ದೇಶಾದ್ಯಂತ ಜಾಗೃತಿ ಮೂಡಿಸಲು ಸೈಕಲ್ ಸವಾರಿ

ದೇಶಾದ್ಯಂತ ಜಾಗೃತಿ ಮೂಡಿಸಲು ಸೈಕಲ್ ಸವಾರಿ

ದೇಶಾದ್ಯಂತ ಜಾಗೃತಿ ಮೂಡಿಸಲು ಸೈಕಲ್ ಸವಾರಿ ಶಿವಮೊಗ್ಗ: ಆರೋಗ್ಯವಂತ ಜೀವನ ನಡೆಸಲು ಶುದ್ಧ ಗಾಳಿ, ನೀರು, ಆಹಾರ ಮುಖ್ಯ. ಉತ್ತಮ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಉತ್ತರ ಪ್ರದೇಶದ ರಾಬಿನ್ ಸಿಂಗ್ ಅಭಿಪ್ರಾಯ ಪಟ್ಟರು. ದೇಶಾದ್ಯಂತ ಜಾಗೃತಿ ಮೂಡಿಸಲು ಸೈಕಲ್ ಪ್ರವಾಸ ನಡೆಸುತ್ತಿರುವ ರಾಬಿನ್ ಸಿಂಗ್ ಅವರಿಗೆ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್, ಯೂತ್ ಹಾಸ್ಟೆಲ್ ತರುಣೋದಯ ಘಟಕ, ಪರಿಸರ ಪ್ರೇಮಿಗಳ ತಂಡದ ವತಿಯಿಂದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿ, ಕಲುಷಿತ ವಾತಾವರಣ ನಿರ್ಮಾಣ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಷ್ಟ ಆಗಲಿದ್ದು, ಶುದ್ಧ ನೀರು, ಗಾಳಿ, ಆಹಾರ ಸಿಗುವ ರೀತಿ ನಾವೆಲ್ಲರೂ ನೋಡಿಕೊಳ್ಳಬೇಕು. ದೇಶಾದ್ಯಂತ ಜನರಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಹೆಚ್ಚಾಗಬೇಕು ಎಂದು ತಿಳಿಸಿದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು...

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಎದುರಾಯ್ತು ಸಂಕಷ್ಟ !  ಗೋವಾಕ್ಕೆ ತೇರಳಬೇಕಿದ್ದ ವಿಮಾನ ರದ್ದು ! ಪ್ರಯಾಣಿಕರ ಪರದಾಟ !

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಎದುರಾಯ್ತು ಸಂಕಷ್ಟ !  ಗೋವಾಕ್ಕೆ ತೇರಳಬೇಕಿದ್ದ ವಿಮಾನ ರದ್ದು ! ಪ್ರಯಾಣಿಕರ ಪರದಾಟ !

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಎದುರಾಯ್ತು ಸಂಕಷ್ಟ ! ಗೋವಾಕ್ಕೆ ತೇರಳಬೇಕಿದ್ದ ವಿಮಾನ ರದ್ದು ! ಪ್ರಯಾಣಿಕರ ಪರದಾಟ ! ಶಿವಮೊಗ್ಗ : ಸ್ಟಾರ್ ಏರ್​ಲೈನ್ಸ್​ನಿಂದ ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ವಿಮಾನ ಕೊನೆ ಹಂತದಲ್ಲಿ ರದ್ದಾಗಿದೆ. ಹೀಗಾಗಿ 50 ಕ್ಕೂ ಹೆಚ್ಚು ಪ್ರಯಾಣಿಕರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪರದಾಡಿದ್ದಾರೆ. ತಾಂತ್ರಿಕ ಸಮಸ್ಯೆ ನೆಪ ಹೇಳಿ ಇಂದು ಸ್ಟಾರ್ ಏರ್​ಲೈನ್ಸ್ ಸಂಸ್ಥೆ ವಿಮಾನವನ್ನು ರದ್ದು ಮಾಡಿದೆ. ಹೀಗಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಸಮಸ್ಯೆ ನೆಪ ಹೇಳಿ ಇಂದು ಸ್ಟಾರ್ ಏರ್​ಲೈನ್ಸ್ ​ನಿಂದ ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ವಿಮಾನವನ್ನು ರದ್ದು ಮಾಡಲಾಗಿದೆ. ಹಾಗಾಗಿ 50ಕ್ಕೂ ಹೆಚ್ಚು ಪ್ರಯಾಣಿಕರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪರದಾಡಿರುವಂತಹ ಘಟನೆ ನಡೆದಿದೆ. ನಿನ್ನೆ ಕೂಡಾ ಶಿವಮೊಗ್ಗದಿಂದ ಗೋವಾಕ್ಕೆ ವಿಮಾನ ಹಾರಾಟ ರದ್ದು ಮಾಡಲಾಗಿತ್ತು. ಹೀಗಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್...

ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ – ಕೋಡಿ ಮಠದ ಶ್ರೀ 

ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ – ಕೋಡಿ ಮಠದ ಶ್ರೀ 

ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ – ಕೋಡಿ ಮಠದ ಶ್ರೀ ಶಿವಮೊಗ್ಗ : ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ ಎಂಬ ಪರಂಪರೆಯನ್ನು ಇಡೀ ಜಗತ್ತೆ ಹೊಂದಿದೆ ಎಂದು ಕೋಡಿಮಠದ ಶ್ರೀ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ಹೇಳಿದರು  ಅವರು ಇಂದು ಆರ್. ಎಂ.ಆರ್. ರಸ್ತೆಯಲ್ಲಿರುವ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ ಇಂದು ಇಂದು ಅಮೃತ ಬಿಂದು ಹೆಸರಿನ ತಾಯಂದಿರ ಎದೆಹಾಲಿನ ಬ್ಯಾಂಕ್‌ನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಎದೆಹಾಲಿನಿಂದ ಬರುವ ಶಕ್ತಿ ಅಪಾರ ಮತ್ತು ಅದು ಎಲ್ಲಿಯೂ ಸಿಗುವುದಿಲ್ಲ ಇಂದಿನ ಆಧುನಿಕ ಸೌಲಭ್ಯಗಳಿಗೆ ಮಾರುಹೋದ ನಮ್ಮ ಹೆಣ್ಣು ಮಕ್ಕಳು, ಮಕ್ಕಳಿಗೆ ಹಾಲುಣ್ಣಿಸುವಲ್ಲಿ ಯೋಚಿಸುತಿದ್ದಾರೆ. ಜೊತೆಗೆ ವಿವಿಧ ಕಾರಣ ಗಳಿಂದ ಮಗುವಿಗೆ ಎದೆಹಾಲು ಸಿಗದೇ ಹೋಗುತ್ತಿದೆ. ಇದರಿಂದ ಮಗುಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಸರ್ಜಿ ಆಸ್ಪತ್ರೆಯವರು ಒಂದು ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಯಶಸ್ವಿಯಾಗಲಿ, ಮಕ್ಕಳ ಆರೋಗ್ಯ ಸುಧಾರಿಸಲಿ ಎಂದರು. ಮಲೆನಾಡಿನ...

ಬಸವಕೇಂದ್ರದಲ್ಲಿ ವಿಶೇಷ ಗಣಪರ್ವ ಆಚರಣೆ

ಬಸವಕೇಂದ್ರದಲ್ಲಿ ವಿಶೇಷ ಗಣಪರ್ವ ಆಚರಣೆ

ಬಸವಕೇಂದ್ರದಲ್ಲಿ ವಿಶೇಷ ಗಣಪರ್ವ ಆಚರಣೆ ಶಿವಮೊಗ್ಗ: ಲಿಂಗಾಯತ ಪರಂಪರೆಯ ಶ್ರೇಷ್ಠ ಆಚರಣೆಗಳಲ್ಲಿ ಗಣಪರ್ವ ಕೂಡ ಒಂದು. ಸ್ನೇಹ ಸೌಹಾರ್ದತೆಯ ಸಂಕೇತ ಹಾಗೂ ಪರಮಶಾಂತಿಯನ್ನು ಕೊಡುವ ಗಣಪರ್ವ ವಿಶೇಷ ಕಾರ್ಯಕ್ರಮ ಆಗಿದೆ ಎಂದು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು. ಬಸವಕೇಂದ್ರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಅಕ್ಕನ ಬಳಗ, ಕದಳಿ ಸಮಾಜ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ, ಸೃಷ್ಠಿ ಮಹಿಳಾ ಸಮಾಜ, ಕದಳಿ ವನಿತಾ ವೇದಿಕೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಗಣಪರ್ವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ  ಎಲ್ಲ ಭಕ್ತರ ಮನೆಯಿಂದ ಮನೆಗಳಲ್ಲಿ ಸ್ವತಃ ತಾವೇ ತಯಾರಿ...

BREAKING NEWS : ಭದ್ರಾವತಿಯಲ್ಲಿ ಯುವಕನ ಕೊಲೆ ! ಹಳೇ ದ್ವೇಷಕ್ಕೆ ನಡೀತಾ ಮರ್ಡರ್ ?

BREAKING NEWS : ಭದ್ರಾವತಿಯಲ್ಲಿ ಯುವಕನ ಕೊಲೆ ! ಹಳೇ ದ್ವೇಷಕ್ಕೆ ನಡೀತಾ ಮರ್ಡರ್ ?

BREAKING NEWS : ಭದ್ರಾವತಿಯಲ್ಲಿ ಯುವಕನ ಕೊಲೆ ! ಹಳೇ ದ್ವೇಷಕ್ಕೆ ನಡೀತಾ ಮರ್ಡರ್ ? ಭದ್ರಾವತಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವೈನ್ ಶಾಪ್ ನಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಹಳೇ ದ್ವೇಷದ ಹಿನ್ನಲೆ ಯುವಕನ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಭದ್ರಾವತಿ ಸಿಟಿಯಲ್ಲಿರುವ ಭದ್ರಾ ವೈನ್ ಶಾಪ್ ನಲ್ಲಿ ಹೇಮಂತ್ ಅಲಿಯಾಸ್ ಕರಿ ಚಿಕ್ಕಿಯನ್ನ ( 35 ) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಹಿಂದೆ ಮುಜ್ಜು ಎಂಬಾತನ ಕೊಲೆಗೆ ಪತ್ರೀಕಾರವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ, ಸದ್ಯ ಘಟನೆ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ 

ಶಬರಿಮಲೆಯಿಂದ ವಾಪಸ್ ಆಗುವ ಭಕ್ತರು ಹೋಂ ಐಸೋಲೇಷೆನ್ ಆಗುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ರಾಜೇಶ್ ಸೂಚನೆ

ಶಬರಿಮಲೆಯಿಂದ ವಾಪಸ್ ಆಗುವ ಭಕ್ತರು ಹೋಂ ಐಸೋಲೇಷೆನ್ ಆಗುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ರಾಜೇಶ್ ಸೂಚನೆ

ಶಬರಿಮಲೆಯಿಂದ ವಾಪಸ್ ಆಗುವ ಭಕ್ತರು ಹೋಂ ಐಸೋಲೇಷೆನ್ ಆಗುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ರಾಜೇಶ್ ಸೂಚನೆ ! ಶಿವಮೊಗ್ಗ : ದೇಶಾದ್ಯಂತ ಮತ್ತೆ ಕೊರೋನ ಮಹಾಮಾರಿಯ ಅಟ್ಟಹಾಸ ಶುರುವಾಗಿದೆ. ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ನೆರೆಯ ರಾಜ್ಯ ಕೇರಳದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ಜಿಲ್ಲಾ ಆರೋಗ್ಯ ಅಧಿಕಾರಿಗಳು ಡಾ ರಾಜೇಶ್ ಮುಂಜಾಗ್ರತಾ ಕ್ರಮವಾಗಿ ಶಬರಿಮಲೆಯಿಂದ ವಾಪಸ್ ಆಗುವ ಭಕ್ತರು ಹೋಂ ಐಸೋಲೇಷೆನ್ ಆಗುವಂತೆ ಸೂಚನೆ ನೀಡಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ  ಈ ಸಮಯದಲ್ಲಿ ವೈರಲ್ ಫ್ಯುವರ್ ಜಾಸ್ತಿ ಇರುವ ಕಾರಣ, ಜ್ವರ ಬರುವುದು ಸಾಮಾನ್ಯ, ಜ್ವರ ಬಂದರೆ ಸಾರ್ವಜನಿಕರು ವೈದ್ಯರ ಸೂಚನೆ ಇಲ್ಲದೆ ಔಷಧಿಗಳನ್ನ ಖರೀದಿಸಬಾರದು,...

“ರತ್ನಾಕರವರ್ಣಿಯ ಭರತೇಶ ವೈಭವ-ಮರು ಓದು” ರಾಜ್ಯ ಮಟ್ಟದ ವಿಚಾರ ಸಂಕೀರಣ ಉದ್ಘಾಟನೆ 

“ರತ್ನಾಕರವರ್ಣಿಯ ಭರತೇಶ ವೈಭವ-ಮರು ಓದು” ರಾಜ್ಯ ಮಟ್ಟದ ವಿಚಾರ ಸಂಕೀರಣ ಉದ್ಘಾಟನೆ 

“ರತ್ನಾಕರವರ್ಣಿಯ ಭರತೇಶ ವೈಭವ-ಮರು ಓದು” ರಾಜ್ಯ ಮಟ್ಟದ ವಿಚಾರ ಸಂಕೀರಣ ಉದ್ಘಾಟನೆ  ಶಿವಮೊಗ್ಗ : ಮಹಾಕವಿ ರತ್ನಾಕರವರ್ಣಿ ಅಧ್ಯಯನ ಕೇಂದ್ರಮಂಗಳೂರು ವಿಶ್ವವಿದ್ಯಾಲಯ ಹಾಗು ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ ಇವರ ಸಹಯೋಗದಲ್ಲಿ “ರತ್ನಾಕರವರ್ಣಿಯ ಭರತೇಶ ವೈಭವ-ಮರು ಓದು” ರಾಜ್ಯಮಟ್ಟದ ವಿಚಾರ ಸಂಕಿರಣವು ಪಾಥ್ವ್ಸೇ ಸಭಾಂಗಣದಲ್ಲಿ ನಡೆಯಿತು, ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಮತ್ತು ಜಾನಪದ ತಜ್ಞರಾದ ಪ್ರೊ ಬಸವರಾಜ ನೆಲ್ಲಿಸರ. ಉದ್ಘಾಟಿಸಿ ರತ್ನಾಕರ ಭರತೇಶವೈಭವ ಕೃತಿ ರಚಿಸುವಲ್ಲಿ ಜೈನ ಮತ್ತು ವೀರಶೈವ ಧರ್ಮವನ್ನು ಸಮನ್ವಯಪಡಿಸಿ ಬರೆಯುವಲ್ಲಿ ಯಶಸ್ವಿಯಾಗಿದ್ದಾನೆ ಇವನ ಕಾವ್ಯವು ಶಾಂತಿಯುತವಾದ ಯುದ್ಧ ಸಾರಿದ್ದು ಇವತ್ತಿಗೂ ಪ್ರಸ್ತುತ ಎಂದರು.ಪ್ರಬುದ್ಧ ಚಿಂತಕರು, ವಿಮರ್ಶಕರಾದ ಪ್ರೊ ಕೇಶವಶರ್ಮ ಅವರು ಆಶಯ ನುಡಿಯಲ್ಲಿ ಭರತನ ಭೋಗಯೋಗದ ತೊಡಕು,ಸಮನ್ವಯಗಳನ್ನು ಮಹಾಕವಿ ರತ್ನಾಕರ ಸಾಧಿಸಿದ್ದು ಮಹತ್ವದ್ದಾಗಿದೆ ಎಂದರು, ಪ್ರಾಸ್ಥಾವಿಕವಾಗಿ ಮಾತಾಡಿದ ರತ್ನಾಕರವರ್ಣಿಯ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ ಸೋಮಣ್ಣ ಹೊಂಗಳ್ಳಿಯವರು ಸಹ್ಯಾದ್ರಿ ಕಾಲೇಜು ಸುಮಾರು 8000 ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳನ್ನು ಒಳಗೊಂಡ...

ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್ ದಾಖಲು ! ಕಾರಣವೇನು ? ತೀರ್ಥಹಳ್ಳಿಯ ಬಾಳೆಬೈಲು ಸಮೀಪ ನಡೆದಿದ್ದೇನು?

ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್ ದಾಖಲು ! ಕಾರಣವೇನು ? ತೀರ್ಥಹಳ್ಳಿಯ ಬಾಳೆಬೈಲು ಸಮೀಪ ನಡೆದಿದ್ದೇನು?

ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್ ದಾಖಲು ! ಕಾರಣವೇನು ? ತೀರ್ಥಹಳ್ಳಿಯ ಬಾಳೆಬೈಲು ಸಮೀಪ ನಡೆದಿದ್ದೇನು ? ತೀರ್ಥಹಳ್ಳಿ : ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಮೇಲೆ ತೀರ್ಥಹಳ್ಳಿಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪದಲ್ಲಿ ಮಾಳೂರು ಠಾಣೆಯ ಎಎಸ್‌ಐ ಕೃಷ್ಣಮೂರ್ತಿ ಹೆದ್ದಾರಿ ಗಸ್ತುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪತ್ರಕರ್ತೆಯೊಬ್ಬರ ಮೇಲೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಇತ್ತೀಚಿಗೆ ಮಾರಣಾಂತಿಕ ರಸ್ತೆ ಅಪಘಾತಗಳು ಹೆಚ್ಚಾಗಿದ್ದರಿಂದ ಅವುಗಳನ್ನು ತಡೆಯುವ ಸಲುವಾಗಿ ವಾಹನ ತಪಾಸಣೆ ಮಾಡಿ ಅನುಮಾನಸ್ಪದ ಚಾಲಕ ವ್ಯಕ್ತಿಗಳನ್ನು ಹಾಗೂ ಮದ್ಯಪಾನ ಮತ್ತಿತರೆ ಕಾನೂನು ಉಲ್ಲಂಘನೆ...

ಕೆ.ಎಸ್.ಆರ್.ಟಿ.ಸಿ ಅಲ್ಲಿ 300 ಹುದ್ದೆಗಳು ಖಾಲಿ ! ನೇಮಕಾತಿಗೆ ಚಾಲನೆ ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ?

ಕೆ.ಎಸ್.ಆರ್.ಟಿ.ಸಿ ಅಲ್ಲಿ 300 ಹುದ್ದೆಗಳು ಖಾಲಿ ! ನೇಮಕಾತಿಗೆ ಚಾಲನೆ ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ? ಉದ್ಯೋಗ ಸುದ್ದಿ : ಕೆ ಎಸ್ ಆರ್ ಟಿ ಸಿ ಜಾಹೀರಾತು ಸಂಖ್ಯೆ 1/2018 ರ ಪ್ರಕಾರ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು. ಹುದ್ದೆಗಳ ಸಂಖ್ಯೆ 300 ಕ್ಕೆ ಸೀಮಿತಗೊಳಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 300 ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ : ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ಮೆರಿಟ್ ಆಧಾರದ ಮೇಲೆ ಮತ್ತು ದೇಹದಾರ್ಡ್ಯ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.  ಕೊನೆಯ ದಿನಾಂಕ : ಡಿಸೆಂಬರ್ 26 ರಿಂದ 28ರವರೆಗೆ ಅವಕಾಶ ನೀಡಲಾಗಿದೆ. ಸ್ಥಳ : ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿ, ಶಾಂತಿ ನಗರ ಬೆಂಗಳೂರು ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್...

ನಾಳೆ ಪಾಥ್ ವೇಸ್ ನಲ್ಲಿ ” ರತ್ನಾಕರವರ್ಣಿಯ ಭರತೇಶ ವೈಭವ – ಮರು ಓದು ” ರಾಜ್ಯ ಮಟ್ಟದ ವಿಚಾರ ಸಂಕೀರಣ

ನಾಳೆ ಪಾಥ್ ವೇಸ್ ನಲ್ಲಿ ” ರತ್ನಾಕರವರ್ಣಿಯ ಭರತೇಶ ವೈಭವ – ಮರು ಓದು ” ರಾಜ್ಯ ಮಟ್ಟದ ವಿಚಾರ ಸಂಕೀರಣ

ನಾಳೆ ಪಾಥ್ ವೇಸ್ ನಲ್ಲಿ ” ರತ್ನಾಕರವರ್ಣಿಯ ಭರತೇಶ ವೈಭವ – ಮರು ಓದು ” ರಾಜ್ಯ ಮಟ್ಟದ ವಿಚಾರ ಸಂಕೀರಣ ಶಿವಮೊಗ್ಗ : ನಾಳೆ ಸಹ್ಯಾದ್ರಿ ಕಾಲೇಜಿನ ಪಾಥ್ ವೇಸ್ ಘಟಕ ದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕೀರಣ ಆಯೋಜನೆ ಮಾಡಲಾಗಿದೆ. ಕುವೆಂಪು ವಿಶ್ವ ವಿದ್ಯಾಲಯದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಮಂಗಳಗಂಗೋತ್ರಿ ಇವರ ಸಹಯೋಗದಲ್ಲಿ *” ರತ್ನಾಕರವರ್ಣಿಯ ಭರತೇಶ ವೈಭವ – ಮರು ಓದು “* ಎಂಬ ಶೀರ್ಷಿಕೆಯ ಅಡಿಯಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕೀರಣವನ್ನು, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪಾಥ್ ವೇಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 20/12/2023 ಬುಧವಾರ ಬೆಳಿಗ್ಗೆ 10.30 ಕ್ಕೆ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವೆಂಕಟೇಶ್ ಎಸ್ ಉದ್ಘಾಟಿಸಲಿದ್ದಾರೆ. ವಿಚಾರ ಸಂಕೀರಣದಲ್ಲಿ ಎರಡು ಗೋಷ್ಠಿಗಳು ನಡೆಯಲಿದ್ದು. ಗೋಷ್ಠಿಯ ವಿವರ ಈ ಕೆಳಗಿನಂತಿದೆ. ಆಸಕ್ತರು...