50 1. ಲಕ್ಷಗಳು ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಗಳಿಗೆ ರೂ.1.00 ಲಕ್ಷಗಳು) 2. ಕನಿಷ್ಠ ವಿದ್ಯಾರ್ಹತೆ – ಅಭ್ಯರ್ಥಿಯು 10ನೇ ತರಗತಿಯನ್ನು ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳು ಮತ್ತು ಸರಾಸರಿ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು....









