ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ! ಶಿವಮೊಗ್ಗ : ತಾಲೂಕಿನ ಹೊಳಲೂರು ಬಳಿ ಹಿಂಬದಿಯಿಂದ ಬಂದ ಕೆ ಎಸ್ ಆರ್ ಟಿ ಸಿ ಬಸ್ ಬೈಕ್ ಗೆ ಹೊಡೆದಿದೆ. ನಗರದ ಮೆಡಿಕಲ್ ಒಂದರಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಬೈಕ್ ಸವಾರನಿಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ನ ಹಣೆಯ ಭಾಗಕ್ಕೆ , ಮತ್ತು ದೇಹದ ಇತರೆ ಭಾಗಗಳಿಗೆ ಗಾಯಗಳಾಗಿವೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಗಾಯಾಳು ಚೀಲೂರಿನ ನಿವಾಸಿ ದೀಪಕ್ ರಾಜು (35) ಜ.2 ರಂದು ರಾತ್ರಿ 10 ಗಂಟೆಗೆ ಕೆಲಸ ಮುಗಿಸಿಕೊಂಡು ವಾಪಾಸ್ ಚೀಲೂರಿಗೆ ಎಲೆಕ್ಟ್ರಿಕ್ ಬೈಕ್...
ಜ. 06 ರಂದು ಆಲ್ಕೋಳ, ಗಾಡಿಕೊಪ್ಪ, ಗೋಪಾಳ ಸುತ್ತ ಮುತ್ತಾ ಸೇರಿದಂತೆ, ಶಿವಮೊಗ್ಗದ 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಜ. 06 ರಂದು ಆಲ್ಕೋಳ, ಗಾಡಿಕೊಪ್ಪ, ಗೋಪಾಳ ಸುತ್ತ ಮುತ್ತಾ ಸೇರಿದಂತೆ, ಶಿವಮೊಗ್ಗದ 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಶಿವಮೊಗ್ಗ : ಆಲ್ಕೋಳ ವಿ.ವಿ. ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ, ಈ ವಿತರಣಾ ಕೇಂದ್ರದಿಂದ ಸರಬರಾಜಾಗುವ ಕೆಳಕಂಡ ಪ್ರದೇಶಗಳಲ್ಲಿ ಜ. 06 ರಂದು ಬೆಳ್ಳಗ್ಗೆ 09-30 ರಿಂದ ಸಂಜೆ 06-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಆಲ್ಕೋಳ, ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸಕ್ರ್ಯೂಟ್ ಹೌಸ್, ನೀಲಮೇಘಮ್ ಲೇಔಟ್, ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್, ಅಲ್ ಹರೀಮ್ ಲೇಔಟ್, ವಿಜಯನಗರ, ಪಂಪ ನಗರ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಶ್ರೀರಾಮನಗರ, ಟಿಪ್ಪುನಗರ, ಪದ್ಮಾ ಟಾಕೀಸ್ ರಸ್ತೆ, ಸಿದ್ದೇಶ್ವರ ವೃತ್ತ, ಗೋಪಾಳಗೌಡ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಅಣ್ಣಾನಗರ, ರಂಗನಾಥ ಬಡಾವಣೆ, ಕೆ.ಹೆಚ್.ಬಿ ಗೋಪಾಳ, ಜೆ.ಪಿ.ನಗರ, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಾಕೀಯ ಕಾಲೇಜು, ಮಲ್ಲಿಗೇನಹಳ್ಳಿ, ಸೋಮಿನಕೊಪ್ಪ ಪ್ರೆಸ್ ಕಾಲೋನಿ,...
ಶಿವಮೊಗ್ಗ ಎಸ್ ಪಿ ಕಚೇರಿಯ ಮುಂದೆ ಬಿಜೆಪಿ ಪ್ರತಿಭಟನೆ ! ಈಶ್ವರಪ್ಪನವರನ್ನು ಬಂಧಿಸಿದ ಪೊಲೀಸರು !
ಶಿವಮೊಗ್ಗ ಎಸ್ ಪಿ ಕಚೇರಿಯ ಮುಂದೆ ಬಿಜೆಪಿ ಪ್ರತಿಭಟನೆ ! ಈಶ್ವರಪ್ಪನವರನ್ನು ಬಂಧಿಸಿದ ಪೊಲೀಸರು ! ಶಿವಮೊಗ್ಗ : ಹುಬ್ಬಳ್ಳಿಯಲ್ಲಿ ಕರಸೇವಕರ ಮೇಲೆ 31 ವರ್ಷದ ಕೇಸ್ ಗಳನ್ನ ರೀ ಓಪನ್ ಮಾಡಿ ಬಂಧನ ಮಾಡಿರುವುದನ್ನ ಖಂಡಿಸಿ, ಇಂದು ಜಿಲ್ಲಾ ಬಿಜೆಪಿ ಘಟಕದಿಂದ ಎಸ್ ಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗಿದೆ. ನಾನು ಕರೆಸೇವಕ ನನ್ನನ್ನು ಬಂಧಿಸಿ ಎಂಬ ಪ್ಲೇಕಾರ್ಡ್ ಹಿಡಿದು ನೂರಾರು ಕಾರ್ಯಕರ್ತರು ಶಿವಮೊಗ್ಗ ಎಸ್ ಪಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಸಚಿವ ಈಶ್ವರಪ್ಪನಾನೂ ಕರಸೇವಕ ಎಂಬ ಪ್ಲಕಾರ್ಡ್ ಹಿಡಿದು ಬಂದು.ನನ್ನನ್ನ ಬಂಧಿಸಿದರೆ ಸರಿ ಇಲ್ಲವಾದರೆ ಎಸ್‌ಪಿ ಕಚೇರಿಯ ಒಳಗೆ ನುಗ್ಗುವುದಾಗಿ ಗುಟುರಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ನಂತರ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರನ್ನು...
ಹೊಸ ವರ್ಷದಂದೇ ಎಂಎಸ್ಐಎಲ್ ಬಾರ್ ನ ಡೋರ್ ಹೊಡೆದು ಹಣ ಕಳವು !
ಹೊಸ ವರ್ಷದಂದೇ ಎಂಎಸ್ಐಎಲ್ ಬಾರ್ ನ ಡೋರ್ ಹೊಡೆದು ಹಣ ಕಳವು ! ಸಾಗರ : ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಜಂಬಗಾರು ಎಂಬಲ್ಲಿ ಹೊಸ ವರ್ಷದಂದೇ ಎಂಎಸ್ಐಎಲ್ ಬಾರ್ ನ ಡೋರ್ ಹೊಡೆದು ಬರೋಬ್ಬರಿ 2,95,473/- ಹಣ ಕಳವು ಮಾಡಿರುವ ಘಟನೆ ನಡೆದಿದೆ. ಇಲ್ಲಿನ ಜಂಬಗಾರುವಿನಲ್ಲಿರುವ ಸರ್ಕಾರಿ ಮಧ್ಯ ಮಾರಾಟ ಮಳಿಗೆಯಲ್ಲಿ ಕಳೆದ ಎರಡು ವರ್ಷಗಳಿಂದ ವೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆನಂದಪ್ಪ ಮತ್ತು ಅಶೋಕ್ ಎಂಬುವವರು ಹೊಸ ವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್ 31 ರಂದು ಮದ್ಯ ಮಾರಾಟ ಮುಗಿಸಿ ದಿನವಿಡಿ ವ್ಯಾಪಾರ ಮಾಡಿದ್ದ ಹಣವನ್ನು ಭಾನುವಾರ ಆಗಿದ್ದರಿಂದ 2 ದಿನದಿಂದ ಸಂಗ್ರಹವಾದ 2,95,473/- ರೂ ನಗದು ಹಣವನ್ನು ಎಣಿಸಿ ಮಳಿಗೆಯ ಒಳಗೆ ಇದ್ದ ಲಾಕರ್ ನಲ್ಲಿ ಇಟ್ಟುರಾತ್ರಿ ಅಂಗಡಿ ಕ್ಲೋಸ್ ಮಾಡಿ ಮನೆಗೆ ತೆರಳಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್...
ರಾಜ್ಯಮಟ್ಟದ ಪುಸ್ತಕ ಆಯ್ಕೆಗಾಗಿ ಅರ್ಜಿ ಆಹ್ವಾನ
ರಾಜ್ಯಮಟ್ಟದ ಪುಸ್ತಕ ಆಯ್ಕೆಗಾಗಿ ಅರ್ಜಿ ಆಹ್ವಾನ ಶಿವಮೊಗ್ಗ : ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2023ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕನ್ನಡ, ಆಂಗ್ಲ, ಭಾರತೀಯ ಇತರೆ ಭಾಷೆಗಳ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿದೆ. ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಜನವರಿ 31, 2024 ರೊಳಗೆ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು 560001 ಇಲ್ಲಿಗೆ ಫೆ. 05 ರೊಳಗಾಗಿ ಸಲ್ಲಿಸುವುದು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಆಸಕ್ತರು ನಿಗದಿತ ನಮೂನೆ ಅರ್ಜಿ ಮತ್ತು ನಿಬಂಧನೆಗಳ ಮಾಹಿತಿಗಾಗಿ...
BREAKING NEWS : ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಅಪಘಾತ ! ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿದ ಖಾಸಗಿ ಬಸ್ !
BREAKING NEWS : ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಅಪಘಾತ ! ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿದ ಖಾಸಗಿ ಬಸ್ ! ಶಿವಮೊಗ್ಗ : ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಅಪಘಾತವಾಗಿದೆ. ಎದುರಿನಿಂದ ಬರುತ್ತಾ ಇದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ, ಪ್ರಯಾಣಿಕರಿದ್ದ ಖಾಸಗಿ ಬಸ್ ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿದೆ. ಸಾಗರ ರಸ್ತೆಯ ಗಿಳಾಲ ಗುಂಡಿ ಬಳಿ ಈ ಘಟನೆ ನಡೆದಿದೆ. ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೊರಡುವವರು, ಆನಂದಪುರದಲ್ಲಿ ನಾಟಿ ಔಷಧಿ ತೆಗೆದುಕೊಳ್ಳುವವರು ಇದ್ದರು ಎಂಬ ಮಾಹಿತಿ ಶಿವಮೊಗ್ಗ ಎಕ್ಸ್ ಪ್ರೆಸ್ ನ್ಯೂಸ್ ಚಾನೆಲ್ ಗೆ ತಿಳಿದುಬಂದಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ...
3 ತಿಂಗಳ ಹಿಂದೆ ನಾಪತ್ತೆಯಾದವ ಶವವಾಗಿ ಪತ್ತೆ ! ಕೊಲೆಯೋ.. ಆತ್ಮ ಹತ್ಯೆಯೋ..? ಏನಿದು ಪ್ರಕರಣ ?
3 ತಿಂಗಳ ಹಿಂದೆ ನಾಪತ್ತೆಯಾದವ ಶವವಾಗಿ ಪತ್ತೆ ! ಕೊಲೆಯೋ.. ಆತ್ಮ ಹತ್ಯೆಯೋ..? ಏನಿದು ಪ್ರಕರಣ ? ತೀರ್ಥಹಳ್ಳಿ : ಎನ್ ಆರ್ ಪುರ ತಾಲೂಕು ಕಣಿವೆಯ ಬಳಿ ಡಿ.31ರಂದು ವ್ಯಕ್ತಿ ಒಬ್ಬರ ಶವ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಗೋಪಾಲ್ ಎಂಬ ವ್ಯಕ್ತಿ ಹಲವು ವರ್ಷಗಳ ಕಾಲ ಬಾಂಬೆಯಲ್ಲಿ ಇದ್ದು ವ್ಯವಹಾರ ನಡೆಸುತ್ತಿದ್ದರು. ನಂತರ ಊರಿಗೆ ಬಂದು ಜಮೀನು ನೋಡಿಕೊಳ್ಳುತ್ತಿದ್ದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ತೀರ್ಥಹಳ್ಳಿ ತಾಲೂಕು ಕೂಡಿಗೆಯ ಗೋಪಾಲ್ ಎಂಬ ವ್ಯಕ್ತಿ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಇವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ ಅವರ ಪತ್ನಿ, ನಂತರ ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಡಿಸೆಂಬರ್ 31ರಂದು ಎನ್...
ಉದ್ಯಮ ಕ್ಷೇತ್ರಗಳಲ್ಲಿ ಮಹಿಳೆಯರು ಯಶಸ್ಸು
ಉದ್ಯಮ ಕ್ಷೇತ್ರಗಳಲ್ಲಿ ಮಹಿಳೆಯರು ಯಶಸ್ಸು ಶಿವಮೊಗ್ಗ: ಉದ್ಯಮ, ಆಹಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಪ್ರೋತ್ಸಾಹ ಹಾಗೂ ಬೆಂಬಲ ನೀಡುವ ಅಗತ್ಯವಿದೆ ಎಂದು ಛಾಯಾ ದೇವಂಗಿ ಹೇಳಿದರು. ಪಂಪ ನಗರದ ಗುತ್ತö್ಯಪ್ಪ ಕಾಲೋನಿಯಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಮಲೆನಾಡು ಮೇಳ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ ಎಂದು ತಿಳಿಸಿದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಲಕ್ಷ್ಮೀ ಪುಟ್ಟಯ್ಯ ಹೆಗ್ಡೆ ಮಾತನಾಡಿ, ಇಂತಹ ಮೇಳಗಳ ಆಯೋಜನೆಯಿಂದ ಸಮಾಜದ ಎಲ್ಲರೊಂದಿಗೆ ಓಡನಾಟ ಸಂಪರ್ಕ ಹೆಚ್ಚಲಿದ್ದು, ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು. ಸಂಘದ ಅಧ್ಯಕ್ಷೆ ರಚನಾ ಸಂತೋಷ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಮಲೆನಾಡು ಮೇಳ ಆಯೋಜಿಸಿದ್ದು, ಈ ಮೇಳದಲ್ಲಿ...
ಶಿವಮೊಗ್ಗಕ್ಕೆ ಇಂದು ಮೂವರು ಸಚಿವರ ಭೇಟಿ ! ಕಾರಣವೇನು?
ಶಿವಮೊಗ್ಗಕ್ಕೆ ಇಂದು ಮೂವರು ಸಚಿವರ ಭೇಟಿ ! ಕಾರಣವೇನು? ಶಿವಮೊಗ್ಗ : ಶಿವಮೊಗ್ಗಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಜೊತೆ ರಾಜ್ಯ ಸರ್ಕಾರದ ಇಬ್ಬರು ಸಚಿವರು ಭೇಟಿ ನೀಡಲಿದ್ದಾರೆ. ಶಿವಮೊಗ್ಗದ ಪ್ರೀಡಂ ಪಾರ್ಕ್ ನಲ್ಲಿ ಜನವರಿ 12ರಂದು ಆಯೋಜಿಸಲು ಉದ್ದೇಶಿಸಿರುವ ” ಯುವನಿಧಿ ಯೋಜನೆಯ ” ಚಾಲನೆ ಕಾರ್ಯಕ್ರಮದ ಕುರಿತು ನಡೆಯುವ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಜಿಲ್ಲಾಧಿಕಾರಿಗಳ ಸಭಾಂಗಣ ಸಭೆಯು ನಡೆಯಲಿರುವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಾಕ್ಷರತಾ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ,ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್.ಪಾಟೀಲ್, ರವರು ಸಹ ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಕೌಶಲ್ಯಾಭಿವೃದ್ಧಿ ಇಲಾಖೆ...
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಡಿಯೋ ಗಾಡಿ ಮಾಲೀಕನಿಗೆ ಬಿತ್ತು ಬರೋಬ್ಬರಿ 17, 000 ದಂಡ ! ಬಿಲ್ ನೋಡಿ ಶಾಕ್ ಆದ ವಾಹನ ಸವಾರ !
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಡಿಯೋ ಗಾಡಿ ಮಾಲೀಕನಿಗೆ ಬಿತ್ತು ಬರೋಬ್ಬರಿ 17, 000 ದಂಡ ! ಬಿಲ್ ನೋಡಿ ಶಾಕ್ ಆದ ವಾಹನ ಸವಾರ ! ಶಿವಮೊಗ್ಗ : ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ಸಂಚಾರಿ ಠಾಣೆ ಪೋಲಿಸರಿಂದ ವಾಹನ ತಪಾಸಣೆ ವೇಳೆ ಹಲವು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಡಿಯೋ ಗಾಡಿಗೆ ಶಿವಮೊಗ್ಗ ಸಂಚಾರಿ ಪೊಲೀಸರು ಬರೋಬ್ಬರಿ 17,000 ದಂಡ ವಿಧಿಸಿದ್ದಾರೆ. ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ಸಂಚಾರಿ ಠಾಣೆ ಪೋಲಿಸರಿಂದ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಹೋಗುತ್ತಿದ್ದ ವಾಹನ ಸವಾರನನ್ನ ತಡೆದು ಶಿವಮೊಗ್ಗ ಸಂಚಾರಿ ಪೊಲೀಸರು ಪರಿಶೀಲಿಸಿದ್ದಾರೆ. ಆಗ ಹಲವು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಪ್ರಕರಣಗಳು ವಾಹನ ಸವಾರನ ಮೇಲೆ ಇತ್ತು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್...









