ಮೃತದೇಹ ಶೀತಲೀಕರಣ ಫ್ರೀಜರ್ ಬಾಕ್ಸ್ ಲೋಕಾರ್ಪಣೆ : ಭಾವಸಾರ ವಿಜನ್ ಇಂಡಿಯಾ ಪ್ರೇರಣಾದಿಂದ ಸರ್ಜಿ ಫೌಂಡೇಷನ್‌ಗೆ ಹಸ್ತಾಂತರ ಶಿವಮೊಗ್ಗ: ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆಯು ನಗರದಲ್ಲಿ ಮೊದಲಬಾರಿಗೆ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಮೃತದೇಹ ಶೀತಲೀಕರಣ ಫ್ರೀಜರ್ ಬಾಕ್ಸ್ ನ್ನು ಸರ್ಜಿ ಫೌಂಡೇಷನ್‌ಗೆ ಗುರುವಾರ ಹಸ್ತಾಂತರಿಸಿತು. ಸರ್ಜಿ ಫೌಂಡೇಷನ್ ಹಾಗೂ ಸರ್ಜಿ ಆಸ್ಪತ್ರೆಯ ಮೂಲಕ ಇದರ ಸಂಪೂರ್ಣ ನಿರ್ವಹಣೆಯನ್ನು ಮಾಡಲಾಗುತ್ತದೆ.ಯಾವುದೇ ಜಾತಿ-ಧರ್ಮಕ್ಕೆ ಇದು ಸೀಮಿತವಲ್ಲ, ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ಲಭ್ಯ. ಡೆಡ್ ಬಾಡಿ ಪ್ರೀಜರ್‌ನ್ನು ತೆಗೆದುಕೊಂಡು ಹೋಗುವ ಸಾರಿಗೆ ವೆಚ್ಚವನ್ನು ಬಳಕೆದಾರರು ಭರಿಸಬೇಕಾಗುತ್ತದೆ, ಇದಕ್ಕೆ ಅತ್ಯಂತ ಕಡಿಮೆ ದರ ನಿಗದಿ ಮಾಡಲಾಗುತ್ತದೆ. ವಾಹನದ ಜವಾಬ್ದಾರಿ ಮೃತರ ಕುಟುಂಬದವರದ್ದಾಗಿರುತ್ತದೆ. ಅಂತ್ಯಕ್ರಿಯೆ ನಂತರ ಫ್ರೀಜರ್ ಬಾಕ್ಸ್ ಮರಳಿಸಿದ ನಂತರ ಸ್ವಚ್ಛತೆ ಮಾಡಿಕೊಂಡು ನಿರ್ವಹಣೆ ಮಾಡಲಾಗುತ್ತದೆ ಮತ್ತು ಅದರ ನಿರ್ವಹಣೆಗಾಗಿ ಒಬ್ಬರನ್ನು ನೇಮಕ ಮಾಡಲಾಗುತ್ತದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್...
ಜೋರಾಯ್ತು ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಚರ್ಚೆ ! ಯಾವಾಗ ಆಯ್ಕೆ ? ಯಾರ್ಯಾರು ಇದ್ದಾರೆ ರೇಸ್ ನಲ್ಲಿ ?
ಜೋರಾಯ್ತು ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಚರ್ಚೆ ! ಯಾವಾಗ ಆಯ್ಕೆ ? ಯಾರ್ಯಾರು ಇದ್ದಾರೆ ರೇಸ್ ನಲ್ಲಿ ? ಶಿವಮೊಗ್ಗ : ಬಿವೈ ವಿಜಯೇಂದ್ರ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ, ಶಿವಮೊಗ್ಗ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರ ಆಯ್ಕೆಯ ಚರ್ಚೆಯು ಜೋರಾಗಿದೆ. ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಬಿಜೆಪಿಯಲ್ಲಿ ಎಲ್ಲಾ ಪದಾಧಿಕಾರಿಗಳ ಬದಲಾವಣೆ ಆಗಲಿದೆ. ಇನ್ನು ಬಿಜೆಪಿ ಜಿಲ್ಲಾಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಯಾವಾಗ ಆಗಲಿದೆ ಎಂಬ ಕುತೂಹಲ ಬಿಜೆಪಿ ಕಾರ್ಯಕರ್ತರ ಮನದಲ್ಲಿ ಮನೆ ಮಾಡಿದೆ. ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷರ ಟಿ ಡಿ ಮೇಘರಾಜ್ ರವರ ಅವಧಿ ಐದು ವರ್ಷಗಳು ಕಳೆದಿದ್ದು ಜಿಲ್ಲಾಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳು ಸೇರಿ ಹೊಸ ಪದಾಧಿಕಾರಿಗಳು ಅಸ್ತಿತ್ವಕ್ಕೆ ಬರಲಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್...
ಮಲವಗೊಪ್ಪದ ಬಳಿ ಮರದ ಕೆಳಗೆ ದಂಪತಿಯ ಶವ ಪತ್ತೆ !
ಮಲವಗೊಪ್ಪದ ಬಳಿ ಮರದ ಕೆಳಗೆ ದಂಪತಿಯ ಶವ ಪತ್ತೆ ! ಶಿವಮೊಗ್ಗ : ನಗರದ ಮಲವಗೊಪ್ಪದಲ್ಲಿ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ ಮರವೊಂದರ ಕೆಳಗೆ ಓರ್ವ ಪುರುಷ ಮತ್ತು ಮಹಿಳೆಯ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಗಂಡ ಹೆಂಡತಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಶುಗರ್ ಪ್ಯಾಕ್ಟರಿ ಬಳಿ ಈ ಇಬ್ಬರ ಮೃತದೇಹ ನಿನ್ನೆ ರಾತ್ರಿ ಪತ್ತೆಯಾಗಿದೆ. ಇಬ್ಬರು ಸಹ ಮೃತಪಟ್ಟು ದಿನವಾಗಿರಬಹುದು ಎಂದು ಪೊಲೀಶ್ ಮೂಲಗಳು ತಿಳಿಸಿವೆ. ಇಬ್ಬರು ಸಹ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಯಿದ್ದು ಮೃತದೇಹವನ್ನು ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನೂ ಮೃತಪಟ್ಟವರು ಯಾರು? ಎಲ್ಲಿಯವರು ಎಂಬ ಗುರುತು ಸಹ ಪೊಲೀಸರಿಗೆ ತಿಳಿದುಬಂದಿಲ್ಲ. ಈ ಸಂಬಂಧ ಇನ್ನಷ್ಟೆ ವಿಚಾರಣೆ ನಡೆಯಬೇಕಿದೆ....
ಶಿವಮೊಗ್ಗದಲ್ಲಿ ಪಂಜು ಹಿಡಿದು ಮೆರವಣಿಗೆ ನಡೆಸಿದ ಸಚಿವರು ! ಕಾರಣವೇನು ?
ಶಿವಮೊಗ್ಗದಲ್ಲಿ ಪಂಜು ಹಿಡಿದು ಮೆರವಣಿಗೆ ನಡೆಸಿದ ಸಚಿವರು ! ಕಾರಣವೇನು ? ಶಿವಮೊಗ್ಗ : ಶಿವಮೊಗ್ಗದಲ್ಲಿ ಕಾಂಗ್ರೆಸ್‌ನ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯು ಐ ಶಿವಮೊಗ್ಗ ವತಿಯಿಂದ ಯುವಜ್ಯೋತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜಾಥದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪಂಜು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು. ನಾಳೆ ಶಿವಮೊಗ್ಗದ ಪ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್‌ನ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಂದ ಚಾಲನೆ ಸಿಗಲಿದೆ. ನಿನ್ನೆ ಸ್ಥಳ ಪರಿಶೀಲನೆಗಾಗಿ ಸಚಿವರು ಶಿವಮೊಗ್ಗಕ್ಕೆ ಬಂದಿದ್ದರು, ಈ ನಡುವೆ ನಿನ್ನೆ ಸಂಜೆ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯು ಐ ವತಿಯಿಂದ ಯುವ ಜ್ಯೋತಿ ಜಾಥವನ್ನು ಹಮ್ಮಿಕೊಂಡಿದ್ದು, ಈ ವೇಳೆ ಸಚಿವರುಗಳು ನೂರಾರು ಕಾರ್ಯಕರ್ತರ ಜೊತೆಗೆ ಕಂಡುಹಿಡಿದು ಹೆಜ್ಜೆ ಹಾಕಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ...
ಯುವನಿಧಿ ಕಾರ್ಯಕ್ರಮ: ಶಿವಮೊಗ್ಗ ನಗರದಲ್ಲಿ ಮಾರ್ಗ ಬದಲಾವಣೆ, ವಾಹನ ನಿಲುಗಡೆ ನಿಷೇಧ
ಯುವನಿಧಿ ಕಾರ್ಯಕ್ರಮ: ಶಿವಮೊಗ್ಗ ನಗರದಲ್ಲಿ ಮಾರ್ಗ ಬದಲಾವಣೆ, ವಾಹನ ನಿಲುಗಡೆ ನಿಷೇಧ ಶಿವಮೊಗ್ಗ : ಕರ್ನಾಟಕ ಸರ್ಕಾರ ಆಯೋಜಿಸಿರುವ ಯುವನಿಧಿ ಯೋಜನೆ ಕಾರ್ಯಕ್ರಮವನ್ನು ನಗರದ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ವಾಹನಗಳ ನಿಲುಗಡೆ ಹಾಗೂ ತಾತ್ಕಾಲಿಕವಾಗಿ ಈ ಕೆಳಕಂಡಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ. ಜ.12 ರಂದು ಬೆಳಿಗ್ಗೆ 6 ರಿಂದ ಸಂಜೆ 6.30 ರವರೆಗೆ ಕೆಳಕಂಡಂತೆ ವಾಹನಗಳ ಮಾರ್ಗ ಬದಲಾವಣೆ ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೊಳ ಸರ್ಕಲ್ ಗೋಪಾಳ ಸರ್ಕಲ್ ನ್ಯೂಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ಸೇರುವುದು. ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂಮಂಡ್ಲಿ ಸರ್ಕಲ್ ಗೋಪಾಳ ಸರ್ಕಲ್ ಆಲ್ಕೊಳ ಮಾರ್ಗವಾಗಿ ಸಾಗರ ರಸ್ತೆ ಬಂದು ಸೇರುವುದು. ಶಿವಮೊಗ್ಗದಿಂದ ಶಿಕಾರಿಪುರ, ನ್ಯಾಮತಿ ಸೊರಬ ಕಡೆ ಹೋಗುವ ಎಲ್ಲಾ ವಾಹನಗಳು ಆಯನೂರು ಹಾರ್ನಳ್ಳಿ ಸವಳಂಗ...
ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು
ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು ತೀರ್ಥಹಳ್ಳಿ : ಈಜಲು ಹೋದ ಬಿಹಾರಿ ಮೂಲದ ಯುವಕನೋರ್ವ ನೀರುಪಾಲದ ಘಟನೆ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಜಾತ್ರೆ ವ್ಯಾಪಾರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು ಬಿಹಾರದಿಂದ ಕುಟುಂಬವೊಂದು ಬಂದಿದ್ದು ಅದರಲ್ಲಿ ತಂದೆ-ಮಗ ಸ್ನಾನಕ್ಕೆ ಹೋದಾಗ ಈ ಘಟನೆ ನಡೆದಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಸ್ಥಳೀಯರಾದ ಮುಳುಗು ತಜ್ಞ ಪ್ರಮೋದ್ ಪೂಜಾರಿ ಮತ್ತು ತಂಡ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶಕ್ಕೆ ಉಚಿತ ತರಬೇತಿ
ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶಕ್ಕೆ ಉಚಿತ ತರಬೇತಿ ಸಾಗರ : ಮುರಾರ್ಜಿ ದೇಸಾಯಿ ವಸತಿ ಶಾಲೆಯ 6 ನೇ ತರಗತಿ ಪ್ರವೇಶಕ್ಕಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಜ.18 ರಂದು ಉಚಿತವಾಗಿ ತರಬೇತಿ ತರಗತಿಯನ್ನು ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪ್ರತಿ ಶನಿವಾರ ಬೆಳಗ್ಗೆಯಿಂದ ತರಗತಿಗಳನ್ನು ನಡೆಸಲಾಗುವುದು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಕೆಳಗಿನ ದೂರವಾಣಿಗೆ ಸಂಪರ್ಕಿಸಿ ಹೆಸರುಗಳನ್ನು ನೀಡಿ ಪೂರ್ವ ಸಿದ್ಧತಾ ವಿವರಗಳನ್ನು ಪಡೆಯಬಹುದು ಆರ್ ಎಂ ಭಾಪಟ್ : 9448414940, ಎಚ್ ಕೆ ಪರಮಾತ್ಮ : 9448669766, 9663845940 ವರದಿ : ಲಿಂಗರಾಜ್ ಗಾಡಿಕೊಪ್ಪ
ಬೈಕ್- ಲಾರಿ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
ಬೈಕ್- ಲಾರಿ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು ! ಶಿವಮೊಗ್ಗ : ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸನಗರ ತಾಲೂಕಿನ ಮಾವಿನಹೊಳೆ ಕ್ರಾಸ್ ನಲ್ಲಿ ನಡೆದಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಹೊಸನಗರ ಕಡೆಯಿಂದ ಸಾಗರಕ್ಕೆ ತೆರಳುತ್ತಿದ್ದ ಕಂಟೇನರ್ ಲಾರಿ ಮತ್ತು ಸಾಗರ ಕಡೆಯಿಂದ ಹೊಸನಗರ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್ ಸವಾರ ಗರ್ತಿಕೆರೆ ಮೂಲದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ವಿದ್ಯುತ್ ಶಾಕ್ : ಬಾಲಕನ ಕೈ ಮತ್ತು ಕಾಲು ಬೆರಳುಗಳು ಕಟ್ !
ವಿದ್ಯುತ್ ಶಾಕ್ : ಬಾಲಕನ ಕೈ ಮತ್ತು ಕಾಲು ಬೆರಳುಗಳು ಕಟ್ ! ಶಿವಮೊಗ್ಗ : ತಾಯಿ ಜೊತೆ ಗದ್ದೆಗೆ ಹೋದಾಗ ನೇತು ಬಿದ್ದ ವಿದ್ಯುತ್ ಕಂಬದ ತಂತಿಯಿಂದ ಬಾಲಕನಿಗೆ ಶಾಕ್ ಹೊಡೆದಿತ್ತು. ಈ ಶಾಕ್ ಹೊಡೆದ ಪರಿಣಾಮ ಆತನ ಬಲಗೈ ಮತ್ತು ಎಡಗಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಬಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಕೈ ಮತ್ತು ಕಾಲಿನ ಮೂರು ಬೆರಳನ್ನು ಉಳಿಸಿಕೊಳ್ಳುವ ವೈದ್ಯರ ಪ್ರಯತ್ನ ವಿಫಲವಾಗಿದೆ. ರಾಜ್ಯದಲ್ಲಿ ಈಗಾಗಲೇ ಅನೇಕ ವಿದ್ಯುತ್ ಅವಘಡಗಳಲ್ಲಿ ಸಾವು ನೋವು ಸಂಭವಿಸಿದೆ. ಆದರೆ ಶಿವಮೊಗ್ಗದಲ್ಲಿ ನಡೆದ ಘಟನೆ ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ. ತಾಯಿ ಜೊತೆ ಗದ್ದೆಗೆ ಹೋಗಿದ್ದ ಬಾಲಕನು ವಿದ್ಯುತ್ ಕಂಬದಲ್ಲಿ ನೇತು ಬಿದ್ದ ತಂತಿಯಿಂದ ವಿದ್ಯುತ್ ಶಾಕ್ ಹೊಡೆಸಿಕೊಂಡಿದ್ದಾನೆ. ಈ ಶಾಕ್ ಗೆ ತುತ್ತಾಗಿದ್ದ ವಿಕಲಚೇತನ ಬಾಲಕನ ಕೈ ಮತ್ತು ಕಾಲಿನ ಬೆರಳು ಕಟ್ ಮಾಡಿ ಆಪರೇಷನ್ ಮಾಡಲಾಗಿದೆ. ಬಾಲಕನ ರೋಧನೆ, ತಾಯಿಯ ಅಳಲು ಕಲ್ಲು ಹೃದಯಕ್ಕೂ ಕಣ್ಣೀರು ತರಿಸುವಂತಿದೆ. ಯಾರೋ...
ವಿದ್ಯಾರ್ಥಿವೇತನಕ್ಕೆ ಆನ್ ಲೈನ್ ಅರ್ಜಿ ಆಹ್ವಾನ
ವಿದ್ಯಾರ್ಥಿವೇತನಕ್ಕೆ ಆನ್ ಲೈನ್ ಅರ್ಜಿ ಆಹ್ವಾನ ಶಿವಮೊಗ್ಗ : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2023 – 24ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಆಹ್ವಾನಿಸಿದೆ. ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (ಎಸ್‌ಎಸ್‌ಪಿ) ಮೂಲಕ ವಿದ್ಯಾರ್ಥಿ ವೇತನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಹಾಗೂ ತಾಲೂಕಿನ ಎಲ್ಲ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ ಶ್ರೀನಿವಾಸ್ ತಿಳಿಸಿದ್ದಾರೆ. ವರದಿ : ಲಿಂಗರಾಜ್ ಗಾಡಿಕೊಪ್ಪ









