ಅಪ್ಪಿ ತಪ್ಪಿಯೂ ಕಮಲದ ಗುರುತಿಗೆ ವೋಟು ಹಾಕಬೇಡಿ – ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ! ಶಿವಮೊಗ್ಗ : ಅಪ್ಪಿ ತಪ್ಪಿಯೂ ಬಿಜೆಪಿಗೆ, ಕಮಲದ ಗುರುತಿಗೆ ವೋಟು ಹಾಕಬೇಡಿ ಎಂದು ಬಿ.ವೈ. ರಾಘವೇಂದ್ರ ಹೆಸರೇಳದೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂತ್ವವನ್ನು ತುಳಿಯುತ್ತಿದೆ.ಹಿಂದುತ್ವ ಉಳಿವಿಗಾಗಿ ನಾನು ಚುನಾವಣೆ ಸ್ಪರ್ಧಿಸುತ್ತಿದ್ದೇನೆ, ನನ್ನ ಚಿಹ್ನೆ ಕಮಲ ಅಲ್ಲಾ ನನ್ನ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬೇಡಿ, ಏಪ್ರಿಲ್ 19 ರಂದು ನನ್ನ ಚಿಹ್ನೆ ಗೊತ್ತಾಗುತ್ತದೆ ಎಂದು ಹೇಳಿದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಕಾಂಗ್ರೆಸ್ ಸಂಸ್ಕೃತಿ ರಾಜ್ಯದಲ್ಲಿ ಬಂದಿದೆ, ಅಪ್ಪ-ಮಕ್ಕಳ ಕೈಯಲ್ಲಿ ಸಿಕ್ಕಿ ಬಿಜೆಪಿ ಒದ್ದಾಡುತ್ತಿದೆ. ಪ್ರತಿ ಬೂತ್ ನಲ್ಲಿ ಈಶ್ವರಪ್ಪ...
ಗಾಡಿಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ಬಂಧನ !
ಗಾಡಿಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತಿದ್ದ ಆರೋಪಿ ಬಂಧನ ! ಶಿವಮೊಗ್ಗ : ನಗರದ ಗಾಡಿಕೊಪ್ಪದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತುಂಗಾನಗರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಗಾಡಿಕೊಪ್ಪದಿಂದ ಪುರದಾಳಿಗೆ ಹೋಗುವ ದಾರಿಯಲ್ಲಿ ಇರುವಂತಹ ತುಂಗಾ ಚಾನಲ್ ಸಮೀಪ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿದ ತುಂಗಾ ನಗರ ಠಾಣೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಕಿರಣ್ ಕುಮಾರ್ (30) ಎಂಬ ಕಲ್ಲಹಳ್ಳಿ ಹುಡ್ಕೋದ ವ್ಯಕ್ತಿಯನ್ನು ದಾಳಿ ಮಾಡಿ ಬಂದಿಸಿದ ಅಂದಾಜು ಮೌಲ್ಯ 15,000/- ರೂ ಗಳ 400 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 950/-...
ಶಿವಮೊಗ್ಗದ ನಾಗರಿಕರೇ ಎಚ್ಚರ..! ಎಚ್ಚರ..! ವಾಕಿಂಗ್ ಹೋಗುವ ಮಹಿಳೆಯರೇ ಇವರ ಟಾರ್ಗೆಟ್..! ಶಿವಮೊಗ್ಗದಲ್ಲಿ ಒಂದೇ ದಿನ ಮೂರು ಕಡೆ ಸರಣಿ ಸರಗಳ್ಳತನ..!
ಶಿವಮೊಗ್ಗದ ನಾಗರಿಕರೇ ಎಚ್ಚರ..! ಎಚ್ಚರ..! ವಾಕಿಂಗ್ ಹೋಗುವ ಮಹಿಳೆಯರೇ ಇವರ ಟಾರ್ಗೆಟ್..! ಶಿವಮೊಗ್ಗದಲ್ಲಿ ಒಂದೇ ದಿನ ಮೂರು ಕಡೆ ಸರಣಿ ಸರಗಳ್ಳತನ..! ಶಿವಮೊಗ್ಗ : ನಾಗರಿಕರೇ ಎಚ್ಚರ ಎಚ್ಚರ…! ವಾಕಿಂಗ್ ಹೋಗುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಣಿ ಸರಗಳ್ಳತನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಎರಡು ದಿನಗಳ ಹಿಂದಷ್ಟೇ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಮನೆಯ ಸಮೀಪ ರೆಡ್ ಪಲ್ಸರ್ ಬೈಕ್ ನಲ್ಲಿ ಬಂದ ಖದಿಮರಿಬ್ಬರೂ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿತ್ತು. ಖದೀಮರ ಕೃತ್ಯ ಕೆ ಎಸ್ ಈಶ್ವರಪ್ಪನವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದು ಶಿವಮೊಗ್ಗದಲ್ಲಿ ಬಹಳ ದೊಡ್ಡ ಮಟ್ಟದ ಸದ್ದು ಕೂಡ ಮಾಡಿತು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ...
ಮಟ್ಕಾ ದಂಧೆ ನಡೆಸಲು ಲಂಚ ! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ !
ಮಟ್ಕಾ ದಂಧೆ ನಡೆಸಲು ಲಂಚ ! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ ! ಶಿವಮೊಗ್ಗ : ಮಟ್ಕಾ ದಂಧೆ ನಡೆಸಲು ಲಂಚ ಪಡೆಯುವಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್ಐ ರೆಹಮಾನ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಸಿಎಎನ್ ಪೊಲೀಸ್ ಠಾಣೆಯ ಎಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮಾನ್ ಮಟ್ಕಾ ದಂದೆ ನಡೆಸುವುವರಿಂದ ₹ 1,20,000 ರೂ ಲಂಚವನ್ನ ಬೇಡಿಕೆ ಇಟ್ಟಿದ್ದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಆರ್ ಎಂ ಎಲ್ ನಗರದ ಮನೆಯ ಬಳಿಯೇ ರೆಹಮಾನ್ ರಫೀಕ್ ಎಂಬುವವರಿಂದ ಒಂದು ಲಕ್ಷ ರೂಪಾಯಿಗಳ ಲಂಚ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶುಕ್ರವಾರ ಹಣ ಪಡೆಯುವಾಗ ದಾಳಿ...
ವಿಶೇಷ ಲೇಖನ : ಬಿಸಿಲ ತಾಪಕ್ಕೆ ಕಾದ ಹೆಂಚಿಂನಂತಾದ ಧರೆ : ಜನತೆ ಹೈರಾಣು.
ವಿಶೇಷ ಲೇಖನ : ಬಿಸಿಲ ತಾಪಕ್ಕೆ ಕಾದ ಹೆಂಚಿಂನಂತಾದ ಧರೆ : ಜನತೆ ಹೈರಾಣು ! ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಅಬ್ಬರ ಜೋರಾಗಿದ್ದು ಬೆಳಿಗ್ಗೆ ಗಂಟೆ 9 ಆಗುತ್ತಿದ್ದಂತೆ ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಅಷ್ಟು ಏರುತ್ತಿದೆ ಸೂರ್ಯನ ತಾಪ. ಭೂಮಿಯ ಧಗೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕಾಡುಗಳು ಒಣಗಿ ಕಾದ ಕಬ್ಬಿಣದಂತಾಗಿವೆ. ಮರಗಳೆಲ್ಲ ಎಲೆ ಉದುರಿಸಿ ಬೋಳಾಗಿ ನಿಂತಿದೆ. ತಾಪಮಾನ ಏರುತ್ತಿರುವ ಹಿನ್ನಲೆ ಬಿಸಿಲ ಧಗೆಗೆ ಅಕ್ಷರಶಃ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಹೌದು.. ಹಾಲಿ ವರ್ಷ ಬೇಸಿಗೆ ಅಬ್ಬರ ಜೋರಾಗಿದ್ದು, ಹಿಂದಿನ ವರ್ಷವೂ ಬಿಸಿಲಿನ ಅಬ್ಬರ ಜೋರಾಗಿತ್ತು . ಬಿಸಿಲ ತಾಪ ಹೇಗಿದೆ ಎಂದರೆ ಜನರು ಅಕ್ಷರಶಃ ಬೆಂದು ಹೋಗುತ್ತಿದ್ದಾರೆ. ಈಗಿನ ಸ್ಥಿತಿ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ 24ರಿಂದ 26 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತಿದ್ದ ಬಿಸಿಲಿನ ತಾಪಮಾನ ಈಗ 36ರಿಂದ 38ಕ್ಕೆ ಏರಿಕೆಯಾಗಿದೆ.ದಿನದಿಂದ...
ಜಿಂಕೆ ಬೇಟೆ ! ನಾಡ ಬಂದೂಕು ಸಮೇತ ಮೂವರು ಅರೆಸ್ಟ್ !
ಜಿಂಕೆ ಬೇಟೆ ! ನಾಡ ಬಂದೂಕು ಸಮೇತ ಮೂವರು ಅರೆಸ್ಟ್ ! ಶಿವಮೊಗ್ಗ : ಸಿಂಘಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆಯಾಡಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಾಡ ಬಂದೂಕು ಸಮೇತ ಶಿವಮೊಗ್ಗ ವನ್ಯಜೀವಿ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ ಬಾಳೆಕೊಪ್ಪದ ಸತೀಶ್ (39), ಯಡೇಹಳ್ಳಿ ಟಿ.ನಾಗರಾಜ್ (23) ಪ್ರಜ್ವಲ್(23) ಬಂಧಿತ ಆರೋಪಿಗಳು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಇವರು ಶರಾವತಿ ಸಿಂಘಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ನಾಡಬಂದೂಕಿನಿಂದ ಜಿಂಕೆ ಬೇಟೆಯಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಜಿಂಕೆ ಚರ್ಮ, ಜಿಂಕೆ ತಲೆ, ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ವಲಯ ಅರಣ್ಯಾಧಿಕಾರಿ ಸಂಧ್ಯಾ, ಉಪ ವಲಯ ಅರಣ್ಯಾಧಿಕಾರಿ ಜಿ.ಕೆ. ಸುಧಾಕರ್, ಮೋಜಣಿದಾರ, ಸಿಬ್ಬಂದಿ...
ಕೂಡಲಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು !
ಕೂಡಲಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು ! ತುಂಗಭದ್ರಾ ಸಂಗಮದಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ನಡೆದಿದೆ. 18 ವರ್ಷದ ಮುಬಾರಕ್ ಮೃತ ವಿದ್ಯಾರ್ಥಿ. ಶಿವಮೊಗ್ಗದ ಅಣ್ಣಾನಗರದ ನಿವಾಸಿ. ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ.ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕೂಡಲಿ ಸಂಗಮದಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದ್ದಾಗ ಅವಘಡ ನಡೆದಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಸ್ನೇಹಿತರೊಂದಿಗೆ ಕೂಡಲಿಯ ತುಂಗಭದ್ರಾ ಸಂಗಮದಲ್ಲಿ ಸ್ನಾನಕ್ಕೆಂದು ನೀರಿಗಿಳಿದಿದ್ದಾನೆ. ಈ ವೇಳೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಹೊಳೆ ಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಈಶ್ವರಪ್ಪನವರ ಮನೆಯ ಸಮೀಪ ಬೆಳ್ಳಂಬೆಳಗ್ಗೆ ನಡೀತು ಘಟನೆ ! ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕೃತ್ಯ !
ಈಶ್ವರಪ್ಪನವರ ಮನೆಯ ಸಮೀಪ ಬೆಳ್ಳಂಬೆಳಗ್ಗೆ ನಡೀತು ಘಟನೆ ! ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕೃತ್ಯ ! ಶಿವಮೊಗ್ಗ : ನಗರದ ಗುಂಡಪ್ಪ ಶೆಡ್ ಬಳಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಮನೆಯ ಸಮೀಪ ಇಂದು ಬೆಳಗ್ಗೆ 5:00ಗಂಟೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಳ್ಳಂಬೆಳಿಗ್ಗೆ ನಡೆದಿದೆ. ವಿಳಾಸ ಕೇಳುವ ನೆಪದಲ್ಲಿ ಒಂದೇ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು. ಮಹಿಳೆಯರಿಬ್ಬರನ್ನ ಅಡ್ಡಗಟ್ಟಿ ಮಾತನಾಡಿಸಿದ್ದಾರೆ. ಮಹಿಳೆಯರು ಆತಂಕಗೊಂಡು ಹಿಂದೆ ಸರಿದಿದ್ದಾರೆ. ಆಗ ಬೈಕ್ ಸವಾರರು ಮಹಿಳೆಯರೇ ಬಳಿ ವಿಳಾಸ ಕೇಳಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಬೈಕ್ ಸವಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳೆಯರು ಮುಂದಕ್ಕೆ ಸಾಗುತ್ತಾರೆ. ಅಲ್ಲಿಯವರೆಗೂ ಸುಮ್ಮನೆ ಇದ್ದ ಬೈಕ್ ಹಿಂಬದಿ ಸವಾರ ನಂತರ...
ಈಶ್ವರಪ್ಪ ಭೇಟಿಗೆ ಅಮಿತ್ ಶಾ ನಿರಾಕರಣೆ ! ದೆಹಲಿಯಿಂದ ವಾಪಸ್ ಹೊರಟ ಈಶ್ವರಪ್ಪ ! ಬಿಎಸ್ ವೈ ಪುತ್ರನ ಸೋಲು ನಿಶ್ಚಿತ ಎಂದ ಕೆಎಸ್ಈ !
ಈಶ್ವರಪ್ಪ ಭೇಟಿಗೆ ಅಮಿತ್ ಶಾ ನಿರಾಕರಣೆ ! ದೆಹಲಿಯಿಂದ ವಾಪಸ್ ಹೊರಟ ಈಶ್ವರಪ್ಪ ! ಬಿಎಸ್ ವೈ ಪುತ್ರನ ಸೋಲು ನಿಶ್ಚಿತ ಎಂದ ಕೆಎಸ್ಈ ! ಶಿವಮೊಗ್ಗ : ಎರಡು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ ಬಿಜೆಪಿಯ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರಿಗೆ ಕರೆ ಮಾಡಿ ಮಾತನಾಡಿ, ದೆಹಲಿಗೆ ಬರುವಂತೆ ಸೂಚಿಸಿದ್ದರು. ಅಮಿತ್ ಶಾ ಸೂಚನೆಯ ಮೇರೆಗೆ ಬುಧವಾರ ಸಂಜೆ ಶಿವಮೊಗ್ಗದಿಂದ ದೆಹಲಿಗೆ ತಲುಪಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಬಿಜೆಪಿ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ನಿರಾಸೆಯಾಗಿದೆ. ಭೇಟಿಗೆ ಗೃಹ ಸಚಿವರು ಸಿಗದೇ ಹೋದದ್ದು, ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ...
ಲಾಡ್ಜ್ ನಲ್ಲಿ ಮಹಿಳೆಯ ಕತ್ತು ಸೀಳಿ ಕೊಲೆ ! ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ !
ಲಾಡ್ಜ್ ನಲ್ಲಿ ಮಹಿಳೆಯ ಕತ್ತು ಸೀಳಿ ಕೊಲೆ ! ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ ! ಶಿವಮೊಗ್ಗ : ನಗರದ ಹಣಗರೆಕಟ್ಟೆಯ ಸಮೀಪದ ಖಾಸಗಿ ಲಾಡ್ಜ್ ಒಂದರಲ್ಲಿ ಮಹಿಳೆಯ ಮೃತ ದೇಹ ಒಂದು ಪತ್ತೆಯಾಗಿದೆ. ಹಜರತ್ ಸೈಯದ್ ಸಾದತ್ ಭೂತರಾಯ ಚೌಡೇಶ್ವರಿ ದೇವಾಲಯದ ಹಿಂಭಾಗದಲ್ಲಿ ಇರುವಂತಹ ಖಾಸಗಿ ಲಾಡ್ಜ್ ನಲ್ಲಿ ಸರಿಸುಮಾರು 30 ವರ್ಷದ ವಯಸ್ಸಿನ ಮಹಿಳೆ ಮತ್ತು ಒಬ್ಬ ಪುರುಷ ಎರಡು ಮೂರು ದಿನದ ಹಿಂದೆ ಬಂದು ತಂಗಿದ್ದರು ಎಂದು ಮಾಹಿತಿ ತಿಳಿದುಬಂದಿದೆ ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ನಂತರ ವಾಪಸ್ ಹೋಗುವಾಗ ವ್ಯಕ್ತಿ ಮಾತ್ರ ವಾಪಸ್ ರೂಮಿನಿಂದ ಹೊರ ಹೋಗಿದ್ದಾನೆ ಎಂದು ಅಲ್ಲಿದ್ದ ಕೆಲಸದ ಸಿಬ್ಬಂದಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದಿದೆ. ಜಾಹಿರಾತು : ಖಾಸಗಿ...








