ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಶಿವಮೊಗ್ಗ ಲೋಕಸಭ ಚುನಾವಣಾ ಕಣವನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರು. ಘಟಾನುಘಟಿ ನಾಯಕರ ನಡುವೆ ಜೋಮೊಟೋ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ತುಮಕೂರಿನ ಬಂಡಿ ರಂಗನಾಥ್ ಎಂಬ ಯುವಕ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಬಂಡಿ ರಂಗನಾಥ್ ಅಚ್ಚರಿಯ ಮತಗಳನ್ನು ಪಡೆದಿದ್ದಾರೆ ಚುನಾವಣೆ ವೇಳೆ ಅವರ ಬಳಿ ಸುಮಾರು ಐವತ್ತು ಸಾವಿರ ರೂಪಾಯಿಗಳು ನಗದಿದ್ದು, ಆಸ್ತಿ ಕಾಲಂನಲ್ಲಿ ಇವರು ಏನೂ ಇಲ್ಲ ಎಂದು ಬರೆದುಕೊಂಡಿದ್ದರು. ಮತ ಎಣಿಕೆಯಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದು, 7176 (-757245) ಮತಗಳನ್ನು ಪಡೆದಿದ್ದಾರೆ. ರಾಘವೇಂದ್ರ , ಗೀತಾ ಶಿವರಾಜ್ ಕುಮಾರ್ ಹಾಗೂ ಈಶ್ವರಪ್ಪನವರು ಬಿಟ್ಟರೆ ಇದುವರೆಗಿನ ಮತ ಎಣಿಕೆಯಲ್ಲಿ ಬಂಡಿ ರಂಗನಾಥ್ ಉಳಿದವರಿಗಿಂತಲೂ ಮುನ್ನಡೆ ಸಾಧಿಸಿದ್ದಾರೆ.ಈ ಮೂಲಕ ಅವರು ಗಮನ ಸೆಳೆದಿದ್ದಾರೆ. ಇನ್ನೊಂದಡೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ...
ಡಾ. ಶಿವರಾಜ್ ಕುಮಾರ್ ನಿರುದ್ಯೋಗಿ ಆಗಬೇಕಿಲ್ಲ ನಮ್ಮೂರ ಜಾತ್ರೆಯಲ್ಲಿ ಕುಣಿಯುವ ಕೆಲಸಕ್ಕೆ ಅರ್ಜಿ ಹಾಕಿಕೊಳ್ಳಬಹುದು – ಕುಮಾರ್ ಬಂಗಾರಪ್ಪ
ಸೊರಬ : ಪ್ರತಿಷ್ಠೆಯ ಕಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಗಳ ಮಕ್ಕಳು ಮತ್ತು ಮಾಜಿ ಉಪಮುಖ್ಯಮಂತ್ರಿ ಗಳ ನಡುವೆ ತ್ರಿಕೋನ ಸ್ಪರ್ಧೆ ಯಾಗಿ ಮಾರ್ಪಾಡಾಗಿತ್ತು. ಮೂವರು ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸಿ ಅತ್ಯಧಿಕ ಮತಗಳಿಂದ ನಾವು ಗೆಲ್ಲತ್ತೀವಿ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು, ಈಗ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದ್ದು ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಬಿ ವೈ ರಾಘವೇಂದ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಬಂಡಾಯ ನಿಂತಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರನ್ನು ಸೋಲಿಸಿ ಭರ್ಜರಿ ಗೆಲುವನ್ನು ಕಂಡಿದ್ದಾರೆ. ಬಿವೈ ರಾಘವೇಂದ್ರ ಗೆಲುವಿನ ಬೆನ್ನಲ್ಲೇ ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಜಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್, ಮತ್ತು ನಟ ಡಾ. ಶಿವರಾಜಕುಮಾರ್ ವಿರುದ್ಧ ಪೋಸ್ಟ್ ಮಾಡಿದ್ದಾರೆ. ಇವರುಗಳು ಶಿವಮೊಗ್ಗ ಜನತೆಯ...
ಶಿವಮೊಗ್ಗದಲ್ಲಿ ಅರಳಿದ ಕಮಲ..ಆನಂದಪುರದಲ್ಲಿ ಸಂಭ್ರಮದ ಆಚರಣೆ.
ಆನಂದಪುರ. : ಬಿ.ವೈ ರಾಘವೇಂದ್ರ ಅವರು ಗೆದ್ದಿರುವುದು ಬಹಳಷ್ಟು ಖುಷಿಯಾಗಿದೆ. ಈ ಗೆಲುವನ್ನು ಅವರು ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ ಎಂದು ಮಾಜಿ ಸಚಿವರಾದ ಹರತಾಳು ಹಾಲಪ್ಪನವರು ಹೇಳಿದರು. ಇಂದು ಆನಂದಪುರದಲ್ಲಿ ಬಿ ವೈ ರಾಘವೇಂದ್ರರವರ ಗೆಲುವಿನ ಸುದ್ದಿ ಮುಟ್ಟುತ್ತಿದ್ದಂತೆ ಸಂಭ್ರಮದಿಂದ ಸಿಡಿಮದ್ದುಗಳನ್ನು ಹಾರಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯನ್ನು ಮಾಡಿದರು. ಇಂತಹ ಸಮಯದಲ್ಲಿ ಆಗಮಿಸಿದಂತಹ ಮಾಜಿ ಸಚಿವರಾದ ಹರತಾಳು ಹಾಲಪ್ಪ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ನಮ್ಮ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಇತಿಹಾಸದಲ್ಲಿ ದಾಖಲೆಯ ಮತಗಳ ಅಂತರದಲ್ಲಿ ಬಿ ವೈ ರಾಘವೇಂದ್ರ ಅವರು ಜಯಗಳಿಸಿದ್ದಾರೆ. ಸರಿಸುಮಾರು 25000 ಅಂತರದಲ್ಲಿ ಜಯವನ್ನು ಸಾಧಿಸಿದ್ದಾರೆ. ಒಟ್ಟು 234000 ಮತಗಳಿಂದ ಅಂತರದಲ್ಲಿ ಗೆಲುವನ್ನು ಸಾಧಿಸಿದ್ದು ನಮಗೆಲ್ಲ ಸಂತೋಷದ ಸಂಗತಿಯಾಗಿದೆ. ಇಷ್ಟು ಅಂತರದಲ್ಲಿ ಗೆಲ್ಲಲು ಅದಕ್ಕೆ ನಮ್ಮ ಕಾರ್ಯಕರ್ತರೇ ಸಾಕ್ಷಿ, ಅವರು ಮನೆ ಮನೆಗೆ ಹೋಗಿ ನಮ್ಮ ಪಕ್ಷದ ಬಗ್ಗೆ ಮನಮುಟ್ಟುವಂತೆ ಜನಸಾಮಾನ್ಯರಿಗೆ ತಿಳಿಸಿದ್ದರಿಂದ ಈ ಗೆಲ್ಲವನ್ನು ಸಾಧಿಸಲಾಯಿತು ಎಂದು ಹೇಳಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ...
BIG BREAKING NEWS : ಬಿ ವೈ ರಾಘವೇಂದ್ರ ಭರ್ಜರಿ ಗೆಲುವು !
ಶಿವಮೊಗ್ಗ : ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಚುನಾವಣಾ ಕಣ ಇದೀಗ ಅಂತಿಮ ಅಂತ ತಲುಪಿದ್ದು ಹಲವು ಸುತ್ತಿನ ಎಣಿಕೆಯ ನಂತರ ಈಗ ಅಂತಿಮ ಫಲಿತಾಂಶ ಹೊರ ಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪನವರನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಗೆದ್ದು ಬೀಗಿದ್ದಾರೆ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಹಲವು ರೀತಿಯ ಅನುಕೂಲಕರ ವಾತಾವರಣವಿತ್ತು. ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ. ರಾಘವೇಂದ್ರ ಅವರ ಸಹೋದರ ಬಿ.ವೈ.ವಿಜಯೇಂದ್ರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ. ಅದರಲ್ಲೂ, ಸಂಸದರಾಗಿ ಬಿ.ವೈ.ರಾಘವೇಂದ್ರ ಅವರು ರೈಲು ಸಂಪರ್ಕ ಸೇರಿ ಹಲವು ರೀತಿಯ ಅಭಿವೃದ್ಧಿಗೆ ಕಾರಣರಾಗಿದ್ದರು. ನರೇಂದ್ರ ಮೋದಿ ಅವರ ಅಲೆಯೂ ಇಲ್ಲಿ ಕೆಲಸ ಮಾಡುವ ಸಾಧ್ಯತೆ ಇತ್ತು. ಹಾಗಾಗಿ, ರಾಘವೇಂದ್ರ ಅವರು ಗೆಲುವಿನ ವಿಶ್ವಾಸದಲ್ಲಿದ್ದರು. ಅದರಂತೆ ಅವರು ಮುನ್ನಡೆ ಸಾಧಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ 78.33ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ ತ್ರಿಕೋನ...
ದೊಡ್ಮನೆ ಸೊಸೆ ಗೀತಾ ಶಿವರಾಜಕುಮಾರ್ ಗೆ ಸತತ ಹಿನ್ನಡೆ !
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ 2024ರ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿಯವರೆಗು 13 ಸುತ್ತುಗಳ ಮತಗಳ ಎಣಿಕೆ ನಡೆದಿದ್ದು 13 ಸುತ್ತುಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಸತತ ಹಿನ್ನಡೆಯನ್ನು ಕಂಡಿದ್ದಾರೆ, ಬಿ.ವೈ. ರಾಘವೇಂದ್ರ ಒಂದು ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್‌ನಿಂದ ಕಣಕ್ಕಿಳಿದ್ದಿದ್ದ ಗೀತಾ ಶಿವರಾಜ್ ಕುಮಾರ್ ಸತತ ಹಿನ್ನೆಡೆ ಕಂಡಿದ್ದಾರೆ. ಬಿ.ವೈಆರ್, 3,54,207 ಮತಗಳನ್ನಪಡೆದರೆ, ಗೀತ ಶಿವರಾಜ್ ಕುಮಾರ್, 2,48,280 ಮತಗಳನ್ನ ಪಡೆದಿದ್ದಾರೆ. ಈಶ್ವರಪ್ಪನವರಿಗೆ 14,144 ಮತಗಳನ್ನ ಪಡೆದಿದ್ದಾರೆ. ಇದರಿಂದ ಈಶ್ವರಪ್ಪನವರು ಮೂರನೇ ಸ್ಥಾನದಲ್ಲಿದ್ದಾರೆ. 18 ಸುತ್ತಿನ ಮತ ಎಣಿಕೆಯೊಂದಿಗೆ ಲೋಕಸಭಾ ಚುನಾವಣೆ ಎಣಿಕೆ ಮುಕ್ತಾಯಗೊಳ್ಳಲಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ BREAKING NEWS : ಮತ ಎಣಿಕೆ ಆರಂಭ ! ಅಂಚೆ ಮತ ಎಣಿಕೆ ! ಬಿ ವೈ ರಾಘವೇಂದ್ರ ಮುನ್ನಡೆ !
BREAKING NEWS : ಕೇವಲ 6,000 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ !
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದೆ. ಇಲ್ಲಿಯವರೆಗೂ ಆರು ಸುತ್ತಿನ ಮತ ಎಣಿಕೆ ನಡೆದಿದ್ದು, ಆರು ಸುತ್ತಿನಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಮುನ್ನಡೆಯನ್ನ ಸಾಧಿಸಿದ್ದಾರೆ. ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಆರು ಸುತ್ತಿನ ಮತ ಎಣಿಕೆ ನಡೆದಿದ್ದು ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ, ಕೆಎಸ್ ಈಶ್ವರಪ್ಪ ಪುತ್ರ ಕೆಇ ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿದ ಕಾರಣ, ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು , 6,000 ಮತಗಳನ್ನು ಕೆಎಸ್ ಈಶ್ವರಪ್ಪ 6ನೇ ಸುತ್ತಿನ ಮತ ಎಣಿಕೆಯಲ್ಲಿ ಪಡೆದಿದ್ದಾರೆ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ 6ನೇ ಸುತ್ತಿನ ಮತ ಎಣಿಕೆಯಲ್ಲಿ 1,73, 745 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ 1,24,250...
ಲಕ್ಷ ಗಡಿದಾಟಿದ ಬಿ ವೈ ರಾಘವೇಂದ್ರ ! ನಾಲ್ಕನೇ ಸುತ್ತಿನಲ್ಲೂ ಬಿವೈ ಆರ್ ಮುನ್ನಡೆ !
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಚುರುಕುಗೊಂಡಿದೆ, ಮೂರು ಸುತ್ತು ಎಣಿಕೆ ಕಾರ್ಯ ಮುಗಿದಿದ್ದು ಮೂರು ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಮುನ್ನಡೆಯನ್ನು ಸಾಧಿಸಿದ್ದಾರೆ ಇದೀಗ ನಾಲ್ಕನೇ ಸುತ್ತಿನ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ನಾಲ್ಕನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮುನ್ನಡೆಯನ್ನು ಸಾಧಿಸಿದ್ದಾರೆ ಅಭ್ಯರ್ಥಿಗಳು ಪಡೆದ ಮತಗಳು ಬಿ ವೈ ರಾಘವೇಂದ್ರ : 1,16,992 ಗೀತಾ ಶಿವರಾಜಕುಮಾರ್ : 86342 ಕೆ ಎಸ್ ಈಶ್ವರಪ್ಪ : 5147
ಲೋಕಸಭಾ ಮೆಗಾ ರಿಸಲ್ಟ್ : ಬಿ ವೈ ರಾಘವೇಂದ್ರ ಆರಂಭಿಕ ಮುನ್ನಡೆ ! ಕೆ ಎಸ್ ಈಶ್ವರಪ್ಪ ಭಾರಿ ಹಿನ್ನಡೆ !
ಶಿವಮೊಗ್ಗ : ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆರಂಭವಾಗಿದ್ದು ಚುನಾವಣಾ ಅಧಿಕಾರಿಗಳು ಸಿಬ್ಬಂದಿಗಳು ಮೊದಲಿಗೆ ಅಂಚೆ ಮತದ ಎಣಿಕೆಯನ್ನು ನಡೆಸಿದ್ದಾರೆ ಅಂಚೆ ಮತದ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಮುನ್ನಡೆಯನ್ನು ಸಾಧಿಸಿದ್ದಾರೆ. ನಂತರ ಇವಿಎಂ ವೋಟಿಂಗ್ ನ ಮೊದಲ ಸುತ್ತಿನ ಎಣಿಕೆಯಲ್ಲಿ ಬಿವೈ ರಾಘವೇಂದ್ರ ಭಾರಿ ಆರಂಭಿಕ ಮುನ್ನಡೆಯನ್ನ ಸಾಧಿಸಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆ ಎಸ್ ಈಶ್ವರಪ್ಪನವರಿಗೆ ಮೊದಲ ಸುತ್ತಿನಲ್ಲಿ ಭಾರಿ ಹಿನ್ನಡೆಯಾಗಿದೆ ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು ಬಿ ವೈ ರಾಘವೇಂದ್ರ : 65753 ಗೀತಾ ಶಿವರಾಜಕುಮಾರ್ : 42985 ಕೆಎಸ್...
BREAKING NEWS : ಮತ ಎಣಿಕೆ ಆರಂಭ ! ಅಂಚೆ ಮತ ಎಣಿಕೆ ! ಬಿ ವೈ ರಾಘವೇಂದ್ರ ಮುನ್ನಡೆ !
ಶಿವಮೊಗ್ಗ : ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಶಿವಮೊಗ್ಗ ಇಬ್ಬರು ಮಾಜಿ ಸಿಎಂಗಳ ಮಕ್ಕಳ ಮಧ್ಯೆ ಲೋಕಸಭಾ ಚುನಾವಣೆಗೆ ಪೈಪೋಟಿ ನಡೆದಿತ್ತು ಇದರ ಮಧ್ಯೆ ಮಾಜಿ ಸಚಿವ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಕೂಡ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು ಇದರ ಮತ ಎಣಿಕೆ ಇನ್ನೇನು ಶುರುವಾಗಿದ್ದು ಬಿ ವೈ ರಾಘವೇಂದ್ರ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಹೌದು ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿಗಳು ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗಿದ್ದು. ಶಿವಮೊಗ್ಗದಲ್ಲಿ ಒಟ್ಟು ಚಲಾವಣೆಯಾದ ಮತಗಳು 5199 ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ಹಿರಿಯ ನಾಗರಿಕರಿಗೆ ಅಂಚೆ ಮತದಾನ ಮಾಡಲು ಅವಕಾಶವಿತ್ತು. ಇನ್ನು ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ, ಸದ್ಯ ಬಿಜೆಪಿ ಅಭ್ಯರ್ಥಿಯಾದ ಬಿವೈ...
ELECTION BREAKING : ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಆರಂಭ !
ಶಿವಮೊಗ್ಗ : ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಆರಂಭವಾಗಿದೆ, ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅಧಿಕಾರಿಗಳು ಆಗಮಿಸಿ ಮತ ಎಣಿಕೆ ಕಾರ್ಯ ಶುರು ಮಾಡಿದ್ದಾರೆ ಇನ್ನು ಸಹ್ಯಾದ್ರಿ ಕಾಲೇಜ್ ಹೊರಭಾಗದಲ್ಲಿ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಮಾಡಿದ್ದು ಗುರುತಿನ ಚೀಟಿ ಇರುವ ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಪಕ್ಷಗಳ ಎಣಿಕೆ ಏಜೆಂಟರು, ಅಭ್ಯರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಹೊರತು ಮತ್ಯಾರಿಗು ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ. ಸಹ್ಯಾದ್ರಿ ಕಾಲೇಜು ಗೇಟ್ ಮುಂಭಾಗ ಪೊಲೀಸ್ ಸಿಬ್ಬಂದಿ ಗುರುತು ಚೀಟಿ ಹೊಂದಿರುವವರನ್ನು ಪರಿಶೀಲಿಸಿ ಕೇಂದ್ರದೊಳಗೆ ಬಿಡಲಾಗುತ್ತಿದೆ ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಇನ್ನು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಕಾಲೇಜಿನ ಹೊರಬಾಗದಲ್ಲಿ ನಿಂತು ಫಲಿತಾಂಶವನ್ನು ಆಲಿಸಬಹುದಾಗಿದೆ, ಇದಕ್ಕಾಗಿ ಕಾಲೇಜು...









